Just In
- 11 hrs ago
ಮಂಗಳೂರಿನಲ್ಲಿರುವ ಒಕಿನಾವ ಇವಿ ಸ್ಕೂಟರ್ ಮಾರಾಟ ಮಳಿಗೆಯಲ್ಲಿ ಅಗ್ನಿ ಅವಘಡ
- 12 hrs ago
ಮ್ಯೂಸಿಕಲ್ ಸ್ಕೂಟರ್ನ ವಿಡಿಯೋ ಹಂಚಿಕೊಂಡು "ಭಾರತದಲ್ಲಿ ಮಾತ್ರ" ಎಂದ ಆನಂದ್ ಮಹೀಂದ್ರಾ
- 13 hrs ago
ಕೋಟಿ ಬೆಲೆಯ ಮರ್ಸಿಡಿಸ್ ಜಿಎಲ್ಎಸ್ ಎಸ್ಯುವಿ ಖರೀದಿಸಿದ ನಟ ವರುಣ್ ಧವನ್
- 15 hrs ago
ಮೇ ತಿಂಗಳಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಾರಾಟ ದಾಖಲಿಸಿದ 8 ಮಾರುತಿ ಸುಜುಕಿ ಕಾರುಗಳು
Don't Miss!
- News
Breaking; ಸೇನಾ ಆಯ್ಕೆ ಪೂರ್ವ ತರಬೇತಿಗಾಗಿ 3 ಶಾಲೆ ಸ್ಥಾಪನೆ
- Lifestyle
Today RashiBhavishya: ಶನಿವಾರದ ದಿನ ಭವಿಷ್ಯ: ವೃಷಭ, ಕುಂಭ, ಮೀನ ರಾಶಿಯ ಉದ್ಯೋಗಿಗಳು ಕಚೇರಿ ಕೆಲಸದ ಮೇಲೆ ಗಮನಹರಿಸಿ
- Sports
ENG vs NZ: ನ್ಯೂಜಿಲೆಂಡ್ ವಿರುದ್ಧ ಸತತ 2ನೇ ಶತಕ ದಾಖಲಿಸಿದ ಜಾನಿ ಬೈಸ್ಟ್ರೋವ್
- Finance
ಈ 220 ಉದ್ಯೋಗಿಗಳಿಗೆ ವಾರ್ಷಿಕ 1 ಕೋಟಿ ರು ಸಂಬಳ, ಯಾವ್ದು ಕಂಪನಿ?
- Movies
ಕಾರ್ತಿಕ್ ಆರ್ಯನ್ಗೆ ಕೋಟಿಗಟ್ಟಲೆ ಮೌಲ್ಯದ ಕಾರು ಉಡುಗೊರೆ ನೀಡಿದ ನಿರ್ಮಾಪಕ!
- Education
CLAT 2022 Result : ಕ್ಲಾಟ್ ಪರೀಕ್ಷೆಯ ಫಲಿತಾಂಶ ಶೀಘ್ರದಲ್ಲಿ ಪ್ರಕಟ
- Technology
60,000ರೂ.ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಲ್ಯಾಪ್ಟಾಪ್ಗಳು!
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಯನ್ನು ಮತ್ತೆ ಮುಂದೂಡಿದ ಸಿಂಪಲ್ ಎನರ್ಜಿ
ಎಲೆಕ್ಟ್ರಿಕ್ ಸ್ಕೂಟರ್ ಮೈಲೇಜ್ ವಿಚಾರದಲ್ಲಿ ಹೊಸ ಸಂಚಲನ ಮೂಡಿಸಿರುವ ಸಿಂಪಲ್ ಎನರ್ಜಿ ಕಂಪನಿಯು ಈ ಹಿಂದಿನ ಯೋಜನೆಯೆಂತೆ ಜೂನ್ ಆರಂಭದಲ್ಲಿ ತನ್ನ ಬಹುನೀರಿಕ್ಷಿತ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯನ್ನು ವಿತರಣೆ ಆರಂಭಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಹೊಸ ಇವಿ ಸ್ಕೂಟರ್ ವಿತರಣೆಯನ್ನು ಮುಂಬರುವ ಸೆಪ್ಟೆಂಬರ್ ಅಂತ್ಯಕ್ಕೆ ಮುಂಡೂಡಿಕೆ ಮಾಡಿದೆ.

ಅತಿ ಮೈಲೇಜ್ ನೀಡುವ ಇವಿ ಸ್ಕೂಟರ್ ಮಾದರಿಗಾಗಿ ಗುರುತಿಸಿಕೊಳ್ಳಲಿರುವ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು ಇದುವರೆಗೆ ಬರೋಬ್ಬರಿ 55 ಸಾವಿರ ಗ್ರಾಹಕರಿಂದ ಬುಕಿಂಗ್ ಪಡೆದುಕೊಂಡಿದ್ದು, ಜೂನ್ ಆರಂಭದಲ್ಲಿ ಹೊಸ ಸ್ಕೂಟರ್ ವಿತರಣೆಯು ಆರಂಭವಾಗಬೇಕಿತ್ತು. ಆದರೆ ಹೊಸ ಸ್ಕೂಟರ್ ವಿತರಣೆಯ ಸಿದ್ದತೆಯಲ್ಲಿದ್ದ ಕಂಪನಿಯ ಯೋಜನೆಗೆ ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಸುರಕ್ಷಾ ಮಾನದಂಡಗಳು ಸ್ಕೂಟರ್ ವಿತರಣೆಯಲ್ಲಿ ವಿಳಂಭವಾಗುವುದಕ್ಕೆ ಕಾರಣವಾಗಿದೆ.

ಹೌದು, ಇತ್ತೀಚೆಗೆ ಇವಿ ಸ್ಕೂಟರ್‌ಗಳಲ್ಲಿ ಹೆಚ್ಚುತ್ತಿರುವ ಅಗ್ನಿ ಅವಘಡಗಳನ್ನು ತಪ್ಪಿಸಲು ಕೇಂದ್ರ ಸಾರಿಗೆ ಸಚಿವಾಲಯವು ಇವಿ ವಾಹನ ತಯಾರಕಗಳಿಗೆ ಕೆಲವು ಹೊಸ ಸುರಕ್ಷಾ ಮಾನದಂಡಗಳನ್ನು ಸೂಚಿಸಿದ್ದು, ಹೊಸ ಮಾನದಂಡಗಳಿಗೆ ಅನುಸಾರವಾಗಿ ಬ್ಯಾಟರಿ ಜೋಡಣೆ ಮಾಡುವಂತೆ ತಾಕೀತು ಮಾಡಿದೆ.

ಹೀಗಾಗಿ ವಿತರಣೆಗೆ ಸಿದ್ದವಾಗಿದ್ದ ಸಿಂಪಲ್ ಒನ್ ಸ್ಕೂಟರ್ ವಿತರಣೆಯನ್ನು ತಡೆದಿರುವ ಕಂಪನಿಯು ಕೇಂದ್ರ ಸರ್ಕಾರದ ಹೊಸ ಸುರಕ್ಷಾ ಮಾರ್ಗಸೂಚಿಗೆ ಅನುಗುಣವಾಗಿ ಬ್ಯಾಟರಿ ಯುನಿಟ್ ಅಭಿವೃದ್ದಿಗೊಳಿಸುತ್ತಿದ್ದು, ಹೊಸ ಸುರಕ್ಷಾ ಮಾರ್ಗಸೂಚಿ ಅಳವಡಿಕೆ ಮತ್ತು ಪರೀಕ್ಷಾರ್ಥ ಟೆಸ್ಟಿಂಗ್ ಪ್ರಕ್ರಿಯೆಗೆ ತುಸು ಸಮಯಾವಕಾಶ ತೆಗೆದುಕೊಳ್ಳಲಿದೆ.

ಹೊಸ ಸುರಕ್ಷಾ ಮಾರ್ಗಸೂಚಿ ಅಳವಡಿಕೆ ಮಾಡಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಹೊಸ ಇವಿ ಸ್ಕೂಟರ್ ವಿತರಣೆಯಲ್ಲಿ ವಿಳಂಬವಾಗುವ ಬಗೆಗೆ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿರುವ ಸಿಂಪರ್ ಎನರ್ಜಿ ಕಂಪನಿಯ ಸಿಇಒ ಸುಹಾಸ್ ರಾಜಕುಮಾರ್ ಮುಂಬರುವ ಸೆಪ್ಟೆಂಬರ್ ಹೊತ್ತಿಗೆ ವಿತರಣೆ ಮಾಡುವ ಭರವಸೆ ನೀಡಿದ್ದಾರೆ.

ಸಿಂಪಲ್ ಎನರ್ಜಿ ಹೊಸ ಇವಿ ಸ್ಕೂಟರ್ ಮಾದರಿಗಾಗಿ ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಬ್ಯಾಟರಿ ಸೆಲ್‌ಗಳನ್ನು ಸ್ಥಳೀಯ ಉತ್ಪಾದಿಸುವ ಗುರಿಹೊಂದಿದ್ದು, ಸಿ4ವಿ ಎನ್ನುವ ಕಂಪನಿಯೊಂದಿಗಿನ ಪಾಲುದಾರಿಕೆ ಯೋಜನೆ ಅಡಿ ಅಭಿವೃದ್ದಿಗೊಳಿಸಲಾದ ಹೊಸ ಬ್ಯಾಟರಿ ಪ್ಯಾಕ್ ಅನ್ನು ಭವಿಷ್ಯದ ಇವಿ ಮಾದರಿಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ.

ಹೊಸ ಇವಿ ಸ್ಕೂಟರ್ ವಿತರಣೆ ಆರಂಭಕ್ಕೂ ಮುನ್ನ ಹೊಸ ಇವಿ ಸ್ಕೂಟರ್ ಉತ್ಪಾದನೆಯಲ್ಲಿ ಮತ್ತಷ್ಟು ಹೊಸತನಗಳನ್ನು ಪರಿಚಯಿಸುವ ಮೂಲಕ ಸ್ಕೂಟರ್ ಕಾರ್ಯಕ್ಷಮತೆ ಮತ್ತು ಬ್ಯಾಟರಿ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿದ್ದು, ಹೊಸ ಸ್ಕೂಟರ್ ವಿತರಣೆಗೂ ಮುನ್ನ ಮತ್ತಷ್ಟು ಸುಧಾರಿತ ತಾಂತ್ರಿಕ ಅಂಶಗಳನ್ನು ಅಳವಡಿಸುವ ಸುಳಿವು ನೀಡಿದೆ.

ಹೊಸ ಬ್ಯಾಟರಿ ನಿರ್ವಹಣಾ ವ್ಯವಸ್ಥೆಯ ಮೂಲಕ ಸಿಂಪಲ್ ಒನ್ ಸ್ಕೂಟರ್ ಶೇ. 95 ರಷ್ಟು ಬ್ಯಾಟರಿ ದಕ್ಷತೆಯನ್ನು ಹಿಂದಿರುಗಿಸಲಿದ್ದು, 4.8 kWh ಬ್ಯಾಟರಿ ಹೊಂದಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 72 ಎನ್ಎಂ ಟಾರ್ಕ್ ಜೊತೆಗೆ ಇಕೋ ಮೋಡ್‌ನಲ್ಲೂ 200 ಕಿಮೀ ಗಿಂತಲೂ ಹೆಚ್ಚಿನ ಮೈಲೇಜ್ ಖಾತ್ರಿಪಡಿಸುತ್ತದೆ.

ಈ ಮೂಲಕ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು 4.5KW ಎಲೆಕ್ಟ್ರಿಕ್ ಮೋಟಾರ್ ಜೊತೆಗೆ 4.8kWh ಲೀಥಿಯಂ ಅಯಾನ್ ಬ್ಯಾಟರಿ(ಡ್ಯುಯಲ್ ಬ್ಯಾಟರಿ) ಜೋಡಣೆ ಹೊಂದಿದ್ದು, ಇದು ಪ್ರತಿ ಚಾರ್ಚ್‌ಗೆ ವಿವಿಧ ರೈಡ್ ಮೋಡ್‌ಗಳ ಚಾಲನಾ ಶೈಲಿ ಆಧಾರದ ಮೇಲೆ ಕನಿಷ್ಠ 203 ಕಿ.ಮೀ ನಿಂದ ಗರಿಷ್ಠ 236 ಕಿ.ಮೀ ಮೈಲೇಜ್ ಹಿಂದಿರುಗಿಸುವುದಾಗಿ ಖಾತ್ರಿಪಡಿಸಿದೆ.

ಇನ್ನು ಹೆಚ್ಚಿನ ಮೈಲೇಜ್ ಬಯಸುವ ಗ್ರಾಹಕರಿಗೆ ಕಂಪನಿಯು ಹೆಚ್ಚುವರಿಯಾಗಿ 1.6 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಸಹ ಆಯ್ಕೆ ರೂಪದಲ್ಲಿ ಜೋಡಣೆ ಮಾಡುವುದಾಗಿ ಹೇಳಿಕೊಂಡಿದ್ದು, ಹೆಚ್ಚುವರಿ ಬ್ಯಾಟರಿ ಪ್ಯಾಕ್ ಮೂಲಕ ಸಿಂಪಲ್ ಒನ್ ಸ್ಕೂಟರ್ ಮಾಲೀಕರು ಪ್ರತಿ ಚಾರ್ಜ್‌ಗೆ 300 ಕಿ.ಮೀ ಗಿಂತಲೂ ಹೆಚ್ಚು ದೂರ ಪ್ರಯಾಣಿಸಬಹುದಾಗಿದೆ.

1.6 kWh ಸಾಮರ್ಥ್ಯದ ಹೆಚ್ಚುವರಿ ಬ್ಯಾಟರಿ ಪ್ಯಾಕ್ ಅನ್ನು ಕಂಪನಿಯು ಹೊಸ ಸ್ಕೂಟರಿನ ಬೂಟ್ ಸ್ಪೆಸ್‌ನಲ್ಲಿ ಸುಲಭವಾಗಿ ಇರಿಸುವಂತೆ ವಿನ್ಯಾಸಗೊಳಿಸಿದ್ದು, ಇದು ದೂರದ ಪ್ರಯಾಣಕ್ಕೆ ಹೆಚ್ಚು ಸಹಕಾರಿಯಾಗಲಿದೆ.

ಸಿಂಪಲ್ ಎನರ್ಜಿ ಕಂಪನಿಯು ಸದ್ಯ ಸ್ಟ್ಯಾಂಡರ್ಡ್ ಸಿಂಪಲ್ ಒನ್ ಇವಿ ಸ್ಕೂಟರ್ ಬೆಲೆಯನ್ನು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 1.10 ಲಕ್ಷಕ್ಕೆ ನಿಗದಿಪಡಿಸಿದ್ದು, ಹೆಚ್ಚುವರಿ ಬ್ಯಾಟರಿ ಪ್ಯಾಕ್ ಆಯ್ಕೆ ಮಾಡುವ ಗ್ರಾಹಕರು ಹೊಸ ಮಾದರಿಗೆ ರೂ. 1.44 ಲಕ್ಷ ದರ ಪಾವತಿ ಮಾಡಬೇಕಾಗುತ್ತದೆ.

ಇದರೊಂದಿಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಅತಿ ಹೆಚ್ಚು ಮೈಲೇಜ್ ಹೊಂದಿರುವ ಇವಿ ಸ್ಕೂಟರ್ ಎಂಬ ಹೆಗ್ಗೆಳಿಕೆಗೆ ಪಾತ್ರವಾಗಲಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸ್ಪೋರ್ಟಿ ವಿನ್ಯಾಸದೊಂದಿಗೆ ಅತ್ಯುತ್ತಮ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿದೆ.

ಇನ್ನೊಂದು ವಿಶೇಷ ಅಂದರೆ ಸಿಂಪಲ್ ಎನರ್ಜಿ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಮ್ಮ ಬೆಂಗಳೂರಿನಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡುತ್ತಿದ್ದು, ಬೆಂಗಳೂರಿನಲ್ಲಿಯೇ ಅಭಿವೃದ್ದಿಪಡಿಸಿದ ಸಂಭ್ರಮಕ್ಕಾಗಿ ಹೊಸ ಸ್ಕೂಟರ್‌ನಲ್ಲಿ ಕಂಪನಿಯು ವಿಶೇಷವಾಗಿ 'ನಮ್ಮ ರೆಡ್' ಎನ್ನುವ ಬಣ್ಣದ ಆಯ್ಕೆ ನೀಡಿ ಗ್ರಾಹಕರನ್ನು ಸೆಳೆಯುತ್ತಿದೆ.