ಭಾರತದಲ್ಲಿ ಬಹುನಿರೀಕ್ಷಿತ ಹೋಪ್ ಆಕ್ಸೋ ಇ-ಬೈಕ್ ವಿತರಣೆ ಪ್ರಾರಂಭ

Hop OXO ಎಲೆಕ್ಟ್ರಿಕ್ ಬೈಕ್ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಒಂದಾಗಿದೆ. ಈ ಕಂಪನಿಯು ಇಂದು ತನ್ನ ಪ್ರಮುಖ ಹೈ-ಸ್ಪೀಡ್ ಇ-ಬೈಕ್, HOP OXO ನ ವಿತರಣೆಯನ್ನು ಪ್ರಾರಂಭಿಸಿದೆ. OXO ಇ-ಬೈಕ್‌ಗಳಿಗಾಗಿ ಗ್ರಾಹಕರು ಮತ್ತು ಡೀಲರ್ ಪಾಲುದಾರರಿಂದ HOP ಎಲೆಕ್ಟ್ರಿಕ್ ಉತ್ತೇಜಕ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.

ಕಂಪನಿಯು ತನ್ನ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ 2,500 ಯುನಿಟ್‌ಗಳನ್ನು ಜೈಪುರದಲ್ಲಿ ವಿತರಿಸಲಿದೆ. Hop OXO ಇ-ಬೈಕ್ ಅನ್ನು ಈ ವರ್ಷ ಸೆಪ್ಟೆಂಬರ್ 5 ರಂದು ಬಿಡುಗಡೆ ಮಾಡಲಾಗಿದೆ. ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆಯಾದ ಕೇವಲ ಎರಡು ತಿಂಗಳಲ್ಲಿ 10,000 ಯುನಿಟ್‌ಗಳ ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಅದೇ ಸಮಯದಲ್ಲಿ, 50,000 ಕ್ಕೂ ಹೆಚ್ಚು ಜನರು ಈ ಬೈಕ್ ಬಗ್ಗೆ ತಮ್ಮ ಆಸಕ್ತಿಯನ್ನು ತೋರಿಸಿದ್ದಾರೆ. ಕಂಪನಿಯು Oxo ಅನ್ನು ಎರಡು ರೂಪಾಂತರಗಳಲ್ಲಿ ನೀಡುತ್ತಿದೆ.

Oxo ಮತ್ತು Oxo X ಕಂಪನಿ ನೀಡುತ್ತಿರುವ ಎರಡು ವೇರಿಯೆಂಟ್‌ಗಳಾಗಿವೆ. ಕಂಪನಿಯು ಆಕ್ಸೊವನ್ನು 1.25 ಲಕ್ಷ ರೂ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿದೆ. ಹೋಪ್ ಆಕ್ಸೊ ಹೈ ರೇಂಜ್ ಮತ್ತು ಹೈ ಸ್ಪೀಡ್ ಬೈಕ್ ಆಗಿದೆ. ಆಕ್ಸೋ ಇ-ಬೈಕ್ ಎಷ್ಟು ಸಮರ್ಥವಾಗಿದೆ ಎಂದರೆ ಅದು ಪೆಟ್ರೋಲ್ ಬೈಕ್‌ಗಳನ್ನು ಸಂಪೂರ್ಣವಾಗಿ ಬದಲಾಯಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಈ ಬೈಕ್ ಅನ್ನು ಕಂಪನಿಯ ಡೀಲರ್‌ಶಿಪ್‌ನಿಂದ ಅಥವಾ ಆನ್‌ಲೈನ್‌ ಮೂಲಕ ಕಂಪನಿಯ ವೆಬ್‌ಸೈಟ್‌ನಲ್ಲಿ ಖರೀದಿಸಬಹುದು.

150 ಕಿಮೀ ವ್ಯಾಪ್ತಿ
ಹೋಪ್ ಆಕ್ಸೊ ಸಂಪೂರ್ಣ ಚಾರ್ಜ್‌ನಲ್ಲಿ 150 ಕಿಲೋಮೀಟರ್‌ಗಳ ಪ್ರಭಾವಶಾಲಿ ಶ್ರೇಣಿಯನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಬೈಕ್‌ನಲ್ಲಿ 3.75 kWh ಶಕ್ತಿಶಾಲಿ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು 0 ಯಿಂದ ಶೇ 80 ರಷ್ಟು ಚಾರ್ಜ್ ಮಾಡಲು 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಶೇ 100 ರಷ್ಟು ಚಾರ್ಜ್ ಮಾಡಲು 5 ಗಂಟೆ ತೆಗೆದುಕೊಳ್ಳುತ್ತದೆ. ಬೈಕ್‌ನ ಬ್ಯಾಟರಿಯನ್ನು ಯಾವುದೇ 16 ಆಂಪಿಯರ್ ವಾಲ್ ಸಾಕೆಟ್‌ನಿಂದ ಚಾರ್ಜ್ ಮಾಡಬಹುದು.

ಬೈಕ್‌ನ ಹಿಂದಿನ ಚಕ್ರವು 72V ಆರ್ಕಿಟೆಕ್ಚರ್‌ನ 6200W BLDC ಹಬ್ ಮೋಟಾರ್‌ನಿಂದ ಚಾಲಿತವಾಗಿದೆ, ಇದು ಗರಿಷ್ಠ 200Nm ಟಾರ್ಕ್ ಅನ್ನು ಒದಗಿಸುತ್ತದೆ. ಬೈಕ್‌ನ ಬ್ಯಾಟರಿಯಲ್ಲಿ ಸುಧಾರಿತ ಬ್ಯಾಟರಿ ನಿರ್ವಹಣಾ ವ್ಯವಸ್ಥೆಯನ್ನು ಬಳಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ದೀರ್ಘ ಪ್ರಯಾಣದ ಸಮಯದಲ್ಲಿಯೂ ಬ್ಯಾಟರಿಯನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಹೋಪ್ ಆಕ್ಸೊ ಮೂರು ರೈಡ್ ಮೋಡ್‌ಗಳೊಂದಿಗೆ ಬರುತ್ತದೆ ಅವುಗಳೆಂದರೆ ಇಕೋ, ಪವರ್ ಮತ್ತು ಸ್ಪೋರ್ಟ್ ಮೋಡ್‌ಗಳಾಗಿವೆ.

ಹಾಗೆಯೇ Hop OXO X ನಲ್ಲಿ ಹೆಚ್ಚುವರಿ ಟರ್ಬೊ ಮೋಡ್ ಅನ್ನು ನೀಡಲಾಗಿದೆ. ಟರ್ಬೊ ಮೋಡ್‌ನಲ್ಲಿ ಹೋಪ್ ಆಕ್ಸೊ ಎಕ್ಸ್ ಅನ್ನು ಗಂಟೆಗೆ 90 ಕಿ.ಮೀ ವೇಗದಲ್ಲಿ ಓಡಿಸಬಹುದು. ಈ ಕ್ರಮದಲ್ಲಿ, ಬೈಕ್ ಕೇವಲ ನಾಲ್ಕು ಸೆಕೆಂಡುಗಳಲ್ಲಿ 0 ಯಿಂದ 40 ಕಿ.ಮೀ ವೇಗವನ್ನು ಪಡೆಯುತ್ತದೆ. ಹೋಪ್ ಆಕ್ಸೊ ಪವರ್ ಮೋಡ್‌ನಲ್ಲಿ ಮಾತ್ರ 150 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ. ಇನ್ನು ಕಡಿಮೆ ಮೈಲೇಜ್ ಅನ್ನು (100 ಕಿ.ಮೀ) ಸ್ಪೋರ್ಟ್ ಮೋಡ್‌ನಲ್ಲಿ ನೀಡುತ್ತದೆ.

ಸದ್ಯ ಬೆಳಯುತ್ತಿರುವ ಪೆಟ್ರೋಲ್ ಬೆಲೆಗಳಿಂದ ಕಂಗೆಟ್ಟಿರುವ ಸಾರ್ವಜನಿಕರು ಇದೀಗ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಹಾಗಾಗಿ ದೇಶದಲ್ಲಿ ಹೊಸ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಹೆಚ್ಚಾಗುತ್ತಿವೆ. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಾಧ್ಯವಾದಷ್ಟು ಸ್ಪರ್ಧಾತ್ಮಕ ಬೆಲೆಯಲ್ಲಿ Hop OXO ಬಿಡುಗಡೆಯಾಗಿದೆ. ಸದ್ಯ ಈ ಬೈಕಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಮತ್ತಷ್ಟು ಬೈಕುಗಳು Hop OXO ದೊಂದಿಗೆ ಪೈಪೋಟಿ ಎದುರಿಸಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
The much awaited hop oxo e bike delivery begins in India
Story first published: Wednesday, December 14, 2022, 19:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X