Just In
- 8 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 8 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 10 hrs ago
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 10 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್‌ಗಳು!
ಫೆಬ್ರವರಿ ತಿಂಗಳಿನಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗಿರುವ ಸ್ಕೂಟರ್‌ಗಳ ಮಾಹಿತಿ ಹೊರಬಂದಿದ್ದು, ಇದರಲ್ಲಿ ಆಕ್ಟಿವಾ ಮೊದಲ ಸ್ಥಾನದಲ್ಲಿದೆ. ಇದರ ನಂತರ TVS ಜುಪಿಟರ್ ಮತ್ತು ಸುಜುಕಿ ಆಕ್ಸೆಸ್ ಕ್ರಮವಾಗಿ ಎರಡು ಮತ್ತು ಮೂರನೆಯ ಸ್ಥಾನಗಳನ್ನು ಪಡೆದುಕೊಂಡಿವೆ.

ಫೆಬ್ರವರಿಯಲ್ಲಿ ಮಾರಾಟವಾಗಿರುವ ಟಾಪ್ 10 ಸ್ಕೂಟರ್‌ಗಳ ಒಟ್ಟಾರೆ ಸಂಖ್ಯೆ 3,16,744 ಯುನಿಟ್‌ಗಳಷ್ಟಿದ್ದು, ಇದರಲ್ಲಿ ಯಮಹಾಸ್ ರೇ ಮತ್ತು ಟಿವಿಎಸ್‌ನ ಪೆಪ್ + ನಂತಹ ಮಾದರಿಗಳು ಸಹ ಸ್ಥಾನವನ್ನು ಪಡೆದುಕೊಂಡಿವೆ. ಹೋಂಡಾ ಆಕ್ಟಿವಾ ಫೆಬ್ರವರಿ 2022 ರಲ್ಲಿ ಒಟ್ಟು 1,45,317 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ದೇಶದಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್ ಆಗಿ ಹೊರ ಹೊಮ್ಮಿದೆ.

ಇದು ಕಳೆದ ಫೆಬ್ರವರಿಗೆ ಹೋಲಿಸಿಕೊಂಡರೆ ಕಡಿಮೆಯಿದ್ದು, ಕಳೆದ ವರ್ಷ ಇದೇ ತಿಂಗಳಿನಲ್ಲಿ 2,09,389 ಯುನಿಟ್‌ಗಳನ್ನು ಸೇಲ್ ಮಾಡಲಾಗಿತ್ತು. ಆಕ್ಟೀವಾ ಮಾದರಿಯು ಹೋಂಡಾ ಕಂಪನಿಯ ಉತ್ತಮ-ಮಾರಾಟದ ಸ್ಕೂಟರ್ ಆಗಿದ್ದರೂ ಮಾರಾಟದಲ್ಲಿ ಕುಸಿತ ಕಾಣುತ್ತಿದೆ. ಈ ನಡುವೆಯೂ ಇದು ಸ್ಕೂಟರ್ ವಿಭಾಗದಲ್ಲಿ ಪ್ರಮುಖ ಪಾಲನ್ನು ಹೊಂದಿದೆ.

ಇದರ ನಂತರ TVSನ ಜುಪಿಟರ್ ಎರಡನೇ ಸ್ಥಾನದಲ್ಲಿದ್ದು, ಇದು ಫೆಬ್ರವರಿ 2022 ರಲ್ಲಿ 47,092 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಇದು ಕಳೆದ ಫೆಬ್ರವರಿಯಲ್ಲಿ ಮಾರಾಟ ಮಾಡಿರುವ 52,189 ಯುನಿಟ್‌ಗಳಿಗೆ ಹೋಲಿಸಿದರೆ ಶೇ10 ಕುಸಿತ ಕಂಡಿದೆ. ಇನ್ನು ಸುಜುಕಿ ಆಕ್ಸೆಸ್ ಮೂರನೇ ಸ್ಥಾನದಲ್ಲಿದ್ದು, ಫೆಬ್ರವರಿ 2022 ರಲ್ಲಿ 37,512 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದು ಕಳೆದ ಫೆಬ್ರವರಿಯಲ್ಲಿ ಮಾರಾಟವಾಗಿರುವ 48,496 ಯುನಿಟ್‌ಗಳಿಗೆ ಹೋಲಿಸಿಕೊಂಡರೆ ಶೇ23 ರಷ್ಟು ಕಡಿಮೆಯಾಗಿದೆ. ಈ ಎರಡೂ ಸ್ಕೂಟರ್‌ಗಳ ಮಾರಾಟದಲ್ಲಿಯೂ ಕುಸಿತವಾಗಿದೆ.

ಇದರ ನಂತರ ಟಿವಿಎಸ್ Ntarq 23,061 ಯುನಿಟ್‌ಗಳನ್ನು ಫೆಬ್ರವರಿ 2022 ರಲ್ಲಿ ಮಾರಾಟ ಮಾಡಿದೆ, ಕಳೆದ ಫೆಬ್ರವರಿಯಲ್ಲಿ ಮಾರಾಗೊಂಡ 24,555 ಯುನಿಟ್‌ಗಳಿಗೆ ಹೋಲಿಸಿದರೆ ಶೇ6 ರಷ್ಟು ನಷ್ಟ ಕಂಡಿದೆ. ಇನ್ನು ಡಿಯೋ ಅಗ್ರ 5 ರಲ್ಲಿ ತನ್ನ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಇದು ಫೆಬ್ರವರಿ 2022ರಲ್ಲಿ 15,487 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮಾರಾಟವಾದ 28,171 ಯುನಿಟ್‌ಗಳಿಗಿಂತ ಶೇ45 ರಷ್ಟು ಕಡಿಮೆಯಾಗಿದೆ. ಕಂಪನಿಯು ಈ ಸ್ಕೂಟರ್‌ಗಳನ್ನು ನಿರಂತರವಾಗಿ ನವೀಕರಿಸುತ್ತಲೇ ಬಂದಿದೆ.

ಹೀರೋ ಪ್ಲೆಷರ್ ಫೆಬ್ರವರಿ 2022 ರಲ್ಲಿ 14,207 ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ 6ನೇ ಸ್ಥಾನದಲ್ಲಿದೆ, ಇದು ಕಳೆದ ಫೆಬ್ರವರಿಯಲ್ಲಿ ಮಾರಟಗೊಂಡಿದ್ದ 23,106 ಯುನಿಟ್‌ಗಳಿಗಿಂತ ಶೇ39ರಷ್ಟು ಕಡಿಮೆಯಾಗಿದೆ. ಇದರ ನಂತರ ಸುಜುಕಿ ಅವೆನಿಸ್ ಏಳನೇ ಸ್ಥಾನದಲ್ಲಿದೆ, ಇದು ಫೆಬ್ರವರಿ 2022 ರಲ್ಲಿ 10,382 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಕಂಪನಿಯು ಈ ಹೊಸ ಸ್ಪೋರ್ಟಿ ಸ್ಕೂಟರ್ ಅನ್ನು ರೂ.86,700 (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಸುಜುಕಿ ಮೋಟಾರ್‌ಸೈಕಲ್‌ನಿಂದ ಈ ಹೊಸ ಸ್ಪೋರ್ಟಿ ಸ್ಕೂಟರ್ ಅನ್ನು ಟಿವಿಎಸ್ ಎನ್‌ಟಾರ್ಕ್ ಮತ್ತು ಹೋಂಡಾ ಡಿಯೊಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

ಎಂಟನೇ ಸ್ಥಾನದಲ್ಲಿ ಸುಜುಕಿ ಬರ್ಗ್‌ಮ್ಯಾನ್ ಇದ್ದು ಫೆಬ್ರವರಿ 2022 ರಲ್ಲಿ 8,636 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಇದು ಕಳೆದ ಫೆಬ್ರವರಿಯ 8,533 ಯುನಿಟ್‌ಗಳಿಗಿಂತ 1% ಹೆಚ್ಚಾಗಿದೆ. ಇನ್ನು ಈ ಪಟ್ಟಿಯಲ್ಲಿ ಯಮಹಾ ರೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಫೆಬ್ರವರಿ 2022 ರಲ್ಲಿ 8,355 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಕೊನೆಯ ಸ್ಥಾನದಲ್ಲಿ TVS Pep+ ಅನ್ನು ಕಾಣಬಹುದು, ಈ ಮಾದರಿಯೂ ಫೆಬ್ರವರಿ 2022 ರಲ್ಲಿ 6,695 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಇದು ಕಳೆದ ಫೆಬ್ರವರಿಯ 8,476 ಘಟಕಗಳಿಗಿಂತ ಶೇ21ರಷ್ಟು ಕಡಿಮೆಯಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ
ಫೆಬ್ರವರಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟ ವಿಭಾಗದಲ್ಲಿ ಓಲಾ ವಿಜೇತರಾಗಿ ಹೊರಹೊಮ್ಮಿದೆ, ನಂತರ ಟಿವಿಎಸ್ ಐಕ್ಯೂಬ್, ಎಥರ್ ಮತ್ತು ಬಜಾಜ್ ಚೇತಕ್ ಇವೆ. ಈ ವಿಭಾಗದಲ್ಲಿ 9,295 ಯುನಿಟ್‌ಗಳು ಮಾರಾಟವಾಗಿದ್ದು, ಕಳೆದ ವರ್ಷದ ಮಾರಾಟವಾಗಿದ್ದ 1,203 ಯುನಿಟ್‌ಗಳಿಗಿಂತ ಶೇ672 ಬೆಳವಣಿಗೆಯನ್ನು ಸಾಧಿಸಿವೆ. ಜನವರಿ 2022 ರಲ್ಲಿ ಮಾರಾಟವಾಗಿದ್ದ 6,724 ಯುನಿಟ್‌ಗಳಿಗೆ ಹೋಲಿಸಿದರೆ ಶೇ38 ಬೆಳವಣಿಗೆಯಾಗಿದೆ.

ಓಲಾ ಎಲೆಕ್ಟ್ರಿಕ್ ಫೆಬ್ರವರಿ 2022 ರಲ್ಲಿ 3,905 ಯುನಿಟ್‌ಗಳನ್ನು ವಿತರಿಸಿದೆ. ಕಂಪನಿಯು ಆರಂಭಿಕ ಕೆಲವು ತಿಂಗಳುಗಳಲ್ಲಿ ಚಿಪ್ ಕೊರತೆಯಿಂದ ಹೆಣಗಾಡುತ್ತಿತ್ತು, ಇದರಿಂದಾಗಿ ವಾಹನಗಳನ್ನು ವಿತರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಕಂಪನಿಯು ಈ ಸಮಸ್ಯೆಯನ್ನು ಪರಿಹರಿಸಿ, ಫೆಬ್ರವರಿ ತಿಂಗಳಲ್ಲಿ ಉತ್ತಮ ವಿತರಣೆಯನ್ನು ಮಾಡಿದೆ. ಓಲಾ ಕಂಪನಿಯ ಸಿಇಒ ಭವಿಶ್ ಅಗರ್ವಾಲ್ ಮಾತನಾಡಿ, ನಾವು ಸುಮಾರು 7000 ಸ್ಕೂಟರ್‌ಗಳನ್ನು ವಿತರಿಸಿರುವುದಾಗಿ ತಿಳಿಸಿದ್ದಾರೆ.

ದೇಶದಲ್ಲಿ ಇಂಧನ ಚಾಲಿತ ದ್ವಿಚಕ್ರ ವಾಹನ ವಿಭಾಗವು ಅನೇಕ ದೊಡ್ಡ ರಿಯಾಯಿತಿಗಳು ಮತ್ತು ಹೊಸ ನವೀಕರಣಗಳನ್ನು ನೀಡುತ್ತಿದ್ದರೂ ದ್ವಿಚಕ್ರ ವಾಹನಗಳ ಮಾರಾಟವನ್ನು ಸುಧಾರಿಸಲು ಸಾಧ್ಯವಾಗುತ್ತಿಲ್ಲ. ತೈಲ ಏರಿಕೆಯು ಇದಕ್ಕೆ ಮುಖ್ಯ ಕಾರಣವೆಂದು ಹೇಳಬಹುದು. ಇದೇ ಕಾರಣಕ್ಕೆ ಇವಿ ವಾಹನಗಳ ಮಾರಾಟದಲ್ಲಿ ಏರಿಕೆಯಾಗುತ್ತಿದೆ.