ಇವಿ ಬೈಕ್ ವಿತರಣೆಗಾಗಿ ವಿನೂತನ ವಿಧಾನವನ್ನು ಅಳವಡಿಸಿಕೊಂಡ ಟಾರ್ಕ್ ಮೋಟಾರ್ಸ್

ಟಾರ್ಕ್ ಮೋಟಾರ್ಸ್(Tork Motors) ಕಂಪನಿಯು ತನ್ನ ಹೊಸ ಕ್ರಾಟೋಸ್(Kratos) ಮತ್ತು ಕ್ರಾಟೋಸ್ ಆರ್(Kratos R) ಭಾರತದಲ್ಲಿ ಬಿಡುಗಡೆ ಮಾಡಿ ಭಾರೀ ಪ್ರಮಾಣದ ಬುಕಿಂಗ್ ಪಡೆದುಕೊಂಡಿದ್ದು, ಕಂಪನಿಯು ಇದೀಗ ಹೊಸ ಇವಿ ಬೈಕ್ ವಿತರಣೆಯನ್ನು ಆರಂಭಿಸಿದೆ.

ಇವಿ ಬೈಕ್ ವಿತರಣೆಗಾಗಿ ವಿನೂತನ ವಿಧಾನವನ್ನು ಆಯ್ದುಕೊಂಡ ಟಾರ್ಕ್ ಮೋಟಾರ್ಸ್

ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ವಿತರಣೆಗಾಗಿ ಟಾರ್ಕ್ ಮೋಟಾರ್ಸ್ ಕಂಪನಿಯು ಸದ್ಯ ಹೋಂ ಡೆಲಿವರಿ ವಿಧಾನ ಅನುಸರಿಸುತ್ತಿದ್ದು, ಹೋಂ ಡೆಲಿವರಿ ಮಾಡುವ ವಾಹನಕ್ಕಾಗಿ ಕಂಪನಿಯು ವಿನೂತನ ವಿಧಾನವನ್ನು ಅಳುವಡಿಸಿಕೊಂಡಿದೆ.

ಇವಿ ಬೈಕ್ ವಿತರಣೆಗಾಗಿ ವಿನೂತನ ವಿಧಾನವನ್ನು ಆಯ್ದುಕೊಂಡ ಟಾರ್ಕ್ ಮೋಟಾರ್ಸ್

ವಿತರಣೆ ಮಾಡಲಾಗುವ ವಾಹನದ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಚಾರ ಪಡಿಸುವಂತೆ ಪಾರದರ್ಶಕ ಕವರ್ ಮಾಡಲಾದ ಪೆಟ್ಟಿಗೆಯಲ್ಲಿ ಗ್ರಾಹಕರಿಗೆ ವಿತರಿಸಲಾಗುತ್ತಿದ್ದು, ವಿತರಣೆ ಸಮಯದಲ್ಲಿ ವಾಹನದ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರದರ್ಶಸುವಂತೆ ಸಿದ್ದಪಡಿಸಲಾಗಿದೆ.

ಇವಿ ಬೈಕ್ ವಿತರಣೆಗಾಗಿ ವಿನೂತನ ವಿಧಾನವನ್ನು ಆಯ್ದುಕೊಂಡ ಟಾರ್ಕ್ ಮೋಟಾರ್ಸ್

ಸದ್ಯ ಆಯ್ದ ನಗರಗಳಲ್ಲಿ ಮಾತ್ರ ಕಾರ್ಯಾಚರಣೆ ಆರಂಭಿಸಿರುವ ಟಾರ್ಕ್ ಮೋಟಾರ್ಸ್ ಕಂಪನಿಯು ಮುಂದಿನ ಕೆಲವೇ ತಿಂಗಳಿನಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಮಾರಾಟ ಆರಂಭಿಸುವ ಸಿದ್ದತೆಯಲ್ಲಿದೆ.

ಇವಿ ಬೈಕ್ ವಿತರಣೆಗಾಗಿ ವಿನೂತನ ವಿಧಾನವನ್ನು ಆಯ್ದುಕೊಂಡ ಟಾರ್ಕ್ ಮೋಟಾರ್ಸ್

ಎಲೆಕ್ಟ್ರಿಕ್ ಸ್ಟಾರ್ಟ್ ಅಪ್ ಕಂಪನಿಗಳು ಸದ್ಯಕ್ಕೆ ಹೋಂ ಡೆಲಿಯನ್ನು ವಿಧಾನವನ್ನು ಅನುಸರಿಸುತ್ತಿದ್ದು, ಗ್ರಾಹಕರ ಬೇಡಿಕೆಯನ್ನು ಆಧರಿಸಿ ಅಧಿಕೃತ ಡೀಲರ್ಸ್ ಆರಂಭಿಸುವ ಯೋಜನೆಯಲ್ಲಿವೆ. ಹೀಗಾಗಿ ಸದ್ಯಕ್ಕೆ ಸ್ಟಾರ್ಟ್ಅಪ್ ಕಂಪನಿಗಳಿಗೆ ಹೋಂ ಡೆಲಿವರಿ ಆಯ್ಕೆಯು ಆರ್ಥಿಕವಾಗಿ ಉತ್ತಮ ಆಯ್ಕೆಯಾಗಿದ್ದು, ಗ್ರಾಹಕರಿಗೂ ಮನೆ ಬಾಗಿಲಿಗೆ ಸೇವೆ ಲಭ್ಯವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಇವಿ ಬೈಕ್ ವಿತರಣೆಗಾಗಿ ವಿನೂತನ ವಿಧಾನವನ್ನು ಆಯ್ದುಕೊಂಡ ಟಾರ್ಕ್ ಮೋಟಾರ್ಸ್

ಹೊಸ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಎಲೆಕ್ಟ್ರಿಕ್ ಬೈಕ್ ಮೂಲಕ ಟಾರ್ಕ್ ಮೋಟಾರ್ಸ್ ಸಹ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಪುಣೆ ಎಕ್ಸ್‌ಶೋರೂಂ ಪ್ರಕಾರ ಹೊಸ ಬೈಕ್‌ಗಳು ರೂ. 1.07 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 1.22 ಲಕ್ಷ ಬೆಲೆ ಹೊಂದಿವೆ.

ಇವಿ ಬೈಕ್ ವಿತರಣೆಗಾಗಿ ವಿನೂತನ ವಿಧಾನವನ್ನು ಆಯ್ದುಕೊಂಡ ಟಾರ್ಕ್ ಮೋಟಾರ್ಸ್

ಬೆಂಗಳೂರಿನಲ್ಲಿ ಈ ಹೊಸ ಇವಿ ಬೈಕ್ ಖರೀದಿ ಮಾಡುವುದಾದರೆ ಆರಂಭಿಕವಾಗಿ ರೂ. 1.32 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ. 1.47 ಲಕ್ಷ ಪಾವತಿಸಬೇಕಿದ್ದು, ಕೇಂದ್ರ ಮತ್ತು ವಿವಿಧ ರಾಜ್ಯಗಳ ಸಬ್ಸಡಿ ಯೋಜನೆಗಳನ್ನು ಆಧರಿಸಿ ಇವಿ ವಾಹನ ಬೆಲೆಯು ರಾಜ್ಯಗಳಲ್ಲಿನ ಬೆಲೆ ಏರಿಳಿತವಾಗುತ್ತದೆ.

ಇವಿ ಬೈಕ್ ವಿತರಣೆಗಾಗಿ ವಿನೂತನ ವಿಧಾನವನ್ನು ಆಯ್ದುಕೊಂಡ ಟಾರ್ಕ್ ಮೋಟಾರ್ಸ್

ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಎಲೆಕ್ಟ್ರಿಕ್ ಬೈಕ್ ಮಾದರಿಗಳು ಕೂಡಾ ಉತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಆಕರ್ಷಕ ಬೆಲೆ ಹೊಂದಿದ್ದು, ಪ್ರತಿ ಸ್ಪರ್ಧಿ ಮಾದರಿಗಳಿಂತಲೂ ಉತ್ತಮ ತಂತ್ರಜ್ಞಾನ ಪ್ರೇರಣೆ ಹೊಂದಿವೆ.

ಇವಿ ಬೈಕ್ ವಿತರಣೆಗಾಗಿ ವಿನೂತನ ವಿಧಾನವನ್ನು ಆಯ್ದುಕೊಂಡ ಟಾರ್ಕ್ ಮೋಟಾರ್ಸ್

ಟಾರ್ಕ್ ಮೋಟಾರ್ಸ್ ಕಂಪನಿಯು ಭಾರತದಲ್ಲಿ 2015ರಿಂದ ಇವಿ ವಾಹನಗಳ ಅಭಿವೃದ್ದಿಯಲ್ಲಿ ತೊಡಗಿಕೊಂಡಿದ್ದು, ಸತತ 7 ವರ್ಷಗಳ ಸಂಶೋಧನೆ, ಅಭಿವೃದ್ದಿ ಮತ್ತು ತಂತ್ರಜ್ಞಾನ ಸುಧಾರಣೆ ಆಧರಿಸಿ ಹೊಸ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಬೈಕ್ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಇವಿ ಬೈಕ್ ವಿತರಣೆಗಾಗಿ ವಿನೂತನ ವಿಧಾನವನ್ನು ಆಯ್ದುಕೊಂಡ ಟಾರ್ಕ್ ಮೋಟಾರ್ಸ್

ಹೊಸ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಬೈಕ್ ಮಾದರಿಗಳು ರೇಸಿಂಗ್ ತಂತ್ರಜ್ಞಾನವನ್ನು ಆಧರಿಸಿ ಮಾರುಕಟ್ಟೆ ಪ್ರವೇಶಿಸಿದ್ದು, ಕೃತಕ ಬುದ್ದಿ ಮತ್ತೆ ಬಳಸಿ ವಾಹನ ಚಲಾಯಿಸುವ ಟಾರ್ಕ್ ಇನ್ಶೂಟಿವ್ ರೆಸ್ಪಾನ್ಸ್ ಆಪರೇಟಿಂಗ್ ಸಿಸ್ಟಂ- ಟಿ‍‍ಐಆರ್‍ಒ‍ಎಸ್ ಎಂಬ ಡ್ರೈವ್ ಟ್ರೇನ್ ಟೆಕ್ನಾಲಜಿಯನ್ನು ಹೊಂದಿವೆ.

ಇವಿ ಬೈಕ್ ವಿತರಣೆಗಾಗಿ ವಿನೂತನ ವಿಧಾನವನ್ನು ಆಯ್ದುಕೊಂಡ ಟಾರ್ಕ್ ಮೋಟಾರ್ಸ್

ಟಾರ್ಕ್ ಮೋಟಾರ್ಸ್ ಸದ್ಯ ಪುಣೆಯಲ್ಲಿರುವ ತನ್ನ ಹೊಸ ಉತ್ಪಾದನಾ ಘಟಕದಲ್ಲಿ ಉತ್ಪಾದನಾ ಕಾರ್ಯಾಚರಣೆ ಆರಂಭಿಸುವ ಮೂಲಕ ವಿತರಣೆ ಆರಂಭಿಸಿದ್ದು, ಕಂಪನಿಯು ಮೊದಲ ಹಂತದಲ್ಲಿ ಪುಣೆ, ಬೆಂಗಳೂರು, ದೆಹಲಿ, ಹೈದ್ರಾಬಾದ್, ಚೆನ್ನೈ ಮತ್ತು ಅಹಮದಾಬಾದ್‌ನಲ್ಲಿ ಮಾರಾಟ ಪ್ರಕ್ರಿಯೆ ಆರಂಭಿಸುತ್ತಿದೆ.

ಇವಿ ಬೈಕ್ ವಿತರಣೆಗಾಗಿ ವಿನೂತನ ವಿಧಾನವನ್ನು ಆಯ್ದುಕೊಂಡ ಟಾರ್ಕ್ ಮೋಟಾರ್ಸ್

ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಗಳನ್ನು ಟಾರ್ಕ್ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಮಾದರಿಗಳನ್ನು ಪರಿಚಯಿಸಿದ್ದು, ಕ್ರಾಟೋಸ್ ಆರ್ ತುಸು ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ.

ಇವಿ ಬೈಕ್ ವಿತರಣೆಗಾಗಿ ವಿನೂತನ ವಿಧಾನವನ್ನು ಆಯ್ದುಕೊಂಡ ಟಾರ್ಕ್ ಮೋಟಾರ್ಸ್

ಟಾರ್ಕ್ ಮೋಟಾರ್ಸ್ ಕಂಪನಿಯು ಹೊಸ ಬೈಕ್ ಮಾದರಿಗಳಲ್ಲಿ IP67 ಅನುಮೋದಿತ 4kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಕ್ರಾಟೋಸ್ ಮಾದರಿಯು 7.5kW ಎಲೆಕ್ಟ್ರಿಕ್ ಮೋಟಾರ್ ಮೂಲಕ 28 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಕ್ರಾಟೋಸ್ ಆರ್ ಮಾದರಿಯು 9kW ಎಲೆಕ್ಟ್ರಿಕ್ ಮೋಟಾರ್ ಮೂಲಕ 38 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಇವಿ ಬೈಕ್ ವಿತರಣೆಗಾಗಿ ವಿನೂತನ ವಿಧಾನವನ್ನು ಆಯ್ದುಕೊಂಡ ಟಾರ್ಕ್ ಮೋಟಾರ್ಸ್

ಸ್ಪ್ಲೀಟ್ ಟೆಲ್ಲಿಸ್ ಫ್ರೆಮ್‌ ಮೇಲೆ ನಿರ್ಮಾಣವಾಗಿರುವ ಹೊಸ ಕ್ರಾಟೋಸ್ ಮಾದರಿಯು ಪ್ರತಿ ಗಂಟೆಗೆ ಗರಿಷ್ಠ 100ಕಿ.ಮೀ ಟಾಪ್ ಸ್ಪೀಡ್ ಮೂಲಕ ಪ್ರತಿ ಚಾರ್ಜ್‌ಗೆ 120 ಕಿ.ಮೀ ಮೈಲೇಜ್ ನೀಡಿದರೆ ಕ್ರಾಟೋಸ್ ಆರ್ ಮಾದರಿಯು 120 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ 120 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಇವಿ ಬೈಕ್ ವಿತರಣೆಗಾಗಿ ವಿನೂತನ ವಿಧಾನವನ್ನು ಆಯ್ದುಕೊಂಡ ಟಾರ್ಕ್ ಮೋಟಾರ್ಸ್

ಹೊಸ ಇವಿ ಬೈಕ್‌ಗಳಲ್ಲಿ ತಾಂತ್ರಿಕ ವೈಶಿಷ್ಟ್ಯತೆ ಬಗೆಗೆ ಹೇಳುವುದಾದರೇ ಕ್ರಾಟೋಸ್ ಮಾದರಿಗಿಂತಲೂ ಕ್ರಾಟೋಸ್ ಆರ್ ಮಾದರಿಯು ಹೆಚ್ಚಿನ ಮಟ್ಟದ ಫೀಚರ್ಸ್ ಪಡೆದುಕೊಂಡಿದ್ದು, 4ಜಿ ಟೆಲಿಮೆಟ್ರಿ ಜೋಡಣೆಯೊಂದಿಗೆ ಜಿ‍‍ಪಿ‍ಎಸ್, ಕ್ಲೌಡ್ ಕನೆಕ್ಟಿವಿಟಿ, ಕ್ರ್ಯಾಶ್ ಅಲರ್ಟ್, ಪವರ್ ಮ್ಯಾನೇಜ್‌ಮೆಂಟ್, ಪ್ರತಿ ದಿನದ ರೈಡ್ ಹಿಸ್ಟರಿ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.

ಇವಿ ಬೈಕ್ ವಿತರಣೆಗಾಗಿ ವಿನೂತನ ವಿಧಾನವನ್ನು ಆಯ್ದುಕೊಂಡ ಟಾರ್ಕ್ ಮೋಟಾರ್ಸ್

ಕ್ರಾಟೋಸ್ ಆರ್ ಮಾದರಿಯಲ್ಲಿ ಹೆಚ್ಚುವರಿಯಾಗಿ ಜಿಯೋ-ಫೆನ್ಸಿಂಗ್, ಫೈಂಡ್ ಮೈ ವೆಹಿಕಲ್, ಟ್ರ್ಯಾಕ್ ಮೋಡ್ ಮತ್ತು ಅನಾಲಿಟಿಕ್ಸ್ ಮತ್ತು ಇನ್ನೂ ಕೆಲವು ನಿಫ್ಟಿ ವೈಶಿಷ್ಟ್ಯಗಳಂತಹ ಹೆಚ್ಚುವರಿ ವೈಶಿಷ್ಟ್ಯಗಳಿಂದ ಕೂಡಿದ್ದು, ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಟೈಲ್‌ಲ್ಯಾಂಪ್‌, ಸಂಪೂರ್ಣ ಡಿಜಿಟಲ್ ಡಿಸ್‌ಪ್ಲೇ, ವಿವಿಧ ರೈಡ್ ಮೋಡ್‌ಗಳು, ಯುಟಿಲಿಟಿ ಸ್ಟೋರೇಜ್, ಮತ್ತು ಫೋನ್ ಚಾರ್ಜ್ ಸಾಕೆಟ್ ಗಮನಸೆಳೆಯುತ್ತವೆ.

Most Read Articles

Kannada
English summary
Tork motors delivers e bikes to customers with unique way
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X