Just In
- 1 hr ago
ಆಕರ್ಷಕದ ವಿನ್ಯಾಸದಲ್ಲಿ ಹ್ಯುಂಡೈ ಐಯಾನಿಕ್ ಎಲೆಕ್ಟ್ರಿಕ್ ಕಾರು ಅನಾವರಣ
- 1 hr ago
ಮಳೆಯಲ್ಲಿ ಬೈಕ್ ಚಾಲನೆ ಮಾಡುವ ಸವಾರರು ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ
- 2 hrs ago
ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ ಎನ್-ಲೈನ್
- 2 hrs ago
ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಟೊಯೊಟಾ ಹೈರೈಡರ್ ಎಸ್ಯುವಿ
Don't Miss!
- Movies
ಸುನೇತ್ರಾ ಪಂಡಿತ್: ಆಕ್ಸಿಡೆಂಟ್ ಬಳಿಕ ನಟನೆಗೆ ಮರಳಿದ ಸುನೇತ್ರಾ ಪಂಡಿತ್
- News
ಗ್ರಾಮೀಣ ರಸ್ತೆ ದುರಸ್ತಿ; ಎನ್ಎಚ್ಎಐ ಅಧಿಕಾರಿಗಳ ವಿರುದ್ಧ ಗೋಪಾಲಯ್ಯ ಗರಂ
- Finance
ಡಾಲರ್ ಎದುರು ಮತ್ತೆ ಸಾರ್ವಕಾಲಿತ ಕುಸಿತ ಕಂಡ ರೂಪಾಯಿ
- Sports
Ind vs Eng 5ನೇ ಟೆಸ್ಟ್: ತನ್ನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹನುಮ ವಿಹಾರಿ ಹೇಳಿದ್ದೇನು?
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Lifestyle
ಫಸ್ಟ್ ಟೈಮ್ ಪ್ರೆಗ್ನೆನ್ಸಿ?ನೀವು ತಿಳಿಯಲೇಬೇಕಾದ ಸಂಗತಿಗಳಿವು
- Education
Kolar District Court Recruitment 2022 : 32 ಜವಾನ ಮತ್ತು ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
40 ಡಿಗ್ರಿ ಬಿಸಿಲಿನಲ್ಲಿ ದೇಶದ ಮೊದಲ ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್‌ನ ಪರೀಕ್ಷೆ
ಪ್ರತಿದಿನ ಏರಿಕೆಯಾಗುತ್ತಿರುವ ತೈಲ ಬೆಲೆಯಿಂದ ಜನರು ಎಲೆಕ್ಟ್ರಿಕ್ ವಾಹನಗಳತ್ತ ಆಸಕ್ತಿ ತೋರುತ್ತಿದ್ದಾರೆ. ಹಾಗಾಗಿ ನಿತ್ಯ ಹೊಸ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾಂಪ್ರದಾಯಿಕ ಪೆಟ್ರೋಲ್ ಚಾಲಿತ ವಾಹನಗಳಿಗೆ ಎಲೆಕ್ಟಿಕ್ ವಾಹನಗಳು ಪೈಪೋಟಿ ನೀಡಿದರು ಅದರಲ್ಲಿ ಆಶ್ಚರ್ಯವಿಲ್ಲ.

ಅತಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಸ್ಕೂಟರ್ ಹಾಗೂ ಕಾರುಗಳ ಪ್ರಾಬಲ್ಯವೇ ಹೆಚ್ಚಾಗಿದೆ. ಆದರೆ ಎಲೆಕ್ಟ್ರಿಕ್ ಬೈಕ್‌ಗಳು ಕಡಿಮೆ, ಏಕೆಂದರೆ ರಿವೋಲ್ಟ್‌ನಂತಹ ಕೆಲವೇ ಬ್ರಾಂಡ್‌ಗಳಿಂದ ಮಾತ್ರ ಎಲೆಕ್ಟ್ರಿಕ್ ಬೈಕ್‌ಗಳು ಮಾರುಕಟ್ಟೆಗೆ ಬಂದಿವೆ. ಹಾಗಾಗಿ ಭಾರತದ ಹಲವು ಕಂಪನಿಗಳು ಇನ್ನೂ ಇವಿ ಬೈಕ್‌ಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿವೆ.

ವೇಗದ ಎಲೆಕ್ಟ್ರಿಕ್ ಬೈಕ್‌ಗಳಿಗಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಅಲ್ಟ್ರಾವೈಲೆಟ್ ಎಫ್77 ಅನ್ನು ತಮಿಳುನಾಡಿನ ಸಾರ್ವಜನಿಕ ರಸ್ತೆಯಲ್ಲಿ ಪರೀಕ್ಷಿಸಲಾಗುತ್ತಿದ್ದು, ಇದು ಭಾರತದಲ್ಲಿ ಮುಂಬರಲಿರುವ ವೇಗದ ಎಲೆಕ್ಟ್ರಿಕ್ ಬೈಕ್ ಎಂದು ಕಂಪನಿ ಹೇಳಿಕೊಂಡಿದೆ.

ಇನ್ನು ಅಲ್ಟ್ರಾವೈಲೆಟ್ ಎಫ್77 ಬಗ್ಗೆ ಹೇಳುವುದಾದರೆ, ನಿಮಗೆ ಎಲೆಕ್ಟ್ರಿಕ್ ಬೈಕುಗಳ ಬಗ್ಗೆ ಬಹಳಷ್ಟು ಗೊತ್ತಿದ್ದರೆ, ಖಂಡಿತವಾಗಿಯೂ ನೀವು ಅಲ್ಟ್ರಾವಯಲೆಟ್ F77 ಮೋಟಾರ್‌ಸೈಕಲ್ ಬಗ್ಗೆ ತಿಳಿದಿರುತ್ತೀರಿ. ಈ ಹೈ ಸ್ಪೀಡ್ ಎಲೆಕ್ಟ್ರಿಕ್ ಬೈಕ್ ಅನ್ನು ಮೊದಲು 2019 ರಲ್ಲಿ ಪರಿಚಯಿಸಲಾಯಿತು.

ಆದರೆ ಇದುವರೆಗೆ ಯಾವುದೇ ಘಟಕವನ್ನು ಗ್ರಾಹಕರಿಗೆ ತಲುಪಿಸಿಲ್ಲ. ಏಕೆಂದರೆ ಎಫ್77 ಬೈಕ್ ಇನ್ನೂ ಅಲ್ಟ್ರಾವೈಲೆಟ್ ಮೂಲಕ ಪರೀಕ್ಷೆಗೆ ಒಳಗಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಸಾರ್ವಜನಿಕ ರಸ್ತೆಗಳಲ್ಲಿ ಈ ಪರಿಣಾಮಕಾರಿ ಬೈಕ್ ಅನ್ನು ಪರೀಕ್ಷಿಸಲಾಗುತ್ತಿದೆ. ಈ ಕುರಿತು ಅಂತರ್ಜಾಲದಲ್ಲಿ ಪೋಸ್ಟ್ ಮಾಡಿದ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ನೋಡಬಹುದು.

ಇತ್ತೀಚಿನ ದಿನಗಳಲ್ಲಿ ಬೇಸಿಗೆಯ ಬಿಸಿಲಿನ ತಾಪ ತಾಳಲಾರದೆ ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ತಗುಲುತ್ತಿರುವ ಘಟನೆಗಳನ್ನು ನೋಡುತ್ತಿದ್ದೇವೆ. ಇದನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡಿನ ಅತ್ಯಂತ ಬಿಸಿಯಾದ ನಗರವೊಂದರಲ್ಲಿ ಅಲ್ಟ್ರಾವೈಲೆಟ್ ಎಫ್77 ಬೈಕ್‌ನ ಪರೀಕ್ಷಾರ್ಥ ಪ್ರಯೋಗವನ್ನು ಮಧ್ಯಾಹ್ನ ನಡೆಸಲಾಯಿತು.

F77 ಎಲೆಕ್ಟ್ರಿಕ್ ಬೈಕ್ ಡ್ರೈವರ್ ನಗರದ ಅತ್ಯಂತ ಜನನಿಬಿಡ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಮಾತ್ರವಲ್ಲದೆ ಸುಮಾರು 40 ಡಿಗ್ರಿ ಬಿಸಿಲಿನಲ್ಲಿ ಕೆಲವು ಒರಟು ರಸ್ತೆಗಳಲ್ಲಿಯೂ ರೈಡ್ ಮಾಡಿದರು. ಈ ಪರೀಕ್ಷಾರ್ಥ ಓಡಾಟದಲ್ಲಿ ಬೈಕ್‌ನ ಸ್ಥಿತಿಯನ್ನು ಸಹ ಮಧ್ಯಂತರವಾಗಿ ಪರಿಶೀಲಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಪರೀಕ್ಷಾರ್ಥ ಓಟ 1 ಗಂಟೆ 15 ನಿಮಿಷದಲ್ಲಿ 20 ಕಿ.ಮೀ ಚಲಿಸಿತು.

ಆ ಸಮಯದಲ್ಲಿ ಬ್ಯಾಟರಿ ಪ್ಯಾಕ್‌ನ ವೋಲ್ಟೇಜ್ 56.1 ಮತ್ತು ಬ್ಯಾಟರಿಯ ಮೂಲಕ ಲಭ್ಯವಿರುವ ಕರೆಂಟ್ 352 ಆಂಪಿಯರ್ ಇತ್ತು. ಅಲ್ಲದೆ ಬ್ಯಾಟರಿಯ ಉಷ್ಣತೆಯು 41 ಡಿಗ್ರಿ - 39 ಡಿಗ್ರಿಗಳ ನಡುವೆ ಏರಿಳಿತವಾಗಿತ್ತು. ನಂತರ ಸವಾರನು F77 ಬೈಕನ್ನು ಹಳ್ಳಿಗಳ ಮೂಲಕ ಯಳಗಿರಿ ಪರ್ವತದ ಹಾದಿಗಳಿಗೆ ಕೊಂಡೊಯ್ಯುದು ಪರೀಕ್ಷಿಸಲಾಯಿತು.

ಆ ಸಮಯದಲ್ಲಿ ಬ್ಯಾಟರಿ ಪ್ಯಾಕ್‌ನ ವೋಲ್ಟೇಜ್ 54.3 ವೋಲ್ಟ್ ಮತ್ತು ಬ್ಯಾಟರಿ ಪ್ಯಾಕ್‌ನ ಕರೆಂಟ್ 358 ಆಂಪಿಯರ್ ಆಗಿತ್ತು. ಎಫ್77 ಬೈಕ್ ಅನ್ನು 1 ಗಂಟೆ ಗ್ರಾಮೀಣ ರಸ್ತೆಗಳಲ್ಲಿ ಪ್ರಯಾಣಿಸಿ ಯಳಗಿರಿ ಬೆಟ್ಟದ ರಸ್ತೆಗಳಲ್ಲಿ ಲೋಡ್ ಮಾಡಿ ಪರೀಕ್ಷಿಸಲಾಯಿತು. ಪ್ರಯಾಣ ಸಮಯ ಸಂಜೆ 6 ಗಂಟೆ ತಲುಪಿತ್ತು. ಸತತ 6 ಗಂಟೆಗಳ ಪ್ರಯಾಣದ ನಂತರವೂ ಬ್ಯಾಟರಿ ಗರಿಷ್ಠ ತಾಪಮಾನವನ್ನು ತಲುಪಲಿಲ್ಲ.

2019 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದಾಗ F77 ನ ಎಕ್ಸ್ ಶೋ ರೂಂ ಬೆಲೆ 3 ಲಕ್ಷದಿಂದ 3.25 ಲಕ್ಷ ರೂ. ಇತ್ತು. ಈ ಪರಿಣಾಮಕಾರಿ ಎಲೆಕ್ಟ್ರಿಕ್ ಬೈಕ್ ಅನ್ನು ಲೈಟ್ನಿಂಗ್, ಶಾಡೋ ಮತ್ತು ಲೇಸರ್ ಎಂಬ 3 ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ.

ಈಗಾಗಲೇ ಹೇಳಿದಂತೆ, ಇದು ಭಾರತದಲ್ಲಿ ಅತಿ ವೇಗದ ಎಲೆಕ್ಟ್ರಿಕ್ ಬೈಕುಗಳಲ್ಲಿ ಒಂದಾಗಿದ್ದು, ಗಂಟೆಗೆ 147 ಕಿಮೀ ವೇಗವನ್ನು ಹೊಂದಿದೆ. ಈ ಬೈಕ್ 0 ರಿಂದ 60 ಕಿಮೀ ವೇಗವನ್ನು ಕೇವಲ 2.92 ಸೆಕೆಂಡ್‌ಗಳಲ್ಲಿ ಮತ್ತು 100 ಕಿಮೀ ವೇಗವನ್ನು 7.5 ಸೆಕೆಂಡುಗಳಲ್ಲಿ ತಲುಪುತ್ತದೆ.

F77 ಮಾಡ್ಯುಲರ್ ಲಿಥಿಯಂ-ಕಬ್ಬಿಣದ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದು 33.5 bhp ನ ಗರಿಷ್ಠ ಚಲನ ಶಕ್ತಿ ಮತ್ತು 90 Nm ಟಾರ್ಕ್ ಅನ್ನು ಹೊಂದಿದೆ. ಈ ಹೈಸ್ಪೀಡ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ವ್ಯಾಪ್ತಿಯು 130 ಕಿಮೀ ನಿಂದ 150 ಕಿಮೀವರೆಗೆ ಲಭ್ಯವಿದೆ ಎಂದು ಉತ್ಪಾದನಾ ಕಂಪನಿ ಹೇಳಿಕೊಂಡಿದೆ. ಸ್ಟ್ಯಾಂಡರ್ಡ್ ಚಾರ್ಜರ್ ಅನ್ನು ಬಳಸಿ, ಬ್ಯಾಟರಿಯನ್ನು 0 ರಿಂದ 80% ವರೆಗೆ ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 3 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.