ಭಾರತದಲ್ಲಿ ಆಕರ್ಷಕ ವಿನ್ಯಾಸದ 2022ರ Yamaha FZ 25 ಬೈಕ್ ಬಿಡುಗಡೆ

ಯಮಹಾ ಮೋಟಾರ್ ಇಂಡಿಯಾ ಇಂದು ದೇಶೀಯ ಮಾರುಕಟ್ಟೆಯಲ್ಲಿ ತನ್ನ 2022ರ ಎಫ್‌ಜೆಡ್ 25 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಯಮಹಾ ಎಫ್‌ಜೆಡ್ 25 (Yamaha FZ 25) ಕ್ವಾರ್ಟರ್-ಲೀಟರ್ ಬೈಕ್ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ 2022ರ Yamaha FZ 25 ಬೈಕ್ ಬಿಡುಗಡೆ

ಹೊಸ ಯಮಹಾ ಎಫ್‌ಜೆಡ್ 25 ಬೈಕಿನ ಆರಂಭಿಕ ಬೆಲೆಯು ರೂ.1,38,800 ಗಳಾದರೆ, ಎಫ್‌ಜೆಡ್ಎಸ್ 25 ರೂಪಾಂತರದ ಬೆಲೆಯು ರೂ.1,43,300 ಗಳಾಗಿದೆ. ಈ ಎರಡೂ ಬೆಲೆಗಳು ನವದೆಹಲಿ ಎಕ್ಸ್ ಶೋ ರೂಂ ಪ್ರಕಾರವಾಗಿದೆ. ಈ ಯಮಹಾ ಎಫ್‌ಜೆಡ್ 25 ಬೈಕ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೈಗೆಟುಕುವ ಕ್ವಾರ್ಟರ್-ಲೀಟರ್ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ ಮತ್ತು ಹೊಸ ಬಣ್ಣದ ಆಯ್ಕೆಗಳೊಂದಿಗೆ ಪರಿಚಯಿಸಲಾಗಿದೆ. ಈ 2022ರ ಎಫ್‌ಜೆಡ್ 25 ಹೊಸ ಮ್ಯಾಟ್ ಕಾಪರ್ ಶೇಡ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ 2022ರ Yamaha FZ 25 ಬೈಕ್ ಬಿಡುಗಡೆ

ಎಫ್‌ಜೆಡ್ 25 ಬೈಕ್ ರೇಸಿಂಗ್ ಬ್ಲೂ ಮತ್ತು ಮೆಟಾಲಿಕ್ ಬ್ಲ್ಯಾಕ್ ಪೇಂಟ್ ಆಯ್ಕೆಗಳನ್ನು ಮುಂದುವರಿಸುತ್ತದೆ. ಹೊಸ ಬಣ್ಣಗಳ ಸೇರ್ಪಡೆಯೊಂದಿಗೆ ಮಾದರಿ ವರ್ಷದ ನವೀಕರಣವಾಗಿದೆ ಮತ್ತು ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಅಳವಡಿಸಲಾಗಿಲ್ಲ.

ಭಾರತದಲ್ಲಿ ಆಕರ್ಷಕ ವಿನ್ಯಾಸದ 2022ರ Yamaha FZ 25 ಬೈಕ್ ಬಿಡುಗಡೆ

ಕ್ವಾರ್ಟರ್-ಲೀಟರ್ ವಿಭಾಗದ ಈ ಬೈಕ್ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ನೇಕೆಡ್ ಮೋಟಾರ್‌ಸೈಕಲ್ 249 cc ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ SOHC ಎಂಜಿನ್‌ ಅನ್ನು ಮುಂದುವರೆಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 20.5 ಬಿಹೆಚ್‍ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 20.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ 2022ರ Yamaha FZ 25 ಬೈಕ್ ಬಿಡುಗಡೆ

ಹೊಸ ಯಮಹಾ ಎಫ್‌ಜೆಡ್ 25 ಬೈಕ್ ವೈಶಿಷ್ಟ್ಯಗಳು ನೆಗೆಟಿವ್ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸ್ವಿಚ್, ಹೀಟ್ ಶೀಲ್ಡ್‌ನೊಂದಿಗೆ ಸೈಡ್-ಮೌಂಟೆಡ್ ಎಕ್ಸಾಸ್ಟ್ ಸಿಸ್ಟಂ, ತೀಕ್ಷ್ಣವಾಗಿ ಕಾಣುವ ಎಲ್‌ಇಡಿ ಹೆಡ್‌ಲ್ಯಾಂಪ್‌ನೊಂದಿಗೆ ಅಗ್ರೇಸಿವ್ ಫಾಸಿಕ, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ 2022ರ Yamaha FZ 25 ಬೈಕ್ ಬಿಡುಗಡೆ

ಇದರೊಂದಿಗೆ ಈ ಬೈಕಿನಲ್ಲಿ ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್ ಶೌಡ್‌ಗಳು, ಸ್ಪ್ಲಿಟ್ ಬ್ಲ್ಯಾಕ್ ಸೀಟ್ ಸೆಟಪ್, ನಕಲ್ ಗಾರ್ಡ್‌ಗಳು, ಚಿಕ್ಕದಾದ ವಿಂಡ್‌ಸ್ಕ್ರೀನ್, ಬ್ಲ್ಯಾಕ್ಡ್ ಔಟ್ ಬಾಡಿ ಪ್ಯಾನೆಲ್‌ಗಳು ಮತ್ತು ಹೆಚ್ಚುವರಿ ಪ್ರೀಮಿಯಂ ಸೌಲಭ್ಯಗಳಿಂದಾಗಿ ಆಕರ್ಷಕ ಮಾದರಿಯಾಗಿದೆ..

ಭಾರತದಲ್ಲಿ ಆಕರ್ಷಕ ವಿನ್ಯಾಸದ 2022ರ Yamaha FZ 25 ಬೈಕ್ ಬಿಡುಗಡೆ

ಹೊಸ ಮ್ಯಾಟ್ ಕಾಪರ್ ಕಲರ್ ಥೀಮ್ ಆರೇಂಜ್ ಬಣ್ಣದ ಇಂಧನ ಟ್ಯಾಂಕ್ ಫಿನಿಶ್ ಅನ್ನು ಒಳಗೊಂಡಿದೆ ಮತ್ತು ನಕಲ್ ಗಾರ್ಡ್‌ನ ಮೇಲಿನ ಭಾಗದಲ್ಲಿ ಇದೇ ರೀತಿಯ ಕಾಣಬಹುದು. ಇನ್ನು ಗ್ರೇ ಫಿನಿಶಿಂಗ್ ಸ್ಪ್ಲಿಟ್ ಗ್ರಾಬ್ ರೈಲ್‌ಗಳೊಂದಿಗೆ ಪಿಲಿಯನ್ ಕೆಳಗಿನ ಸೈಡ್ ಪ್ಯಾನೆಲ್‌ಗಳು, ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್ ಗಳು, ಹೆಡ್‌ಲ್ಯಾಂಪ್ ಹೌಸಿಂಗ್, ಫ್ರಂಟ್ ಫೆಂಡರ್ ಗಳಲ್ಲಿ ಹೊಂದಿದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ 2022ರ Yamaha FZ 25 ಬೈಕ್ ಬಿಡುಗಡೆ

ಎಫ್‌ಜೆಡ್ 25 ಬೈಕ್ ಇತರ ಕೆಲವು ಮುಖ್ಯಾಂಶಗಳೆಂದರೆ, ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ. ಈ ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗೆ ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಜೋಡಿಸಲಾಗಿದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ 2022ರ Yamaha FZ 25 ಬೈಕ್ ಬಿಡುಗಡೆ

ಇನ್ನು ಈ ಹೊಸ ಯಮಹಾ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಪ್ರಿ-ಲೋಡ್ ಹೊಂದಾಣಿಕೆಯೊಂದಿಗೆ ಹಿಂಭಾಗದ ಮೊನೊಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ 2022ರ Yamaha FZ 25 ಬೈಕ್ ಬಿಡುಗಡೆ

ಇದರೊಂದಿಗೆ ಯಮಹಾ ಮೋಟಾರ್ ಇಂಡಿಯಾ ದೇಶೀಯ ಮಾರುಕಟ್ಟೆಯಲ್ಲಿ 2022ರ ಎಫ್‍‍ಜೆಡ್ಎಸ್-ಎಫ್‍ಐ ಬೈಕ್ ಅನ್ನು ಸಂಕ್ರಾಂತಿ ವಿಶೇಷತೆಗಾಗಿ ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಯಮಹಾ ಎಫ್‍‍ಜೆಡ್ಎಸ್-ಎಫ್‍ಐ ಬೈಕ್ ಸ್ಟ್ಯಾಂಡರ್ಡ್ ಮತ್ತು ಡಿಎಲ್ಎಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊಸ ಬೈಕಿನಲ್ಲಿ 149ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,250 ಆರ್‌ಪಿಎಂನಲ್ಲಿ 12.2 ಬಿಹೆಚ್‌ಪಿ ಮತ್ತು 5500 ಆರ್‌ಪಿಎಂನಲ್ಲಿ 13.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ,

ಭಾರತದಲ್ಲಿ ಆಕರ್ಷಕ ವಿನ್ಯಾಸದ 2022ರ Yamaha FZ 25 ಬೈಕ್ ಬಿಡುಗಡೆ

ಹೊಸ ಎಫ್‍‍ಜೆಡ್ಎಸ್-ಎಫ್‍ಐ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಎರಡು ಕಡೆಗಳಲ್ಲಿ ಸಿಂಗಲ್ ಡಿಸ್ಕ್‌ ಬ್ರೇಕ್ ಗಳನ್ನು ನೀಡಲಾಗಿದೆ, 2022ರ ಎಫ್‍‍ಜೆಡ್ಎಸ್-ಎಫ್‍ಐ ಮಾದರಿಯಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ ಏಕೈಕ ಬದಲಾವಣೆಯೆಂದರೆ ಹೊಸ ಎಲ್ಇಡಿ ಟೈಲ್ ಲ್ಯಾಂಪ್, ಮತ್ತು ಬೈಕ್ ಈಗ ಕೇವಲ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಮ್ಯಾಟ್ ಬ್ಲೂ ಮತ್ತು ಮ್ಯಾಟ್ ರೆಡ್ ಆಗಿದೆ.

ಭಾರತದಲ್ಲಿ ಆಕರ್ಷಕ ವಿನ್ಯಾಸದ 2022ರ Yamaha FZ 25 ಬೈಕ್ ಬಿಡುಗಡೆ

ಒಟ್ಟಾರೆಯಾಗಿ ಈ ಹೊಸ ಯಮಹಾ ಎಫ್‌ಜೆಡ್ 25 (Yamaha FZ 25) ಕ್ವಾರ್ಟರ್-ಲೀಟರ್ ಬೈಕ್ ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಹೊಸ ಹೊಸ ಯಮಹಾ ಎಫ್‌ಜೆಡ್ 25 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ ಎಫ್250 ಮತ್ತು ಡೊಮಿನಾರ್ 250 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on yamaha ಯಮಹಾ
English summary
Yamaha launched 2022 fz 25 in india price new colours details
Story first published: Monday, January 24, 2022, 19:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X