ಆಧುನಿಕ ವೈಶಿಷ್ಟ್ಯತೆಯೊಂದಿಗೆ ಯೆಜ್ಡಿ ಹೊಸ ರೋಡ್‌ಸ್ಟರ್ ಬೈಕ್ ಬಿಡುಗಡೆ

ಕ್ಲಾಸಿಕ್ ಲೆಜೆಂಡ್ ಕಂಪನಿಯು ಯೆಜ್ಡಿ ಬ್ರ್ಯಾಂಡ್‌ಗೆ ಹೊಸ ರೂಪ ನೀಡುವ ಮೂಲಕ ಗ್ರಾಹಕರ ಬೇಡಿಕೆ ಪ್ರಮುಖ ಮೂರು ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ಮಾದರಿಗಳ ಮೂಲಕ ಟು ಸ್ಟ್ರೋಕ್ ಕ್ರೇಜ್‌ಗೆ ಆಧುನಿಕ ವೈಶಿಷ್ಟ್ಯತೆ ನೀಡಲಾಗಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಯೆಜ್ಡಿ ಹೊಸ ರೋಡ್‌ಸ್ಟರ್ ಬೈಕ್ ಬಿಡುಗಡೆ

ಭಾರತದಲ್ಲಿ 80 ಮತ್ತು 90ರ ದಶಕದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್ ಮಾದರಿಗಳಾಗಿದ್ದ ಯೆಜ್ಡಿ ಮತ್ತು ಜಾವಾ ಬೈಕ್‌ಗಳು ಕಾಲಾಂತರದಲ್ಲಿ ಮಾರುಕಟ್ಟೆಯಿಂದ ದೂರಸರಿದಿದ್ದವು. ಟು ಸ್ಟ್ರೋಕ್ ವೈಶಿಷ್ಟ್ಯತೆಯೊಂದಿಗೆ ತಮ್ಮದೇ ಆದ ಜನಪ್ರಿಯತೆ ಹೊಂದಿದ್ದ ಕ್ಲಾಸಿಕ್ ಬೈಕ್‌ಗಳಿಗೆ ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ ಕಂಪನಿಯು ಹೊಸ ರೂಪ ನೀಡಿದ್ದು, ಜಾವಾ ಹೊಸ ಬೈಕ್‌ಗಳ ಬಿಡುಗಡೆಯ ನಂತರ ಇದೀಗ ಕಂಪನಿಯು ಯೆಜ್ಡಿ ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಯೆಜ್ಡಿ ಬ್ರ್ಯಾಂಡ್ ಅಡಿ ಕ್ಲಾಸಿಕ್ ಲೆಜೆಂಡ್ ಕಂಪನಿಯು ಗ್ರಾಹಕರ ಬೇಡಿಕೆಯಂತೆ ಯೆಜ್ಡಿ ರೋಡ್‌ಸ್ಟರ್, ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್‌ಗಳಲ್ಲಿ ರೋಡ್‌ಸ್ಟರ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.98 ಲಕ್ಷ ಬೆಲೆ ಹೊಂದಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಯೆಜ್ಡಿ ಹೊಸ ರೋಡ್‌ಸ್ಟರ್ ಬೈಕ್ ಬಿಡುಗಡೆ

ರೋಡ್‌ಸ್ಟರ್ ಮಾದರಿಗಳು ಸಾಮಾನ್ಯವಾಗಿ ದಿನಬಳಕೆಯ ಮೋಟಾರ್‌ಸೈಕಲ್‌ ಮಾದರಿಗಳಾಗಿದ್ದು, ಈ ಹಿಂದೆ ಯೆಜ್ಡಿಯ ನಿರ್ಮಾಣದ ಬಹುತೇಕ ಮೋಟಾರ್‌ಸೈಕಲ್‌ಗಳು ರೋಡ್‌ಸ್ಟರ್‌ಗಳಾಗಿದ್ದವು. ರೋಡ್‌ಸ್ಟರ್ ಮಾದರಿಗಳು ತಮ್ಮದೆ ಆದ ಹೊಸ ವೈಶಿಷ್ಟ್ಯತೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಹೊಂದಿದ್ದು, ಕಂಪನಿಯು ಇದೀಗ ತನ್ನ ಹೆರಿಟೇಜ್ ಬ್ರಾಂಡ್‌ಗೆ ಹೊಸ ಮಾದರಿಯನ್ನು ಸೇರ್ಪೆಡೆಗೊಳಿಸಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಯೆಜ್ಡಿ ಹೊಸ ರೋಡ್‌ಸ್ಟರ್ ಬೈಕ್ ಬಿಡುಗಡೆ

ಯೆಜ್ಡಿ ಕಂಪನಿಯು ಹೊಸ ರೋಡ್‌ಸ್ಟರ್ ಮಾದರಿಯನ್ನು ರೋಡ್‌ಸ್ಟರ್ ಡಾರ್ಕ್ ಮತ್ತು ರೋಡ್‌ಸ್ಟರ್ ಕ್ರೋಮ್ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದ್ದು, ರೋಡ್‌ಸ್ಟರ್ ಮಾದರಿಯಲ್ಲಿ ಆರಂಭಿಕ ಮಾದರಿಯು ರೂ. 1,98,142 ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 2,06,142 ಬೆಲೆ ಹೊಂದಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಯೆಜ್ಡಿ ಹೊಸ ರೋಡ್‌ಸ್ಟರ್ ಬೈಕ್ ಬಿಡುಗಡೆ

ಯೆಜ್ಡಿ ಹೊಸ ರೋಡ್‌ಸ್ಟರ್ ಮಾದರಿಯು ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಹೊಸ ಬೈಕ್ ಮುಂಭಾಗದಲ್ಲಿ ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಟೈಲ್ ಲ್ಯಾಂಪ್ ಪಡೆದುಕೊಂಡಿದೆ. ಆದರೆ ಹೊಸ ಬೈಕಿನಲ್ಲಿರುವ ಇಂಡಿಕೇಟರ್‌ಗಳು ಹ್ಯಾಲೊಜೆನ್ ಬಲ್ಬ್‌ಗಳಿಂದ ಕೂಡಿದ್ದು, ಡಿಜಿಟಲ್ ಸ್ಪೀಡೋಮೀಟರ್ ಅನ್ನು ಮುಂಭಾಗದ ಫೋರ್ಕ್‌ನ ಮೇಲ್ಭಾಗದಲ್ಲಿ ಜೋಡಿಸಲಾಗಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಯೆಜ್ಡಿ ಹೊಸ ರೋಡ್‌ಸ್ಟರ್ ಬೈಕ್ ಬಿಡುಗಡೆ

ಹೊಸ ಬೈಕಿನಲ್ಲಿ ಕೀ ಹೋಲ್ ಅನ್ನು ಮೋಟಾರ್‌ಸೈಕಲ್‌ನ ಬಲಭಾಗದಲ್ಲಿ ಇರಿಸಲಾಗಿದ್ದು, ರೋಡ್‌ಸ್ಟರ್ ಮಾದರಿಯು 12.5-ಲೀಟರ್ ಇಂಧನ ಟ್ಯಾಂಕ್ ಪ್ರತಿ ಬದಿಯಲ್ಲಿ ಯೆಜ್ಡಿ ಬ್ಯಾಡ್ಜಿಂಗ್ ಜೊತೆಗೆ ಮೋಟಾರ್‌ಸೈಕಲ್‌ನಲ್ಲಿ ಸಾಕಷ್ಟು ಕ್ರೋಮ್‌ಗಳಿವೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಯೆಜ್ಡಿ ಹೊಸ ರೋಡ್‌ಸ್ಟರ್ ಬೈಕ್ ಬಿಡುಗಡೆ

ಹಾಗೆಯೇ ಹೊಸ ಬೈಕಿನಲ್ಲಿ ಹೆಡ್‌ಲೈಟ್ ಗ್ರಿಲ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಸಾಕೆಟ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸಿಸ್ಟಮ್‌ನಂತಹ ವೈಶಿಷ್ಟ್ಯತೆಗಳನ್ನು ಶೋರೂಮ್‌ನಿಂದ ಖರೀದಿಸಬಹುದಾದ ಒಂದೆರಡು ಐಚ್ಛಿಕ ಸೌಲಭ್ಯಗಳಿದ್ದು, ಈ ಮೋಟಾರ್‌ಸೈಕಲ್ ಡಬಲ್ ಕ್ರೇಡಲ್ ಚಾಸಿಸ್ ಅನ್ನು ಹೊಂದಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಯೆಜ್ಡಿ ಹೊಸ ರೋಡ್‌ಸ್ಟರ್ ಬೈಕ್ ಬಿಡುಗಡೆ

ರೋಡ್‌ಸ್ಟರ್ ಮಾದರಿಯು 175 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಸುಮಾರು 135 ಎಂಎಂ ಟ್ರಾವೆಲ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಪಡೆಯುತ್ತದೆ. ಹಿಂಭಾಗದಲ್ಲಿ, ರೋಡ್‌ಸ್ಟರ್ ಫ್ರೀ ಲೋಡ್ ಹೊಂದಾಣಿಕೆಯೊಂದಿಗೆ 100 ಎಂಎಂ ಗ್ಯಾಸ್-ಚಾರ್ಜ್ಡ್ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದ್ದು, ಮುಂಭಾಗದಲ್ಲಿ ಫ್ಲೋಟಿಂಗ್ ಕ್ಯಾಲಿಪರ್‌ನೊಂದಿಗೆ 320 ಎಂಎಂ ಡಿಸ್ಕ್ ಜೋಡಿಸಲಾಗಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಯೆಜ್ಡಿ ಹೊಸ ರೋಡ್‌ಸ್ಟರ್ ಬೈಕ್ ಬಿಡುಗಡೆ

ಬೈಕಿನ ಹಿಂಬದಿಯಲ್ಲೂ ಫ್ಲೋಟಿಂಗ್ ಕ್ಯಾಲಿಪರ್‌ಗಳೊಂದಿಗೆ 240 ಎಂಎಂ ಡಿಸ್ಕ್ ಬ್ರೇಕ್ ನಿರ್ವಹಿಸಲಿದ್ದು, ಡ್ಯುಯಲ್-ಚಾನೆಲ್ ಎಬಿಎಸ್ ಸ್ಟ್ಯಾಂಡರ್ಡ್ ವೈಶಿಷ್ಟ್ಯವಾಗಿದೆ. ಈ ಮೂಲಕ ರೋಡ್‌ಸ್ಟರ್ ಮಾದರಿಯು 334ಸಿಸಿ ಸಿಂಗಲ್-ಸಿಲಿಂಡರ್, 4-ಸ್ಟ್ರೋಕ್ ಲಿಕ್ವಿಡ್-ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಯೆಜ್ಡಿ ಹೊಸ ರೋಡ್‌ಸ್ಟರ್ ಬೈಕ್ ಬಿಡುಗಡೆ

ರಿಯಲ್ ವ್ಹೀಲ್ ವೈಶಿಷ್ಟ್ಯತೆಯೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ ಯೆಜ್ಡಿ ರೋಡ್‌ಸ್ಟರ್ ಮಾದರಿಯು 29.3 ಎನ್ಎಂ ಟಾರ್ಕ್ ಮತ್ತು 29 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಹೊಸ ಬೈಕ್ ಮಾದರಿಯು ಸಹೋದರ ಸಂಸ್ಥೆ ಜಾವಾ ಮಾದರಿಯಿಂದಲೂ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಎರವಲು ಪಡೆದುಕೊಂಡಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಯೆಜ್ಡಿ ಹೊಸ ರೋಡ್‌ಸ್ಟರ್ ಬೈಕ್ ಬಿಡುಗಡೆ

ರೋಡ್‌ಸ್ಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸ್ಮೋಕ್ ಗ್ರೇ, ಸ್ಟ್ರೀಲ್ ಬ್ಲ್ಯೂ, ಹಂಟರ್ ಗ್ರೀನ್, ಗಲ್ಯಾಂಟ್ ಗ್ರೇ ಮತ್ತು ಸಿನ್ ಸಿಲ್ವರ್ ಬಣ್ಣಗಳ ಆಯ್ಕೆ ಹೊಂದಿದ್ದು, ಆಕರ್ಷಕ ವಿನ್ಯಾಸವು ಗ್ರಾಹಕರನ್ನು ಮೊದಲ ನೋಟದಲ್ಲಿಯೇ ಸೆಳೆಯುತ್ತದೆ.

Most Read Articles

Kannada
Read more on ಯೆಜ್ಡಿ yezdi
English summary
Yezdi roadster launched in india at rs 1 98 lakh details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X