ಭರ್ಜರಿ ನವೀಕರಣಗಳನ್ನು ಪ್ರಕಟಿಸಿದ ಎಥರ್ ಎನರ್ಜಿ: ಯಾವೆಲ್ಲ ಬದಲಾವಣೆಗಳಿವೆ?

ದೇಶದ ಪ್ರಮುಖ ಎಲೆಕ್ಟ್ರಿಕ್ ವಾಹನ (EV) ತಯಾರಿಕ ಕಂಪನಿಯರುವ ಎಥರ್ ಎನರ್ಜಿ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆಗಳನ್ನು ಘೋಷಿಸಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ 450X ಮತ್ತು 450 ಪ್ಲಸ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಇವು ತಮ್ಮದೇ ಆದ ವೈಶಿಷ್ಟ್ಯಗಳನ್ನು ಹೊಂದುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ ಎಂದು ಹೇಳಬಹುದು.

ಎಥರ್ ಎನರ್ಜಿ ತನ್ನ ಗ್ರಾಹಕರಿಗಾಗಿ ಕಮ್ಯೂನಿಟಿ ಡೇ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇಲ್ಲಿ ಹೊಸ ಕೊಡುಗೆಗಳ ಪ್ರಕಟಣೆಯನ್ನು ಮಾಡಿದೆ. ಬ್ರ್ಯಾಂಡ್ 'AtherStack 5.0' ಎಂಬ ದೊಡ್ಡ ಸಾಫ್ಟ್‌ವೇರ್ ಅಪ್‌ಡೇಟ್ ಪರಿಚಯಿಸಿದೆ. ಇದು ಡ್ಯಾಶ್‌ಬೋರ್ಡ್‌ ಡಿಸ್ಪ್ಲೇಗೆ ಬ್ರ್ಯಾಂಡ್‌ ಮಾಡಿರುವ ಒಂದೊಳ್ಳೆ ನವೀಕರಣವಾಗಿದೆ ಎಂದು ಹೇಳಬಹುದು. ಜಾಗತಿಕವಾಗಿ ಗೂಗಲ್ ಒದಗಿಸುವ ವೆಕ್ಟರ್ ನಕ್ಷೆಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಇದು ಎಲೆಕ್ಟ್ರಿಕ್ ಸ್ಕೂಟರ್‌ನೊಂದಿಗೆ ದೇಶದಲ್ಲಿ ಮೊದಲ ಬಾರಿಗೆ ಲಭ್ಯವಿದ್ದು, ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತದೆ.

ಭರ್ಜರಿ ನವೀಕರಣಗಳನ್ನು ಪ್ರಕಟಿಸಿದ ಎಥರ್ ಎನರ್ಜಿ: ಯಾವೆಲ್ಲ ಬದಲಾವಣೆಗಳಿವೆ?

ಈ ಡಿಸ್ಪ್ಲೇ ಇಂಟರ್ಫೇಸ್ ಇದೀಗ ಸ್ವೈಪ್ ಕಂಟ್ರೋಲ್ ನೊಂದಿಗೆ ಸುಲಭವಾಗಲಿದ್ದು, ಪವರ್ ಬಳಕೆ, ವಿವಿಧ ವಿಧಾನಗಳಲ್ಲಿನ ಉಪಯೋಗಕ್ಕಾಗಿ ನೂತನ ರೈಡ್ ಅನಿಮೇಷನ್‌ಗಳನ್ನು ಸಹ ಕಾಣಬಹುದು. ಇದು ಕ್ವಿಕ್ ಕಂಟ್ರೋಲ್ ಜೊತೆಗೆ ಬ್ರೈಟ್‌ನೆಸ್‌ನಂತಹ ಸೆಟ್ಟಿಂಗ್‌ಗಳನ್ನು ಸುಲಭವಾಗಿ ಮಾಡಲು ಅಥವಾ ಒಂದೇ ಟ್ಯಾಪ್‌ನಲ್ಲಿ ಕಾಲ್ ನೋಟಿಫಿಕೇಷನ್ ಆಫ್ ಮಾಡಲು ಸಹಾಯ ಮಾಡುತ್ತದೆ. ಹೊಸ ಕ್ವಿಕ್ ವೀವ್ ವಿಭಾಗವನ್ನು ಕೇವಲ ಸ್ವೈಪ್ ಮೂಲಕ ಪ್ರವೇಶಿಸಬಹುದು. ಡ್ಯಾಶ್‌ಬೋರ್ಡ್ ನೋಟಿಫಿಕೇಷನ್ ಮತ್ತು ಟೈರ್ ಫ್ರೆಜರ್ ನಂತಹ ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ.

ಎಥರ್ ಎನರ್ಜಿ ಗ್ರಾಹಕರಿಗೆ ನಾಲ್ಕು ಹೊಸ ಬಣ್ಣದ ಆಯ್ಕೆಗಳನ್ನು ನೀಡಿದೆ. ಅವುಗಳೆಂದರೆ, ಕಾಸ್ಮಿಕ್ ಬ್ಲ್ಯಾಕ್, ಸಾಲ್ಟ್ ಗ್ರೀನ್, ಟ್ರೂ ರೆಡ್ ಮತ್ತು ಲೂನಾರ್ ಗ್ರೇ. ಇವೆಲ್ಲವು 450X ಮತ್ತು 450 ಪ್ಲಸ್ ಸ್ಕೂಟರ್‌ಗಳ ಖರೀದಿಯೊಂದಿಗೆ ಲಭ್ಯವಿವೆ. ಸೀಟ್ ಗಳನ್ನು ಹೆಚ್ಚು ಆರಾಮದಾಯಕವಾಗುವಂತೆ ಮರುವಿನ್ಯಾಸಗೊಳಿಸಲಾಗಿದೆ. ಸದ್ಯ ಮುಂಭಾಗದಲ್ಲಿ ಕಿರಿದಾಗಿದ್ದು, ಮಧ್ಯದಲ್ಲಿ ಚಪ್ಪಟೆಯಾಗಿದೆ. ಈ ಹೊಸ ಸೀಟ್, ಹಿಂದಿನ ಮಾದರಿ ಸ್ಕೂಟರ್‌ಗಳಿಗೂ ಅಳವಡಿಸಬಹುದು. ಇದು ಖರೀದಿದಾರರನ್ನು ಸುಲಭವಾಗಿ ಸೆಳೆಯುತ್ತದೆ.

ಎಥರ್ ಎನರ್ಜಿಯು ನೂತನ ಆಟೋಹೋಲ್ಡ್ (ಹಿಲ್ ಕ್ಲೈಂಬ್ ಅಸಿಸ್ಟ್) ತಂತ್ರಜ್ಞಾನವನ್ನು ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ. ಇದರ ಉಪಯೋಗವೆಂದರೇ ಸ್ಕೂಟರ್ ಇಳಿಜಾರಿನ ರಸ್ತೆಯಲ್ಲಿ ಹಿಂದಕ್ಕೆ ಅಥವಾ ಮುಂದಕ್ಕೆ ಹೋಗುವುದನ್ನು ತಡೆಯುತ್ತದೆ. ಈ ತಂತ್ರಜ್ಞಾನವು ವಿವಿಧ ಸೆನ್ಸರ್ಸ್ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಬ್ರ್ಯಾಂಡ್ 14 ಲೀಟರ್ ಸಂಗ್ರಹ ಸಾಮರ್ಥ್ಯವಿರುವ ಫ್ರಂಕ್ ಎಂಬ ಹೊಸ ಫ್ರಂಟ್ ಬಾಕ್ಸ್ ಅನ್ನು ಖರೀದಿದಾರರಿಗೆ ನೀಡಲಿದೆ. ಇದರಿಂದ ಈ ಸ್ಕೂಟರ್ ಮತ್ತಷ್ಟು ಆಕರ್ಷಕವಾಗಲಿದೆ.

ಇದೇ ಮೊದಲ ಬಾರಿಗೆ, ಎಥರ್ ಎನರ್ಜಿ ತನ್ನ ಬ್ಯಾಟರಿಯೊಂದಿಗೆ ಲಭ್ಯವಿರುವ ವಾರಂಟಿಯನ್ನು ಮೂರು ವರ್ಷಗಳಿಂದ ಐದು ವರ್ಷಗಳಿಗೆ/60,000 ಕಿ.ಮೀಗಳಿಗೆ ವಿಸ್ತರಿಸಿದೆ. ಇದು ಬ್ಯಾಟರಿ ಪ್ರೊಟೆಕ್ಷನ್ ಅನ್ನು ಒಳಗೊಂಡಿದ್ದು, 5 ವರ್ಷಗಳ ಕೊನೆಯಲ್ಲಿ ಬ್ಯಾಟರಿಗೆ ಕನಿಷ್ಠ 70% ಗುಣಮಟ್ಟವನ್ನು ಖಾತರಿಪಡಿಸುತ್ತದೆ. ಈ ವಾರಂಟಿ ಇದೀಗ 450X (3 + 2 ವರ್ಷಗಳು) ಸ್ಟ್ಯಾಂಡರ್ಡ್ ಸ್ಕೂಟರ್ ಗೆ ಬರುತ್ತಿದೆ. ಆದರೆ, 450 ಪ್ಲಸ್ ಮಾಲೀಕರು ಹೆಚ್ಚುವರಿ 2-ವರ್ಷದ ವಾರಂಟಿಯನ್ನು ಕೇವಲ 6,999 ರೂ.ಗಳಿಗೆ ಖರೀದಿಸಬಹುದು.

ಎಥರ್ ಎನರ್ಜಿ, ತನ್ನ ಗ್ರಿಡ್ ಪಾಯಿಂಟ್‌ಗಳನ್ನು ಮಾರ್ಚ್ 2023 ವೇಳೆಗೆ 1300 ಪಾಯಿಂಟ್‌ಗಳಿಗೆ ವಿಸ್ತರಿಸುವುದಾಗಿ ಘೋಷಿಸಿದೆ. ಎಥರ್ ಸ್ಕೂಟರ್‌ಗಳನ್ನು ಚಾರ್ಜ್ ಮಾಡಲು ಬಹುಮಹಡಿ ಕಟ್ಟಡದಲ್ಲಿ ವಾಸಿಸುವ ಇವಿ ಮಾಲೀಕರು, ಎದುರಿಸುತ್ತಿರುವ ಸಮಸ್ಯೆಯನ್ನು ಕಂಪನಿಯು ಪರಿಗಣನೆಗೆ ತೆಗೆದುಕೊಂಡಿದೆ ಎಂದು ಹೇಳಬಹುದು. ಈ ಮೂಲಕ ಖಾಸಗಿ ಸ್ಥಳಗಳಲ್ಲಿನ ಚಾರ್ಜಿಂಗ್ ಪಾಯಿಂಟ್‌ಗಳಲ್ಲೂ ಇವಿಗಳನ್ನು ಚಾರ್ಜ್ ಮಾಡಬಹುದು. ಇಲ್ಲಿ ಕೇವಲ ಎಥರ್ ಸ್ಕೂಟರ್‌ಗಳನ್ನು ಮಾತ್ರವಲ್ಲದೆ ಬೇರೆ ಸ್ಕೂಟರ್ ಗಳನ್ನು ಚಾರ್ಜ್ ಮಾಡಬಹುದು.

ನವೀಕರಿಸಿದ ಎಥರ್ 450X ಸ್ಕೂಟರ್‌ ಬೆಲೆಗಳು ರೂ.1,60,205 ರಿಂದ ಪ್ರಾರಂಭವಾಗುತ್ತವೆ (ಎಕ್ಸ್-ಶೋ ರೂಂ ದೆಹಲಿ). ಆದರೆ, 450 ಪ್ಲಸ್ ರೂ. 1,37,195 ಆಗಿದೆ. ಅಲ್ಲದೆ, ಕೆಲವೊಂದು ಸೀಮಿತ ಆಫರ್ ಲಭ್ಯವಿದ್ದು, ಗ್ರಾಹಕರಿಗೆ ಈ ಸ್ಕೂಟರ್ ಕಡಿಮೆ ಬೆಲೆಗೂ ಖರೀದಿಗೆ ಲಭ್ಯವಿದೆ. ಒಟ್ಟಾರೆಯಾಗಿ ಎಥರ್ ಎನರ್ಜಿ ಭಾರತದ ಹೊಸ ಖರೀದಿದಾದಾರನ್ನು ತನ್ನತ್ತ ಸೆಳೆಯಲು ನವೀನ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇದು ಗ್ರಾಹಕರಿಗೆ ಇಷ್ಟವಾಗುತ್ತದೆ ಎಂದು ಕಂಪನಿ ನಂಬಿದ್ದು, ಇದನ್ನು ಎಷ್ಟರಮಟ್ಟಿಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕಾಗಿದೆ.

Most Read Articles

Kannada
English summary
Ather energy announces major updates
Story first published: Saturday, January 7, 2023, 17:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X