ಹೊಸ ಕೆಂಪು ಬಣ್ಣದಲ್ಲಿ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಬರುತ್ತಾ ಎಥರ್ 450X?

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿವೆ. ಪ್ರಮುಖ ವಾಹನ ತಯಾರಿಕ ಕಂಪನಿಗಳು ಕೂಡ ಅದರತ್ತ ಗಮನ ಹರಿಸಿವೆ. ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಓಲಾ ಹಾಗೂ ಎಥರ್ ಎನರ್ಜಿ ಕಂಪನಿಗಳು ಪೈಪೋಟಿ ನಡೆಸುತ್ತಿದ್ದು, ಇದಕ್ಕಾಗಿ ಹಲವು ವೈಶಿಷ್ಟ್ಯಗಳೊಂದಿಗೆ ತಮ್ಮ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ.

ಎಥರ್ ಎನರ್ಜಿ ಇತ್ತೀಚೆಗೆ ತನ್ನ ಸೋಷಿಯಲ್ ಮೀಡಿಯಾದಲ್ಲಿ 'ಕೆಂಪು' ಬಣ್ಣವನ್ನು ಪೋಸ್ಟ್ ಮಾಡಿದೆ. 'ಎಲ್ಲಾ ಪ್ರಶ್ನೆಗಳಿಗೆ ಕೆಂಪು ಬಣ್ಣ ಉತ್ತರವಾಗಲಿದೆ' ಎಂಬ ಅರ್ಥ ಬರುವಂತೆ ಶೀರ್ಷಿಕೆ ನೀಡಲಾಗಿದೆ. ಈ ಪೋಸ್ಟ್ ಹಲವಾರು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ. ಅಲ್ಲಿ ಕೆಲವರು, ಬ್ರ್ಯಾಂಡ್‌ನ 450X, 450 ಪ್ಲಸ್ ಸ್ಕೂಟರ್‌ಗಳು ಹೊಸ ಬಣ್ಣದ ಆಯ್ಕೆಯನ್ನು ಪಡೆಯಬಹುದು ಎಂದು ಅಂದಾಜಿಸಿದ್ದಾರೆ. ಬ್ರ್ಯಾಂಡ್ ಹೊಸ ಎಂಟ್ರಿ ಲೆವೆಲ್ ಸ್ಕೂಟರ್ ಬಿಡುಗಡೆ ಮಾಡಬಹುದೆಂದು ಹಲವಾರು ಊಹಿಸುತ್ತಿದ್ದಾರೆ. ಇದು ಅಗ್ಗದ ಬೆಲೆಯ ಓಲಾ S1 ಏರ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ಪೈಪೋಟಿ ನೀಡಬಹುದು.

ಹೊಸ ಕೆಂಪು ಬಣ್ಣದಲ್ಲಿ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಬರುತ್ತಾ ಎಥರ್ 450X?

ಎಥರ್ ಎನರ್ಜಿ ಕೆಲ ದಿನಗಳ ಹಿಂದೆ, 2022ರ ಡಿಸೆಂಬರ್ ತಿಂಗಳ ತನ್ನ ಮಾರಾಟ ವರದಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಕಂಪನಿಯು 9,187 ಯುನಿಟ್‌ ಮಾರಾಟ ಮಾಡಿ, ದಾಖಲೆ ನಿರ್ಮಿಸಿದೆ. ಇದು ವರ್ಷದಿಂದ ವರ್ಷಕ್ಕೆ 389% ಬೆಳವಣಿಗೆಯಾಗಿದೆ. ಹಿಂದಿನ ತಿಂಗಳ ಮಾರಾಟದ ಬೆಳವಣಿಗೆಗೆ ಹೋಲಿಸಿದರೆ, ಬ್ರ್ಯಾಂಡ್ 26% ಬೆಳವಣಿಗೆಯನ್ನು ದಾಖಲಿಸಿದೆ. ದ್ವಿಚಕ್ರ ವಾಹನ ಮಾರಾಟದಲ್ಲಿ ಸುಮಾರು 40% ಉದ್ಯಮ ಕುಸಿತದ ಹೊರತಾಗಿಯೂ ಎಥರ್ ಎನರ್ಜಿ ಈ ಬೆಳವಣಿಗೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಎಲೆಕ್ಟ್ರಿಕ್ ಸ್ಟಾರ್ಟ್-ಅಪ್ ಕಂಪನಿ ಎಥರ್ ಎನರ್ಜಿ, ಡಿಸೆಂಬರ್ ತಿಂಗಳಲ್ಲಿ ಹಲವು ಆಕರ್ಷಕ ಯೋಜನೆ ಪರಿಚಯಿಸುವ ಮೂಲಕ ಸ್ಕೂಟರ್‌ ಮಾರಾಟದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಟೈರ್ 2 ಮತ್ತು ಟೈರ್ 3 ನಗರಗಳಲ್ಲಿನ ಅದರ ಸ್ಥಿರ ವಿಸ್ತರಣೆಗಳು ಸೇರಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಥರ್ ಎನರ್ಜಿ ಚೀಫ್ ಬಸ್ಸಿನೆಸ್ ಆಫೀಸರ್ ರವನೀತ್ ಸಿಂಗ್ ಫೋಂಕಾ, 'ನಾವು ನಮ್ಮ ಹೆಜ್ಜೆಗುರುತನ್ನು ವಿಸ್ತರಿಸುವುದನ್ನು ಮುಂದುವರೆಸಿದ್ದೇವೆ. 14 ಹೊಸ ಔಟ್‌ಲೆಟ್‌ಗಳು, 89 ಎಕ್ಸ್ಪೀರಿಯೆನ್ಸ್ ಸೆಂಟರ್ ಗಳೊಂದಿಗೆ 70 ನಗರಗಳಲ್ಲಿ ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

ಎಥರ್ ಎನರ್ಜಿ ತನ್ನ ಎಕ್ಸ್ಪೀರಿಯೆನ್ಸ್ ಸೆಂಟರ್ ಗಳನ್ನು ನೋಯ್ಡಾ, ನೆಲ್ಲೂರು, ಉಡುಪಿ, ಕರೀಂನಗರ, ಕೊಟ್ಟಾಯಂ ಮತ್ತು ಶಿವಮೊಗ್ಗಸೇರಿದಂತೆ 14 ಸ್ಥಳಗಳಿಗೆ ವಿಸ್ತರಿಸಿದೆ. ಬೆಂಗಳೂರಿನಲ್ಲಿ ಜನವರಿ 7ರಂದು ಬ್ರ್ಯಾಂಡ್‌ನ ಕಮ್ಯುನಿಟಿ ಡೇ ಕಾರ್ಯಕ್ರಮ ನಡೆಯಲಿದ್ದು, ಅಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ 'ಕೆಂಪು' ಬಣ್ಣದ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ಆ ದಿನದಂದು ಹಲವಾರು ಪ್ರಮುಖ ಅಪ್‌ಡೇಟ್‌ಗಳು ಮತ್ತು ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯಿದೆ. ಅದರೊಂದಿಗೆ, ಎಥರ್ ಎನರ್ಜಿ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.

ಪ್ರಸ್ತುತ ಎಥರ್ ಎನರ್ಜಿ ಕಂಪನಿ ತಿಂಗಳಿಗೆ 8000-9000 ಸ್ಕೂಟರ್‌ಗಳನ್ನು ತಯಾರಿಸುತ್ತಿದ್ದು, ಅದನ್ನು ಮಾರ್ಚ್ 2023ರ ಹೊತ್ತಿಗೆ ತಿಂಗಳಿಗೆ 20 ಸಾವಿರ ಸ್ಕೂಟರ್‌ಗಳಿಗೆ ಹೆಚ್ಚಿಸಲು ತೀರ್ಮಾನ ಮಾಡಿದೆ. ಅದಕ್ಕಾಗಿ ಅಕ್ಟೋಬರ್ 2022ರಲ್ಲಿ ತಮಿಳುನಾಡಿನ ಹೊಸೂರು ಜಿಲ್ಲೆಯಲ್ಲಿ ಹೊಸ ಉತ್ಪಾದನಾ ಘಟಕ ನಿರ್ಮಿಸಿದೆ. ಸಂಸ್ಥೆಯ ಆರಂಭದ ದಿನದಲ್ಲಿ ಸ್ಕೂಟರ್‌ಗಳನ್ನು ಆನ್‌ಲೈನ್‌ನಲ್ಲಿ ಮತ್ತು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿತ್ತು. ಇದೀಗ ತನ್ನದೇ ಶೋರೂಂಗಳನ್ನು ಓಪನ್ ಮಾಡಲು ಕಂಪನಿ ಪ್ರಯತ್ನಿಸುತ್ತಿದೆ.

ಎಥರ್ ಪ್ರಸ್ತುತ 450X ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ. ಇದು ಸಂಪೂರ್ಣ ಚಾರ್ಜ್‌ನಲ್ಲಿ 146 ಕಿಮೀ ಮೈಲೇಜ್ ನೀಡಬಹುದು. ಗಂಟೆಗೆ 90 ಕಿ.ಮೀ ಗರಿಷ್ಠ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕೇವಲ 3.3 ಸೆಕೆಂಡ್‌ಗಳಲ್ಲಿ 0-40 ಕಿಮೀ ಸ್ವೀಡ್ ಪಡೆಯಬಹುದು. ಅಲ್ಲದೆ, 6kW PMSM ಪ್ರೊಪಲ್ಷನ್ ಮೋಟಾರ್, 3.7kWh ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿದೆ. ಈ ಸ್ಕೂಟರ್ ಬೆಲೆ 1.55 ಲಕ್ಷ ರೂಪಾಯಿ ಇದೆ.

ಎಥರ್ ಪ್ರತಿಸ್ಪರ್ಧಿಯಾಗಿರುವ ಓಲಾ ಎಲೆಕ್ಟ್ರಿಕ್, ಸದ್ಯ ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಅವುಗಳೆಂದರೆ, ಓಲಾ S1 ಮತ್ತು ಓಲಾ S1 Pro. ಜೊತೆಗೆ ಓಲಾ ಎಸ್1 ಏರ್ ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೆಲ ತಿಂಗಳ ಹಿಂದೆ ಲಾಂಚ್ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್, ಏಪ್ರಿಲ್ ತಿಂಗಳ ಪ್ರಾರಂಭದಲ್ಲಿ ಗ್ರಾಹಕರಿಗೆ ಸಿಗಬಹುದು. ಓಲಾ S1 Pro ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಪ್ರಸ್ತುತ 1.40 ಲಕ್ಷ ರೂ. ಇದ್ದು, ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್ 1 ಲಕ್ಷ ರೂ. ಇದೆ. ಆದರೆ, ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 80 ಸಾವಿರ ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

Most Read Articles

Kannada
English summary
Ether 450 coming in affordable price in new red colour
Story first published: Thursday, January 5, 2023, 10:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X