ಬೀಳುವ ಭಯ ಬೇಡ, ಬರುತ್ತಿದೆ ಸ್ಟ್ಯಾಂಡ್ ಇಲ್ಲದೇ ನಿಂತುಕೊಳ್ಳುವ ಸೆಲ್ಫ್ ಬ್ಯಾಲೆನ್ಸಿಂಗ್ ಎಲೆಕ್ಟ್ರಿಕ್ ಸ್ಕೂಟರ್

ಲೈಗರ್ ಮೊಬಿಲಿಟಿಯು ದೆಹಲಿಯಲ್ಲಿ ನಡೆಯಲ್ಲಿರುವ 2023ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಸೆಲ್ಫ್ ಬ್ಯಾಲೆನ್ಸಿಂಗ್ ಮಾಡಲು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಲು ಸಿದ್ಧವಾಗಿದೆ. ಸ್ವದೇಶಿ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್ಅಪ್ ತನ್ನ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್ ಯಾವುದೇ ಸೈಡ್ ಅಥವಾ ಸೆಂಟರ್ ಸ್ಟ್ಯಾಂಡ್‌ನ ಸಹಾಯವಿಲ್ಲದೆ ಸ್ವತಂತ್ರವಾಗಿ ತಾನೇ ಬ್ಯಾಲೆನ್ಸಿಂಗ್ ಮಾಡಿ ನಿಂತುಕೊಳ್ಳುತ್ತದೆ.

ಲೈಗರ್ ಎಲೆಕ್ಟ್ರಿಕ್ ಸ್ಕೂಟರ್ ಸೆಲ್ಫ್ ಬ್ಯಾಲೆನ್ಸಿಂಗ್ ಆಗಿರುವುದರಿಂದ ಸವಾರರ ಸುರಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಜಾಗತಿಕವಾಗಿ ಲಭ್ಯವಿರುವ ಯಾವುದೇ ಸ್ಕೂಟರ್‌ಗಳಿಗೆ ಹೋಲಿಸಿದರೆ ಸೌಕರ್ಯ ಮತ್ತು ಹೆಚ್ಚಿನ ಅನುಕೂಲತೆಯನ್ನು ಈ ಸ್ಕೂಟರ್ ಹೊಂದಿರಲಿದೆ. ಮುಂಬೈ ಮೂಲದ ಲೈಗರ್ ಮೊಬಿಲಿಟಿ 2019 ರಲ್ಲಿ ಸಲ್ಫ್ ಬ್ಯಾಲೆನ್ಸಿಂಗ್ ಮತ್ತು ಸೆಲ್ಫ್ -ಪಾರ್ಕಿಂಗ್ ತಂತ್ರಜ್ಞಾನ-ಸಕ್ರಿಯಗೊಳಿಸಿದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಟೀಸರ್ ಬಿಡುಗಡೆ ಮಾಡಿತು. ಇದು ಪೂರ್ವ-ಉತ್ಪಾದನೆಯ ಮೂಲಮಾದರಿಯಾಗಿದೆ ಮತ್ತು ಮುಂಬರುವ ಆಟೋ ಎಕ್ಸ್‌ಪೋ 2023 ರಲ್ಲಿ ಪ್ರದರ್ಶಿಸುವ ಮಾದರಿಯು ಉತ್ಪಾದನೆಗೆ ಸಿದ್ಧವಾಗಿದೆ.

ಬರುತ್ತಿದೆ ಸೆಲ್ಫ್ ಬ್ಯಾಲೆನ್ಸಿಂಗ್ ಎಲೆಕ್ಟ್ರಿಕ್ ಸ್ಕೂಟರ್

ಸೆಲ್ಫ್ ಬ್ಯಾಲೆನ್ಸಿಂಗ್ ಲೈಗರ್ ಎಲೆಕ್ಟ್ರಿಕ್ ಸ್ಕೂಟರ್ ಆಧುನಿಕ ವೈಶಿಷ್ಟ್ಯಗಳೊಂದಿಗೆ ರೆಟ್ರೊ ಶೈಲಿಯನ್ನು ಸಂಯೋಜಿಸುತ್ತದೆ. ಮೊದಲ ನೋಟದಲ್ಲಿ, ಇದು ಕ್ಲಾಸಿಕ್ ವೆಸ್ಪಾ ವಿನ್ಯಾಸದಿಂದ ಪ್ರಭಾವಿತವಾಗಿರುತ್ತದೆ. ವಿಶಿಷ್ಟವಾದ ಸ್ಟೈಲಿಂಗ್ ಅಂಶಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಮುಂಭಾಗದಲ್ಲಿ, ಸ್ಕೂಟರ್ ಮುಂಭಾಗದ ಏಪ್ರನ್‌ನಲ್ಲಿ ಡೆಲ್ಟಾ-ಆಕಾರದ LED ಹೆಡ್‌ಲ್ಯಾಂಪ್ ಅನ್ನು ಪಡೆಯುತ್ತದೆ, ಆದರೆ ಮೇಲ್ಭಾಗದಲ್ಲಿ ನಯವಾದ ಸಮತಲವಾದ LED ಡೇಟೈಮ್ ರನ್ನಿಂಗ್ ಲೈಟ್ (DRL) ಇದೆ. ಮುಂಭಾಗದ ಕೌಲ್ ದುಂಡಗಿನ ಎಲ್ಇಡಿ ಟರ್ನ್ ಇಂಡಿಕೇಟರ್ಸ್ ಗಳನ್ನು ಸಹ ಹೊಂದಿದೆ.

ಲೈಗರ್ ಎಲೆಕ್ಟ್ರಿಕ್ ಸ್ಕೂಟರ್ ರೆಟ್ರೊ-ಥೀಮಿನ ಶೈಲಿಯನ್ನು ಅಳವಡಿಸಿಕೊಂಡಿದೆ ಮತ್ತು ಆಧುನಿಕ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಲೈಗರ್ ಸೆಲ್ಫ್ ಬ್ಯಾಲೆನ್ಸಿಂಗ್ ಎಲೆಕ್ಟ್ರಿಕ್ ಸ್ಕೂಟರ್‌ನ ಇತರ ವೈಶಿಷ್ಟ್ಯಗಳೆಂದರೆ ಆಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವಿಶಾಲ ಮತ್ತು ಆರಾಮದಾಯಕ ಸೀಟ್, ಹಿಂಭಾಗದಲ್ಲಿ ಗ್ರಾಬ್ ರೈಲ್, ಎಲ್‌ಇಡಿ ಟೈಲ್‌ಲೈಟ್, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮತ್ತು ಇತ್ಯಾದಿಗಳನ್ನು ಒಳಗೊಂಡಿವೆ. ಈ ಹೊಸ ಲೈಗರ್ ಎಲೆಕ್ಟ್ರಿಕ್ ಸ್ಕೂಟರ್ ಬಣ್ಣಗಳ ಆಯ್ಕೆಗಳ ಮಾಹಿತಿಗಳನ್ನು ಕಂಪನಿಯು ಇನ್ನು ಬಹಿರಂಗಪಡಿಸಿಲ್ಲ.

ಈ ಲೈಗರ್ ಎಲೆಕ್ಟ್ರಿಕ್ ಸ್ಕೂಟರ್ ಬಣ್ಣಗಳ ಆಯ್ಕೆಯಲ್ಲಿ ಒಂದು ಮ್ಯಾಟ್ ರೆಡ್ ಆಗಿರುತ್ತದೆ. ಇದರೊಂದಿಗೆ ಈ ಸ್ಕೂಟರ್ ನಲ್ಲಿ ಅಲಾಯ್ ವ್ಹೀಲ್ ಗಳನ್ನು ಹೊಂದಿರುತ್ತದೆ. ಇನ್ನು ಪ್ರಮುಖವಾಗಿ ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಡಿಸ್ಕ್ ಬೇಕ್ ಅನ್ನು ಹೊಂದಿದ್ದು, ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ನೀಡಲಾಗಿದೆ, ಈ ಎಲೆಕ್ಟ್ರಿಕ್ ಸ್ಕೂಟರ್ ಕ್ರಾಂತಿಕಾರಿ ತಂತ್ರಜ್ಞಾನವನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ತಯಾರಕರು ಹೇಳುತ್ತಾರೆ.

ಈ ತಂತ್ರಜ್ಞಾನವು ಎಲೆಕ್ಟ್ರಿಕ್ ಸ್ಕೂಟರ್‌ನ ರೈಡರ್ ಸುರಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ಯಾವುದೇ ಸಾಂಪ್ರದಾಯಿಕ ಸ್ಕೂಟರ್‌ಗೆ ಹೋಲಿಸಿದರೆ ಉತ್ತಮ ಸವಾರ ಸೌಕರ್ಯ ಮತ್ತು ಅನುಕೂಲತೆಯನ್ನು ಖಾತ್ರಿಗೊಳಿಸುತ್ತದೆ. ಬಹುಪಾಲು ಜನಸಂಖ್ಯೆಯು ಇನ್ನೂ ದ್ವಿಚಕ್ರ ವಾಹನಗಳನ್ನು ಅವಲಂಬಿಸಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಹಲವಾರು ಕಾರಣಗಳಿಂದಾಗಿ, ರಸ್ತೆಯಲ್ಲಿ ಸಂಭವಿಸುವ ಹೆಚ್ಚಿನ ಅಪಘಾತಗಳು ದ್ವಿಚಕ್ರ ವಾಹನಗಳು ಒಳಗೊಂಡಿರುತ್ತವೆ. ವರ್ಷಗಳಲ್ಲಿ, ಅಧಿಕಾರಿಗಳು ದ್ವಿಚಕ್ರ ವಾಹನ ಸವಾರರ ಸುರಕ್ಷತೆಗಾಗಿ ಹಲವಾರು ನಿಯಮಗಳು ಮತ್ತು ನಿಬಂಧನೆಗಳನ್ನು ತಂದಿದ್ದಾರೆ, ಆದರೂ ಅಪಘಾತಗಳು ಸಂಭವಿಸುತ್ತಿವೆ.

ಐಐಟಿ ಪದವೀಧರರ ಗ್ರೂಪ್ ದ್ವಿಚಕ್ರ ವಾಹನ ಸವಾರ ಸುರಕ್ಷತೆಗಾಗಿ ಪರಿಹಾರವನ್ನು ಕಂಡುಕೊಂಡಿದೆ. ಈ ಪರಿಹಾರವು ಜನರು ದ್ವಿಚಕ್ರ ವಾಹನವನ್ನು ನೋಡುವ ಮತ್ತು ಸವಾರಿ ಮಾಡುವ ವಿಧಾನವನ್ನು ಬದಲಾಯಿಸುತ್ತದೆ. ಅವರು ಭಾರತದ ಸೆಲ್ಫ್ ಬ್ಯಾಲೆನ್ಸಿಂಗ್ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸ್ಕೂಟರ್ ಐಐಟಿ ಪದವೀಧರರ ಕನಸಿನ ಕೂಸು, ಅವರು ದ್ವಿಚಕ್ರ ವಾಹನ ಸವಾರಿ ಅನುಭವವನ್ನು ಹೆಚ್ಚು ಸುರಕ್ಷಿತವಾಗಿಸಲು ಬಯಸಿದ್ದರು. ದ್ವಿಚಕ್ರ ವಾಹನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಕೆಲವರಿಗೆ ಕಷ್ಟವಾಗಬಹುದು.

ಅಲ್ಲದೇ ದ್ವಿಚಕ್ರ ವಾಹನದ ಮೇಲೆ ನಿಮಗೆ ಸಾಕಷ್ಟು ವಿಶ್ವಾಸವಿಲ್ಲದಿದ್ದರೆ ಅದು ಅಪಘಾತಗಳಿಗೆ ಕಾರಣವಾಗಬಹುದು ಎಂಬ ಕಾರಣದಿಂದ ಸೆಲ್ಫ್ ಬ್ಯಾಲೆನ್ಸಿಂಗ್ ಸ್ಕೂಟರ್ ಅವರ ಮನಸ್ಸಿಗೆ ಬಂದಿತು. ಸ್ಕೂಟರ್‌ನಲ್ಲಿ ಯಾವುದೇ ಸವಾರ ಇಲ್ಲದಿದ್ದರೂ ಸಹ ತನ್ನನ್ನು ತಾನೇ ಬಾಲೆನ್ಸ್ ಮಾಡಿಕೊಳ್ಳುತ್ತದೆ. ಫೀಟ್ ಆಲ್ವೇಸ್' ಆನ್‌ಬೋರ್ಡ್ ತಂತ್ರಜ್ಞಾನವು ಸವಾರರು ತಮ್ಮ ಪಾದವನ್ನು ಸ್ಕೂಟರ್ ನಲ್ಲೇ ಇಟ್ಟಿಕೊಳ್ಳಬಹುದು. ಅಲ್ಲದೇ ಬ್ಯಾಲೆನ್ಸ್ ತಪ್ಪಿ ಕೆಳಗೆ ಬೀಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಸೆಲ್ಫ್ ಬ್ಯಾಲೆನ್ಸಿಂಗ್ ನಿಂದ ಈ ಸ್ಖೂತರ್ ಅನ್ನು ಸುಲಭವಾಗಿ ಓಡಿಸಬಹುದು.

Most Read Articles

Kannada
English summary
Liger to unveil self balancing electric scooter at auto expo 2023 details
Story first published: Monday, January 9, 2023, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X