ಹಾರ್ಲೆ ಡೇವಿಡ್ಸನ್ ಬೈಕಿಗೆ ಪೈಪೋಟಿಯಾಗಿ ಬರಲಿದೆ 1000cc MBP ಬೈಕ್

MBP, ಚೀನೀ-ಮಾಲೀಕತ್ವದ ಇಟಾಲಿಯನ್ ತಯಾರಕರು ಮುಂಬರುವ 2023ರ ಆಟೋ ಎಕ್ಸ್‌ಪೋದಲ್ಲಿ ನಿಗದಿಪಡಿಸಲಾದ ತನ್ನ ಭಾರತೀಯ ಚೊಚ್ಚಲ ಪ್ರವೇಶವನ್ನು ಮಾಡಲು ಸಿದ್ಧವಾಗಿದೆ. ಆದೀಶ್ವರ್ ಆಟೋ ರೈಡ್‌ನಿಂದ ಭಾರತಕ್ಕೆ ತಂದಿರುವ ಬ್ರ್ಯಾಂಡ್ ಈವೆಂಟ್‌ನಲ್ಲಿ C1002V ಕ್ರೂಸರ್ ಅನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಈ ಬೈಕ್ ದೊಡ್ಡ ಎಂಜಿನ್ ಅನ್ನು ಹೊಂದಿದೆ.

ನವೆಂಬರ್‌ನಲ್ಲಿ ನಡೆದ EICMA ನಲ್ಲಿ C1002V ಬೈಕ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಲಾಯಿತು. ಈ ಬೈಕ್ ಕ್ರೂಸರ್ ವಿನ್ಯಾಸದ ಭಾಷೆಯೊಂದಿಗೆ ಬರುತ್ತದೆ, ಈ ಬೈಕ್ ಹಾರ್ಲೆ-ಡೇವಿಡ್‌ಸನ್ ನೈಟ್‌ಸ್ಟರ್‌ ಬೈಕಿಗೆ ಪೈಪೋಟಿ ನೀಡುತ್ತದೆ. ಅಲ್ಲದೇ ಡುಕಾಟಿ ಡಯಾವೆಲ್ ಬೈಕಿಗೂ ಪೈಪೋಟಿ ನೀಡುತ್ತದೆ. ಈ ಹೊಸ ಮೋಟಾರ್‌ಸೈಕಲ್ ಒಂದು ಲೇಯ್ಡ್ ಬ್ಯಾಕ್ ರೈಡಿಂಗ್ ಟ್ರಯಾಂಗಲ್, ಬ್ಲ್ಯಾಕ್ಡ್ ಔಟ್ ಮತ್ತು ಬ್ರೌನಿ ಬಾಡಿವರ್ಕ್ ಅನ್ನು ಎರಡೂ ತುದಿಗಳಲ್ಲಿ ಫ್ಯಾಟ್ ಟೈರ್‌ಗಳನ್ನು ಹೊಂದಿದೆ.

ಈ ಹೊಸ MBP ಬೈಕ್ ಮೊದಲ ನೋಟದಲ್ಲಿ, ಇದು ಐಕಾನಿಕ್ ಹಾರ್ಲೆ ಡೇವಿಡ್ಸನ್ ನೈಟ್ರೊಡ್ ಅನ್ನು ಸಹ ನಿಮಗೆ ನೆನಪಿಸುತ್ತದೆ. ಈ ಹೊಸ MBP C1002V ಬೈಕಿನಲ್ಲಿ 997cc, V-ಟ್ವಿನ್ ಸಿಲಿಂಡರ್‌ಗಳನ್ನು 80 ಡಿಗ್ರಿಗಳಲ್ಲಿ ಇರಿಸಲಾಗಿದೆ. ಈ ಎಂಜಿನ್ 94 ಬಿಹೆಚ್‍ಪಿ ಪವರ್ ಮತ್ತು 102 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸಂಖ್ಯೆಗಳು ಅದರ ಪ್ರರ್ತಿಸ್ಪರ್ಧಿ ಬೈಕ್ ಗಳಿಗೆ ಸಮಾನವಾಗಿವೆ,

ಆದರೆ ಅದರ ವೈಶಿಷ್ಟ್ಯಗಳ ಪಟ್ಟಿಯು ಅದನ್ನು ಒಂದು ಹೆಜ್ಜೆ ಮೇಲಕ್ಕೆ ತೆಗೆದುಕೊಳ್ಳುತ್ತದೆ. MBP C1002V ಸ್ವಿಚ್ ಮಾಡಬಹುದಾದ ಎಂಜಿನ್ ನಕ್ಷೆಗಳು ಮತ್ತು ಕ್ರೂಸ್ ಕಂಟ್ರೋಲ್ ನೊಂದಿಗೆ ಬರುತ್ತದೆ. ಇನ್ನು ನೀವು ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸಬಹುದಾದ 5-ಇಂಚಿನ TFT ಡಿಸ್ಪ್ಲೇಯನ್ನು ಸಹ ಪಡೆಯುತ್ತೀರಿ. MBP ಬೆನೆಲ್ಲಿಯನ್ನು ಮರುಪರಿಚಯಿಸಿದ ನಂತರ ಆದಿಶ್ವರ್ ಭಾರತಕ್ಕೆ ತಂದ ಆರನೇ ಬ್ರಾಂಡ್ ಆಗಿದೆ ಮತ್ತು ಕೀವೇ, ಜೊಂಟೆಸ್, ಮೋಟೋ ಮೊರಿನಿ ಮತ್ತು ಕ್ಯೂಜೆ ಮೋಟಾರ್ ಅನ್ನು ಸಹ ತಂದಿದೆ.

MBP ಮುಂದಿನ ವಾರ C1002V ಅನ್ನು ಪ್ರದರ್ಶಿಸುವ ನಿರೀಕ್ಷೆಯಿದೆ, ಆದರೂ ಅದರ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಅದೀಶ್ವರ್ ಆಟೋ ರೈಡ್ ಮೋಟೋವಾಲ್ಟ್ ಛತ್ರಿಯಡಿಯಲ್ಲಿ ಜೋಂಟೆಸ್, ಮೋಟೋ ಮೊರಿನಿ, ಕ್ಯೂಜೆ ಮೋಟಾರ್, ಕೀವೇ ಮತ್ತು ಬೆನೆಲ್ಲಿಯನ್ನು ಹೊಂದಿರುವ ಕೆಲವು ಮೋಟಾರ್‌ಸೈಕಲ್‌ಗಳನ್ನು ಅನಾವರಣಗೊಳಿಸಲಿದೆ. ಬೆನೆಲ್ಲಿ ಭಾರತದಲ್ಲಿ ಮಿಡಲ್‌ವೇಟ್ ಅಡ್ವೆಂಚರ್ ಟೂರರ್ ಮೋಟಾರ್‌ಸೈಕಲ್‌ಗಳಾದ ಟಿಆರ್‌ಕೆ 502 ಮತ್ತು ಟಿಆರ್‌ಕೆ 502ಎಕ್ಸ್ ಬೈಕ್ ಗಳನ್ನು ಮಾರಾಟ ಮಾಡಿದೆ.

ಈ ಬೆನೆಲ್ಲಿ ಟಿಆರ್‌ಕೆ 502 ಬೈಕ್ ಬಗ್ಗೆ ಹೇಳುವುದಾದರೆ, ಇದು ಮೆಟಾಲಿಕ್ ಡಾರ್ಕ್ ಗ್ರೇ ಮತ್ತು ರೆಡ್ ಮತ್ತು ಪ್ಯೂರ್ ವೈಟ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಬೈಕಿನ ಎಂಜಿನ್ ಅನ್ನು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದರ ಜೊತೆಗೆ ಬೆನೆಲ್ಲಿ ಮರುವಿನ್ಯಾಸಗೊಳಿಸಿದ ಸೈಡ್ ಮೀರರ್ ಗಳನ್ನು ಅಳವಡಿಸಿದ್ದಾರೆ. ಇನ್ನು ಅಲ್ಯೂಮಿನಿಯಂ ಫ್ರೇಮ್ ನಕಲ್ ಗಾರ್ಡ್‌ಗಳನ್ನು ಸಹ ನೀಡಲಾಗಿದೆ. ಈ ಹಿಂದೆ ಬಿಡುಗಡೆಗೊಂಡಾಗ ಬೆನೆಲ್ಲಿ ಟಿಆರ್‌ಕೆ 502 ಬೈಕಿನಲ್ಲಿ ಸೆಮಿ-ಡಿಜೆಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಬ್ಯಾಕ್‌ಲಿಟ್ ಅನ್ನು ಹೊಂದಿದೆ.

ಇದರೊಂದಿಗೆ ಹೊಸ ಹ್ಯಾಂಡಲ್‌ಬಾರ್, ಪರಿಷ್ಕೃತ ಬಾಡಿ ಗ್ರಾಫಿಕ್ಸ್ ಮತ್ತು ಇದರ ಕಂಫರ್ಟ್ ಲೆವೆಲ್ ಕೂಡ ಹೆಚ್ಚಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಬೈಕಿನಲ್ಲಿ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಯುಎಸ್ಡಿ ಫೋರ್ಕ್ ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ ಇನ್ನು ಇದರ ಬ್ರೇಕಿಂಗ್ ಸಿಸ್ಟಂಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಡ್ಯುಯಲ್ ಡಿಸ್ಕ್ ಬ್ರೇಕ್‌ ಮತ್ತು ಹಿಂಭಾಗದಲ್ಲಿ 260 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್‌ ಅನ್ನು ನೀಡಿದೆ. ಇದರೊಂದಿದೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ಹೊಂದಿದೆ.

ಬೆನೆಲ್ಲಿ ಇಂಡಿಯಾ ಕಂಪನಿಯು ತನ್ನ ಹೊಸ ಟಿಆರ್‌ಕೆ 502 ಅಡ್ವೆಂಚರ್ ಟೂರರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ವೇಳೆ ಬೆನೆಲ್ಲಿ ಕಂಪನಿಯು ಟಿಆರ್‌ಕೆ 502ಎಕ್ಸ್ ಅಡ್ವೆಂಚರ್ ಟೂರರ್ ಬೈಕ್ ಗಾಗಿ ಹೊಸ ಬಣ್ಣದ ಆಯ್ಕೆಯನ್ನು ಸೇರಿಸಿತು. ಅಡ್ವೆಂಚರ್ ಟೂರರ್ ಬೈಕ್ ಮೆಟಾಲಿಕ್ ಡಾರ್ಕ್ ಗ್ರೇ, ರೆಡ್ ಮತ್ತು ಪ್ಯೂರ್ ವೈಟ್ ಬಣ್ಣಗಳ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಬೆನೆಲ್ಲಿ ಟಿಆರ್‌ಕೆ 502ಎಕ್ಸ್ ಅಡ್ವೆಂಚರ್ ಟೂರರ್ ಬೈಕಿನಲ್ಲಿ 499 ಸಿಸಿ, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ.

Most Read Articles

Kannada
English summary
New mbp c1002v to be debut auto expo 2023 details
Story first published: Friday, January 6, 2023, 16:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X