ಬಹುನಿರೀಕ್ಷಿತ ಹೋಂಡಾ ಆಕ್ಟಿವಾ 125 ಭರ್ಜರಿ ಲಾಂಚ್
ನಿರೀಕ್ಷೆಯಂತೆಯೇ ಹೋಂಡಾ ಆಕ್ಟಿವಾ 125, ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಈ ಬಹುನಿರೀಕ್ಷಿತ ಸ್ಕೂಟರ್, ಆಕ್ಟಿವಾ 110 ಸಿಸಿ ಆವೃತ್ತಿಯ ಯಶಸ್ಸನ್ನು ಮುಂದುವರಿಸಿಕೊಂಡು ಹೋಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಮುಖ್ಯಾಂಶಗಳು:
ನೂತನ 125 ಸ್ಕೂಟರ್, ಐಕಾನಿಕ್ ಆಕ್ಟಿವಾ ಹೆಸರು ಜತೆಗೆ ಕೆಲವೊಂದು ವಿನ್ಯಾಸ ಬದಲಾವಣೆ, ಹೆಚ್ಚು ಶಕ್ತಿಯುತ ಹಾಗೂ ಸಂಸ್ಕರಿಸಿದ ಎಂಜಿನ್ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅಂತೆಯೇ ಬುಕ್ಕಿಂಗ್ ಪ್ರಿಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಹಾಗಿದ್ದರೆ ಬೆಂಗಳೂರು ಆನ್ ರೋಡ್ ದರ ಎಷ್ಟು? ಹೆಚ್ಚಿನ ವಿವರಗಳಿಗಾಗಿ ಫೋಟೊ ಸ್ಲೈಡರ್‌ನತ್ತ ಮುಂದುವರಿಯಿರಿ...

ನೂತನ ಆಕ್ಟಿವಾ, 125 ಸ್ಟಾಂಡರ್ಡ್ ಹಾಗೂ 125 ಡಿಲಕ್ಸ್‌ಗಳೆಂಬ ಎರಡು ವೆರಿಯಂಟ್‌ಗಳಲ್ಲಿ ದೊರಕಲಿದೆ. (ಬೆಂಗಳೂರು ಆನ್ ರೋಡ್ ದರ ಮಾಹಿತಿಗಾಗಿ ಮುಂದಕ್ಕೆ ಕ್ಲಿಕ್ಕಿಸಿರಿ)

ಅಂದ ಹಾಗೆ ಆಕ್ಟಿವಾ 125 ಸ್ಟಾಂಡರ್ಡ್ ಹಾಗೂ 125 ಡಿಲಕ್ಸ್ ವೆರಿಯಂಟ್‌ಗಳ ಬೆಂಗಳೂರು ಆನ್ ರೋಡ್ ದರ ಅನುಕ್ರಮವಾಗಿ 64,326 ಹಾಗೂ 70,975 ರು. ನಿಗದಿಯಾಗಿದೆ.

ಹಿಂದಿನ ಆಕ್ಟಿವಾ 110ಸಿಸಿ ಹೋಲಿಸಿದಾಗ ನೂತನ ಆಕ್ಟಿವಾ 125 ಸ್ಟಾಂಡರ್ಡ್ ಹಾಗೂ ಡಿಲಕ್ಸ್ ವೆರಿಯಂಟ್‌ಗಳು ರು. 8,000ದಿಂದ ರು. 15,000 ಗಳಷ್ಟು ದುಬಾರಿಯೆನಿಸಿದೆ.

ನೂತನ ಆಕ್ಟಿವಾ, 125 ಸಿಸಿ ಎಚ್‌ಇಟಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 8.7 ಅಶ್ವಶಕ್ತಿ (10.12 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಸಂಸ್ಥೆಯ ಪ್ರಕಾರ ನೂತನ ಆಕ್ಟಿವಾ 125 ಸ್ಕೂಟರ್ ಪ್ರತಿ ಲೀಟರ್‌ಗೆ 60 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಹಾಗೆಯೇ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ ಸ್ಟಾಂಡರ್ಡ್ ಆಗಿಯೂ ಲಭಿಸಲಿದೆ. ಇದು ನೀಲಿ, ಬೆಳ್ಳಿ, ಕಪ್ಪು ಹಾಗೂ ಬಿಳಿ ಬಣ್ಣಗಳಲ್ಲಿ ಲಭ್ಯವಾಗಲಿದೆ.

ದರ ಮಾಹಿತಿ
ಬೆಂಗಳೂರು
ಸ್ಟಾಂಡರ್ಡ್ - ರು. 64,326
ಡಿಲಕ್ಸ್ - ರು. 70,975
ದೆಹಲಿ
ಸ್ಟಾಂಡರ್ಡ್ - ರು. 57,531
ಡಿಲಕ್ಸ್ - ರು. 63,645
ಮುಂಬೈ
ಸ್ಟಾಂಡರ್ಡ್ - ರು. 62,276
ಡಿಲಕ್ಸ್ - ರು. 68,742
ಕೋಲ್ಕತ್ತಾ
ಸ್ಟಾಂಡರ್ಡ್ - ರು. 63,251
ಡಿಲಕ್ಸ್ - ರು. 69,710
ಚೆನ್ನೈ
ಸ್ಟಾಂಡರ್ಡ್ - ರು. 61,800
ಡಿಲಕ್ಸ್ - ರು. 68,139


Click it and Unblock the Notifications








