ಇಂಡಿಯಾ ಸೂಪರ್‌ಬೈಕ್ ಫೇಸ್ಟಿವಲ್‌ಗೆ ಬೆಂಗಳೂರಿನಲ್ಲಿ ಚಾಲನೆ

Written By:

ಇಂಡಿಯಾ ಸೂಪರ್‌ಬೈಕ್ ಫೇಸ್ಟಿವಲ್‌ಗೆ ಬೆಂಗಳೂರಿನಲ್ಲಿ ಅದ್ಧೂರಿ ಚಾಲನೆ ದೊರಕಿದೆ. ಈ ಸಂಬಂಧ ಭೇಟಿ ಕೊಟ್ಟಿರುವ ನಮ್ಮ ಡ್ರೈವ್‌ಸ್ಪಾರ್ಕ್ ತಂಡವು ಅತ್ಯಾಕರ್ಷಕ ಚಿತ್ರಗಳನ್ನು ಓದುಗರ ಜೊತೆ ಹಂಚಿಕೊಳ್ಳಲು ಹೆಮ್ಮೆಪಡುತ್ತಿದ್ದೇವೆ.

ಮೂರನೇ ಆವೃತ್ತಿಯ ಇಂಡಿಯಾ ಸೂಪರ್ ಬೈಕ್ ಫೇಸ್ಟಿವಲ್ 2014 ಬೆಂಗಳೂರಿನ ವೈಟ್‌ಫೀಲ್ಡ್ ಮುಖ್ಯ ರಸ್ತೆ ಫೋನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಮೇ 10ರಿಂದ (ಇಂದು) 14ರ ವರೆಗೆ ಸಾಗಲಿದೆ. ಈ ಸಂದರ್ಭದಲ್ಲಿ ಸೂಪರ್ ಬೈಕ್ ಎಕ್ಸ್‌ಪೋ, ನೇರ ಮನರಂಜನಾ ಪ್ರಸಾರ, ಆಫ್ ರೋಡ್ ಅನುಭವ, ಸ್ಪರ್ಧಾಕೂಟ, ಬರ್ನೌಟ್ ಈವೆಂಟ್, ಸ್ಟಂಟ್ ಜೊತೆಗೆ ಬೈಕ್ ಪ್ರೇಮಿಗಳಿಗೆ ಇನ್ನಷ್ಟು ಆಕರ್ಷಕ ಕಾರ್ಯಕ್ರಮಗಳು ಆಯೋಜನೆಯಾಗಲಿದೆ. ಕಳೆದ ಬಾರಿ ಪುಣೆಯಲ್ಲಿ ನಡೆದ ಇಂಡಿಯಾ ಸೂಪರ್‌ಬೈಕ್ ಹಬ್ಬದಲ್ಲಿ 500ರಷ್ಟು ಸ್ಪರ್ಧಿಗಳು ಭಾಗವಹಿಸಿದ್ದರು. ಇದನ್ನು ಐಟಿ ಸಿಟಿ ಬೆಂಗಳೂರು ಮಣಿಸಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಇಂಡಿಯಾ ಸೂಪರ್‌ಬೈಕ್ ಫೇಸ್ಟಿವಲ್‌ಗೆ ಬೆಂಗಳೂರಿನಲ್ಲಿ ಚಾಲನೆ

ಬೆಂಗಳೂರಿನಲ್ಲಿ ಆಯೋಜನೆಯಾಗುತ್ತಿರುವ ಇಂಡಿಯಾ ಸೂಪರ್ ಬೈಕ್ 2014 ಯಾವುದೇ ಕಾರಣಕ್ಕೂ ಮಿಸ್ ಮಾಡದಿರಿ.

ಇಂಡಿಯಾ ಸೂಪರ್‌ಬೈಕ್ ಫೇಸ್ಟಿವಲ್‌ಗೆ ಬೆಂಗಳೂರಿನಲ್ಲಿ ಚಾಲನೆ

ಇಲ್ಲಿ ಹಳೆಯ ವಿಂಟೇಜ್, ಕ್ಲಾಸಿಕ್ ಬೈಕ್‌ಗಳ ಜತೆ ಹೊಸ ಬೈಕ್‌ಗಳು ರಂಗೇರಿಸಲಿದೆ. ಚಿತ್ರದಲ್ಲಿ - ಸುಜುಕಿ ಹಯಾಬುಸಾಗೆ ಸಾಥ್ ನೀಡುತ್ತಿರುವ ಹರ್ಲಿ ಡೇವಿಡ್ಸನ್.

ಇಂಡಿಯಾ ಸೂಪರ್‌ಬೈಕ್ ಫೇಸ್ಟಿವಲ್‌ಗೆ ಬೆಂಗಳೂರಿನಲ್ಲಿ ಚಾಲನೆ

ವೈಟ್‌ಫೀಲ್ಡ್‌ನಲ್ಲಿ ನಿಜಕ್ಕೂ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಹಲವಾರು ಸ್ಟಾಲ್‌ಗಳು ಈಗಾಗಲೇ ತಲೆಯೆತ್ತಿದೆ.

ಇಂಡಿಯಾ ಸೂಪರ್‌ಬೈಕ್ ಫೇಸ್ಟಿವಲ್‌ಗೆ ಬೆಂಗಳೂರಿನಲ್ಲಿ ಚಾಲನೆ

ಬೆಳ್ಳಂಬೆಳ್ಳಿಗೆ ಸೂರ್ಯನ ಉರಿ ಬಿಸಿಲಿನಲ್ಲಿ ಶೋ ಕೊಡುತ್ತಿರುವ ಹೋಂಡಾ ತ್ರಿವಳಿ ಬೈಕ್‌ಗಳು.

ಇಂಡಿಯಾ ಸೂಪರ್‌ಬೈಕ್ ಫೇಸ್ಟಿವಲ್‌ಗೆ ಬೆಂಗಳೂರಿನಲ್ಲಿ ಚಾಲನೆ

ಒಟ್ಟಿನಲ್ಲಿ ಇಂಡಿಯಾ ಸೂಪರ್‌ಬೈಕ್ ಫೇಸ್ಟಿವಲ್ 2014 ನಿಜಕ್ಕೂ ಬೈಕ್ ಪ್ರಿಯರಿಗೆ ರಸದೌತಣ ನೀಡಲಿದೆ ಎಂಬುದರಲ್ಲಿ ಯಾವುದೇ ಸಂಶಯವೂ ಬೇಡ.

ಇಂಡಿಯಾ ಸೂಪರ್‌ಬೈಕ್ ಫೇಸ್ಟಿವಲ್‌ಗೆ ಬೆಂಗಳೂರಿನಲ್ಲಿ ಚಾಲನೆ

ಸುಜುಕಿ ತಯಾರಕ ಸಂಸ್ಥೆಯ ಸ್ಟಾಲ್‌ನಲ್ಲಿ ಸಾಲು ಗಟ್ಟಿ ನಿಂತಿರುವ ಇಂಡಿಯಾ ರೇಂಜ್ ಬೈಕ್‌ಗಳು. ಇಂಡಿಯಾ ಸೂಪರ್‌ಬೈಕ್ ಫೇಸ್ಟಿವಲ್‌ 2014 ಕುರಿತು ಹೆಚ್ಚಿನ ಮಾಹಿತಿಗಾಗಿ ಡ್ರೈವ್‌ಸ್ಪಾರ್ಕ್ ಓದುತ್ತಿರಿ.

English summary
The third edition of India Superbike Festival 2014 has started off with a bang, or rather with a roar, as motorcycles of every breed have started rolling into the venue, with their engines thundering.
Story first published: Saturday, May 10, 2014, 12:42 [IST]
Please Wait while comments are loading...

Latest Photos