ಸುಜುಕಿ ಲೆಟ್ಸ್ ಸ್ಕೂಟರ್ ಲಾಂಚ್; ನಿಮ್ಮ ನಿರೀಕ್ಷೆ ಮುಟ್ಟಿತೇ?

By Nagaraja

ಭಾರತೀಯ ವಾಹನ ಮಾರುಕಟ್ಟೆಗೆ ಮಗದೊಂದು ಆಕರ್ಷಕ ಸ್ಕೂಟರ್‌ನ ಪ್ರವೇಶವಾಗಿದೆ. ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಸುಜುಕಿ, ಭಾರತಕ್ಕೆ ಲೆಟ್ಸ್ ಆಟೋಮ್ಯಾಟಿಕ್ ಸ್ಕೂಟರನ್ನು ಪರಿಚಯಿಸಿದೆ.

ಮಂಗಳಮುಖಿಯರ ಸೀಟು ಬೆಲ್ಟ್ ಪಾಠ

ಪ್ರಸ್ತುತ ಲೆಟ್ಸ್ ಸ್ಕೂಟರ್ ಗ್ರಾಹಕರ ನಿರೀಕ್ಷೆ ಮುಟ್ಟಿತೇ ಎಂಬುದು ಹಲವರನ್ನು ಕಾಡುತ್ತಿರುವ ಪ್ರಶ್ನೆ. ಈ ನಿಟ್ಟಿನಲ್ಲಿ ಲೆಟ್ಸ್ ಸ್ಕೂಟರಿನ ಮೈಲೇಜ್, ವೈಶಿಷ್ಟ್ಯ ಹಾಗೂ ಬೆಲೆ ಬಗೆಗಿನ ಮಾಹಿತಿಯನ್ನು ಕೊಡುವ ಪ್ರಯತ್ನವನ್ನು ನಿಮ್ಮ ಡ್ರೈವ್‌ಸ್ಪಾರ್ಕ್ ತಂಡ ಮಾಡುತ್ತಿದೆ. ಇದಕ್ಕಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಸುಜುಕಿ ಲೆಟ್ಸ್ ಸ್ಕೂಟರ್ ಲಾಂಚ್; ನಿಮ್ಮ ನಿರೀಕ್ಷೆ ಮುಟ್ಟಿತೇ?

ಇದಕ್ಕೂ ಮೊದಲು 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಸುಜುಕಿ ಲೆಟ್ಸ್ ಸ್ಕೂಟರ್, ಪ್ರಮುಖವಾಗಿಯೂ ಹೋಂಡಾ ಆಕ್ಟಿವಾ, ಟಿವಿಎಸ್ ವೆಗೊ, ಜೂಪಿಟರ್ ಹಾಗೂ ಯಮಹಾ ಆಲ್ಫಾ ಆವೃತ್ತಿಗಳಿಗೆ ಸವಾಲೊಡ್ಡಲಿದೆ.

ಎಂಜಿನ್

ಎಂಜಿನ್

ಹೆಚ್ಚಿನ ಪ್ರಚಾರಕ್ಕಾಗಿ 110ಸಿಸಿ ಎಂಜಿನ್ ಸೆಗ್ಮೆಂಟ್‌ನಲ್ಲಿ ಗುರುತಿಸಿಕೊಂಡರೂ ಸಹ ಸುಜುಕಿ ಲೆಟ್ಸ್ ಸ್ಕೂಟರ್‌ನಲ್ಲಿ, 112.8 ಸಿಸಿ ಎಂಜಿನ್ ಆಳವಡಿಕೆಯಾಗಲಿದೆ. ಇದು ಒಂದು ನಿಮಿಷದಲ್ಲಿ 7500 ಆವರ್ತನಕ್ಕೆ 8.7 ಅಶ್ವಶಕ್ತಿ ಹಾಗೆಯೇ 9 ಎನ್‌ಎಂ ಟಾರ್ಕ್ (ಒಂದು ನಿಮಿಷದಲ್ಲಿ 6500 ಆವರ್ತನಕ್ಕೆ) ಉತ್ಪಾದಿಸಲಿದೆ. ಅಲ್ಲದೆ ಸಿವಿಟಿ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ಮೈಲೇಜ್

ಮೈಲೇಜ್

ಇಷ್ಟು ದೊಡ್ಡ ಎಂಜಿನ್ ಹೊಂದಿರುವ ಹೊರತಾಗಿಯೂ ಲೆಟ್ಸ್ ಸ್ಕೂಟರ್ ಪ್ರತಿ ಲೀಟರ್‌ಗೆ 63 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ ಎಂಬುದಾಗಿ ಸಂಸ್ಥೆ ಅಭಿಪ್ರಾಯಪಟ್ಟಿದೆ. ಇದರಲ್ಲಿ ಆಳವಡಿಸಲಾಗಿರುವ ಸುಜುಕಿ ಇಕೊ ನಿರ್ವಹಣೆ ತಂತ್ರಜ್ಞಾನವು ಹೆಚ್ಚು ಇಂಧನ ಕ್ಷಮತೆ ನೀಡಲು ನೆರವಾಗಲಿದೆ.

ವೈಶಿಷ್ಟ್ಯ

ವೈಶಿಷ್ಟ್ಯ

ಇಂದಿನ ಯುವ ಜನಾಂಗದ ಗ್ರಾಹಕರ ಬೇಡಿಕೆಗಳಿಗಾನುಸಾರವಾಗಿ ಪ್ರತಿಕ್ರಿಯಿಸಿರುವ ಸುಜುಕಿ, ಲೆಟ್ಸ್ ಸ್ಕೂಟರ್‌ನಲ್ಲಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಸೌಲಭ್ಯ ಒದಗಿಸಲಿದೆ.

ಆಯಾಮ

ಆಯಾಮ

  • ಉದ್ದ - 1805 ಎಂಎಂ
  • ಅಗಲ - 655 ಎಂಎಂ
  • ಎತ್ತರ - 1120 ಎಂಎಂ
  • ವೀಲ್‌ಬೇಸ್ - 1250 ಎಂಎಂ
  • ಗ್ರೌಂಡ್ ಕ್ಲಿಯರನ್ಸ್ - 160 ಎಂಎಂ
  • ಸೀಟು ಎತ್ತರ - 765 ಎಂಎಂ
  • ಸ್ಕೂಟರ್ ಭಾರ - 98 ಕೆ.ಜಿ
  • ಸಸ್ಪೆಷನ್, ಬ್ರೇಕ್, ಚಕ್ರ

    ಸಸ್ಪೆಷನ್, ಬ್ರೇಕ್, ಚಕ್ರ

    ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಫಾರ್ಕ್ ಮತ್ತು ಹಿಂದುಗಡೆ ಸ್ವಿಂಗ್ ಆರ್ಮ್ ವಿಧದ ಮೊನೊ ಸಸ್ಫೆಷನ್ ಪಡೆದುಕೊಂಡಿರಲಿದೆ. ಹಾಗೆಯೇ 10 ಇಂಚುಗಳ ಟ್ಯೂಬ್‌ಲೆಸ್ ಚಕ್ರ ಪಡೆದುಕೊಳ್ಳಲಿದೆ. ಇನ್ನುಳಿದಂತೆ ಎರಡು ಬದಿಗಳಲ್ಲೂ 120 ಎಂಎಂ ಡ್ರಮ್ ಬ್ರೇಕ್ ಇರಲಿದೆ.

    ಬಣ್ಣಗಳು

    ಬಣ್ಣಗಳು

    • ನೀಲಿ,
    • ಬೆಳ್ಳಿ,
    • ಕಪ್ಪು,
    • ಕೆಂಪು,
    • ಬಿಳಿ
    • ದರ ಮಾಹಿತಿ

      ದರ ಮಾಹಿತಿ

      ಬೆಂಗಳೂರು ಆನ್ ರೋಡ್ ದರ - 52,822 ರು.

      ದೆಹಲಿ ಆನ್ ರೋಡ್ ದರ - 47,610 ರು.

      ಸುಜುಕಿ ಲೆಟ್ಸ್ ಸ್ಕೂಟರ್ ಲಾಂಚ್; ನಿಮ್ಮ ನಿರೀಕ್ಷೆ ಮುಟ್ಟಿತೇ?

      ಇದೀಗ ಸುಜುಕಿ ಲೆಟ್ಸ್ ಸ್ಕೂಟರ್ ಬಗೆಗಿನ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Most Read Articles

Kannada
English summary
The Suzuki Let's automatic scooter has arrived. The new automatic scooter from the Japanese company was revealed ahead of the Auto Expo in February and it will be pitted against the mighty Activa, the Suzuki Wego and the Jupiter, and Yamaha Alpha.
Story first published: Tuesday, May 6, 2014, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X