ದೇಶದ ರಸ್ತೆಗಿಳಿದ ದೇವತೆಗಳ ರಾಜ ಟಿವಿಎಸ್ 'ಜೂಪಿಟರ್'

Written By:

ಸೌರವ್ಯೂಹದ ಅತಿದೊಡ್ಡ ಗುರು ಗ್ರಹವನ್ನು 'ದೇವತೆಗಳ ರಾಜ' ಎಂದೇ ಪರಿಗಣಿಸಲಾಗುತ್ತದೆ. ಪ್ರಸ್ತುತ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಟಿವಿಎಸ್, ಇದೇ ಹೆಸರಿನಲ್ಲಿ ಸ್ಕೂಟರ್‌ವೊಂದನ್ನು ಲಾಂಚ್ ಮಾಡಿದೆ.

ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿರುವ ಟಿವಿಎಸ್ ಜೂಪಿಟರ್ ದೆಹಲಿ ಎಕ್ಸ್ ಶೋ ರೂಂ ದರ 44,200 ರು. ಆಗಿದೆ. ಇದು 110ಸಿಸಿ ವಿಭಾಗದಲ್ಲಿ ನೂತನ ಪೈಪೋಟಿ ನೀಡಲು ಸಿದ್ಧವಾಗುತ್ತಿದ್ದು, ಸದ್ಯ ದೇವತೆಗಳ ರಾಜ ಜೂಪಿಟರ್ ಸ್ಕೂಟರ್‌ಗಳ ರಾಜ ಎನಿಸಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ದೇಶದ ಪ್ರಯಾಣಿಕ ಮಾರುಕಟ್ಟೆಯಲ್ಲಿ ಅತ್ಯಂತ ಶಿಪ್ರ ಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿರುವ ಟಿವಿಎಸ್‌ನಿಂದ ವಿಗೊ, ಸ್ಕೂಟಿ ಪೆಪ್ ಪ್ಲಸ್ ಮತ್ತು ಸ್ಟ್ರೀಕ್ ಮಾದರಿಗಳ ಸಾಲಿಗೆ ಇದೀಗ ಜೂಪಿಟರ್ ಕೂಡಾ ಸೇರ್ಪಡೆಯಾಗಿದೆ.

ಪ್ರಮುಖ ವೈಶಿಷ್ಟ್ಯಗಳು:

 • ಟ್ವಿನ್ ಸಿಟಿ ಲ್ಯಾಂಪ್,
 • ಎಲ್‌‌ಇಡಿ ಟೈಲ್,
 • ಸಿಂಗಲ್ ಸಿಲಿಂಡರ್ ಅಲ್ಯೂಮಿನಿಯಂ 110ಸಿಸಿ ಎಂಜಿನ್,
 • 8 ಬಿಎಚ್‌ಪಿ ಮತ್ತು 8 ಎನ್‌ಎಂ ಟಾರ್ಕ್,
 • 12 ಇಂಚು ಅಲಾಯ್ ವೀಲ್,
 • ಮೊಬೈಲ್ ಚಾರ್ಜಿಂಗ್ ಪಾಯಿಂಟ್,
 • ಹೆಲ್ಮೆಟ್ ಸ್ಟೋರೆಜ್ ಸ್ಪೇಸ್,
 • ಇಕೊನೊಮೀಟರ್
ಮೈಲೇಜ್

ಮೈಲೇಜ್

ಐದು ಲೀಟರ್ ಇಂಧನ ಟ್ಯಾಂಕ್ ಹೊಂದಿರುವ ಟಿವಿಎಸ್ ಜೂಪಿಟರ್ ಪ್ರತಿ ಲೀಟರ್‌ಗೆ 62 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಸೀಟು ಕೆಳಗಡೆ 17 ಲೀಟರ್ ಸ್ಟೋರೆಜ್ ಸ್ಪೇಸ್ ಲಗತ್ತಿಸಲಾಗಿದೆ. ನೂತನ ಸ್ಕೂಟರ್ 7.2 ಸೆಕೆಂಡುಗಳಲ್ಲಿ 0-60 ಕೀ.ಮೀ. ವೇಗದಲ್ಲಿ ಚಲಿಸಲಿದೆ.

ಕಲರ್ ವೆರಿಯಂಟ್

ಕಲರ್ ವೆರಿಯಂಟ್

ಒಟ್ಟು ನಾಲ್ಕು ವೆರಿಯಂಟ್‌ಗಳಲ್ಲಿ ಜೂಪಿಟರ್ ಲಭ್ಯವಾಗಿರುತ್ತದೆ.

 • ಟೈಟಾನಿಯಂ ಗ್ರೇ,
 • ಮರ್ಕ್ಯೂರಿ ವೈಟ್,
 • ಮಿಡ್‌ನೈಟ್ ಬ್ಲ್ಯಾಕ್,
 • ವೊಲ್ಕನೊ ರೆಡ್
ಪುರುಷ ಗ್ರಾಹರಿಗಾಗಿ ಜೂಪಿಟರ್

ಪುರುಷ ಗ್ರಾಹರಿಗಾಗಿ ಜೂಪಿಟರ್

ಪ್ರಮುಖವಾಗಿಯೂ ಗೇರ್ ಬೈಕ್ ಇಷ್ಟಪಡದ ಪುರುಷ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ನೂತನ ಜೂಪಿಟರ್ ತಯಾರಿಸಲಾಗಿದೆ. ಹಾಗೆಯೇ ಇದು ಸ್ವಂತ ಉದ್ಯೋಗ ಹೊಂದಿರುವ ಹಾಗೂ ಉದ್ಯಮಿಗಳನ್ನು ಗುರಿಯಾಗಿರಿಸಿಕೊಂಡಿದೆ.

ಪ್ರತಿಸ್ಪರ್ಧಿ

ಪ್ರತಿಸ್ಪರ್ಧಿ

ಪ್ರಸ್ತುತ ಡಿಯೊ, ಹೋಂಡಾ ಜನಪ್ರಿಯ ಆಕ್ಟಿವಾ, ಡಿಯೊ ಹಾಗೂ ಯಮಹಾ ರೇ ಆವೃತ್ತಿಗಳಿಗೆ ಪ್ರಮುಖ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

2014ರಲ್ಲಿ ನೂತನ ಸ್ಕೂಟಿ

2014ರಲ್ಲಿ ನೂತನ ಸ್ಕೂಟಿ

ಮುಂದಿನ ಎರಡು ತಿಂಗಳಲ್ಲಿ 20,000 ಯುನಿಟ್‌ಗಳಷ್ಟು ಜೂಪಿಟರ್ ಮಾರಾಟ ತಲುಪುವ ನಿರೀಕ್ಷೆಯನ್ನು ಟಿವಿಎಸ್ ಹೊಂದಿದೆ. ಈ ಮೂಲಕ ಶೇಕಡಾ 10ರಷ್ಟು ವೃದ್ಧಿ ದರ ನಿರೀಕ್ಷಿಸಲಾಗುತ್ತಿದೆ. ಹಾಗೆಯೇ 2014ರಲ್ಲಿ ನೂತನ ಸ್ಕೂಟಿ ಜೆಸ್ಟ್ ಆಗಮನವಾಗಲಿದೆ.

English summary
Chennai based two-wheeler manufacturer TVS Motor Company today launched a new scooter targeting male drivers. The new product named 'TVS Jupiter' targeted mainly self employeed, businessmen and traders.
Story first published: Tuesday, September 17, 2013, 8:05 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark