ಭಾರತಕ್ಕೆ ಇನ್ನೆರಡು ಬೈಕ್‌ಗಳ ಆಗಮನ

By Nagaraja

ವಾಹನೋದ್ಯಮದ ಬಗ್ಗೆ ಸುದ್ದಿ ಬರೆಯುವಾಗ ಇಟಲಿಯ ಎರಡು ಪ್ರಖ್ಯಾತ ವಾಹನ ಸಂಸ್ಥೆಗಳನ್ನು ಉಲ್ಲೇಖಿಸದಿದ್ದಲ್ಲಿ ಅಂತಹ ವಾರ್ತೆ ಅಪೂರ್ಣ. ಅದು ಯಾವುದು ಅಂತೀರಾ? ಲಂಬೊರ್ಗಿನಿ ಹಾಗೂ ಡುಕಾಟಿ. ಆದರೆ ಕೇವಲ ಈ ಎರಡು ಐಕಾನಿಕ್ ವಾಹನ ಸಂಸ್ಥೆಗಳಿಗಷ್ಟೇ ಇಟಲಿ ಸೀಮಿತಗೊಂಡಿಲ್ಲ. ಅಲ್ಲಿ ಮೊಟೊ ಮೊರಿನಿ (Moto Morini) ಎಂಬ ಪ್ರಸಿದ್ಧ ಸಂಸ್ಥೆ ಕೂಡಾ ಇದೆ. ಆದರೆ ಭಾರತೀಯರಲ್ಲಿ ಮಾತ್ರ ಈ ಹೆಸರು ಅಷ್ಟೊಂದು ಜನಪ್ರಿಯಗೊಂಡಿಲ್ಲ.

ಅಂದ ಹಾಗೆ ಮೊಟೊ ಮೊರಿನಿ ಸಂಸ್ಥೆಯನ್ನು 1937ನೇ ಇಸವಿಯಲ್ಲಿ ಆಲ್ಫಾನ್ಸೊ ಮೊರಿನಿ ಎಂಬವರು ಸ್ಥಾಪಿಸಿದ್ದರು. ಪ್ರಸ್ತುತ ಈ ವಿಚಾರವನ್ನು ಇಲ್ಲಿ ಉಲ್ಲೇಖ ಮಾಡಿರುವ ಹಿಂದೆ ಕಾರಣವೊಂದಿದೆ0. ಈ ಐಕಾನಿಕ್ ಸಂಸ್ಥೆ ಸದ್ಯದಲ್ಲೇ ಭಾರತ ರಸ್ತೆ ಪ್ರವೇಶಿಸಲಿದೆ. ಅದು ಹೇಗೆ ಅಂತೀರಾ? ಮುಂಬೈ ಮೂಲದ ವಾರ್ಡೆಂಚಿ (vardenchi) ಜತೆ ಪಾಲುದಾರಿಕೆ ಹೊಂದಿರುವ ಮೊಟೊ ಮೊರಿನಿ ಎರಡು ಐಕಾನಿಕ್ ಬೈಕ್‌ಗಳನ್ನು ಭಾರತಕ್ಕೆ ಪರಿಚಯಿಸಲಿದೆ.

ಭಾರತಕ್ಕೆ ಇನ್ನೆರಡು ಬೈಕ್‌ಗಳ ಆಗಮನ

ಚೊಪರ್ ಶೈಲಿಯ ಬೈಕ್ ಉತ್ಪಾದಿಸುವಲ್ಲಿ ನಿಸ್ಸೀಮವಾಗಿರುವ ಪ್ರಸ್ತುತ ಸಂಸ್ಥೆಯು ಸ್ಕ್ರ್ಯಾಂಬ್ಲರ್ (Scrambler) ಮತ್ತು ಗ್ರಾನ್‌ಪ್ಯಾಸೊ 1200 (Granpasso 1200) ಆವೃತ್ತಿಗಳನ್ನು ದೇಶಕ್ಕೆ ಪರಿಚಯಿಸಲಿದೆ. ವಿಶೇಷತೆಯೆಂದರೆ ಈ ಎರಡು ಆವೃತ್ತಿಗಳು ದೆಹಲಿ ಆಟೋ ಎಕ್ಸ್ ಪೋದಲ್ಲಿ ಲಾಂಚ್ ಆಗಲಿದೆ.

ಮೊಟೊ ಮೊರಿನಿ ಸ್ಕ್ರ್ಯಾಂಬ್ಲರ್

ಮೊಟೊ ಮೊರಿನಿ ಸ್ಕ್ರ್ಯಾಂಬ್ಲರ್

ಆಫ್ ರೋಡ್‌ಗೆ ಅನುಗುಣವಾಗಿ ಅಗತ್ಯ ಬದಲಾವಣೆಗಳನ್ನು ತರಲಾಗಿರುವ ಸ್ಕ್ರ್ಯಾಂಬ್ಲರ್ ಸ್ಟ್ರೀಟ್ ಬೈಕ್, ಬೈಲ್‌ಬರೊ ಕೋರ್ಸಾಕೋರ್ಟಾ 1187 ಸಿಸಿ, ವಿ ಟ್ವಿನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 118 ಅಶ್ವಶಕ್ತಿ (105 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಭಾರತಕ್ಕೆ ಇನ್ನೆರಡು ಬೈಕ್‌ಗಳ ಆಗಮನ

ಇದರ ವಿಶೇಷ ವಿನ್ಯಾಸಿತ ಚಕ್ರದಿಂದಾಗಿ ಬೇಗನೇ ಗುರುತಿಸಿಕೊಳ್ಳಬಹುದಾಗಿದೆ. ಹಾಗೆಯೇ ಬೃಹತಾದ 21 ಲೀಟರ್ ಟ್ಯಾಂಕ್ ಕೂಡಾ ಪಡೆದುಕೊಂಡಿದೆ.

ಮೊಟೊ ಮೊರಿನಿ ಗ್ರಾನ್‌ಪ್ಯಾಸೊ 1200

ಮೊಟೊ ಮೊರಿನಿ ಗ್ರಾನ್‌ಪ್ಯಾಸೊ 1200

ಇನ್ನೊಂದೆಡೆ ಟೂರಿಂಗ್ ಮೋಟಾರ್ ಸೈಕಲ್ ಆಗಿರುವ ಗ್ರಾನ್‌ಪ್ಯಾಸೊ ಸಮಾನವಾದ ಬೈಲ್‌ಬರೊ ಕೋರ್ಸಾಕೋರ್ಟಾ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 118 ಅಶ್ವಶಕ್ತಿ (103 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಭಾರತಕ್ಕೆ ಇನ್ನೆರಡು ಬೈಕ್‌ಗಳ ಆಗಮನ

ಇನ್ನುಳಿದಂತೆ 2014 ಆಟೋ ಎಕ್ಸ್ ಪೋ ವೇಳೆ ದರ ಮಾಹಿತಿ ಲಭ್ಯವಾಗಲಿದೆ. ಇದು 15 ಲಕ್ಷ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಹಾಗೆಯೇ ವರ್ಷದ ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆ ತಲುಪಲಿದೆ.

Most Read Articles

Kannada
English summary
Vardenchi tied up with Moto Morini late last year and it will import and sell two models in India - the Scrambler and Granpasso 1200. These two new motorcycles will be launched in India at the Auto Expo 2014.
Story first published: Saturday, February 1, 2014, 16:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X