ಸಂಪೂರ್ಣ ನ್ಯೂ ಲುಕ್‌ನಲ್ಲಿ ನಿಮ್ಮ ನೆಚ್ಚಿನ ಡಸ್ಟರ್

By Nagaraja

ಕಳೆದ ವರ್ಷ ಭಾರತೀಯ ರಸ್ತೆ ಪ್ರವೇಶಿಸಿದ್ದ ರೆನೊ ಡಸ್ಟರ್ ಕಾಂಪಾಕ್ಟ್ ಎಸ್‌ಯುವಿ ಕಾರನ್ನು ದೇಶದ ಕಾರು ಪ್ರೇಮಿಗಳು ಎರಡು ಕೈಗಳಿಂದ ಅಪ್ಪಿಕೊಂಡು ಮನದಾಳದಿಂದ ಸ್ವೀಕರಿಸಿದ್ದರು.

ಅಂತೆಯೇ ಕಳೆದೊಂದು ವರ್ಷದಲ್ಲಿ ಡಸ್ಟರ್ ದೇಶದ ಮನೆಮಾತಾಗಿ ಬಿಟ್ಟಿದೆ. ಈಗಾಗಲೇ ಸ್ಪೆಷಲ್ ಎಡಿಷನ್ ಮೂಲಕ ತನ್ನ ಸಾನಿಧ್ಯವನ್ನು ನಿರೂಪಿಸಿರುವ ಡಸ್ಟರ್ ದೇಶದ ಪ್ರಖ್ಯಾತ ಕಾರು ತಯಾರಕ ಸಂಸ್ಥೆಯಾದ ಡಿಸಿ ಡಿಸೈನ್‌ನಿಂದಲೂ ವಿಶೇಷ ರೂಪ ಪಡೆದುಕೊಂಡಿತ್ತು.

ಅಂತಹ ಡಸ್ಟರ್‌ನ ಹೊಸ ರೂಪವನ್ನು ಪ್ರಸಕ್ತ ಸಾಗುತ್ತಿರುವ ಜೋಹಾನ್ಸ್‌ಬರ್ಗ್ ಅಂತರಾಷ್ಟ್ರೀಯ ಮೋಟಾರ್ ಶೋದಲ್ಲಿ ಪ್ರದರ್ಶಿಸಲಾಗಿದೆ. ಪ್ರಸ್ತುತ ಪ್ರದರ್ಶನಕ್ಕೀಡಲಾಗಿರುವ ರೆನೊ ಡಸ್ಟರ್ ಡಿಟೂರ್ (Detour) ಕಾನ್ಸೆಪ್ಟ್ ಕಾರಿನ ಪ್ರಮುಖ ವಿಶೇಷತೆಯೆಂದರೆ ಇದು ಆಫ್ ರೋಡಿಂಗ್ ಸಾಮರ್ಥ್ಯವನ್ನು ಹೊಂದಿರಲಿದೆ.

ಇದಕ್ಕೆ ಬಳಿಯಲಾಗಿರುವ ಬಣ್ಣವಂತೂ ನೋಡುಗರನ್ನು ಮುಗ್ಧಗೊಳಿಸಿದೆ. ಹಾಗಿದ್ದರೆ ಬನ್ನಿ ರೆನೊ ಡಸ್ಟರ್ ಡಿಟೂರ್ ಕಾನ್ಸೆಪ್ಟ್ ಕಾರಿನ ವೈಶಿಷ್ಟ್ಯಗಳ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಸ್ಲೈಡರ್ ಮುಖಾಂತರ ಪಡೆಯೋಣ...

ರೆನೊ ಡಸ್ಟರ್ ಡಿಟೂರ್ ಕಾನ್ಸೆಪ್ಟ್

ಜೋಹಾನ್ಸ್‌ಬರ್ಗ್‌ನ ಸ್ಥಳೀಯ ಡಿಸೈನ್ ಸ್ಟುಡಿಯೋ ಜತೆ ಸೇರಿಕೊಂಡು ರೆನೊದ ಯುರೋಪಿಯನ್ ಡಿಸೈನ್ ಸ್ಟುಡಿಯೋ ನೂತನ ಡಿಟೂರ್ ಕಾನ್ಸೆಪ್ಟ್ ಕಾರನ್ನು ವಿನ್ಯಾಸಗೊಳಿಸಿದೆ.

ರೆನೊ ಡಸ್ಟರ್ ಡಿಟೂರ್ ಕಾನ್ಸೆಪ್ಟ್

ಟರ್ಮಿನೇಟರ್, ಡಕರ್ ಡಸ್ಟ್ ಹಾಗೂ ಮ್ಯಾಡ್ ಮ್ಯಾಕ್ಸ್‌ನಿಂದ ಸ್ಪೂರ್ತಿ ಪಡೆದುಕೊಂಡು ಈ ಅತಿ ವಿಶೇಷ ರೆನೊ ಡಿಟೂರ್ ಕಾನ್ಸೆಪ್ಟ್ ತಯಾರಿಸಲಾಗಿದೆ.

ರೆನೊ ಡಸ್ಟರ್ ಡಿಟೂರ್ ಕಾನ್ಸೆಪ್ಟ್

ಮೊದಲ ನೋಟದಲ್ಲೇ ಕಾರಿಗೆ ಆಲಂಕೃತವಾದ ಹಳದಿ ಮುತ್ತಿನಂತಹ ಬಣ್ಣ ಹೆಚ್ಚು ಆಕರ್ಷಕವಾಗಿದೆ.

ರೆನೊ ಡಸ್ಟರ್ ಡಿಟೂರ್ ಕಾನ್ಸೆಪ್ಟ್

ಇನ್ನು ಹಿಂಭಾಗವನ್ನು ಹೊಳೆಯುವ ಬೂದು ಬಣ್ಣವು ಆವರಿಸಿದೆ. ಇದನ್ನು ದಿಟ್ಟತನದ ಡಸ್ಟರ್ ಡಿಕಾಲ್ಸ್ ಸುತ್ತುವರಿದಿದೆ.

ರೆನೊ ಡಸ್ಟರ್ ಡಿಟೂರ್ ಕಾನ್ಸೆಪ್ಟ್

ಆಫ್ ರೋಡಿಂಗ್‌ಗೂ ಹೊಂದಿಕೆಯಾಗುವ ರೀತಿಯಲ್ಲಿ ನೂತನ ಡಸ್ಟರ್ ವಿನ್ಯಾಸಗೊಳಿಸಲಾಗಿದೆ. ಇದು 18 ಇಂಚು ಅಲಾಯ್ ವೀಲ್ ಪಡೆದುಕೊಂಡಿದೆ.

ರೆನೊ ಡಸ್ಟರ್ ಡಿಟೂರ್ ಕಾನ್ಸೆಪ್ಟ್

ಇನ್ನು ಮುಂದುಗಡೆ ಪರಿಷ್ಕೃತ ವಿನ್ಯಾಸದ ಜತೆಗೆ ಡೇ ಟೈಮ್ ರನ್ನಿಂಗ್ ಹೆಡ್ ಲೈಟ್, ಪ್ರೊಜೆಕ್ಟರ್ ಲೈಟ್ ಹಾಗೆಯೇ ಮೇಲ್ಗಡೆ ರೂಫ್ ಮೌಂಟೆಡ್ ರೂಫ್ ಲೈಟ್ ಹೆಚ್ಚು ಆಕರ್ಷಕವಾಗಿದೆ.

ರೆನೊ ಡಸ್ಟರ್ ಡಿಟೂರ್ ಕಾನ್ಸೆಪ್ಟ್

ಇದರ ಜತೆಗೆ ಬಣ್ಣದ ಕಿಟಕಿಗಳು, ಕಪ್ಪು ವರ್ಣದ ಬಿ ಪಿಲ್ಲರ್ ಹಾಗೂ ಚಕ್ರಗಳ ವಿಶೇಷ ಡಿಸೈನ್ ಡಸ್ಟರನ್ನು ಇತರ ಕಾರುಗಳಿಗಿಂತ ಭಿನ್ನವಾಗಿಸುತ್ತದೆ.

ರೆನೊ ಡಸ್ಟರ್ ಡಿಟೂರ್ ಕಾನ್ಸೆಪ್ಟ್

ಪ್ರಸ್ತುತ ಕಾನ್ಸೆಪ್ಟ್ ಹಂತದಲ್ಲಿರುವ ಡಸ್ಟರ್ ಯಾವಾಗ ಉತ್ಪಾದಕ ವರ್ಷನ್ ಪಡೆದುಕೊಳ್ಳಲಿದೆ ಎಂಬುದು ತಿಳಿದು ಬಂದಿಲ್ಲ. ಹಾಗಿದ್ದರೂ ನಿಗದಿತ ಆವೃತ್ತಿಗಳಷ್ಟೇ ಲಭ್ಯವಿರುವ ಸಾಧ್ಯತೆಗಳಿವೆ.

ರೆನೊ ಡಸ್ಟರ್ ಡಿಟೂರ್ ಕಾನ್ಸೆಪ್ಟ್

ಒಟ್ಟಿನಲ್ಲಿ ಡಸ್ಟರ್ ಡಿಟೂರ್ ಕಾರಿಗೆ ಸದ್ಯದಲ್ಲೇ ಉತ್ಪಾದನಾ ವರ್ಷನ್ ಪಡೆದುಕೊಂಡಲ್ಲಿ ಜಾಗತಿಕವಾಗಿ ಉತ್ತಮ ಬೇಡಿಕೆ ಕಂಡುಕೊಳ್ಳುವ ಸಾಧ್ಯತೆಯಿದೆ.

More from DriveSpark

Article Published On: Thursday, October 17, 2013, 16:22 [IST]
English summary
Renault Duster Detour Concept, showcased at the ongoing Johannesburg International Motor Show, focuses on the off-roading abilities of the compact SUV, with the addition of touring specific modifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+