ವಾಹನ ಜಾತ್ರೆ: ಹ್ಯುಂಡೈ ಹೊಸ ಸೊನಾಟಾಕ್ಕೆ ಜೈಹೋ

ದೆಹಲಿಯಲ್ಲಿ ಆರಂಭವಾದ ವಾಹನ ಪ್ರದರ್ಶನದಲ್ಲಿ ಹ್ಯುಂಡೈ ಕಂಪನಿಯು ಹತ್ತು ಹಲವು ಆಕರ್ಷಕ ಫೀಚರುಗಳ ನೂತನ ಸೊನಾಟಾ ಕಾರೊಂದನ್ನು ಪರಿಚಯಿಸಿದೆ. ಇದರ ದರ ಸುಮಾರು 16ರಿಂದ 17 ಲಕ್ಷ ರು. ಆಸುಪಾಸಿನಲ್ಲಿದೆ.

Hyundai launches new Sonata

ನವದೆಹಲಿ, ಜ 05: ನೂತನ ಹ್ಯುಂಡೈ ಸೊನಾಟಾ ಕಾರನ್ನು ದೆಹಲಿ ವಾಹನ ಪ್ರದರ್ಶನದಲ್ಲಿ ಹ್ಯುಂಡೈ ಮೋಟರ್ಸ್ ಇಂಡಿಯಾ ಲಿಮಿಟೆಡ್ ಅನಾವರಣ ಮಾಡಿದೆ. ಈ ಕಾರಿಗೆ ಜಿಡಿಎಲ್ ಎಂದು ಕೋಡ್ ಹೆಸರನ್ನು ಕಂಪನಿ ನೀಡಿದೆ. ಇದು ನೂತನ ಪೆಟ್ರೋಲ್ ಎಂಜಿನ್ ಹೊಂದಿದ್ದು, ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಷ್ ಮಿಷನ್ ಆಯ್ಕೆಯಲ್ಲಿ ದೊರಕುತ್ತದೆ. ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಈ ಕಾರು ರಸ್ತೆಗಿಳಿಯುವ ಕುರಿತು ಯಾವುದೇ ಮಾಹಿತಿ ದೊರಕಿಲ್ಲ.

ಜಿಡಿಐ ಎಂಬ ಹೆಸರಿನ(ಜಿಡಿಎಲ್ ಅಲ್ಲ) 2.4 ಲೀಟರಿನ ನೂತನ ಪೆಟ್ರೋಲ್ ಎಂಜಿನನ್ನು ನೂತನ ಸೊನಾಟ ಹೊಂದಿದೆ. ಇದು ಒಂದು ಡೈರೆಕ್ಟ್ ಇಂಜೆಕ್ಷನ್, 4 ಸಿಲಿಂಡರ್ ಇನ್ ಲೈನ್ ಎಂಜಿನ್ ಹೊಂದಿದೆ.

ನೂತನ ಸೊನಾಟ ಕಾರು 6 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಫ್ಲೂಡಿಕ್ ವಿನ್ಯಾಸದೊಂದಿಗೆ ಬಂದಿರುವ ಸೊನಾಟಾ ಆಕರ್ಷಕವಾಗಿದ್ದು, ದೆಹಲಿ ವಾಹನ ಪ್ರದರ್ಶನದಲ್ಲಿ ಮಿಂಚುತ್ತಿದೆ. ನೋಡಲು ಐಷಾರಾಮಿ ಕಾರಿನಂತೆ ಭಾಸವಾಗುವ ನೂತನ ಸೊನಾಟ ಹತ್ತು ಹಲವು ಫೀಚರುಗಳೊಂದಿಗೆ ಇಷ್ಟವಾಗುತ್ತದೆ.

ಮುಂಭಾಗದಿಂದ ನೋಡಿದರೆ ನೂತನ ಸೊನಾಟ ವೋಲ್ವೊ ವಿನ್ಯಾಸ ಹೊಂದಿದೆ. ಈ ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಎಚ್ ಐಡಿ ಕ್ಷೆನನ್ ಲ್ಯಾಂಪ್ ಇದೆ. ಉಳಿದಂತೆ ಕ್ರೂಷ್ ಕಂಟ್ರೋಲ್, ಪೆಡಲ್ ಶಿಫ್ಟ್, ಆರು ಏರ್ ಬ್ಯಾಗ್, ಎಬಿಎಸ್, ಇಬಿಡಿ, ಇಎಸ್ ಪಿ, ಹಿಂಭಾಗ ನೋಡಲು ಕ್ಯಾಮರಾ ಮತ್ತು ಸ್ಮಾರ್ಟ್ ಕೀ, ಪುಷ್ ಬಟನ್ ಸ್ಟಾರ್ಟ್ ಮುಂತಾದ ಹತ್ತು ಹಲವು ಫೀಚರುಗಳಿವೆ. ಈ ಕಾರಿನ ದರ ಸುಮಾರು 16-17 ಲಕ್ಷ ರು. ಆಸುಪಾಸಿನಲ್ಲಿದೆ.(ಕನ್ನಡ ಡ್ರೈವ್ ಸ್ಪಾರ್ಕ್ ವಾರ್ತೆ)

More from DriveSpark

Article Published On: Thursday, January 5, 2012, 12:11 [IST]
English summary
Delhi Auto Expo 2012: Hyundai launches new Sonata in new platform. New Sonata price expected Rs 16-17 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+