ಜಾಗ್ವಾರ್ ಎರಡು ಕಾರುಗಳನ್ನು ನೋಡಿ ಬೆರಗಾಗಿರಿ!
ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ವಾಹನ ಪ್ರದರ್ಶನದಲ್ಲಿ ಜಾಗ್ವಾರ್ ಕಂಪನಿಯು ಸಿ-ಎಕ್ಸ್75 ಮತ್ತು ಸಿ-ಎಕ್ಸ್16 ಎಂಬ ಎರಡು ಕಾನ್ಸೆಪ್ಟ್ ಬಂಡಿಗಳನ್ನು ಪರಿಚಯಿಸಿದೆ.

ಜಾಗ್ವಾರ್ ಕಂಪನಿಯು ಈಗಾಗಲೇ ಎಕ್ಸ್ಎಫ್, ಎಕ್ಸ್ ಜೆ ಮತ್ತು ಎಕ್ಸ್ ಕೆ ಮಾಡೆಲ್ ಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಇದೀಗ ಕಂಪನಿಯ ನೂತನ ಕಾನ್ಸೆಪ್ಟ್ ವಾಹನಗಳಾದ ಸಿ-ಎಕ್ಸ್75 ಮತ್ತು ಸಿ-ಎಕ್ಸ್16 ಕಂಪನಿಯ ಭವಿಷ್ಯದ ಯೋಜನೆಗಳಿಗೆ ಕನ್ನಡಿ ಹಿಡಿದಿದೆ. ಇದು ಕಂಪನಿಯ ಅನ್ವೆಷಣೆ ಮತ್ತು ತಂತ್ರಜ್ಞಾನದ ಮೇಲೆ ಭವಿಷ್ಯದ ಹೂಡಿಕೆಯ ಮುನ್ಸೂಚಣೆಯೂ ಹೌದು.
ಜಾಗತಿಕ ಮಾರುಕಟ್ಟೆಯಲ್ಲಿ ನಡೆದ ಪ್ರದರ್ಶನಗಳಲ್ಲಿ ಸಿ-ಎಕ್ಸ್75 ಮತ್ತು ಸಿ-ಎಕ್ಸ್16 ಕಾನ್ಸೆಪ್ಟ್ ಗಳು ಬೆಸ್ಟ್ ಶೋ ಪ್ರಶಸ್ತಿ ಪಡೆದಿವೆ" ಎಂದು ಜಾಗ್ವಾರ್ ಗ್ಲೋಬಲ್ ಬ್ರಾಂಡ್ ನಿರ್ದೇಶಕ ಅಡ್ರೈನ್ ಹಾಲ್ಮರ್ಕ್ ಹೇಳಿದ್ದಾರೆ.
"ನೂತನ ಸಿ-ಎಕ್ಸ್75 ಕಾನ್ಸೆಪ್ಟ್ ಖಂಡಿತಾವಾಗಿಯು ಮುಂದಿನ ದಿನಗಳಲ್ಲಿ ರಸ್ತೆಗಿಳಿಯಲಿದೆ. ಜಗತ್ತಿನ ಅತ್ಯಂತ ಎಕ್ಸ್ ಕ್ಲೂಸಿವ್, ದಕ್ಷತೆ ಮತ್ತು ಅಡ್ವಾನ್ಸ್ ಡ್ ಸೂಪರ್ ಕಾರಾಗಿ ಇದು ಹೊರಹೊಮ್ಮುವ ಭರವಸೆ ನಮಗಿದೆ" ಎಂದರು.


Click it and Unblock the Notifications








