ಮಾರುತಿ ಸ್ವಿಫ್ಟಿಗೆ ಚಾಲೆಂಜ್: ರೆನಾಲ್ಟ್ ಪಲ್ಸ್
ದೆಹಲಿ ವಾಹನ ಪ್ರದರ್ಶನ 2012ರಲ್ಲಿ ರೆನಾಲ್ಟ್ ಇಂಡಿಯಾ ಕಂಪನಿಯು ನೂತನ ರೆನಾಲ್ಟ್ ಪಲ್ಸ್ ಕಾರನ್ನು ಔಪಚಾರಿಕವಾಗಿ ಅನಾವರಣ ಮಾಡಿದೆ. ಈ ಕಾರಿನ ದೆಹಲಿ ಎಕ್ಸ್ ಶೋರೂಂ ದರ 5.77 ಲಕ್ಷ ರು.ನಿಂದ 6.77 ಲಕ್ಷ ರು.ವರೆಗಿದೆ ಎಂದು ದೆಹಲಿಯಲ್ಲಿರುವ ಕನ್ನಡ ಡ್ರೈವ್ ಸ್ಪಾರ್ಕ್ ವರದಿಗಾರರು ತಿಳಿಸಿದ್ದಾರೆ.

ನೂತನ ರೆನಾಲ್ಟ್ ಪಲ್ಸ್ ಬೇಸ್ ಆವೃತ್ತಿ ಆರ್ಎಕ್ಸ್ಎಲ್ ದರ ಸುಮಾರು 5.77 ಲಕ್ಷ ರುಪಾಯಿ ಇದೆ. ಮತ್ತೊಂದು ಆವೃತ್ತಿ ಆರ್ಎಕ್ಸ್ ಝಡ್ ದರ ಸುಮಾರು 6.25 ಲಕ್ಷ ರುಪಾಯಿ ಇದೆ. ಈ ಕಾರು ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಸ್ಕೋಡಾ ಫಾಬಿಯಾ ಕಾರುಗಳಿಗೆ ಪೈಪೋಟಿ ನೀಡಲಿದೆ.
ನಿಸ್ಸಾನ್ ಮೈಕ್ರಾ ಮೂಲವಾಗಿಟ್ಟುಕೊಂಡು ಅಭಿವೃದ್ಧಿಪಡಿಸಿರುವ ಪಲ್ಸ್ ಕಾರನ್ನು ವಿ ಪ್ಲಾಟ್ ಫಾರ್ಮ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕಂಪನಿ ಇದಕ್ಕು ಮುನ್ನ ದೇಶದ ರಸ್ತೆಗೆ ರೆನಾಲ್ಟ್ ಫ್ಲೂಯೆನ್ಸ್ ಮತ್ತು ಕೊಲಿಯೊಸ್ ಎಸ್ ಯುವಿ ಪರಿಚಯಿಸಿತ್ತು.
ನೂತನ ರೆನಾಲ್ಟ್ ಪಲ್ಸ್ ಕಾರಿನಲ್ಲಿ ಡ್ರೈವರ್ ಸೈಡ್ ಏರ್ ಬ್ಯಾಗ್, ಪವರ್ ಸ್ಟಿಯರಿಂಗ್, ಪವರ್ ವಿಂಡೋಸ್, ಫಾಲೊ ಮಿ ಹೆಡ್ ಲ್ಯಾಂಪ್, ಸೆಂಟ್ರಲ್ ಲಾಕಿಂಗ್ ಇತ್ಯಾದಿ ಫೀಚರುಗಳಿವೆ. ಎರಡು ಆವೃತ್ತಿಗಳಲ್ಲಿ ಸ್ಟಾರ್ಟ್-ಸ್ಟಾಪ್ ಆಟೋಮ್ಯಾಟಿಕ್ ಬಟನ್ ಇದೆ.
ಹೊಸ ರೆನಾಲ್ಟ್ ಪಲ್ಸ್ ಕಾರು ಕೆ6ಕೆ 1.5 ಲೀಟರಿನ ಡೀಸೆಲ್ ಎಂಜಿನ್ ಹೊಂದಿದೆ. ಇದು ಪ್ರತಿಲೀಟರಿಗೆ 23.08 ಕಿ.ಮೀ. ಮೈಲೇಜ್ ನೀಡುತ್ತದೆ.
ಇನ್ನಷ್ಟು ಹೊಸ ಕಾರುಗಳನ್ನು ನೋಡಿರಿ


Click it and Unblock the Notifications








