ವಾಹನ ಜಾತ್ರೆ: ಸುಜುಕಿ ಬೈಕುಗಳ ಬೆರಗು ನೋಡಿ

ದೆಹಲಿ ವಾಹನ ಪ್ರದರ್ಶನದಲ್ಲಿ ಬೈಕುಗಳು ಕೂಡ ಜನರನ್ನು ಆಕರ್ಷಿಸುವಲ್ಲಿ ಸಫಲವಾಗಿವೆ. ಇಲ್ಲಿ ಸುಜುಕಿ ಮೋಟರ್ ಸೈಕಲ್ ಇಂಡಿಯಾ ಕಂಪನಿಯು ಒಂದು ಬೈಕ್ ಮತ್ತು ಒಂದು ಸ್ಕೂಟರನ್ನು ಪರಿಚಯಿಸಿದೆ.

ನೂತನ ಹಯಾಟೆ ಎಂಬ 110 ಸಿಸಿ ಬೈಕನ್ನು ಸುಜುಕಿ ಮೋಟರ್ ಸೈಕಲ್ ಇಂಡಿಯಾ ಕಂಪನಿಯು ಪರಿಚಯಿಸಿದೆ. ಇದರ ದೆಹಲಿ ಎಕ್ಸ್ ಶೋರೂಂ ದರ ಸುಮಾರು 40 ಸಾವಿರ ರುಪಾಯಿ.

ಇದರೊಂದಿಗೆ ಕಂಪನಿಯು ಸ್ವಿಸ್ 125 ಎಂಬ ಸ್ಕೂಟರನ್ನು ಕೂಡ ಅನಾವರಣಮಾಡಿದೆ. ಇದರ ದೆಹಲಿ ಎಕ್ಸ್ ಶೋರೂಂ ದರ ಸುಮಾರು 45,435 ರುಪಾಯಿ. ಗ್ರಾಮೀಣ ಭಾರತದ ಜನರನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಅಗ್ಗದ ಬೈಕ್ ಮತ್ತು ಸ್ಕೂಟರನ್ನು ಪರಿಚಯಿಸಿದೆ.

ಇದರಲ್ಲಿ ಸ್ವಿಸ್ 125 ಸ್ಕೂಟರ್ ಪ್ರಸಕ್ತ ವರ್ಷದ ಮಾರ್ಚ್ ತಿಂಗಳಿನಿಂದ ದೇಶದ ವಾಹನ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಮತ್ತೊಂದು ಬೈಕ್ ಹಯಾಟೆ ರಸ್ತೆಗಿಳಿಯಲು ಏಪ್ರಿಲ್ ತಿಂಗಳವರೆಗೆ ಕಾಯಬೇಕು.

ಈ ಬೈಕ್ ಮತ್ತು ಸ್ಕೂಟರ್ ರಸ್ತೆಗಿಳಿಯಲು ಕಡಿಮೆಯೆಂದರೂ ಮೂರು ತಿಂಗಳು ಕಾಯಬೇಕಿದೆ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷರಾದ ಅತುಲ್ ಗುಪ್ತಾ ಹೇಳಿದ್ದಾರೆ.

ಕಂಪನಿಯು ಉತ್ಪಾದನಾ ಸಾಮರ್ಥ್ಯ ವಿಸ್ತರಣೆ ಮತ್ತು ಮಾರಾಟ ಜಾಲ ವಿಸ್ತರಿಸುವಲ್ಲಿ ಹೆಚ್ಚಿನ ಗಮನ ನೀಡಲಿದೆ ಎಂದು ಅವರು ಹೇಳಿದ್ದಾರೆ. ಅಂದರೆ ಕಂಪನಿಯ ಪ್ರಸಕ್ತ ಉತ್ಪಾದನಾ ಸಾಮರ್ಥ್ಯ 3.6 ಲಕ್ಷ ಯುನಿಟ್ ಇದ್ದು, ಇದನ್ನು 2013ರ ವೇಳಗೆ 5.4 ಲಕ್ಷ ಯುನಿಟ್ ಗೆ ಹೆಚ್ಚಿಸಲು ಕಂಪನಿ ನಿರ್ಧರಿಸಿದೆ.

"ಕಂಪನಿಯು ಈಗಾಗಲೇ 400 ಕೋಟಿ ರುಪಾಯಿ ಹೂಡಿಕೆ ಮಾಡಿದೆ. ನೂತನ ಉತ್ಪನ್ನ ಮತ್ತು ಉತ್ಪಾದನಾ ಸಾಮರ್ಥ್ಯ ವಿಸ್ತರಣೆ ಕಾರ್ಯತಂತ್ರಕ್ಕಾಗಿ ಕಂಪನಿಯು ಹೆಚ್ಚುವರಿ 100 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ" ಎಂದು ಅತುಲ್ ಗುಪ್ತಾ ಹೇಳಿದ್ದಾರೆ.

More from DriveSpark

Article Published On: Thursday, January 5, 2012, 13:22 [IST]
English summary
Delhi auto expo 2012: Suzuki Motorcycle India launched a 110cc bike Hayate and unveils a value packed scooter Swish125 in Delhi Auto Expo. Hayate Ex-showroom price Rs 40,000 and swish125 priced at Rs 45,431.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+