ಪುಟ್ಟ ನ್ಯಾನೊ ಕಾರಿಗೆ ಸಣ್ಣ ಡೀಸೆಲ್ ಎಂಜಿನ್

ದೆಹಲಿ ವಾಹನ ಪ್ರದರ್ಶನದಲ್ಲಿ ನೂತನ ಡೀಸೆಲ್ ಎಂಜಿನ್ ನ್ಯಾನೊ ಕಾರನ್ನು ಪರಿಚಯಿಸಲು ದೇಶದ ಪ್ರಮುಖ ವಾಹನ ಕಂಪನಿ ಟಾಟಾ ಮೋಟರ್ಸ್ ಲಿಮಿಟೆಡ್ ನಿರ್ಧರಿಸಿದೆ. ಒಂದು ಮೂಲದ ಪ್ರಕಾರ ನೂತನ ಎಂಜಿನ್ ಜಗತ್ತಿನ ಅತ್ಯಂತ ಸಣ್ಣ ಡೀಸೆಲ್ ಎಂಜಿನ್ ಆಗಿರಲಿದೆಯಂತೆ.

Tata Motors Nano diesel Delhi Auto Expo 2012

ಪುಟ್ಟ ಕಾರು ನ್ಯಾನೊ ಸಣ್ಣ ಡೀಸೆಲ್ ಎಂಜಿನ್ ಹೊಂದಿರಲಿದ್ದು, ಅತ್ಯಧಿಕ ಇಂಧನ ದಕ್ಷತೆ, ಆಕರ್ಷಕ ಕಾರ್ಯಕ್ಷಮತೆಯನ್ನು ನಿರೀಕ್ಷಿಸಬಹುದಾಗಿದೆ. ಆದರೂ ಈ ಕಾರು ಯಾವಾಗ ರಸ್ತೆಗಿಳಿಯಲಿದೆ ಎಂದು ಇನ್ನೂ ಖಚಿತವಾಗಿಲ್ಲ. ಡೀಸೆಲ್ ನ್ಯಾನೊ ಕಾರನ್ನು ದೆಹಲಿ ವಾಹನ ಪ್ರದರ್ಶನದಲ್ಲಿ ಅಧಿಕೃತವಾಗಿ ಕಂಪನಿ ಅನಾವರಣ ಮಾಡುವುದಿಲ್ಲ. ಕೇವಲ ಪ್ರದರ್ಶಿಸಲು ನಿರ್ಧರಿಸಿದೆ.

"ನ್ಯಾನೊ ಕಾರಿಗಾಗಿ 800ಸಿಸಿಯ ಅವಳಿ ಸಿಲಿಂಡರ್ ಟರ್ಬೊ ಚಾರ್ಜ್ ಡ್ ಡೀಸೆಲ್ ಎಂಜಿನನ್ನು ಟಾಟಾ ಮೋಟರ್ಸ್ ಅಭಿವೃದ್ಧಿಪಡಿಸುತ್ತಿದೆ. ಇದೇ ಎಂಜಿನನ್ನು ಹಗುರ ವಾಣಿಜ್ಯ ವಾಹನಗಳಿಗೂ ಬಳಸುವ ಯೋಜನೆ ಕಂಪನಿಗಿದೆ" ಎಂದು ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಂಪನಿಯು ಮೊದಲ ಬಾರಿಗೆ ದೇಶದಲ್ಲಿ ಟರ್ಬೊ ಚಾರ್ಜ್ ಡ್ ಎಂಜಿನ್ ಅಭಿವೃದ್ಧಿಪಡಿಸುತ್ತಿದೆ. ಟಾಟಾ ಮೋಟರ್ಸ್ ಈ ಹಿಂದೆಯೂ ಹಲವು ಡೀಸೆಲ್ ವಾಹನಗಳನ್ನು ಪರಿಚಯಿಸಿತ್ತು. ಆದರೆ ಆ ವಾಹನಗಳಿಗೆ ಡೀಸೆಲ್ ಎಂಜಿನನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.

More from DriveSpark

Article Published On: Tuesday, January 3, 2012, 12:46 [IST]
English summary
Tata Motors Ltd to introduce all-new diesel small car Nano at the upcoming Delhi Auto Expo 2012. It will be world’s smallest diesel engine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+