ಸಾರಿಗೆ ಸಚಿವ ಅಶೋಕ್ ದೆಹಲಿಗೇಕೆ ಹೋದ್ರು?

ಬೆಂಗಳೂರು, ಜ 06: ರಾಜ್ಯದ ಗೃಹ ಮತ್ತು ಸಾರಿಗೆ ಸಚಿವ ಆರ್ ಅಶೋಕ್ ದೆಹಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ವಾಹನ ಪ್ರದರ್ಶನಕ್ಕೆ ಆಗಮಿಸಿದ ಅವರು ಬಜಾಜ್ ಪುಟ್ಟ ಕಾರು ಆರ್ಇ60ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಬಜಾಜ್ ಕಂಪನಿಯು ತನ್ನ ಮೊದಲ ಪುಟ್ಟ ಕಾರು RE60ಯನ್ನು ಇತ್ತೀಚೆಗೆ ಪರಿಚಯಿಸಿತು. ಬಜಾಜ್ ಮಳಿಗೆಗೆ ಪ್ರವೇಶಿಸಿದ ಸಚಿವ ಆರ್ ಅಶೋಕ್ ರನ್ನು ಪುಟ್ಟ ಬಜಾಜ್ ಕಾರು(ರಿಕ್ಷಾ?!) ಗಮನ ಸೆಳೆಯಿತು. ಈ ಕಾರನ್ನು ಸಾರ್ವಜನಿಕ ಸಾರಿಗೆಗೆ ಬಳಸಲು ಕೇಂದ್ರ ಸರಕಾರ ಅನುಮತಿ ನೀಡುವ ನಿರೀಕ್ಷೆಯನ್ನು ಆರ್ ಅಶೋಕ್ ವ್ಯಕ್ತಪಡಿಸಿದ್ದಾರೆ.

ನ್ಯಾನೊ ರಸ್ತೆಗಿಳಿಯುವ ಮುನ್ನ ಇದೇ ಹವಾ ಸೃಷ್ಟಿಸಿತ್ತು. ರಿಕ್ಷಕ್ಕೆ ಬದಲಿಯಾಗಿ ದೇಶದ ರಸ್ತೆಯಲ್ಲಿ ನ್ಯಾನೊ ಕಾರು ಬಳಸುವ ಕುರಿತು ಹೆಚ್ಚಿನವರು ಚರ್ಚಿಸುತ್ತಿದ್ದರು. ಆದರೆ ಇದೀಗ ನ್ಯಾನೊ ಕಾರು ಶ್ರೀಲಂಕಾದಲ್ಲಿ ಟ್ಯಾಕ್ಸಿಯಾಗಿ ಬಳಕೆಯಾಗುತ್ತಿದೆ.

ನೂತನ ಬಜಾಜ್ ಅಗ್ಗದ ಸಣ್ಣಕಾರು ಕೂಡ ರಿಕ್ಷಾ ಅಥವಾ ಟ್ಯಾಕ್ಸಿಯಾಗಿ ಬಳಸಲು ಸೂಕ್ತವಾಗಿದೆ. ಇದು ನಾಲ್ಕು ಚಕ್ರದ ವಾಹನವಾಗಿದ್ದು, ಪರಿಪೂರ್ಣವಾಗಿ ಕಾರು ಎಂದು ಕರೆಯುವುದು ಕಷ್ಟ. ಯಾಕೆಂದರೆ ಮೂರು ಚಕ್ರದ ವಾಹನದ ಎಂಜಿನ್ ಬಳಸಿರುವ ಆರ್ಇ60 ನಾಲ್ಕು ಚಕ್ರದ ಅಚ್ಚರಿಯಂತೆ ಕಾಣುತ್ತದೆ.

ಬಜಾಜ್ ಆರ್ಇ60 ಸಣ್ಣಕಾರು 200ಸಿಸಿಯ ಎಂಜಿನ್ ಹೊಂದಿದೆ. ಇದು ಸುಮಾರು 15 ಹಾರ್ಸ್ ಪವರ್ ನೀಡುತ್ತದೆ. ಅಂದರೆ ಸಾಮಾನ್ಯ ಬೈಕಿನಷ್ಟು ಕಾರ್ಯಕ್ಷಮತೆ ನೀಡುತ್ತದೆ. ಆದರೆ ಟಾಟಾ ನ್ಯಾನೊ 650 ಸಿಸಿ ಎಂಜಿನ್ ಹೊಂದಿದ್ದು, ಪ್ರತಿಗಂಟೆಗೆ 80 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಆರ್ಇ60 ಪುಟ್ಟಕಾರಿನಲ್ಲಿ ಪ್ರತಿಗಂಟೆಗೆ 70 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.

ವಾಹನ ಜಾತ್ರೆಯಲ್ಲಿ ಯಾವೆಲ್ಲ ಕಾರು ಬೈಕು ಅನಾವರಣಗೊಂಡಿದೆ?

ದೆಹಲಿ ವಾಹನ ಪ್ರದರ್ಶನದ ಚಿತ್ರಲೋಕ

More from DriveSpark

Article Published On: Friday, January 6, 2012, 13:38 [IST]
English summary
Karnataka State Transport Minister Mr. R. Ashok visited Delhi Auto Expo 2012. Ashok visited bajaj stall in Auto Expo and impressed him small car Bajaj RE60. What he said in Delhi auto expo. Read More..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+