ನನ್ನ ಬೈಕ್: ಪಲ್ಸರ್ 150 ಬೈಕ್ ನಂಗೆ ಯಾಕಿಷ್ಟ?

ಹೊಸದಾಗಿ ಕೆಲಸಕ್ಕೆ ಸೇರುವ ಹೆಚ್ಚಿನ ತರುಣರ ಮನದ ಮೂಲೆಯಲ್ಲೊಂದು ಬೈಕ್ ಖರೀದಿಯ ಕನಸು ಅವಿತಿರುತ್ತದೆ. ಕೆಲವು ತಿಂಗಳು ಕಳೆದಂತೆ, ಪಾಕೆಟ್ನಲ್ಲಿ ಒಂದಿಷ್ಟು ದುಡ್ಡಿದೆ ಅನಿಸಿದ ತಕ್ಷಣ ಯುವಕರು ಬೈಕ್ ಖರೀದಿ ಕುರಿತು ಆಲೋಚಿಸುತ್ತಾರೆ. ಹೆತ್ತವರು ತೆಗೆದುಕೊಟ್ಟ ಬೈಕ್ ನೀಡುವ ಮಜಾಕ್ಕಿಂತ, ಸ್ವಂತ ದುಡ್ಡಿನಿಂದ ಖರೀದಿಸಿದ ಬೈಕ್ ನೀಡುವ ಖುಷಿನೇ ಬೇರೆ.

ವ್ಯಾಗನಾರ್ ಎಂಬ ಪ್ರೀತಿಯ ಎತ್ತರದ ಹುಡುಗನನ್ನು ಖರೀದಿಸಿದಾಗ ರಮ್ಯಳ ಕಣ್ಣಲ್ಲಿ ಕಂಡ ಆನಂದ, ಐ20 ಖರೀದಿಸಿದವತ್ತು ಶಂಕರ್ ರಾವ್ ತೋರಿದ ಸಂಭ್ರಮ, ರಾಯಲ್ ಎನ್ ಫೀಲ್ಡ್ ಬುಲೆಟ್ ಖರೀದಿಸಿದ ವಿಲ್ಸನ್ ಅನುಭವಗಳನ್ನು ಓದಿದ್ದೀರಿ.

ಇದೀಗ ದೂರದ ಗೋರಕ್ ಪುರದ ಅಜಾದ್ ಮಾನಿ ತ್ರಿಪಾಠಿ ಎಂಬ ತರುಣ ತನ್ನ ಹೊಸ ಬೈಕ್ Pulsar 150 ಜೊತೆಗಿನ ಮಧುರ ಕ್ಷಣಗಳನ್ನು ಡ್ರೈವ್ ಸ್ಪಾರ್ಕ್ ಜೊತೆ ಹಂಚಿಕೊಂಡಿದ್ದಾರೆ. ನಿಮ್ಮಲ್ಲಿರುವ ಬೈಕ್ ಕಾರುಗಳ ಕಥೆಯನ್ನೂ ಕನ್ನಡ ಡ್ರೈವ್ ಸ್ಪಾರ್ಕ್ ಜೊತೆ ಹಂಚಿಕೊಳ್ಳಬಹುದು.

ಟೆಲಿ ಕಮ್ಯೂನಿಕೇಷನ್ ಎಂಜಿನಿಯರ್ ಆಗಿರುವ ಅಜಾದ್ ಖುದ್ದಾಗಿ ಖರೀದಿಸಿದ ಮೊದಲ ಬೈಕಿದು. ಹಾಗಂತ ಇದು ಇವರ ಮೊದಲ ಬೈಕಲ್ಲ. ಕಾಲೇಜಿಗೆ ಹೋಗುವ ಸಮಯದಲ್ಲಿ ಹೆತ್ತವರು ಹೀರೋ ಹೋಂಡಾ ಬೈಕ್ ನೀಡಿದ್ದರು.

"ದೂರ ಪ್ರಯಾಣ ನಂಗಿಷ್ಟ, ಅದಕ್ಕೆ ಹೆಚ್ಚು ಆರಾಮ ನೀಡೋ ಬೈಕ್ ಹುಡುಕುತ್ತಿದ್ದೆ. ಪಲ್ಸರ್ ನಲ್ಲಿರುವ ಕಂಫರ್ಟ್ ನನಗಿಷ್ಟವಾಯಿತು" ಎನ್ನುತ್ತಾರೆ ಅಜಾದ್. "ಖರೀದಿಸಿ ಇನ್ನೂ 25 ದಿನ ಆಗಿಲ್ಲ, ಆಗ್ಲೇ ಈ ಬೈಕ್ನಲ್ಲಿ 400 ಕಿ.ಮೀ. ದೂರದ ಟ್ರಿಪ್ ಹೋಗಿಬಂದೆ. ಸ್ವಲ್ಪನೂ ಆಯಾಸ ಆಗಿಲ್ಲ" ಎನ್ನುತ್ತಾರೆ.

"ಇದರ ಸಸ್ಪೆನ್ಷನ್, ಹ್ಯಾಂಡ್ಲಿಂಗ್ ಗುಣಮಟ್ಟದಿಂದಾಗಿ ಕಠಿಣ ರಸ್ತೆಯಲ್ಲೂ ಕಂಫರ್ಟ್ ಆಗಿ ರೈಡ್ ಮಾಡೋಕೆ ಆಗುತ್ತೆ. ಬೆನ್ನಿಗೂ ಯಾವುದೇ ಕಿರಿಕ್ ಆಗೋಲ್ಲ"

"ಶೋರೂಂನಲ್ಲಿ ಡ್ಯೂಯಲ್ ಕಲರ್ ಪಲ್ಸರ್ ಬೈಕ್ ನೋಡಿದೆ. ತಕ್ಷಣ ಟೆಸ್ಟ್ ಡ್ರೈವ್ ಮಾಡಿದೆ. ಅದೇ ದಿನ ಆ ಬೈಕ್ ಬುಕ್ ಮಾಡಿದೆ. ಫೆಬ್ರವರಿ 28ರಂದು ಬೈಕ್ ಡೆಲಿವರಿ ಮಾಡಿದ್ರು" ಎಂದು ಖರೀದಿ ಅನುಭವ ಹಂಚಿಕೊಂಡರು.

ಬೈಕ್ ಖರೀದಿಸಿ ಹೆಚ್ಚು ದಿನವಾಗಿಲ್ಲ. ಈಗಾಗಲೇ ಒಮ್ಮೆ ಸರ್ವಿಸಿಗೆ ಕೊಟ್ಟಿರುವುದಾಗಿ ಹೇಳುತ್ತಾರೆ. ಸ್ಪೋರ್ಟ್ ಬೈಕುಗಳು ಹೆಚ್ಚು ಮೈಲೇಜ್ ನೀಡುವುದಿಲ್ಲವೆನ್ನುವ ದೂರಿದೆ. ಆದರೆ ಅಜಾದ್ ಹೇಳುವ ಪ್ರಕಾರ ಈ ಪಲ್ಸರ್ ಬೈಕ್ ಪ್ರತಿಗಂಟೆಗೆ 50-52 ಕಿ.ಮೀ. ಮೈಲೇಜ್ ನೀಡುತ್ತಂತೆ. ಫಸ್ಟ್ ಸರ್ವಿಸ್ ಮಾಡಿದ ನಂತರ ಮೈಲೇಜ್ ಗಮನಾರ್ಹವಾಗಿ ಹೆಚ್ಚಾಗಿರೋದು ವಿಶೇಷ.

"ಉದ್ಯೋಗ ನಿಮಿತ್ತ ಬಹುದೂರ ಪ್ರಯಾಣಿಸುವ ಅಗತ್ಯ ನನಗಿದೆ. ಇದೀಗ ಪಲ್ಸರ್ ಬಂದ ತರುವಾಯ ಕಚೇರಿ ಪ್ರಯಾಣ ಸುಸೂತ್ರವಾಗಿದೆ. ಈ ಬೈಕಿನಿಂದಾಗಿ ನನ್ನ ಬಹುಅಮೂಲ್ಯ ಸಮಯವೂ ಉಳಿದಿದೆ. ಐ ಲವ್ ಮೈ ಪಲ್ಸರ್" ಅಂತ ಕಣ್ಣುಮಿಟುಕಿಸಿ ಹೇಳಿದ್ರು ಅಜಾದ್.

ನೀವು ಇತ್ತೀಚೆಗೆ ಹೊಸ ಬೈಕ್ ಕಾರು ಖರೀದಿಸಿದ್ರಾ? ಅಥವಾ ನಿಮ್ಮಲ್ಲೂ ಹಳೆಯ ಕಾರು ಬೈಕು ಇರಬಹುದಲ್ವಾ? ಅಥವಾ ಯಾವುದಾದ್ರೂ ವಾಹನ ಖರೀದಿಸೋ ಕನಸಲ್ಲಿದ್ದೀರಾ? ನಿಮ್ಮ ಕನಸಿನ ಕಾರು ಬೈಕು ಖರೀದಿಸಿದ ಅಥವಾ ಖರೀದಿಸಲಿರುವ ಕಥೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಖರೀದಿ ಅನುಭವ, ವಾಹನ ನೀಡೋ ಮೈಲೇಜ್, ಪ್ಲಸ್ ಮತ್ತು ಮೈನಸ್ ಪಾಯಿಂಟ್ ಎಲ್ಲವನ್ನೂ ಕನ್ನಡ ಡ್ರೈವ್ ಸ್ಪಾರ್ಕ್ ನಲ್ಲಿ ಬಿಚ್ಚಿಡಿ. ಇದು ಇನ್ನು ಮುಂದೆ ವಾಹನ ಖರೀದಿಸುವರಿಗೆ ಮಾರ್ಗದರ್ಶನವಾಗಲಿ. ನಿಮ್ಮ ಲೇಖನ ಇಂಗ್ಲಿಷ್ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿಬರಲಿದೆ. ಇನ್ಯಾಕೆ ತಡ.. ಈಗ್ಲೇ ಲೇಖನ ಕಳುಹಿಸಿ.

ನಮ್ಮ ಇಮೇಲ್ ವಿಳಾಸ: [email protected]

ಬಜಾಜ್ ಪಲ್ಸರ್ ಕುರಿತಾದ ಲೇಖನಗಳನ್ನು ಓದಿ>>

More from DriveSpark

Article Published On: Tuesday, March 27, 2012, 10:16 [IST]
English summary
This is an experience that Azad Mani Tripathi of Gorakhpur also had and his dream bike is the Bajaj Pulsar. Azad has recently bought himself a Pulsar 150. The telecommunications engineer has shared his user review of the new Pulsar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+