ಹೊಸ ಡ್ರೈವಿಂಗ್ ಅನುಭೂತಿಯೊಂದಿಗೆ ಮನ ಗೆದ್ದ 'ಹೋಂಡಾ ನವಿ'

By Nagaraja

ಮೊದಲ ನೋಟಕ್ಕೆ ಇದೇನು ಸ್ಕೂಟರ್ ಅಥವಾ ಬೈಕೇ? ಎಂಬ ಸಂದೇಹ ನಿಮ್ಮಲ್ಲುಂಟಾಗಬಹುದು. ಬಹುಶ: ಇದನ್ನು ನಿರ್ಮಿಸಿದ ಹೋಂಡಾ ಸಂಸ್ಥೆಗೂ ಇದೇ ಗೊಂದಲದ ಹಿನ್ನೆಲೆಯಲ್ಲಿ ನೂತನ ನವಿಗೆ ವಿಶಿಷ್ಟ ಸ್ಥಾನಮಾನ ನೀಡಿದೆ. ದೈನಂದಿನ ಬೈಕ್ ಮತ್ತು ಸ್ಕೂಟರ್ ಸವಾರಿಯಿಂದ ಬೆಸತ್ತು ಹೋಗಿರುವ ಬಳಕೆದಾರರಿಗೆ ನೂತನ ನವಿ ಹೊಸ ಡ್ರೈವಿಂಗ್ ಅನುಭೂತಿ ನೀಡಲಿದೆ.

Also Read: ರಾಯಲ್ ಎನ್‌ಫೀಲ್ಡ್ ಹಿರಿಮೆ; ಕ್ಲಾಸಿಕ್ 350 ಮತ್ತು ಕ್ಲಾಸಿಕ್ 500

2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಹೋಂಡಾ ನವಿ ತದಾ ಬೆನ್ನಲ್ಲೇ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಪ್ರಸ್ತುತ ಆಕರ್ಷಕ ಬೈಕ್ ಅನ್ನು ಟೆಸ್ಟ್ ಡ್ರೈವ್ ಮಾಡುವ ಅವಕಾಶವನ್ನು ನಮ್ಮ ಡ್ರೈವ್ ಸ್ಪಾರ್ಕ್ ಪ್ರತಿನಿಧಿಗಳು ಪಡೆದಿದ್ದು, ಈ ಸಂಬಂಧ ವಿಸೃತ ಚಾಲನಾ ವಿಮರ್ಶೆಯನ್ನು ಓದುಗರ ಮುಂದಿಡುತ್ತಿದ್ದೇವೆ.

ವಿನ್ಯಾಸ

ವಿನ್ಯಾಸ

ನಮ್ಮ ವಿಶ್ಲೇಷಕರ ಪ್ರಕಾರ ಭಾರತೀಯರ ದ್ವಿಚಕ್ರ ವಾಹನ ಬಳಕೆದಾರರ ಪಾಲಿಗೆ ಹೋಂಡಾ ನವಿ ವಿಶಿಷ್ಟ ಅನುಭವ ನೀಡುವುದಂತೂ ಗ್ಯಾರಂಟಿ. ಇದನ್ನು 'ಮಿನಿ ಬೈಕ್' ಎಂದೇ ವಿಶ್ಲೇಷಿಸಬಹುದಾಗಿದೆ.

ವಿನ್ಯಾಸ

ವಿನ್ಯಾಸ

ಮುಂಭಾಗದಲ್ಲಿ ದೊಡ್ಡದಾದ ಹೆಡ್ ಲ್ಯಾಂಪ್ ಪ್ರಮುಖವಾಗಿಯೂ ಎದ್ದು ಕಾಣಿಸುತ್ತಿದೆ. ಹೋಂಡಾ ನವಿ ಒಟ್ಟಾರೆ ವಿನ್ಯಾಸ ಗಮನ ಹರಿಸಿದಾಗ ಹೆಡ್ ಲೈಟ್ ದೊಡ್ಡ ಆಕಾರ ಪಡೆದಿರುವುದು ದರ್ಶನವಾಗುತ್ತದೆ.

ವಿನ್ಯಾಸ

ವಿನ್ಯಾಸ

ಬದಿಯಿಂದ ವೀಕ್ಷಿಸಿದಾಗ ಡರ್ಕ್ ಬೈಕ್ ಪ್ರತೀತಿಯನ್ನು ನೀಡುವುದಾದರೂ ಅಗಲವಾದ ಸೀಟುಗಳು, ವಿವಿಧ ಬಣ್ಣಗಳ ಸೈಡ್ ಪ್ಯಾನೆಲ್, ಇಂಧನ ಟ್ಯಾಂಕ್ ಗಳನ್ನು ಗುರುತಿಸಬಹುದಾಗಿದೆ.

ವಿನ್ಯಾಸ

ವಿನ್ಯಾಸ

ಫಾರ್ಕ್, ಸಸ್ಪೆನ್ಷನ್, ಎಕ್ಸಾಸ್ಟ್ ಇವೆಲ್ಲದಕ್ಕೂ ಕಪ್ಪು ವರ್ಣವನ್ನು ಬಳಿಯಲಾಗಿದ್ದು, ಪ್ರೀಮಿಯಂ ನೋಟ ಪ್ರದಾನ ಮಾಡುತ್ತದೆ.

ವಿನ್ಯಾಸ

ವಿನ್ಯಾಸ

ಹಿಂಭಾಗದಲ್ಲಿ ಹೆಚ್ಚು ಕ್ರೀಡಾತ್ಮಕ ವಿನ್ಯಾಸಕ್ಕೆ ಒತ್ತು ಕೊಡಲಾಗಿದೆ. ಒಟ್ಟಿನಲ್ಲಿ ವಿನ್ಯಾಸವನ್ನು ಗಮನಿಸಿದಾಗ ಬೈಕ್ ಹಾಗೂ ಸ್ಕೂಟರ್ ಮಿಶ್ರಣವನ್ನು ಕಾಣಬಹುದಾಗಿದ್ದು, ಅಸಾಂಪ್ರದಾಯಿಕ ವಿನ್ಯಾಸ ಶೈಲಿಯನ್ನು ಅನುಸರಿಸಲಾಗಿದೆ.

ಎಂಜಿನ್, ಗೇರ್ ಬಾಕ್ಸ್

ಎಂಜಿನ್, ಗೇರ್ ಬಾಕ್ಸ್

ಕಡಿಮೆ ಶಕ್ತಿಶಾಲಿ 109 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ ನಿಂದ ನಿಯಂತ್ರಿಸ್ಪಡುವ ನೂತನ ನವಿ 8.9 ಎನ್ ಎಂ ತಿರುಗುಬಲದಲ್ಲಿ 7.8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಸಿವಿಟಿ ಗೇರ್ ಬಾಕ್ಸ್ ಸಹ ಇದರಲ್ಲಿರಲಿದೆ.

ಮೈಲೇಜ್

ಮೈಲೇಜ್

ನಗರಗಳ ನೈಜ ಚಾಲನಾ ಪರೀಕ್ಷೆಯಲ್ಲಿ ಹೋಂಡಾ ನವಿ ಪ್ರತಿ ಲೀಟರ್ ಗೆ 45 ಕೀ.ಮೀ. ಮೈಲೇಜ್ ನೀಡುವಷ್ಟು ಸಕ್ಷಮವಾಗಿದೆ. ಅಲ್ಲದೆ ಗಂಟೆಗೆ ಗರಿಷ್ಠ 70 ಕೀ.ಮೀ.ಗಳ ವೇಗಮಿತಿಯಲ್ಲಿ ಸಂಚರಿಸಿದ್ದಲ್ಲಿ ಅತ್ಯುತ್ತಮ ಚಾಲನಾ ಅನುಭವ ನೀಡಲಿದೆ.

ಹೋಂಡಾ ಆಕ್ಟಿವಾಗೆ ಸಾಮ್ಯತೆ ಇದೆಯೇ?

ಹೋಂಡಾ ಆಕ್ಟಿವಾಗೆ ಸಾಮ್ಯತೆ ಇದೆಯೇ?

ನಂ.1 ಸ್ಕೂಟರ್ ಆಕ್ಟಿವಾದಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಹೋಂಡಾ ನವಿಯಲ್ಲಿ ಬಳಕೆ ಮಾಡಲಾಗಿದೆ. ಆದರೆ ಇದು ಆಕ್ಟಿವಾಗೆ ಸಮಾನವಾದ ಚಾಲನಾ ಅನುಭವ ನೀಡುತ್ತಿದೆಯೇ ಎಂಬ ಗೊಂದಲ ನಿಮ್ಮಲ್ಲಿ ಉಂಟಾಗಬಹುದು. ಖಂಡಿತ ಇಲ್ಲ. ಆಕ್ಟಿವಾಗೆ ಹೋಲಿಸಿದಾಗ ನವಿ ಹಗುರ ಭಾರದ ವಾಹನವಾಗಿದ್ದು, ವೈಬ್ರೇಷನ್ ರಹಿತ ನಯವಾದ ಚಾಲನೆಯನ್ನು ನೀಡುತ್ತದೆ. ಅಲ್ಲದೆ ಇಬ್ಬರು ಪ್ರಯಾಣಿಕು ಕುಳಿತುಕೊಂಡರೂ ಸಹ ಹೆಚ್ಚು ಚುರುಕಾಗಿರುತ್ತದೆ.

ಚಾಲನೆ ಮತ್ತು ಹ್ಯಾಂಡ್ಲಿಂಗ್

ಚಾಲನೆ ಮತ್ತು ಹ್ಯಾಂಡ್ಲಿಂಗ್

ಈ ಮೊದಲೇ ತಿಳಿಸಿರುವಂತೆಯೇ ನಯವಾದ ಎಂಜಿನ್ ಉತ್ಸಾಹದಾಯಕ ಚಾಲನೆಯನ್ನು ನೀಡಲಿದೆ. ಬೈಕ್ ನಂತಹ ಸಿಟ್ಟಿಂಗ್ ವ್ಯವಸ್ಥೆಯು ನಿಮ್ಮ ಚಾಲನೆಯನ್ನು ಆರಾಮದಾಯಕವಾಗಿಸಲಿದೆ.

ಚಾಲನೆ ಮತ್ತು ಹ್ಯಾಂಡ್ಲಿಂಗ್

ಚಾಲನೆ ಮತ್ತು ಹ್ಯಾಂಡ್ಲಿಂಗ್

ಹೋಂಡಾ ನವಿ ಬೈಕ್ ಎಂದೆನಿಸಿ ಕ್ಲಚ್ ಹಿಡಿಯಲು ತೆರಳಿದರೆ ತಪ್ಪಾದಿತು. ಏಕೆಂದರೆ ಇದನ್ನು ಸಾಮಾನ್ಯ ಸ್ಕೂಟರ್ ತರಹನೇ ಕೈಯಿಂದಲೇ ನಿರ್ವಹಿಸಬಹುದಾಗಿದೆ. ಮುಂಭಾಗದಲ್ಲಿರುವ ಎರಡು ಹ್ಯಾಂಡಲ್ ಬಾರ್ ಗಳು ಬ್ರೇಕ್ ಆಗಿದ್ದು, ಕಾಲಿನಲ್ಲಿ ಬ್ರೇಕ್ ಒತ್ತುವ ತೊಂದರೆಯಿಲ್ಲ.

ಹ್ಯಾಂಡ್ಲಿಂಗ್

ಹ್ಯಾಂಡ್ಲಿಂಗ್

ಅತ್ಯುತ್ತಮ ಹ್ಯಾಂಡ್ಲಿಂಗ್ ಗಾಗಿ ನೂತನ ನವಿಯಲ್ಲಿ ಟೆಲಿಸ್ಕಾಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಸಿಂಗಲ್ ಸೈಡ್ ಮೌಂಟೆಡ್ ರಿಯರ್ ಸಸ್ಪೆನ್ಷನ್ ಇರಲಿದೆ. ಇದು ರಸ್ತೆ ಹಂಪ್ ಗಳಲ್ಲಿ ಆರಾಮದಾಯಕ ಚಾಲನೆಯನ್ನು ಖಾತ್ರಿಪಡಿಸುತ್ತದೆ.

ಆಸನ ವ್ಯವಸ್ಥೆ

ಆಸನ ವ್ಯವಸ್ಥೆ

ಬೈಕ್ ಗೆ ಸಮಾನವಾದ ಆಸನ ವ್ಯವಸ್ಥೆಯನ್ನು ಕೊಡಲಾಗಿದ್ದು, ಅಗಲವಾದ ಸೀಟುಗಳು ಆರಾಮದಾಯಕ ಚಾಲನೆಯನ್ನು ನೀಡಲಿದೆ. ಆದರೂ ಸಣ್ಣ ಬೈಕ್ ಆಗಿರುವುದರಿಂದ ಉದ್ದನೆಯ ಸವಾರರಿಗಾಗಿ ಸ್ವಲ್ಪ ಕಷ್ಟಕರವಾಗಲಿದೆ.

ನಗರ ಸವಾರಿ

ನಗರ ಸವಾರಿ

ನವಿ ಒಟ್ಟಾರೆ ವಿನ್ಯಾಸವು ನಗರ ಚಾಲನೆಗೆ ಹೆಚ್ಚು ಹೊಂದಿಕೆಯಾಗಲಿದೆ. ಸಾಂದರ್ಭಿಕ ಹೆದ್ದಾರಿ ಪಯಣಕ್ಕೂ ಬಳಕೆ ಮಾಡುವುದರಿಂದ ತಪ್ಪೇನಿಲ್ಲ.

ಇನ್ಸ್ಟ್ರುಮೆಂಟ್ ಕ್ಲಸ್ಟರ್

ಇನ್ಸ್ಟ್ರುಮೆಂಟ್ ಕ್ಲಸ್ಟರ್

ಸರಳವಾದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನವಿಯಲ್ಲಿ ಕೊಡಲಾಗಿದೆ. ಅಂದರೆ ಟ್ರಿಪ್ ಮೀಟರ್, ಫ್ಯೂಯಲ್ ಗೇಜ್, ಕ್ಲಾಕ್, ಸೈಡ್ ಸ್ಟ್ಯಾಂಡ್ ವಾರ್ನಿಂಗ್ ಮುಂತಾದ ಕೊರತೆಗಳು ಕಾಣಿಸಿಕೊಳ್ಳಲಿದೆ.

ಇಂಧನ ಟ್ಯಾಂಕ್

ಇಂಧನ ಟ್ಯಾಂಕ್

3.8 ಲೀಟರ್ ಗಳ ಸಾಂಪ್ರದಾಯಿಕ ಇಂಧನ ಟ್ಯಾಂಕ್ ಕೊಡಲಾಗಿದೆ. ಅಲ್ಲದೆ ಇಂಧನ ಮರು ತುಂಬಿಸುವುದು ತುಂಬಾನೇ ಸುಲಭವಾಗಿದೆ.

ಸ್ಟೋರೆಜ್ ಜಾಗ

ಸ್ಟೋರೆಜ್ ಜಾಗ

ಸ್ಟೋರೆಜ್ ಜಾಗ ಬಗ್ಗೆ ಮಾತನಾಡುವುದಾದ್ದಲ್ಲಿ ಸೀಟು ಕೆಳಗಡೆಯಷ್ಟೇ ಸ್ವಲ್ಪ ಜಾಗವಿದ್ದು, ಸ್ಟೋರೆಜ್ ಕೊರತೆಯನ್ನು ಕಾಡಲಿದೆ.

ಹ್ಯಾಂಡಲ್ ಬಾರ್ ಲಾಕ್

ಹ್ಯಾಂಡಲ್ ಬಾರ್ ಲಾಕ್

ಬಲಬದಿಯ ಫಾರ್ಕ್ ನಲ್ಲಿ ಇಗ್ನಿಷನ್ ಇದ್ದು, ಹ್ಯಾಂಡಲ್ ಬಾರ್ ಲಾಕ್ ಇಂಧನ ಟ್ಯಾಂಕ್ ಕೆಳಗಡೆಯಾಗಿ ಕೊಡಲಾಗಿದೆ. ಸಾಮಾನ್ಯ ಬೈಕ್ ಗಳಲ್ಲಿರುವಂತೆಯೇ ಇವೆರಡನ್ನು ಒಂದೇ ವ್ಯವಸ್ಥೆಯಲ್ಲಿ ಒದಗಿಸಿದ್ದಲ್ಲಿ ಚೆನ್ನಾಗಿರುತ್ತಿತ್ತು.

ಬ್ರೇಕ್, ಮಿರರ್

ಬ್ರೇಕ್, ಮಿರರ್

ಬ್ರೇಕ್ ನಿಖರವಾಗಿದ್ದು, ಮಿರರ್ ಗಳು ಅತ್ಯುತ್ತಮ ಗೋಚರತೆಯನ್ನು ಪ್ರದಾನ ಮಾಡುತ್ತದೆ. ನೂತನ ನವಿ ಫ್ರಂಟ್ ಮತ್ತು ರಿಯರ್ ಡ್ರಮ್ ಬ್ರೇಕ್ ವ್ಯವಸ್ಥೆಯನ್ನು ಹೊಂದಿದೆ.

ಸ್ವಿಚ್

ಸ್ವಿಚ್

ಸಾಮಾನ್ಯ ಬೈಕ್ ಗಳಂತೆಯೇ ಎಡ ಬದಿಯಲ್ಲಿ ಹಾರ್ನ್, ಹೆಡ್ ಲೈಟ್ ಆನ್/ಆಫ್, ಲೊ/ಹೈ ಬೀಮ್ ಮತ್ತು ಬಲ ಬದಿಯಲ್ಲಿ ಎಲೆಕ್ಟ್ರಿಕ್ ಸ್ಟ್ಯಾರ್ಟ್ ವ್ಯವಸ್ಥೆಯಿರಲಿದೆ.

ನಿರ್ಮಾಣ ಗುಣಮಟ್ಟ

ನಿರ್ಮಾಣ ಗುಣಮಟ್ಟ

ಇತರೆ ಹೋಂಡಾ ದ್ವಿಚಕ್ರ ವಾಹನಗಳಿಗೆ ಹೋಲಿಸಿದಾಗ ನವಿ ನಿರ್ಮಾಣ ಗುಣಮಟ್ಟ ನಿರೀಕ್ಷಿತ ಮಟ್ಟವನ್ನು ತಲುಪದಿರುವುದು ಖೇದಕರ. ಪ್ಲಾಸ್ಟಿಕ್ ಗುಣಮಟ್ಟವು ಕಳಪೆ ಮಟ್ಟದಲ್ಲಿದೆ.

ಫೂಟ್ ಪೆಗ್

ಫೂಟ್ ಪೆಗ್

ಸವಾರ ಮತ್ತು ಹಿಂಬದಿ ಸವಾರಿ ಸವಾರನ ಫೂಟ್ ಪೆಗ್ ಗಳ ನಡುವಣ ಅಂತರ ಕಡಿಮೆಯಾಗಿರುವುದು ಚಾಲನೆ ವೇಳೆ ಇಕ್ಕಟ್ಟಿಗೆ ಸಿಲುಕಿಸುತ್ತದೆ.

ಎಲೆಕ್ಟ್ರಿಕಲ್ಸ್

ಎಲೆಕ್ಟ್ರಿಕಲ್ಸ್

ಹೋಂಡಾ ಎಲೆಕ್ಟ್ರಿಕಲ್ಸ್ ಬಗ್ಗೆ ಯಾವುದೇ ದೂರುಗಳಿಲ್ಲ. ಇದರ ಹೆಡ್ ಲೈಟ್ ರಾತ್ರಿಯಲ್ಲೂ ಅತ್ಯುತ್ತಮ ಗೋಚರತೆಯನ್ನು ಪ್ರದಾನ ಮಾಡುತ್ತದೆ.

ಬೆಲೆ, ಬಣ್ಣಗಳು

ಬೆಲೆ, ಬಣ್ಣಗಳು

ಹೋಂಡಾ ನವಿ ದೆಹಲಿ ಆನ್ ರೋಡ್ ಬೆಲೆ 42,616 ರು.ಗಳಾಗಿದೆ. ಅಲ್ಲದೆ ಪ್ಯಾಟ್ರಿಯಟ್ ರೆಡ್, ಶಾಸ್ತಾ ವೈಟ್, ಬ್ಲ್ಯಾಕ್, ಹಾಪರ್ ಗ್ರೀನ್ ಮತ್ತು ಸ್ಪಾರ್ಕಿ ಆರೆಂಜ್ ಗಳೆಂಬ ಐದು ಬಣ್ಣಗಳ ಆಯ್ಕೆಗಳಲ್ಲಿ ದೊರಕುತ್ತದೆ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಸದ್ಯಕ್ಕೆ ಹೋಂಡಾ ನವಿಗೆ ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ಪ್ರತಿಸ್ಪರ್ಧಿಗಳಿಲ್ಲ. ನಿಸ್ಸಂಶಯವಾಗಿಯೂ ದೇಶದಲ್ಲಿ ಹೋಂಡಾ ನವಿ ಯಶಸ್ಸು ಗ್ರಾಹಕರ ಅಭಿರುಚಿಗೆ ಬಿಟ್ಟದ್ದು.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ಸಾಮರ್ಥ್ಯ: 109.19 ಸಿಸಿ

ಶಕ್ತಿ: 7.8bhp @ 7000rpm

ತಿರುಗುಬುಲ: 8.9Nm @ 5500rpm

ಇಂಧನ ಟ್ಯಾಂಕ್, ಭಾರ, ಸೀಟು ಎತ್ತರ

ಇಂಧನ ಟ್ಯಾಂಕ್, ಭಾರ, ಸೀಟು ಎತ್ತರ

ಇಂಧನ ಟ್ಯಾಂಕ್ ಸಾಮರ್ಥ್ಯ: 3.8 ಲೀಟರ್

ಸೀಟು ಎತ್ತರ: 765 ಎಂಎಂ

ಭಾರ: 101 ಕೆ.ಜಿ

ಬ್ರೇಕ್

ಬ್ರೇಕ್

ಫ್ರಂಟ್: 130 ಎಂಎಂ ಡ್ರಮ್

ರಿಯರ್: 130 ಎಂಎಂ ಡ್ರಮ್

ಚಕ್ರಗಳು

ಚಕ್ರಗಳು

ಫ್ರಂಟ್: 90/90 12 ಇಂಚು

ರಿಯರ್: 90/100 10 ಇಂಚು

ಸಸ್ಪೆನ್ಷನ್

ಸಸ್ಪೆನ್ಷನ್

ಫ್ರಂಟ್: ಟೆಲಿಸ್ಕಾಪಿಕ್

ರಿಯರ್: ಸ್ಪ್ರಿಂಗ್ ಲೋಡಡ್ ಹೈಡ್ರಾಲಿಕ್ ಸಸ್ಪೆನ್ಷನ್

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 1805

ಅಗಲ: 748

ಎತ್ತರ: 1039

ಚಕ್ರಾಂತರ: 1286

ಗ್ರೌಂಡ್ ಕ್ಲಿಯರನ್ಸ್: 156

ಮುನ್ನಡೆ

ಮುನ್ನಡೆ

  • ವಿನ್ಯಾಸ,
  • ಆರಾಮದಾಯಕ,
  • ನಯವಾದ ಎಂಜಿನ್,
  • ಅತ್ಯುತ್ತಮ ಬ್ರೇಕ್,
  • ಮೈಲೇಜ್,
  • ಹೆಡ್ ಲೈಟ್,
  • ಮೋಜಿನ ಪಯಣ,
  • ಹಣಕ್ಕೆ ತಕ್ಕ ಮೌಲ್ಯ
  • ಹಿನ್ನಡೆ

    ಹಿನ್ನಡೆ

    • ನಿರ್ಮಾಣ ಗುಣಮಟ್ಟ,
    • ಸ್ಟೋರೆಜ್ ಜಾಗದ ಅಭಾವ,
    • ಸವಾರ ಮತ್ತು ಸಹ ಸವಾರನ ಫೂಟ್ ಪೆಗ್ ನಡುವಣ ಅಂತರ ಕಡಿಮೆ,
    • ಹ್ಯಾಂಡಲ್ ಬಾರ್ ಲಾಕ್ ವ್ಯವಸ್ಥೆ
    • ಅಂತಿಮ ತೀರ್ಪು

      ಅಂತಿಮ ತೀರ್ಪು

      ಒಟ್ಟಾರೆಯಾಗಿ ಹೋಂಡಾ ನವಿ ಹೊಸ ಚಾಲನಾ ಅನುಭೂತಿಯನ್ನು ನೀಡಲಿದೆ. ಮೋಜಿನ ಪಯಣ ಇಷ್ಟಪಡುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿರಲಿದೆ. ಬೈಕ್, ಸ್ಕೂಟರ್ ಹೊರತಾಗಿ ಒಂದು ವಿಶಿಷ್ಟ ವಾಹನದ ಹುಡುಕಾಟದಲ್ಲಿದ್ದರೆ ಹೋಂಡಾ ನವಿ ಪರಿಪೂರ್ಣ ಆಯ್ಕೆಯಾಗಿರಲಿದೆ.

      ಅಂತಿಮ ತೀರ್ಪು

      ಅಂತಿಮ ತೀರ್ಪು

      ಸ್ಕೂಟರ್, ಬೈಕ್ ಹೊರತಾಗಿ ಮಿನಿ ಬೈಕ್ ಎಂಬುದಾಗಿ ವಿಶ್ಲೇಷಿಸಬಹುದಾದ ಹೋಂಡಾ ನವಿ ಎಲ್ಲ ವಿಭಾಗದ ಬಳಕೆದಾರರಿಗೆ ಹೊಂದಿಕೆಯಾಗುವ ಬೈಕ್ ಅಲ್ಲ. ಹಾಗಾಗಿ ನಿಮಗೆ ಮೋಜಿನ ಸವಾರಿಗಾಗಿ ಇಂತಹದೊಂದು ಬೈಕ್ ನ ಅಗತ್ಯವಿದೆಯೇ ಎಂಬುದನ್ನು ತಿಳಿದುಕೊಂಡು ಇದನ್ನು ಖರೀದಿಸಿದ್ದಲ್ಲಿ ನಿಮ್ಮ ಪಯಣವು ಉಲ್ಲಾಸದಾಯಕವಾಗಲಿದೆ. ಹ್ಯಾಪಿ ಡ್ರೈವಿಂಗ್!

      ಚಿತ್ರಗಳಲ್ಲಿ

      ಹೋಂಡಾ ನವಿ ಆಕರ್ಷಕ ನೋಟ

      ಚಿತ್ರಗಳಲ್ಲಿ

      ಹೋಂಡಾ ನವಿ ಹ್ಯಾಂಡಲ್ ಬಾರ್

      ಚಿತ್ರಗಳಲ್ಲಿ

      ಹೋಂಡಾ ನವಿ ಟೈಲ್ ಲ್ಯಾಂಪ್

      ಚಿತ್ರಗಳಲ್ಲಿ

      ಹೋಂಡಾ ನವಿ ಮಿರರ್

      ಚಿತ್ರಗಳಲ್ಲಿ

      ಹೋಂಡಾ ನವಿ ಹಿಂಬದಿ ನೋಟ

      ಚಿತ್ರಗಳಲ್ಲಿ

      ಐಕಾನಿಕ್ ರಾಜದೂತ ಜಿಟಿಎಸ್ 175 Vs ಹೋಂಡಾ ನವಿ

      ಇವನ್ನೂ ಓದಿ...

      ಟಿವಿಎಸ್ ವಿಕ್ಟರ್ ಅಬ್ಬರ; ಸಮಗ್ರ ಚಾಲನಾ ವಿಮರ್ಶೆ ಓದಿ

      ಇವನ್ನೂ ಓದಿ...

      ಮೊದಲ ನೋಟ; ಬಲಿಷ್ಠ ಬಜಾಜ್ ವಿ15 ಖರೀದಿಗೆ ಯೋಗ್ಯವೇ?

Most Read Articles

Kannada
English summary
Honda Navi First Ride: It's Never Too Late To Navigate
Story first published: Tuesday, April 26, 2016, 11:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X