Triumph Speed 400 ರಿವ್ಯೂ... ರಾಯಲ್ ಎನ್‌ಫೀಲ್ಡ್‌ಗೆ ಹೇಳಿಮಾಡಿಸಿದ ಎದುರಾಳಿ

ಭಾರತದಲ್ಲಿ ಅಗ್ಗವಾಗಿ 350 ಮತ್ತು 500cc ಬೈಕ್‌ಗಳು ಬೇಕೆಂದರೆ ಎಲ್ಲರೂ ರಾಯಲ್ ಎನ್‌ಫೀಲ್ಡ್‌ನತ್ತ ಮುಖ ಮಾಡುತ್ತಿದ್ದರು. ಏಕೆಂದರೆ 350 ಮತ್ತು 500cc ನಡುವೆ ಬರುವ ಬಹುತೇಕ ಅಂತರಾಷ್ಟ್ರೀಯ ಬೈಕ್‌ಗಳು ತುಂಬಾ ದುಬಾರಿಯಾಗಿರುತ್ತವೆ. ಹಾಗಾಗಿಯೇ ಸಿಂಗಲ್-ಸಿಲಿಂಡರ್ ಮಿಡಲ್‌ವೇಟ್ ಮೋಟಾರ್‌ಸೈಕಲ್ ಬೇಕಾದರೆ ಭಾರತೀಯರು ರಾಯಲ್ ಎನ್‌ಫೀಲ್ಡ್‌ನತ್ತ ಮುಖ ಮಾಡಬೇಕಾಗಿತ್ತು.

ಉಳಿದಂತೆ ಜಾವಾ-ಯೆಜ್ಡಿ ಮತ್ತು ಹೋಂಡಾ ಕೂಡ 350cc ವಿಭಾಗದಲ್ಲಿ ಕಣಕ್ಕಿಳಿದಿರುವುದನ್ನು ನಾವು ನೋಡಿದ್ದೇವೆ. ಆದರೆ ರಾಯಲ್ ಎನ್‌ಫೀಲ್ಡ್ ಬ್ರಿಟೀಷರ ಒಡೆತನದಲ್ಲಿದ್ದ ತುಂಬಾ ಹಳೆಯ ಕಂಪನಿಯಾಗಿದ್ದು, ಭಾರತೀಯರ ಹಿಡಿತಕ್ಕೆ ಬಂದರೂ ಅಂದಿನಿಂದ ಇಂದಿಗೂ ತನ್ನ ಬ್ರಾಂಡ್ ಮೌಲ್ಯವನ್ನು ಉಳಿಸಿಕೊಂಡು ಬಂದಿರುವುದೇ ಗ್ರಾಹಕರಲ್ಲಿ ತಮ್ಮ ಬೇಡಿಕೆಗೆ ಪ್ರಮುಖ ಕಾರಣವಾಗಿದೆ.

ಹಲವು ದಶಕಗಳಿಂದ 350 ಮತ್ತು 500cc ಒಳಗಿನ ಬೈಕ್‌ಗಳ ಬೇಡಿಕೆಯಲ್ಲಿ ಅಗ್ರಸ್ಥಾನದಲ್ಲಿದ್ದ ರಾಯಲ್ ಎನ್‌ಫೀಲ್ಡ್‌ಗೆ ಭೀಕರ ಪೈಪೋಟಿ ನೀಡಲು ಅಂತರಾಷ್ಟ್ರೀಯ ಬ್ರಾಂಡ್‌ವೊಂದು ದೇಶೀಯ ಬ್ರಾಂಡ್‌ನೊಂದಿಗೆ ಕೈ ಜೋಡಿಸಿ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಸಜ್ಜಾಗಿಬಿಟ್ಟಿದೆ. ಟ್ರಯಂಫ್ ಮತ್ತು ಬಜಾಜ್‌ ಪಾಲುದಾರಿಕೆಯಲ್ಲಿ ಹೊಸ ಸ್ಪೀಡ್ 400 ಇದೀಗ ಬಿಡುಗಡೆಯಾಗಿದೆ.

ಈ ಟ್ರಯಂಫ್ ಸ್ಪೀಡ್ 400 ರಾಯಲ್ ಎನ್‌ಫೀಲ್ಡ್‌ಗೆ ಮೊದಲ ಎಚ್ಚರಿಕೆ ಗಂಟೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಇಲ್ಲಿ ತಿಳಿಸಿಕೊಡಲಿದ್ದೇವೆ. ಕಂಪನಿಯು ಹೊಸ ಟ್ರಯಂಫ್ ಸ್ಪೀಡ್ 400 ಅನ್ನು ರೈಡ್ ಮಾಡಲು ನಮ್ಮ ಡ್ರೈವ್‌ಸ್ಪಾರ್ಕ್ ತಂಡಕ್ಕೆ ವಾಹನವನ್ನು ನೀಡಿದ್ದು, ನಾವು ಪುಣೆಯಲ್ಲಿ ಹೊಸ ಟ್ರಯಂಫ್ ಸ್ಪೀಡ್ 400 ಅನ್ನು ಎಲ್ಲಾ ವಿಧಗಳಲ್ಲೂ ಬೈಕ್ ಓಡಿಸಿ ರಿವ್ಯೂ ನೀಡಿದ್ದೇವೆ.

new-triumph-speed-400-review

ಟ್ರಯಂಫ್ ಸ್ಪೀಡ್ 400 ವಿನ್ಯಾಸ ಮತ್ತು ವೈಶಿಷ್ಟ್ಯಗಳು: ಹೊಸ ಸ್ಪೀಡ್ 400 ಅನ್ನು ಟ್ರಯಂಫ್‌ನ ಹಿಂಕ್ಲೆ ಪ್ರಧಾನ ಕಛೇರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸ್ಪೀಡ್ 400 ಟ್ರಯಂಫ್ ತನ್ನ ದೊಡ್ಡ ಆಧುನಿಕ ಕ್ಲಾಸಿಕ್ ಮಾದರಿಗಳಂತೆ ಕಂಡರೂ ಕೆಲ ವಿಷಯಗಳಲ್ಲಿ ಅವುಗಳನ್ನು ಹಿಂದಿಕ್ಕುವ ವಿನ್ಯಾಸವನ್ನು ಹೊಂದಿದೆ. ಇದರ ಟ್ಯಾಂಕ್, ಫಿನ್ಡ್ ಇಂಜಿನ್ ಹೆಡ್, ಬೋಲ್ಡ್ ಗ್ರಾಫಿಕ್ಸ್ ಮತ್ತು ಅಪ್‌ಸ್ವೆಪ್ಟ್ ಎಕ್ಸಾಸ್ಟ್‌ಗಳು ಲೈನ್‌ಅಪ್‌ನಲ್ಲಿಯೇ ಹೊಸದಾಗಿ ನೀಡಲಾಗಿದೆ.

ಹೊಸ ಸ್ಪೀಡ್ 400 ರ ವಿನ್ಯಾಸದ ಇತರ ಮುಖ್ಯಾಂಶಗಳು, ಫುಲ್-ಎಲ್‌ಇಡಿ ಲೈಟಿಂಗ್ ಸೆಟಪ್‌ನೊಂದಿಗೆ ವಿಶಿಷ್ಟವಾದ ಟ್ರಯಂಫ್ ಸಿಗ್ನೇಚರ್ ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ ಡ್ಯುಯಲ್ ಫಾರ್ಮ್ಯಾಟ್ ಇನ್ಸ್ಟ್ರೂಮೆಂಟ್‌ಗಳೊಂದಿಗೆ ದೊಡ್ಡ ಅನಲಾಗ್ ಸ್ಪೀಡೋಮೀಟರ್ ಮತ್ತು LCD ಸ್ಕ್ರೀನ್, ಹ್ಯಾಂಡಲ್‌ಬಾರ್-ಮೌಂಟೆಡ್ ಸ್ಕ್ರಾಲ್ ಬಟನ್‌ನೊಂದಿಗೆ ಬರುತ್ತದೆ.

new-triumph-speed-400-review

ವಿಶಿಷ್ಟವಾದ ವೈಶಿಷ್ಟ್ಯಗಳನ್ನು ನೋಡುವುದಾದರೆ ಗೋಲ್ಡನ್ USD ಫೋರ್ಕ್‌ಗಳು, ನ್ಯಾಚುರಲ್ ಸಿಂಗಲ್-ಸೀಟ್ ಸೆಟಪ್, ಸ್ವಲ್ಪ ಹಿಂಬದಿ-ಸೆಟ್ ಫುಟ್‌ಪೆಗ್‌ಗಳು ಮತ್ತು ಅಲ್ಯೂಮಿನಿಯಂ 10-ಸ್ಪೋಕ್ ಅಲಾಯ್ ವೀಲ್‌ಗಳು ಅಪೊಲೊ/ಎಂಆರ್‌ಎಫ್ ಟೈರ್‌ಗಳನ್ನು ಒಳಗೊಂಡಿವೆ. ಸ್ಟೀರಿಂಗ್ ಲಾಕ್, ಆಂಟಿ-ಥೆಫ್ಟ್ ಇಮೊಬಿಲೈಜರ್ ಮತ್ತು USB-C ಚಾರ್ಜಿಂಗ್ ಪೋರ್ಟ್ ಸಹ ಸ್ಪೀಡ್ 400 ನಲ್ಲಿ ಪ್ರಮಾಣಿತವಾಗಿ ಸಿಗುತ್ತವೆ.

ಬಣ್ಣದ ಆಯ್ಕೆಗಳನ್ನು ನೋಡುವುದಾದರೆ, ಕಾರ್ನಿವಲ್ ರೆಡ್ ಜೊತೆಗೆ ಫ್ಯಾಂಟಮ್ ಬ್ಲ್ಯಾಕ್, ಕ್ಯಾಸ್ಪಿಯನ್ ಬ್ಲೂ ಜೊತೆಗೆ ಸ್ಟಾರ್ಮ್ ಗ್ರೇ ಮತ್ತು ಫ್ಯಾಂಟಮ್ ಬ್ಲ್ಯಾಕ್ ಜೊತೆಗೆ ಸ್ಟಾರ್ಮ್ ಗ್ರೇ ಬಣ್ಣಗಳೊಂದಿಗೆ ಸ್ಪೀಡ್ 400 ಬರುತ್ತದೆ. ಇನ್ನು ಟ್ರಯಂಫ್ ಸ್ಪೀಡ್ 400 ಎಂಜಿನ್, ವಿಶೇಷಣಗಳು ಮತ್ತು ರೈಡ್ ಮಾಡಲು ಹೇಗಿದೆ ಎಂಬುದನ್ನು ಕೆಳಗೆ ವಿವರವಾಗಿ ತಿಳಿಯೋಣ.

new-triumph-speed-400-review

ಟ್ರಯಂಫ್ ಸ್ಪೀಡ್ 400 ಬ್ರಾಂಡ್‌ನ ಹೊಸ TR ಸಿರೀಸ್ ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಒಳಗೊಂಡಿರುವ ಮೊದಲ ಮೋಟಾರ್‌ಸೈಕಲ್ ಆಗಿದೆ. ಇದು ಇಪ್ಪತ್ತನೇ ಶತಮಾನದ ಆರಂಭದಲ್ಲಿ ರೇಸಿಂಗ್ ಸಿಂಗಲ್ಸ್‌ಗೆ ಮತ್ತು ನಿರ್ದಿಷ್ಟವಾಗಿ ಸಿಕ್ಸ್ ಡೇ ಟ್ರಯಲ್ ಆಫ್‌ರೋಡ್ ಸ್ಪರ್ಧೆಗಾಗಿ ನೀಡಲಾಗಿದ್ದ ಇರೀಸ್ ಆಗಿತ್ತು ಎಂದು ತಿಳಿದುಬಂದಿದೆ.

ಹೊಸ ಟ್ರಯಂಫ್ ಸ್ಪೀಡ್ 400 ನ 398cc ಸಿಂಗಲ್-ಸಿಲಿಂಡರ್ ಎಂಜಿನ್ ಫ್ಯೂಲ್-ಇಂಜೆಕ್ಟೆಡ್ ಮತ್ತು ಲಿಕ್ವಿಡ್-ಕೂಲ್ಡ್ ನೊಂದಿಗೆ ಬರುತ್ತದೆ. ನಾಲ್ಕು-ವಾಲ್ವ್ DOHC ಎಂಜಿನ್ ಘರ್ಷಣೆಯನ್ನು ಕಡಿಮೆ ಮಾಡುವ DLC ಲೇಪನಗಳೊಂದಿಗೆ ಫಿಂಗರ್-ಫಾಲೋವರ್ ವಾಲ್ವೆಟ್ರೇನ್ ಹೊಂದಿದೆ. ಹಾಗಾಗಿ ಈ ಎಂಜಿನ್ 39.5bhp ಮತ್ತು 37.5 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ.

new-triumph-speed-400-review

6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಬಲ-ಬದಿಯ ಚೈನ್-ಡ್ರೈವ್ ಸೆಟಪ್ ಎಂಜಿನ್‌ಗೆ ಹಿಂದಿನ ಚಕ್ರಕ್ಕೆ ಪವರ್ ನೀಡಲು ಸಹಾಯ ಮಾಡುತ್ತದೆ. ಜೊತೆಗೆ ಓಡಿಸುವಾಗ ಮೋಜಿಗಾಗಿ ಹೊಸ ಸಿಂಗ ಟೋನ್ ಅಪ್‌ಸ್ವೆಪ್ಟ್ ಎಕ್ಸಾಸ್ಟ್ ನೀಡಲಾಗಿದೆ. ಟ್ರಯಂಫ್‌ನ ಹೊಸ ಸ್ಪೀಡ್ 400 ಹೈಬ್ರಿಡ್ ಕೊಳವೆಯಾಕಾರದ ಸ್ಟೀಲ್ ಫ್ರೇಮ್ ಸೆಟಪ್ ಮತ್ತು ಬೋಲ್ಟ್-ಆನ್ ರಿಯರ್ ಸಬ್‌ಫ್ರೇಮ್ ಅನ್ನು ಒಳಗೊಂಡಿದೆ.

ಮುಂಭಾಗದಲ್ಲಿ 43mm ಅಪ್‌ಸೈಡ್ ಡೌನ್ ದೊಡ್ಡ ಪಿಸ್ಟನ್ ಫೋರ್ಕ್‌ಗಳನ್ನು ಹೊಂದಿದೆ, ಆದರೆ ಹಿಂಭಾಗದಲ್ಲಿ ಇದು ಮೊನೊಶಾಕ್ ಜೊತೆಗೆ ಪ್ರಿಲೋಡ್ ಅಡ್ಜಸ್ಟಬಲ್ ಮತ್ತು ಟ್ವಿನ್-ಸೈಡ್ ಅಲ್ಯೂಮಿನಿಯಂ ಸ್ವಿಂಗರ್ಮ್ ಅನ್ನು ಹೊಂದಿದೆ. ಸ್ಪೀಡ್ 400 ಮುಂಭಾಗದಲ್ಲಿ 140 ಎಂಎಂ ಮತ್ತು ಹಿಂಭಾಗದಲ್ಲಿ 130 ಎಂಎಂ ಡಿಸ್ಕ್ ಹೊಂದಿದೆ.

new-triumph-speed-400-review

110/70 (ಮುಂಭಾಗ) ಮತ್ತು 150/60 (ಹಿಂಭಾಗ) ಟೈರ್‌ಗಳೊಂದಿಗೆ 17-ಇಂಚಿನ ಅಲಾಯ್ ವೀಲ್‌ಗಳಲ್ಲಿ ಹೊಸ ಟ್ರಯಂಫ್ ಸ್ಪೀಡ್ 400 ನ ಟೈರ್‌ಗಳನ್ನು ನೀಡಲಾಗಿದೆ. 176kg ಸ್ಪೀಡ್ 400 ಅನ್ನು ಸಂಪೂರ್ಣ ನಿಲುಗಡೆಗೆ ತರಲು, ಟ್ರಯಂಫ್ ರೋಡ್‌ಸ್ಟರ್ ಅನ್ನು ಡ್ಯುಯಲ್-ಚಾನೆಲ್ ABS ಮೂಲಕ ಎರಡೂ ತುದಿಗಳಲ್ಲಿ ಡಿಸ್ಕ್‌ಗಳನ್ನು ಅಳವಡಿಸಿದೆ.

ಮುಂಭಾಗದ ಬ್ರೇಕ್ ನಾಲ್ಕು-ಪಿಸ್ಟನ್ ರೇಡಿಯಲ್ ಕ್ಯಾಲಿಪರ್‌ಗಳಿಂದ ಕ್ಲ್ಯಾಂಪ್ ಮಾಡಲಾದ 300 ಎಂಎಂ ಡಿಸ್ಕ್ ನೀಡಲಾಗಿದೆ. ಹಾಗೆಯೇ ಹಿಂದಿನ ಆಂಕರ್ ಒಂದು ಪಿಸ್ಟನ್ ಕ್ಯಾಲಿಪರ್ನಿಂದ ಕ್ಲ್ಯಾಂಪ್ ಮಾಡಲಾದ 230mm ಡಿಸ್ಕ್ ನೀಡಲಾಗಿದೆ. ಟ್ರಯಂಫ್ ಸ್ಪೀಡ್ 400 ಡ್ಯುಯಲ್-ಚಾನೆಲ್ ಎಬಿಎಸ್, ರೈಡ್-ಬೈ-ವೈರ್ ಥ್ರೊಟಲ್, ಸ್ವಿಚ್ ಮಾಡಬಹುದಾದ ಟ್ರಾಕ್ಷನ್ ಕಂಟ್ರೋಲ್ ಮತ್ತು ಟಾರ್ಕ್ ಅಸಿಸ್ಟ್ ಕ್ಲಚ್ ಸೇರಿದಂತೆ ಇತ್ತೀಚಿನ ರೈಡರ್-ಕೇಂದ್ರಿತ ತಂತ್ರಜ್ಞಾನವನ್ನು ಹೊಂದಿದೆ.

new-triumph-speed-400-review

ಟ್ರಯಂಫ್ ಸ್ಪೀಡ್ 400 ರೈಡಿಂಗ್ ಇಂಪ್ರೆಷನ್ಸ್: ರಸ್ತೆಯಲ್ಲಿ ಟ್ರಯಂಫ್ ಸ್ಪೀಡ್ 400 ಹಿಂದಿನ ಸಿಂಗಲ್ ಸಿಲಿಂಡರ್ ಥಂಪರ್‌ಗಳನ್ನು ಇಷ್ಟಪಡುವವರಿಗಾಗಿ ಅಲ್ಲ. ಇದು 5 ನೇ ಗೇರ್‌ನಲ್ಲಿ 120 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುವ ಅತ್ಯಂತ ಟ್ರಾಕ್ಟಬಲ್ ದೈತ್ಯವಾಗಿದೆ. TR ಇಂಜಿನ್ ಒಂದು ಹುಚ್ಚು ಹಿಡಿಸುವ ರೈಡರ್ ಬೀಸ್ಟ್ ಎಂದೇ ಹೇಳಬಹುದು.

ಸ್ಪೀಡ್ 400, 3000rpm ನಿಂದ 9000rpm ವರೆಗೆ ಅದರ ಗರಿಷ್ಠ ಟಾರ್ಕ್ ಔಟ್‌ಪುಟ್‌ನ ಶೇ 80 ರಷ್ಟು ನೀಡುತ್ತದೆ ಎಂದು ಟ್ರಯಂಫ್ ಹೇಳಿಕೊಂಡಿದೆ. ಸ್ಮೂತ್-ಶಿಫ್ಟಿಂಗ್ ಗೇರ್‌ಬಾಕ್ಸ್ ಮತ್ತು ಲೈಟ್ ಕ್ಲಚ್ ನೊಂದಿಗೆ ಮೊದಲ ಮೂರು ಗೇರ್‌ಗಳಲ್ಲಿ, ಸ್ಪೀಡ್ 400 ನಿಮ್ಮ ಒಳಗಿನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ. ಗೇರ್‌ಗಳು ಹೆಚ್ಚಾದಂತೆ ವೀಲಿ ಹೊಡೆಯುವ ಆಸೆಯಾಗುತ್ತದೆ.

new-triumph-speed-400-review

ಫ್ರೀ-ರಿವಿವಿಂಗ್ ಎಂಜಿನ್ ಮತ್ತು ನಯವಾದ ಗೇರ್‌ಬಾಕ್ಸ್ ಕೇವಲ 2.8 ಸೆಕೆಂಡುಗಳಲ್ಲಿ 60km/h ವೇಗ ತಲುಪುತ್ತದೆ. 100km/h ವೇಗ ತಲುಪಲು 7 ಸೆಕೆಂಡ್‌ಗಳ ಸಮಯ ತೆಗೆದುಕೊಳ್ಳುತ್ತದೆ. ರೈಡ್-ಬೈ-ವೈರ್ ಸಿಸ್ಟಮ್ ಅನ್ನು ಬಳಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ಒಮ್ಮೆ ಇದಕ್ಕೆ ನಾವು ಸಿಂಕ್ ಆದ್ರೆ ಸಾಕು ಅದರ ಪವರ್ ಹೊರತೆಗೆಯಲು ಹುಚ್ಚುಕುದುರೆಗಳಾಗುವುದರಲ್ಲಿ ಅನುಮಾನವೇ ಇಲ್ಲ.

ಟ್ರಯಂಫ್ ಸ್ಪೀಡ್ 400 ಅನ್ನು 145km/h ಗೆ ಸೀಮಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಆದಾರೆ ನಾವು ಸ್ಪೀಡೋ ಮೀಟರ್‌ನಲ್ಲಿ 165km/h ವೇಗವನ್ನು ತಲುಪಿದ್ದು ಕೂಡ ನೋಡಿದ್ದೇವೆ. ಸ್ಪೀಡ್ 400 ನ ರೈಡರ್ ಸೀಟ್ ನೇರ ಸವಾರಿ ಸ್ಥಾನದೊಂದಿಗೆ (ಸ್ವಲ್ಪ ಹಿಂಬದಿಯ ಫುಟ್‌ಪೆಗ್‌ಗಳು) ಓಡಿಸಲು ಸುಲಭವಾಗಿದೆ. ಆದರೆ ಪಿಲಿಯನ್‌ಗೆ ಕುಳಿತುಕೊಳ್ಳಲು ಸ್ಥಾನವು ತುಸು ಇಕ್ಕಟ್ಟಾಗಿದೆ.

new-triumph-speed-400-review

ಸ್ಪೀಡ್ 400 ರ ಸಸ್ಪೆನ್ಷನ್, ವೀಲ್‌ಗಳು ಮತ್ತು ಟೈರ್‌ಗಳನ್ನು ನಿರ್ದಿಷ್ಟ ಮಾರುಕಟ್ಟೆಗಳಿಗೆ ವಿಭಿನ್ನವಾಗಿ ಟ್ಯೂನ್ ಮಾಡಲಾಗಿದೆ ಎಂದು ಟ್ರಯಂಫ್ ಹೇಳಿಕೊಂಡಿದೆ. ಅದಕ್ಕಾಗಿಯೇ ಭಾರತೀಯ ಆವೃತ್ತಿಯು ಸ್ವಲ್ಪ ಭಾರವಾಗಿರುತ್ತದೆ. ಇದರಿಂದಾಗಿ ಸಸ್ಪೆನ್ಶನ್ ಸೆಟಪ್ ನಮ್ಮ ರಸ್ತೆಗಳ ಉಬ್ಬುಗಳು ಮತ್ತು ಹಳಿಗಳನ್ನು ಸುಲಭವಾಗಿ ನಿಭಾಯಿಸುತ್ತದೆ. ಭಾರವಾದ ಸವಾರರಿಗೆ ಹಿಂಭಾಗದ ಮೊನೊಶಾಕ್ ಸ್ವಲ್ಪ ಗಟ್ಟಿಯಾಗಿರುವ ಅನುಭಾವ ನೀಡುತ್ತದೆ.

ಟ್ರಿಪಲ್-ಅಂಕಿಯ ವೇಗದಲ್ಲಿದ್ದಾಗ ಖಾಲಿ ರಸ್ತೆ ಸಿಕ್ಕರೆ ಸ್ಪೀಡ್ 400 ನ ಸ್ಥಿರತೆಯು ಹೆಚ್ಚಿನ ವೇಗವನ್ನು ತಲುಪಲು ನಿಮ್ಮನ್ನು ಪ್ರೋತ್ಸಾಹಿಸುತ್ತದೆ. ಹಾಗೆಯೇ ಇದರಲ್ಲಿ ಒಮ್ಮೆ ಬ್ರೇಕ್‌ಗಳನ್ನು ಹಾಕಿದ್ರೆ 300mm ಫ್ರಂಟ್ ಡಿಸ್ಕ್ ಮತ್ತು 230mm ಹಿಂಭಾಗವು ಸ್ವೀಕಾರಾರ್ಹ ಬ್ರೇಕಿಂಗ್ ಪವರ್‌ ಉತ್ತಮ ನಿಲುಗಡೆಯನ್ನು ಒದಗಿಸುತ್ತದೆ. ಇದರಲ್ಲಿನ ABS ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಟ್ರಯಂಫ್ ಸ್ಪೀಡ್ 400 ಕುರಿತು ಅಂತಿಮ ಅಭಿಪ್ರಾಯ: ಟ್ರಯಂಫ್ ಮತ್ತು ಬಜಾಜ್ ನಡುವಿನ ಬ್ರಿಟಿಷ್-ಭಾರತೀಯ ಪಾಲುದಾರಿಕೆಯು ರಾಯಲ್ ಎನ್‌ಫೀಲ್ಡ್‌ಗೆ ಗಟ್ಟಿ ಪೈಪೋಟಿ ನೀಡುವಲ್ಲಿ ಟ್ರಯಂಫ್ ಸ್ಪೀಡ್ 400 ಸೂಕ್ತ ಮಾದರಿಯಾಗಿದೆ. ಇದು RE ನ ಟಾಪ್ ಮಾದರಿಗಳನ್ನು ಹೊಡೆಯುವ ಪವರ್ ಹೊಂದಿದೆ. ಆದರೆ ಒಂದಂತು ನಿಜ ಇದರ ಪರ್ಫಾಮೆನ್ಸ್ ಭಾರತೀಯ ರಸ್ತೆಗಳಿಗೂ ಮೀರಿಸಿದ್ದಾಗಿದೆ.

More from DriveSpark

Article Published On: Friday, July 14, 2023, 17:00 [IST]
English summary
New triumph speed 400 review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+