ದೇಶದ ಟಾಪ್ ಫೈವ್ 200-250ಸಿಸಿ ಬೈಕ್‌ಗಳು

By Nagaraja

ಒಂದು ದಶಕದಷ್ಟು ಹಿಂದೆ ಸರಿದು ನೋಡಿದರೆ 2000ನೇ ಕಾಲಘಟ್ಟದಲ್ಲಿ ದೇಶದಲ್ಲಿ 200ಸಿಸಿ ಬೈಕ್‌ಗಳ ಕೊರತೆ ಕಾಡುತ್ತಿತ್ತು. ಇಲ್ಲಿ ನಿರ್ವಹಣಾ ಬೈಕ್‌ಗಳ ಬಗ್ಗೆ ಗಮನ ವಹಿಸಿದಾಗ ಪಲ್ಸರ್ ಹಾಗೂ ಕರಿಶ್ಮಾಗಳಂತಹ 150ಸಿಸಿ ಬೈಕ್‌ಗಳ ಮಾತ್ರ ಉಲ್ಲೇಖವಾಗುತ್ತಿದ್ದವು. ಇನ್ನು ಬೃಹತ್ ಎಂಜಿನ್ ಮಾನದಂಡಗಳನ್ನು ಹೊಂದಿರುವ ಬೈಕ್‌ಗಳನ್ನು ಪರಿಗಣಿಸಿದಾಗ ರಾಯಲ್ ಎನ‌ಫೀಲ್ಡ್ ಕ್ರೂಸರ್ ಬೈಕ್‌ಗಳು ನೆನಪಿಗೆ ಬರುತ್ತಿದ್ದವು.

ಆದರೆ 2010ರ ಕಾಲಘಟ್ಟ ತಲುಪುತ್ತಿದ್ದಂತೆಯೇ ದೇಶದ ಪ್ರಯಾಣಿಕ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡುಬಂದಿದೆ. ದೇಶವು ವಿದೇಶಿ ಮಾರುಕಟ್ಟೆಗಳ ಪ್ರಭಾವಕ್ಕೊಳಗಾಗಿರುವುದೇ ಇದರ ಹಿಂದಿರುವ ಪ್ರಮುಖ ಕಾರಣವಾಗಿದೆ.

ಇದರೊಂದಿಗೆ ಸ್ಪೋರ್ಟ್ಸ್ ಬೈಕ್ ಇಷ್ಟಪಡುವ ಭಾರತೀಯ ಗ್ರಾಹಕರಿಗೆ 200ರಿಂದ 250ಸಿಸಿ ವಿಭಾಗಗಳಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ. ಇದರಂತೆ ವಿಶೇಷವಾಗಿಯೂ ನಿರ್ವಹಣಾ ಬೈಕ್ ಖರೀದಿಸುವ ಯೋಜನೆ ಹಾಕಿಕೊಂಡಿರುವ ಓದುಗರಿಗಾಗಿ ನಮ್ಮ ಈ ಲೇಖನದಲ್ಲಿ 200ಸಿಸಿಯಿಂದ ತೊಡಗಿ 250ಸಿಸಿ ವರೆಗಿನ ಬೈಕ್‌ಗಳ ಮೈಲೇಜ್, ಗರಿಷ್ಠ ವೇಗತೆ, ನಿರ್ವಹಣೆ ಹಾಗೂ ದರಗಳ ಬಗ್ಗೆ ಹೋಲಿಕೆ ಮಾಡಲಿದ್ದೇವೆ.

ಬಜಾಜ್ ಪಲ್ಸರ್ 220ಎಫ್

ಬಜಾಜ್ ಪಲ್ಸರ್ 220ಎಫ್

  • ದರ: ರು. 84,055 (ಎಕ್ಸ್ ಶೋ ರೂಂ ದೆಹಲಿ)
  • ಸರಾಸರಿ ಮೈಲೇಜ್: 45 kmpl
  • ಇಂಧನ ಟ್ಯಾಂಕ್: 15 ಲೀಟರ್
  • ಎಂಜಿನ್ ನಿರ್ವಹಣೆ: 200ಸಿಸಿ, ಪವರ್- 21.05 ಪಿಎಸ್ ಪವರ್ ಮತ್ತು 19.12 ಎನ್‌ಎಂ ಟಾರ್ಕ್
  • ಗರಿಷ್ಠ ವೇಗತೆ: ಗಂಟೆಗೆ 135 ಕೀ.ಮೀ.
  • ಬಜಾಜ್ ಪಲ್ಸರ್ 220ಎಫ್

    ಬಜಾಜ್ ಪಲ್ಸರ್ 220ಎಫ್

    ಒಂದು ಕಾಲದಲ್ಲಿ ಬಜಾಜ್ ಪಲ್ಸರ್ 220ಎಫ್ ದೇಶದ ಅತ್ಯಂತ ವೇಗದ ಬೈಕ್‌ ಎಂದೆನಿಸಿಕೊಂಡಿತ್ತು. ಆದರೆ ಸಮಯ ಸಾಗಿದಂತೆ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳ ಸಂಖ್ಯೆ ಹೆಚ್ಚಾಗತೊಡಗಿದ ಬಳಿಕ ಬಜಾಜ್ ಪಲ್ಸರ್‌ರನ್ನು 200 ಎನ್‌ಎಸ್ ಆವೃತ್ತಿ ಹಿಮ್ಮೆಟ್ಟಿಸಿತ್ತು.

    ಹೀರೊ ಮೊಟೊಕಾರ್ಪ್ ಕರಿಶ್ಮಾ ಝಡ್‌ಎಂಆರ್

    ಹೀರೊ ಮೊಟೊಕಾರ್ಪ್ ಕರಿಶ್ಮಾ ಝಡ್‌ಎಂಆರ್

    • ದರ: 1 ಲಕ್ಷ ರು.ಗಳ ಅಸುಪಾಸಿನಲ್ಲಿ (ಆನ್ ರೋಡ್)
    • ಸರಾಸರಿ ಮೈಲೇಜ್: 40 kmpl
    • ಇಂಧನ ಟ್ಯಾಂಕ್: 16 ಲೀಟರ್
    • ಎಂಜಿನ್ ನಿರ್ವಹಣೆ: 223ಸಿಸಿ, ಪವರ್- 17.6 ಪಿಎಸ್ ಪವರ್ ಮತ್ತು 18.35 ಎನ್‌ಎಂ ಟಾರ್ಕ್
    • ಗರಿಷ್ಠ ವೇಗತೆ: ಗಂಟೆಗೆ 130 ಕೀ.ಮೀ.
    • ಹೀರೊ ಮೊಟೊಕಾರ್ಪ್ ಕರಿಶ್ಮಾ ಝಡ್‌ಎಂಆರ್

      ಹೀರೊ ಮೊಟೊಕಾರ್ಪ್ ಕರಿಶ್ಮಾ ಝಡ್‌ಎಂಆರ್

      2009ರಲ್ಲಿ ಭಾರತ ರಸ್ತೆ ಪ್ರವೇಶಿಸಿದ್ದ ಕರಿಶ್ಮಾ ಆರ್ ಅಪ್‌ಗ್ರೇಡ್ ವರ್ಷನ್ ಝಡ್‌ಎಂಆರ್ ಆಗಿದೆ. ಇದು ಕ್ರೀಡಾತ್ಮಕ ವಿನ್ಯಾಸ ಹೊಂದಿರುವುದು ಪ್ಲಸ್ ಪಾಯಿಂಟ್ ಆಗಿದೆ. ಇದು ಶ್ರೇಷ್ಠ ಹ್ಯಾಂಡ್ಲಿಂಗ್ ಹಾಗೂ ಟೂರಿಂಗ್ ಸಾಮರ್ಥ್ಯವನ್ನು ಹೊಂದಿದೆ.

      ಬಜಾಜ್ ಪಲ್ಸರ್ 200ಎನ್‌ಎಸ್

      ಬಜಾಜ್ ಪಲ್ಸರ್ 200ಎನ್‌ಎಸ್

      • ದರ: ರು. 85,706 (ಎಕ್ಸ್ ಶೋ ರೂಂ ದೆಹಲಿ)
      • ಸರಾಸರಿ ಮೈಲೇಜ್: 35 kmpl
      • ಇಂಧನ ಟ್ಯಾಂಕ್: 12 ಲೀಟರ್
      • ಎಂಜಿನ್ ನಿರ್ವಹಣೆ: 199.5ಸಿಸಿ, ಪವರ್- 23.52 ಪಿಎಸ್ ಪವರ್ ಮತ್ತು 18.3 ಎನ್‌ಎಂ ಟಾರ್ಕ್
      • ಗರಿಷ್ಠ ವೇಗತೆ: ಗಂಟೆಗೆ 135 ಕೀ.ಮೀ.
      • ಬಜಾಜ್ ಪಲ್ಸರ್ 200ಎನ್‌ಎಸ್

        ಬಜಾಜ್ ಪಲ್ಸರ್ 200ಎನ್‌ಎಸ್

        ಬಜಾಜ್ ಪಲ್ಸರ್ ದೇಶದ ಅತ್ಯಂತ ಜನಪ್ರಿಯ ಹಾಗೂ ನಂಬರ್ ವನ್ ಸ್ಪೋರ್ಟ್ಸ್ ಬೈಕಾಗಿದೆ. ಇದರ ವಿಶಿಷ್ಟ ವಿನ್ಯಾಸ ಯುವ ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

        ಕೆಟಿಎಂ ಡ್ಯೂಕ್ 200

        ಕೆಟಿಎಂ ಡ್ಯೂಕ್ 200

        • ದರ: 1.5 ಲಕ್ಷ ರು. (ಆನ್ ರೋಡ್)
        • ಸರಾಸರಿ ಮೈಲೇಜ್: 30 kmpl
        • ಇಂಧನ ಟ್ಯಾಂಕ್: 10.5 ಲೀಟರ್
        • ಎಂಜಿನ್ ನಿರ್ವಹಣೆ: 199.5ಸಿಸಿ, ಪವರ್- 25 ಅಶ್ವಶಕ್ತಿ ಮತ್ತು 19.2 ಎನ್‌ಎಂ ಟಾರ್ಕ್
        • ಗರಿಷ್ಠ ವೇಗತೆ: ಗಂಟೆಗೆ 135 ಕೀ.ಮೀ.
        • ಕೆಟಿಎಂ ಡ್ಯೂಕ್ 200

          ಕೆಟಿಎಂ ಡ್ಯೂಕ್ 200

          ಕೆಟಿಎಂ ಅಭಿಮಾನಿಗಳ ಕೈಕೆಟುಗುವ ದರಗಳಲ್ಲಿ ಡ್ಯೂಕ್ 200 ಬಿಡುಗಡೆ ಮಾಡಲಾಗಿದೆ. ಇದು ನಗರ ಪ್ರದೇಶದ ವಾಹನ ದಟ್ಟಣೆಯಿಂದ ಹಿಡಿದು ವಾರಂತ್ಯದ ದೂರ ಪಯಣಕ್ಕೂ ಹೆಚ್ಚು ಸೂಕ್ತವೆನಿಸಲಿದೆ.

          ಹೋಂಡಾ ಸಿಬಿಎರ್250ಆರ್

          ಹೋಂಡಾ ಸಿಬಿಎರ್250ಆರ್

          • ದರ: 1,73,714 ಲಕ್ಷ ರು. (ಆನ್ ರೋಡ್)
          • ಎಬಿಎಸ್ ಜತೆ: 2,04,274 ಲಕ್ಷ ರು. (ಆನ್ ರೋಡ್)
          • ಸರಾಸರಿ ಮೈಲೇಜ್: 25-30 kmpl
          • ಇಂಧನ ಟ್ಯಾಂಕ್: 13 ಲೀಟರ್
          • ಎಂಜಿನ್ ನಿರ್ವಹಣೆ: 249.6ಸಿಸಿ, ಪವರ್- 26 ಅಶ್ವಶಕ್ತಿ ಮತ್ತು 22.9 ಎನ್‌ಎಂ ಟಾರ್ಕ್
          • ಗರಿಷ್ಠ ವೇಗತೆ: ಗಂಟೆಗೆ 140 ಕೀ.ಮೀ.
          • ಹೋಂಡಾ ಸಿಬಿಎರ್250ಆರ್

            ಹೋಂಡಾ ಸಿಬಿಎರ್250ಆರ್

            ಫೇರ್ಡ್ ಬೈಕ್‌ಗಳ ಪೈಕಿ ಹೋಂಡಾ ಸಿಬಿಆರ್ 250ಆರ್ ದೇಶದ ಬೈಕ್ ಗ್ರಾಹಕರ ಪಾಲಿಗೆ ವಿನೂತನ ಅನುಭವ ನೀಡಲಿದೆ. ಇದು ಎಬಿಎಸ್ ಜತೆಯೂ ಲಭ್ಯವಿರಲಿದೆ.

            ಅಂತಿಮ ತೀರ್ಪು

            ಅಂತಿಮ ತೀರ್ಪು

            ನಿಮಗೆ ದರ ಹಾಗೂ ಮೈಲೇಜ್ ಸಮಸ್ಯೆಯಾಗದಿದ್ದಲ್ಲಿ ಕೆಟಿಎಂ ಡ್ಯೂಕ್ 200ನಿಂದ ತೊಡಗಿ ಹೋಂಡಾ ಸಿಬಿಆರ್250ಆರ್ ರೇಂಜ್ ಬೈಕ್‌ಗಳ ಆಯ್ಕೆ ಸೂಕ್ತವಾಗುವುದು. ಹಾಗೊಂದು ವೇಳೆ ಉತ್ತಮ ಮೈಲೇಜ್ ಬಯಸುವುದಾದ್ದಲ್ಲಿ ಪಲ್ಸರ್ 200ಎನ್‌ಎಸ್ ಉತ್ತಮ ಆಯ್ಕೆಯಾಗಿರಲಿದೆ. ಹಾಗೆಯೇ ಒಂದು ಲಕ್ಷ ರು.ಗಳ ಅಸುಪಾಸಿನಲ್ಲಿ ಫೇರ್ಡ್ ಬೈಕ್ ಹುಡುಕಾಟದಲ್ಲಿದ್ದರೆ ಕರಿಶ್ಮಾ ಝಡ್‌ಎಂಆರ್ ನಿಮ್ಮ ಬಯಕೆಯನ್ನು ಈಡೇರಿಸಲಿದೆ. ಹಾಗಿದ್ದರೂ ಝಡ್‌ಎಂಆರ್ ಸದ್ಯದಲ್ಲೇ ಪರಿಷ್ಕೃತಗೊಳ್ಳುವುದರಿಂದ ಸ್ವಲ್ಪ ಸಮಯ ಕಾದುಕುಳಿತರೆ ಒಳ್ಳೆಯದು.

More from DriveSpark

Article Published On: Wednesday, October 9, 2013, 6:04 [IST]
English summary
We have listed the top 5 bikes from the 200cc-250cc category and have done a quick comparison of mileage, top speed, performance numbers and price. Take a look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+