'ಬೀದಿಗಳ ದೇವರು' ಯಮಹಾ ಮೇಲೆ ನಂಬಿಕೆ ಇದೆಯಾ?
ಜಪಾನ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ, ನೂತನ ಸ್ಪೋರ್ಟಿ, ಆಕರ್ಷಕ, ಏರೋಡೈನಾಮಿಕ್ ಹಾಗೂ ಅದ್ಭುತ ನಿರ್ವಹಣೆಯ 'ಬೀದಿಯ ದೇವರು' (Lord Of The Streets) ವಿಶ್ಲೇಷಣೆಯೊಂದಿಗೆ ನೂತನ ಎಫ್‌ಝಡ್-ಎಸ್ ಬೈಕನ್ನು ಪರಿಚಯಪಡಿಸಿದೆ.
ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಿಭಾಗದಲ್ಲಿ ಪ್ರಬಲ ಪೈಪೋಟಿ ಕಂಡುಬಂದಿರುವಂತೆಯೇ ಯಾವುದು ಸೂಕ್ತ ಬೈಕ್ ಎಂಬುದನ್ನು ಆರಿಸುವುದು ಕಷ್ಟ. ಹಾಗಿರುವ ಯಮಹಾದ ಪೈಕಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಫ್‌ಝಡ್-ಎಸ್ ಬೈಕ್ ಕುರಿತಾಗಿನ ಚಿತ್ರ ಸಮೇತ ವಿಮರ್ಶೆ ನೀಡಲು ಪ್ರಯತ್ನಿಸಲಿದ್ದೇವೆ.
ಪ್ರಮುಖವಾಗಿಯೂ ಯುವ ಉತ್ಸಾಹಿ ಗ್ರಾಹಕರನ್ನು ಗುರಿಯಾರಿಸಿಕೊಂಡಿರುವ ಯಮಹಾ, ಈ ನಿಟ್ಟಿನಲ್ಲಿಯಶ ಸಾಧಿಸಿದೆ. ಎಫ್‌ಝಡ್-ಎಸ್ ಅಂತರಾಷ್ಟ್ರೀಯ ವಿನ್ಯಾಸ, ಹೊಸ ಕಲರ್ ವೆರಿಯಂಟ್, ಬಾಡಿ ಗ್ರಾಫಿಕ್ಸ್, ಸ್ಪೋರ್ಟಿ ಹಾಗೂ ಆಕರ್ಷಕ ಲುಕ್ ಹೊಂದಿದೆ. ಫ್ಯಾಶನ್ ಸಹಿತ ಸ್ಟೈಲಿಷ್ ಲುಕ್ ಬಯಸುವವರಿಗೆ ಯಮಹಾ ಎಫ್‌ಝಡ್-ಎಸ್ ಉತ್ತಮ ಆಯ್ಕೆಯಾಗಿರಲಿದೆ.

Yamaha FZ-S
ಬೀದಿಗಳ ದೇವರು ಎಂದೇ ಎಫ್‌ಝಡ್-ಎಸ್ ಆವೃತ್ತಿಯನ್ನು ಯಮಹಾ ವಿಶ್ಲೇಷಿಸಿದೆ. ಹಾಗಿದ್ದರೆ ಬನ್ನಿ ಯಾವ ರೀತಿ ಎಫ್‌ಝಡ್-ಎಸ್ ಮೂಲಕ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡಿದೆ ಎಂಬುದನ್ನು ಫೋಟೊ ಫೀಚರ್ ಮೂಲಕ ವಿಮರ್ಶೆ ಮಾಡೋಣ...

Yamaha FZ-S
ಯಮಹಾ ಎಫ್‌ಝಡ್-ಎಸ್ 153 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 14 ಬಿಎಚ್‌ಪಿ (13.6 ಎನ್‌ಎಂ) ಪೀಕ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಪವರ್‌ಫುಲ್ ಪಿಕ್ ಅಪ್ ನೀಡಲು ನೆರವಾಗಲಿದೆ.

Yamaha FZ-S
ಹಿಂದುಗಡೆವಿರುವ ಬಾಗಿರುವ ತಡೆ ನಿವಾರಕವು ಧೂಳು, ಕೆಸರು ಇತ್ಯಾದಿಗಳು ಚಿಮ್ಮುವುದರಿಂದ ಈ ಸ್ಪೋರ್ಟ್ಸ್ ಬೈಕ್‌ಗೆ ರಕ್ಷಣೆ ಒದಗಿಸಲಿದೆ.

Yamaha FZ-S
ಇದರ ಸ್ಟೀಲ್ ಫ್ಯೂಯಲ್ ಟ್ಯಾಂಕ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

Yamaha FZ-S
ನಯವಾದ ಹಾಗೂ ಅತ್ಯಾಕರ್ಷಕ ಗ್ರಾಫಿಕ್ಸ್ ಹೆಚ್ಚು ಸ್ಟೈಲಿಷ್ ಲುಕ್ ಪ್ರದಾನ ಮಾಡಲಿದೆ. ಹೆಸರಿನಲ್ಲಿ ಸೂಚಿಸಿದಂತೆ ಸ್ಪೋರ್ಟಿ ಲುಕ್ ಗಮನಾರ್ಹವಾಗಿದೆ.

Yamaha FZ-S
ಫುಲ್ ಲಿಕ್ವಿಡ್ ಕ್ರೈಸ್ಟಲ್ ಡಿಸ್‌ಪ್ಲೇನಲ್ಲಿ ನೂತನ ಎಫ್‌ಝಡ್-ಎಸ್ ಮೀಟರ್ ಜೋಡಿಸಲಾಗಿದೆ. ಸ್ಪೀಡೋಮೀಟರ್, ಟ್ಯಾಕೊಮೀಟರ್, ಟ್ರಿಪ್ ಮೀಟರ್, ಫ್ಯೂಯಲ್ ಗೇಜ್ ಹಾಗೂ ಇಂಡಿಕೇಟರ್‌ಗಳನ್ನು ಆಳವಡಿಸಲಾಗಿದೆ. ಹಾಗೆಯೇ ಎಂಜಿನ್ ಸ್ಟಾರ್ಟ್ ಸಿಗ್ನಲ್ ನಾವೀನ್ಯತೆಯ ಪ್ರತೀಕವಾಗಿದೆ.

Yamaha FZ-S
ಸೈಲಾನ್ಸರ್‌ನಲ್ಲಿ ವಿಪರೀತ ಬಿಸಿ ತಡೆಯುವ ನಿಟ್ಟಿನಲ್ಲಿ ಎರಡು ಪರದೆಯ ರಕ್ಷಣೆಯನ್ನು ಒದಗಿಸಲಾಗಿದೆ.

Yamaha FZ-S
ಮುಂದೆ ಸೇರಿದಂತೆ ಹಿಂದುಗಡೆ ಸವಾರಕರಿಗೆ ಹೆಚ್ಚಿನ ಜಾಗ ಕಲ್ಪಿಸಿರುವುದು ಆರಾಮದಾಯಕ ರೈಡಿಂಗ್‌ಗೆ ನೆರವಾಗಲಿದೆ. ಈ ಪಿಲ್ಯನ್ ಸೀಟ್ ವಿನ್ಯಾಸ ಸಾಂಪ್ರದಾಯಿಕ ಯಮಹಾ ಮಾದರಿಯಾಗಿದೆ.

Yamaha FZ-S
ಮೊನೊಕ್ರಾಸ್ ರಿಯರ್ ಸಸ್ಪೆಷನ್ ಉತ್ತನ ಹ್ಯಾಡ್ಲಿಂಗ್ ಹಾಗೂ ನಿರ್ವಹಣೆಯನ್ನು ಖಾತ್ರಿಪಡಿಸಲಿದೆ.

Yamaha FZ-S
ಮುಂಭಾಗ ಹಾಗೂ ಹಿಂಬದಿಗಳೆರಡು ಟ್ಯೂಬ್‌ಲೆಸ್ ಟಯರ್ ಮಾದರಿಯನ್ನು ಹೊಂದಿದೆ.

Yamaha FZ-S
ಪೂರ್ಣ ಚಿತ್ರಣ

Yamaha FZ-S
ಸೈಡ್ ವ್ಯೂ

Yamaha FZ-S

Yamaha FZ-S

Yamaha FZ-S

Yamaha FZ-S

Yamaha FZ-S



Click it and Unblock the Notifications








