ಬೆಂಝ್ ಎ ಕ್ಲಾಸ್ vs ಬಿಎಂಡಬ್ಲ್ಯು 1 ಸಿರೀಸ್ ಹೋಲಿಕೆ

Written By:

ಇತ್ತೀಚೆಗಷ್ಟೇ ಲಾಂಚ್ ಆಗಿರುವ ಮರ್ಸಿಡಿಸ್ ಎ ಕ್ಲಾಸ್ ಮತ್ತು ಬಿಎಂಡಬ್ಲ್ಯು 1 ಸಿರೀಸ್ ಆಟೋ ವಲಯದಲ್ಲಿ ಭಾರಿ ಚರ್ಚಾ ವಿಷಯವಾಗುತ್ತಿದೆ. ಪ್ರಮುಖವಾಗಿಯೂ ದೇಶದ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಜರ್ಮನಿ ಮೂಲದ ಕಾರು ತಯಾರಕ ಸಂಸ್ಥೆಗಳಾದ ಬಿಎಂಡಬ್ಲ್ಯು ಹಾಗೂ ಬೆಂಝ್ ಅಗ್ಗದ ಐಷಾರಾಮಿ ಕಾರುಗಳನ್ನು ದೇಶಕ್ಕೆ ಪರಿಚಯಿಸಿದ್ದವು.

ಈ ಪೈಕಿ ಬೆಂಝ್ ಎ ಕ್ಲಾಸ್ ಮೇ ತಿಂಗಳಲ್ಲಿ ಎಂಟ್ರಿ ಕೊಟ್ಟಿದ್ದರೆ ಬಿಎಂಡಬ್ಲ್ಯು 1 ಸಿರೀಸ್ ಸೆಪ್ಟೆಂಬರ್ 4ರಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ0 ದಿವ್ಯ ಹಸ್ತಗಳಿಂದ ಲಾಂಚ್ ಆಗಿದ್ದವು.

ಭಾರತದಲ್ಲಿ ಬಿಡುಗಡೆಯಾದ ಹತ್ತು ದಿನಗಳೊಳಗೆ 400ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿದ್ದ ಬೆಂಝ್ ಎ ಕ್ಲಾಸ್ ನೂತನ ದಾಖಲೆಯನ್ನು ಸ್ಥಾಪಿಸಿತ್ತು. ಅಷ್ಟಕ್ಕೂ ಎರಡು ಕಾರುಗಳ ನಡುವಣ ವೈಶಿಷ್ಟ್ಯಗಳನ್ನು ಎಂಬುದನ್ನು ಈ ಪುಟ್ಟ ಲೇಖನದ ಮೂಲಕ ವಿವರಿಸಲಿದ್ದೇವೆ.

To Follow DriveSpark On Facebook, Click The Like Button
ವೆರಿಯಂಟ್- ಬೆಂಝ್ ಎ ಕ್ಲಾಸ್

ವೆರಿಯಂಟ್- ಬೆಂಝ್ ಎ ಕ್ಲಾಸ್

ಬೆಂಝ್ ಎ ಕ್ಲಾಸ್ ಹಾಗೂ ಬಿಎಂಡಬ್ಲ್ಯು 1 ಸಿರೀಸ್ ಹೋಲಿಕೆ ಮಾಡುವ ಮೊದಲು ಎಷ್ಟು ವೆರಿಯಂಟ್‌ಗಳಲ್ಲಿ ಲಭ್ಯವಿದೆ ಎಂಬುದನ್ನು ಮೊದಲು ತಿಳಿದುಕೊಳ್ಳೋಣ

ಎರಡು ವೆರಿಯಂಟ್‌ಗಳಲ್ಲಿ ಎ ಕ್ಲಾಸ್ ಲಭ್ಯವಿರುತ್ತದೆ.

ಎ 180 ಸ್ಪೋರ್ಟ್ ಪೆಟ್ರೋಲ್ ಮತ್ತು

ಎ 180 ಸಿಡಿಐ ಸ್ಟೈಲ್ ಡೀಸೆಲ್.

ವೆರಿಯಂಟ್- ಬಿಎಂಡಬ್ಲ್ಯು 1 ಸಿರೀಸ್

ವೆರಿಯಂಟ್- ಬಿಎಂಡಬ್ಲ್ಯು 1 ಸಿರೀಸ್

ಬಿಎಂಡಬ್ಲ್ಯು 1 ಸಿರೀಸ್ ನಾಲ್ಕು ವೆರಿಯಂಟ್‌ಗಳಲ್ಲಿ ಆಗಮನವಾಗಿದೆ.

116ಐ ಪೆಟ್ರೋಲ್,

118ಡಿ ಡೀಸೆಲ್,

118ಡಿ ಸ್ಪೋರ್ಟ್ ಲೈನ್ ಡೀಸೆಲ್ ಮತ್ತು

118ಡಿ ಸ್ಪೋರ್ಟ್ ಪ್ಲಸ್ ಡೀಸೆಲ್.

ದರ ಮಾಹಿತಿ- ಬೆಂಝ್ ಎ ಕ್ಲಾಸ್

ದರ ಮಾಹಿತಿ- ಬೆಂಝ್ ಎ ಕ್ಲಾಸ್

ಭಾರತೀಯ ಗ್ರಾಹಕನ ಭಾವನೆಯ ದೃಷ್ಟಿಕೋನದಲ್ಲಿ ದರ ಅತಿ ಮಹತ್ವ ಪಾತ್ರ ವಹಿಸುತ್ತಿದೆ.

ಬೆಂಝ್ ಎ ಕ್ಲಾಸ್ ಪೆಟ್ರೋಲ್ ಪ್ರಾರಂಭಿಕ ದರ 22.73 ಲಕ್ಷ ರು.ಗಳಾಗಿವೆ. ಹಾಗೆಯೇ ಡೀಸೆಲ್ ಟಾಪ್ ಎಂಡ್ ವೆರಿಯಂಟ್ ದರ 21.93 ಲಕ್ಷ ರು.ಗಳಿಗೆ ಕೊನೆಗೊಳ್ಳುತ್ತದೆ.

ದರ ಮಾಹಿತಿ- ಬಿಎಂಡಬ್ಲ್ಯು 1 ಸಿರೀಸ್

ದರ ಮಾಹಿತಿ- ಬಿಎಂಡಬ್ಲ್ಯು 1 ಸಿರೀಸ್

ಇನ್ನೊಂದೆಡೆ ಬಿಎಂಡಬ್ಲ್ಯು 1 ಸಿರೀಸ್ ನಾಲ್ಕು ವೆರಿಯಂಟ್‌ಗಳಲ್ಲಿ ಲಭ್ಯವಿರುವುದರಿಂದ ಖರೀದಿಗಾರರಿಗೆ ಹೆಚ್ಚಿನ ಆಯ್ಕೆ ಲಭ್ಯವಿರುತ್ತದೆ. ಬಿಎಂಡಬ್ಲ್ಯು ಪೆಟ್ರೋಲ್ ಪ್ರಾರಂಭಿಕ ದರ 20.90 ಲಕ್ಷ ರು.ಗಳಾಗಿದ್ದು, ಆ ಬಳಿಕದ ಮೂರು ಡೀಸೆಲ್ ಮಾಡೆಲ್‌ಗಳು ಅನುಕ್ರಮವಾಗಿ 22.9 ಲಕ್ಷ ರು. 25.9 ಲಕ್ಷ ರು. ಮತ್ತು 29.9 ಲಕ್ಷ ರು.ಗಳಿಗೆ ಲಭ್ಯವಿದೆ.

ಬಿಎಂಡಬ್ಲ್ಯು 1 ಸಿರೀಸ್

ಬಿಎಂಡಬ್ಲ್ಯು 1 ಸಿರೀಸ್

ಇಲ್ಲಿ ಬಿಎಂಡಬ್ಲ್ಯು, ಬೆಂಝ್ ಎ ಕ್ಲಾಸನ್ನು ಮಾತ್ರ ಟಾರ್ಗೆಟ್ ಮಾಡುತ್ತಿಲ್ಲ. ಬದಲಾಗಿ ಆಡಿ ಕ್ಯೂ1, ವೋಲ್ವೋ ವಿ40 ಕ್ರಾಸ್ ಕಂಟ್ರಿ ಮತ್ತು ಇನ್ನಷ್ಟೇ ಆಗಮನವಾಗಲಿರುವ ಮರ್ಸಿಡಿಸ್ ಜಿಎಲ್‌ಎ ಕ್ಲಾಸ್ ಕಾರನ್ನು ಗುರಿಯಾಗಿರಿಸಿಕೊಂಡಿವೆ.

ಎಂಜಿನ್ ಮಾಹಿತಿ- ಬೆಂಝ್ ಎ ಕ್ಲಾಸ್

ಎಂಜಿನ್ ಮಾಹಿತಿ- ಬೆಂಝ್ ಎ ಕ್ಲಾಸ್

ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

1.6 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ (122 ಅಶ್ವಶಕ್ತಿ, 200 ಎನ್‌ಎಂ ಟಾರ್ಕ್)

2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ (109 ಅಶ್ವಶಕ್ತಿ ಮತ್ತು 250 ಎನ್‌ಎಂ ಟಾರ್ಕ್)

ಟ್ರಾನ್ಸ್‌ಮಿಷನ್- ಬೆಂಝ್ ಎ ಕ್ಲಾಸ್

ಟ್ರಾನ್ಸ್‌ಮಿಷನ್- ಬೆಂಝ್ ಎ ಕ್ಲಾಸ್

ಇದು 7ಜಿ ಡಿಸಿಟಿ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಜತೆ ಪ್ಯಾಡೆಲ್ ಶಿಫ್ಟರ್ ಹೊಂದಿದೆ. ಹಾಗೆಯೇ ಎದುರಿನ ಚಕ್ರಗಳ ಮೂಖಾಂತರ ಪವರ್ ವಿತರಿಸಲಾಗುತ್ತದೆ.

ಎಂಜಿನ್ ಮಾಹಿತಿ- ಬಿಎಂಡಬ್ಲ್ಯು 1 ಸಿರೀಸ್

ಎಂಜಿನ್ ಮಾಹಿತಿ- ಬಿಎಂಡಬ್ಲ್ಯು 1 ಸಿರೀಸ್

1.6 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ (136 ಅಶ್ವಶಕ್ತಿ, 200 ಎನ್‌ಎಂ)

2.0 ಲೀಟರ್ ಮಿಲ್ ಡೀಸೆಲ್ ಎಂಜಿನ್ (143 ಅಶ್ವಶಕ್ತಿ, 320 ಎನ್‌ಎಂ ಟಾರ್ಕ್)

ಇವೆರಡು ಎಂಜಿನ್‌ಗಳು ಝಡ್‌ಟಿ ಎಂಟು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳಿಂದ ನಿಯಂತ್ರಿಸಲ್ಪಟ್ಟಿದ್ದು, ರಿಯರ್ ವೀಲ್ ಡ್ರೈವ್ ಸಿಸ್ಟಂ ಹೊಂದಿದೆ.

ಟ್ರಾನ್ಸ್‌ಮಿಷನ್

ಟ್ರಾನ್ಸ್‌ಮಿಷನ್

ಕುತೂಹಲಕಾರಿಯೆಂಬಂತೆ ಎರಡು ಸಂಸ್ಥೆಗಳು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳನ್ನು ಹೊಂದಿದ್ದು, ಇದರಿಂದಾಗಿ ಹಲವಾರು ಚಾಲಕರು ಮ್ಯಾನುವಲ್ ಗೇರ್ ಬಾಕ್ಸ್ ಮಿಸ್ ಮಾಡಿಕೊಳ್ಳಲಿದ್ದಾರೆ.

ನಿರ್ವಹಣೆ- ಬೆಂಝ್ ಎ ಕ್ಲಾಸ್

ನಿರ್ವಹಣೆ- ಬೆಂಝ್ ಎ ಕ್ಲಾಸ್

(ಅನುಕ್ರಮವಾಗಿ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳು)

0-100 km/h: 9.2s ಮತ್ತು 10.6s

ಗರಿಷ್ಠ ವೇಗತೆ: 202 km/h ಮತ್ತು 190 km/h

ನಿರ್ವಹಣೆ- ಬಿಎಂಡಬ್ಲ್ಯು 1 ಸಿರೀಸ್

ನಿರ್ವಹಣೆ- ಬಿಎಂಡಬ್ಲ್ಯು 1 ಸಿರೀಸ್

(ಅನುಕ್ರಮವಾಗಿ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳು)

0-100 km/h: 8.7s ಮತ್ತು 8.6s

ಗರಿಷ್ಠ ವೇಗತೆ: 210 km/h ಮತ್ತು 212 km/h

ಇಂಧನ ಕ್ಷಮತೆ- ಬೆಂಝ್ ಎ ಕ್ಲಾಸ್

ಇಂಧನ ಕ್ಷಮತೆ- ಬೆಂಝ್ ಎ ಕ್ಲಾಸ್

(ಎಆರ್‌ಎಐ ಮಾನ್ಯತೆ ಪ್ರಕಾರ ಮೈಲೇಜ್ ಮತ್ತು ಹೊಗೆ ಹೊರಸೂಸುವಿಕೆ CO2)

ಬೆಂಝ್ ಎ ಕ್ಲಾಸ್ (ಪೆಟ್ರೋಲ್): 15.50 kmpl ಮತ್ತು 98g/km

ಬೆಂಝ್ ಎ ಕ್ಲಾಸ್ (ಡೀಸೆಲ್): 20.06 kmpl ಮತ್ತು 98g/km

ಇಂಧನ ಕ್ಷಮತೆ- ಬಿಎಂಡಬ್ಲ್ಯು 1 ಸಿರೀಸ್

ಇಂಧನ ಕ್ಷಮತೆ- ಬಿಎಂಡಬ್ಲ್ಯು 1 ಸಿರೀಸ್

(ಎಆರ್‌ಎಐ ಮಾನ್ಯತೆ ಪ್ರಕಾರ ಮೈಲೇಜ್ ಮತ್ತು ಹೊಗೆ ಹೊರಸೂಸುವಿಕೆ CO2)

ಬಿಎಂಡಬ್ಲ್ಯು 1 ಸಿರೀಸ್ (ಪೆಟ್ರೋಲ್): 16.28 kmpl ಮತ್ತು 146.73g/km

ಬಿಎಂಡಬ್ಲ್ಯು 1 ಸಿರೀಸ್ (ಡೀಸೆಲ್): 20.58 kmpl ಮತ್ತು 128.92g/km

ಆಯಾಮ ಮತ್ತು ಭಾರ- ಬೆಂಝ್ ಎ ಕ್ಲಾಸ್

ಆಯಾಮ ಮತ್ತು ಭಾರ- ಬೆಂಝ್ ಎ ಕ್ಲಾಸ್

ವೀಲ್ ಬೇಸ್: 2699 ಎಂಎಂ

ಉದ್ದ: 4292 ಎಂಎಂ

ಎತ್ತರ: 1430 ಎಂಎಂ

ಅಗಲ: 1553 ಎಂಎಂ

ಭಾರ: 1395 ಕೆ.ಜಿ (ಪೆಟ್ರೋಲ್) ಮತ್ತು 1505 ಕೆ.ಜಿ (ಡೀಸೆಲ್)

ಬೂಟ್ ಸ್ಪೇಸ್: 341 ಲೀಟರ್ (ಹಿಂಭಾಗದ ಸೀಟು ಮಡಚಿದರೆ 1157 ಲೀಟರ್)

ಆಯಾಮ ಮತ್ತು ಭಾರ- ಬಿಎಂಡಬ್ಲ್ಯು 1 ಸಿರೀಸ್

ಆಯಾಮ ಮತ್ತು ಭಾರ- ಬಿಎಂಡಬ್ಲ್ಯು 1 ಸಿರೀಸ್

ವೀಲ್ ಬೇಸ್: 2690 ಎಂಎಂ

ಉದ್ದ: 4324 ಎಂಎಂ

ಎತ್ತರ: 1421 ಎಂಎಂ

ಅಗಲ: 1535 ಎಂಎಂ

ಭಾರ: 1365 ಕೆ.ಜಿ (ಪೆಟ್ರೋಲ್) ಮತ್ತು 1.395 ಕೆ.ಜಿ (ಡೀಸೆಲ್)

ಬೂಟ್ ಸ್ಪೇಸ್: 360 ಲೀಟರ್ (ಹಿಂಭಾಗದ ಸೀಟು ಮಡಚಿದರೆ 1200 ಲೀಟರ್)

ಸುರಕ್ಷತೆ

ಸುರಕ್ಷತೆ

ಸುರಕ್ಷತೆಯ ವಿಚಾರದಲ್ಲಿ ಬೆಂಝ್ ಮತ್ತು ಬಿಎಂಡಬ್ಲ್ಯು ಸಂಸ್ಥೆಗಳು ಯಾವುದೇ ರಾಜಿಗೆ ತಯಾರಾಗಿಲ್ಲ. ಎರಡೂ ಆವೃತ್ತಿಗಳಲ್ಲೂ ಸಕ್ರಿಯ ಮತ್ತು ನಿಷ್ಕ್ರಿಯ ಸುರಕ್ಷತೆ ವೈಶಿಷ್ಟ್ಯಗಳನ್ನು ಹೊಂದಿದೆ. ಅಫಘಾತ ಸಂದರ್ಭಗಳಲ್ಲಿ ವಾಹನದ ನಿಯಂತ್ರಣ ಕಳೆದುಕೊಳ್ಳದಂತೆ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಅನುಸರಿಸಲಾಗಿದೆ.

ಬೆಂಝ್ ಎ ಕ್ಲಾಸ್

ಬೆಂಝ್ ಎ ಕ್ಲಾಸ್

ಬಿಎಂಡಬ್ಲ್ಯು 1 ಸಿರೀಸ್‌ಗೆ ಹೋಲಿಸಿದರೆ ಬೆಂಝ್ ಎ ಕ್ಲಾಸ್ ಇಂಟಿರಿಯರ್ ಪ್ರೀಮಿಯಂ ಲುಕ್ ಪಡೆದಿದೆ. ಅಲ್ಲದೆ 23 ಲಕ್ಷ ರು.ಗಳ ಅಸುಪಾಸಿನಲ್ಲಿ ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ಪ್ಯಾನೋರಾಮಿಕ್ ಸನ್ ರೂಫ್ ಪಡೆದುಕೊಳ್ಳಲಿದೆ. ಹಾಗೆಯೇ ಇದರ ಮಾಹಿತಿ ಸಿಸ್ಟಂ ಹೆಚ್ಚು ಆಡಂಬರದ ವಿನ್ಯಾಸ ಪಡೆದುಕೊಂಡಿದೆ.

ಬಿಎಂಡಬ್ಲ್ಯು 1 ಸಿರೀಸ್

ಬಿಎಂಡಬ್ಲ್ಯು 1 ಸಿರೀಸ್

ಇನ್ನೊಂದೆಡೆ ಬಿಎಂಡಬ್ಲ್ಯು 1 ಸಿರೀಸ್ ಮಾಹಿತಿ ಸಿಸ್ಟಂ ಹಾಗೂ ಎಸಿ ವೆಂಟ್ಸ್‌ಗಳು ಆಧುನಿಕ ವಿನ್ಯಾಸ ಪಡೆಯುವಲ್ಲಿ ವಿಫಲವಾಗಿದೆ. ಅಲ್ಲದೆ ಬೇಸ್ ವೆರಿಯಂಟ್‌ಗಳಲ್ಲಿ ಸನ್ ರೂಫ್‌ಗಳಂತಹ ವೈಶಿಷ್ಟ್ಯಗಳ ಕೊರತೆ ಕಾಡುತ್ತಿದೆ. ಇದಕ್ಕಾಗಿ ನೀವು ಟಾಪ್ ಎಂಡ್ ವೆರಿಯಂಟ್‌ನ್ನು ನೆಚ್ಚಿಕೊಳ್ಳಬೇಕಾಗುತ್ತದೆ. ಅಂದ ಹಾಗೆ ಬಿಎಂಡಬ್ಲ್ಯು ಐಡ್ರೈವ್ 16.5 ಸೆಂಟಿಮೀಟರ್ ಎಲ್‌ಸಿಡಿ ಮಾಹಿತಿ ಸಿಸ್ಟಂ ಹೊಂದಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಡ್ರೈವ್ ಸ್ಪಾರ್ಕ್ ತಂಡ ಇದುವರೆಗೆ ಬಿಎಂಡಬ್ಲ್ಯು 1 ಸಿರೀಸ್ ಟೆಸ್ಟ್ ಡ್ರೈವ್ ಹಮ್ಮಿಕೊಂಡಿಲ್ಲ. ಇನ್ನೊಂದೆಡೆ ಬೆಂಝ್ ಎ ಕ್ಲಾಸ್ ಅತ್ಯುತ್ತಮ ಡ್ರೈವಿಂಗ್ ಅನುಭವನ್ನು ನೀಡುತ್ತದೆ. ಹಾಗೆಯೇ ಕಡಿಮೆ ದರಗಳಲ್ಲಿ ಉತ್ತಮ ಆಡಂಬರದ ಕಾರು ಆಯ್ಕೆ ಮಾಡಬೇಕಿದ್ದರೆ ಬೆಂಝ್ ಎ ಕ್ಲಾಸ್ ಉತ್ತಮ ಆಯ್ಕೆಯಾಗಿರಲಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಬಿಎಂಡಬ್ಲ್ಯು 1 ಸಿರೀಸ್‌ಗೆ ಹೆಚ್ಚು ಐಷಾರಾಮಿ ಹಾಗೂ ಆಧುನಿಕ ವಿನ್ಯಾಸ ಪಡೆದುಕೊಂಡಿರುವ ಬೆಂಝ್ ಎ ಕ್ಲಾಸ್ ಆರಾಮದಾಯಕ ಪಯಣ, ಕ್ರೀಡಾ ವಿನ್ಯಾಸ, ಸುರಕ್ಷತೆಗೆ ಹೆಚ್ಚಿನ ಆದ್ಯತೆ ಹಾಗೂ ಗರಿಷ್ಠ ನಿರ್ವಹಣೆಯನ್ನು ಖಾತ್ರಿಪಡಿಸುತ್ತದೆ. ಹಾಗಿದ್ದರೂ ಕ್ಲಾಸ್ ವಿಚಾರದಲ್ಲಿ ಜರ್ಮನಿಯ ಈ ಎರಡು ಕಂಪನಿಗಳು ಜನಮನ ಸೆಳೆಯಲ್ಲಿ ಖಂಡಿತ ಯಶಸ್ವಿಯಾಗಿದೆ.

English summary
BMW may not have been the first, but it was quick to recognize the potential and out it has come with the 1 Series. Also a luxury hatch, the 1 Series is in every way possible, an A Class rival. So, how do they stack up against each other? Let's take a look.
Story first published: Thursday, September 5, 2013, 10:42 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark