ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಫ್ರೆಂಚ್ ಕಾರು ತಯಾರಕ ಕಂಪನಿ ಸಿಟ್ರನ್ ಕಂಪನಿಯು ಭಾರತದಲ್ಲಿ ತನ್ನ ಎರಡನೇ ಕಾರು ಉತ್ಪನ್ನವನ್ನು ಬಿಡುಗಡೆಗೊಳಿಸುತ್ತಿದ್ದು, ಕಂಪನಿಯು ಹೊಸ ಕಾರು ಬಿಡುಗಡೆಗೂ ಮುನ್ನ ಹೊಸ ಕಾರಿನ ಕಾರ್ಯಕ್ಷತೆ ತಿಳಿಯಲು ಟೆಸ್ಟ್ ಡ್ರೈವ್ ಆಯೋಜಿಸಿತ್ತು. ಹೊಸ ಕಾರು ಮುಂದಿನ ತಿಂಗಳು 20ರಂದು ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೇಗೆ ಭಿನ್ನವಾಗಿದೆ ಎನ್ನುವುದು ಈ ವಿಮರ್ಶೆ ಲೇಖನದಲ್ಲಿ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದೆವೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಭಾರತೀಯ ಮಾರುಕಟ್ಟೆಗೆ ಮೊದಲ ಬಾರಿಗೆ 2020ರಲ್ಲಿ ಸಿ5 ಏರ್‌ಕ್ರಾಸ್ ಎಸ್‌ಯುವಿಯೊಂದಿಗೆ ಲಗ್ಗೆಯಿಟ್ಟ ಸಿಟ್ರನ್ ಕಂಪನಿಯು ಸೀಮಿತ ಮಾರುಕಟ್ಟೆ ಸೌಲಭ್ಯದೊಂದಿಗೆ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಮೊದಲ ಕಾರು ಉತ್ಪನ್ನವನ್ನು ಮಧ್ಯಮ ಕ್ರಮಾಂಕದ ಐಷಾರಾಮಿ ಎಸ್‌ಯುವಿ ವಿಭಾಗಕ್ಕೆ ಪರಿಚಯಿಸಿದ್ದ ಕಂಪನಿಯು ಇದೀಗ ಹೊಚ್ಚ ಹೊಸ ಸಿ3 ಮಾದರಿಯೊಂದಿಗೆ ಬಜೆಟ್ ಕಾರು ವಿಭಾಗಕ್ಕೆ ಎಂಟ್ರಿ ನೀಡುತ್ತಿದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಜಾಗತಿಕ ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಮುಖ ಕಾರು ಮಾದರಿಗಳ ಮಾರಾಟದೊಂದಿಗೆ ತನ್ನದೆ ಆದ ಜನಪ್ರಿಯತೆ ಹೊಂದಿರುವ ಸಿಟ್ರನ್ ಕಂಪನಿಯು ಇದೀಗ ಭಾರತದಲ್ಲೂ ಹೊಸ ಉತ್ಪನ್ನಗಳೊಂದಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಸಿ3 ಮಾದರಿಯು ಕಂಪನಿಯು ಉತ್ತಮ ಬೇಡಿಕೆ ತಂದುಕೊಡುವ ನೀರಿಕ್ಷೆಯಲ್ಲಿದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಮುಖ ಕಾರು ಉತ್ಪಾದನಾ ಕಂಪನಿಯು ಕಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕೆ ಹಲವಾರು ಕಾರು ಉತ್ಪನ್ನಗಳನ್ನು ಪರಿಚಯಿಸಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಯಶಸ್ವಿ ಕಾರು ಮಾದರಿಗಳ ಪೈಪೋಟಿ ನಡುವೆ ಸಿಟ್ರನ್ ಸಿ3 ಹೇಗೆ ಗ್ರಾಹಕರನ್ನು ತನ್ನತ್ತ ಸೆಳೆಯಲಿದೆ ಎನ್ನುವುದೇ ಕುತೂಹಲ ಹುಟ್ಟುಹಾಕಿದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ತಾಂತ್ರಿಕವಾಗಿ ಹೊಸ ಮಾದರಿಯನ್ನು ಕಂಪನಿಯು ಬಿಗ್ ಹ್ಯಾಚ್‌ಬ್ಯಾಕ್ ಎಂದು ನಮೂದಿಸಿದರೂ ಭಾರತದಲ್ಲಿ ಈ ಕಾರು ಮಾದರಿಗಳನ್ನು ಅಧಿಕೃತವಾಗಿ ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳೆಂದೆ ಗುರುತಿಸಲಾಗುತ್ತಿದ್ದು, ಹೊಸ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಏನೆಲ್ಲಾ ಹೊಸ ಫೀಚರ್ಸ್ ಹೊಂದಿದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ವಿನ್ಯಾಸ ಮತ್ತು ಶೈಲಿ

ಮೊದಲ ನೋಟದಲ್ಲಿಯೇ ಸಿಟ್ರನ್ ಸಿ3 ಮಾದರಿಯ ವಿನ್ಯಾಸ ಮತ್ತು ಸ್ಟೈಲಿಂಗ್ ಸಣ್ಣ ಕಾರು ಖರೀದಿದಾರರ ಗಮನಸೆಳೆಯಲಿದ್ದು, ಸಾಂಪ್ರದಾಯಿಕ ಫ್ರೆಂಚ್ ಆಟೋಮೊಬೈಲ್ ಶೈಲಿಯು ಆಕರ್ಷಣೆಯಾಗುವಂತೆ ಮಾಡುತ್ತದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಹೊಸ ಕಾರಿನಲ್ಲಿ ನಿಮ್ಮ ಗಮನವನ್ನು ಸೆಳೆಯುವ ಮೊದಲ ಅಂಶವೆಂದರೆ ಅದು ಬಣ್ಣದ ಆಯ್ಕೆ ಎಂದರೆ ತಪ್ಪಾಗುವುದಿಲ್ಲ. ಹೊಸ ಸಿ3 ಮಾದರಿಯಲ್ಲಿ ಗಾಢವಾದ ಬಣ್ಣಗಳ ಆಯ್ಕೆಯು ಹೊಸ ಕಾರಿನ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡಲಿದ್ದು, ಸಿಂಗಲ್-ಟೋನ್ ಮತ್ತು ಡ್ಯುಯಲ್-ಟೋನ್ ಪೇಂಟ್ ಸ್ಕೀಮ್‌ಗಳನ್ನು ಒಳಗೊಂಡಂತೆ ನೀವು 10 ವಿಭಿನ್ನ ಬಣ್ಣದ ಆಯ್ಕೆಗಳಿಂದ ಆರಿಸಿಕೊಳ್ಳಬಹುದಾಗಿದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಜೊತಗೆ ಸಿಟ್ರನ್ ಹಲವಾರು ಬಿಡಿಭಾಗಗಳು ಮತ್ತು 56 ವಿವಿಧ ಗ್ರಾಹಕೀಕರಣ ಆಯ್ಕೆಗಳನ್ನು ಪರಿಚಯಿಸುವ ಮೂಲಕ ಬಣ್ಣಗಳಿಗೆ ಹೆಚ್ಚಿನ ಆಕರ್ಷಣೆಯ ಆಯ್ಕೆ ಅನ್ನು ಸೇರಿಸಿದ್ದು, ಆದ್ದರಿಂದ ನೀವು ಸಿ3 ಮಾದರಿಯನ್ನು ನಿಮ್ಮ ಅಭಿರುಚಿಗೆ ತಕ್ಕಂತೆ ಸಿದ್ದಗೊಳಿಸಬಹುದಾಗಿದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಇದರಲ್ಲಿ ಕಾರಿನ ವಿನ್ಯಾಸ ಭಾಷೆಯು ಸಿಟ್ರನ್ ಸಾಂಪ್ರಾದಾಯಿಕ ವಿಶಿಷ್ಟತೆಯೊಂದಿಗೆ ಹೊಸ ಮೆರಗು ನೀಡಲಿದ್ದು, ಮುಂಭಾಗದಲ್ಲಿ ಸಿಗ್ನೇಚರ್ ಸಿಟ್ರನ್ ಗ್ರಿಲ್ ಮಧ್ಯದಲ್ಲಿ ಐಕಾನಿಕ್ ಲೋಗೋವನ್ನು ಹೊಂದಿದೆ ಮತ್ತು ಕ್ರೋಮ್ ಪಟ್ಟಿಗಳು ಲೋಗೋದ ಅಂಚುಗಳಿಂದ ಮತ್ತು ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಹೆಡ್‌ಲ್ಯಾಂಪ್‌ನೊಂದಿಗೆ ಜೋಡಿಸ್ಪಟ್ಟಿವೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಮುಖ್ಯವಾಗಿ ಇದರಲ್ಲಿ ಸ್ಪ್ಲಿಟ್-ಹೆಡ್‌ಲ್ಯಾಂಪ್ ವಿನ್ಯಾಸವನ್ನು ನೀಡಲಾಗಿದ್ದು, ಇದು ಸಿಟ್ರನ್ ಕಂಪನಿಯ ಕಾರುಗಳ ಮತ್ತೊಂದು ವಿಶಿಷ್ಟವಾಗಿದೆ. ಇದರೊಂದಿಗೆ ಕೆಳಭಾಗದಲ್ಲಿ ಸಿಲ್ವರ್ ಸ್ಕಫ್ ಪ್ಲೇಟ್‌ನೊಂದಿಗೆ ಹೊಸ ಬಂಪರ್, ಫಾಗ್‌ಲ್ಯಾಂಪ್‌ಗಳು ಆರೇಂಜ್ ಸರೌಂಡ್ ಅನ್ನು ಪಡೆಯುತ್ತವೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಆರೇಂಜ್ ಬಣ್ಣವು ಸಿಟ್ರನ ಸಿ3 ಮಾದರಿಯ ವಿವಿಧ ತಾಂತ್ರಿಕ ಅಂಶಗಳಲ್ಲಿ ಕಂಡುಬರಲಿದ್ದು, ಇದು ರಿಯರ್ ವ್ಯೂ ಮಿರರ್ ಮತ್ತು ರೂಫ್ ರೈಲ್ಸ್ ಒಳಗೊಂಡಿದೆ. ಇದರಲ್ಲಿ ಆಲ್-ರೌಂಡ್ ಬಾಡಿ ಕ್ಲಾಡಿಂಗ್ ಅನ್ನು ಸಹ ನೀಡಲಾಗಿದ್ದು, ಸೈಡ್ ಪ್ರೊಫೈಲ್‌ಗೆ ಸ್ಟೈಲಿಂಗ್‌ ಸೇರಿಸಲು ಕಂಪನಿಯು ಕಪ್ಪು ಬಣ್ಣದ ಬಾಡಿ ಕ್ಲಾಡಿಂಗ್‌ನಲ್ಲಿ ಎಂಬೆಡ್ ಮಾಡಿದ ಸ್ವಲ್ಪ ಕಿತ್ತಳೆ ಅಂಶವನ್ನು ಸೇರಿಸಿದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಇದರಲ್ಲಿ ಎ ಮತ್ತು ಬಿ ಪಿಲ್ಲರ್‌ಗಳು ಕಪ್ಪು ಬಣ್ಣವನ್ನು ಹೊಂದಿದ್ದರೆ ಸಿ ಪಿಲ್ಲರ್ ಕಪ್ಪು ಪ್ಯಾನೆಲ್‌ನಲ್ಲಿ ಆರೇಂಜ್ ಪಟ್ಟಿ ನೀಡಲಾಗಿದ್ದು, ರೂಫ್ ರೈಲ್ಸ್ ಹಳಿಗಳು ಸ್ಟೈಲಿಂಗ್ ಅಂಶಕ್ಕೆ ಮಾತ್ರ ಸೇರಿಸಲಾಗಿದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ತದನಂತರ ಹೊಸ ಕಾರು ಮಾದರಿಯಲ್ಲಿ ಗಮನಸೆಳೆಯುವ ಅಂಶವೆಂದರೆ ಹಿಂಭಾಗದ ವಿನ್ಯಾಸವು ಅತ್ಯತ್ತಮವಾಗಿದೆ. ಹಿಂಬದಿಯಲ್ಲಿ ಸುತ್ತುವರಿದ ಟೈಲ್ ಲ್ಯಾಂಪ್‌ಗಳು, 'CITROEN' ಬ್ಯಾಡ್ಜಿಂಗ್ ಕೂಡಾ ಉತ್ತಮವಾಗಿ ಕಾಣುತ್ತದೆ. ಜೊತೆಗೆ ಎಲ್ಇಡಿ ಟೈಲ್ ಲ್ಯಾಂಪ್‌ಗಳ ಪಕ್ಕದಲ್ಲಿರುವ ಕ್ರೋಮ್ ಅಂಶಗಳು ಮತ್ತು ಬಂಪರ್‌ನಲ್ಲಿರುವ ಕ್ರೋಮ್ ಸ್ಟ್ರಿಪ್ ಜೊತೆಗೆ ಕ್ರೋಮ್ ರಿಫ್ಲೆಕ್ಟರ್ ಸುತ್ತುವರೆದಿರುವುದು ಪ್ರೀಮಿಯಂ ನೋಟವನ್ನು ನೀಡುತ್ತದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಹೊಸ ಕಾರು ಪ್ರೀಮಿಯಂ ಮತ್ತು ಸೊಗಸಾದ ನೋಟವನ್ನು ಹೊಂದಿದ್ದರೂ ಸಹ ಸಬ್-ಕಂಪ್ಯಾಕ್ಟ್ ಎಸ್‌ಯುವಿ ವೆಚ್ಚ ಕಡಿತಕ್ಕಾಗಿ ಕೆಲವು ಪ್ರಮುಖ ತಾಂತ್ರಿಕ ಅಂಶಗಳನ್ನು ಕೈಬಿಟ್ಟಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಹೊಸ ಕಾರಿನಲ್ಲಿ ಶಾರ್ಕ್-ಫಿನ್ ಆಂಟೆನಾ ಹಳೆಯ ಮಾದರಿಯ ವೈರ್ ಆಂಟೆನಾ ಸೇರಿದಂತೆ ಕೆಲವು ಬಜೆಟ್ ಫೀಚರ್ಸ್‌ಗಳನ್ನು ನೋಡಬಹುದಾಗಿದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ವೆಚ್ಚ ಕಡಿತ ಮಾಡಿರುವುದಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆ ಎಂದರೆ ಹೊಸ ಕಾರಿನಲ್ಲಿ ಅಲಾಯ್ ಚಕ್ರಗಳ ಬದಲಾಗಿ ಸ್ಟೀಲ್ ವ್ಹೀಲ್ ನೀಡಲಾಗಿದ್ದು, ಚಕ್ರಗಳಿಗೆ ಹೊಸ ಲುಕ್ ನೀಡಲು ಪ್ಲಾಸ್ಟಿಕ್ ವ್ಹೀಲ್ ಕ್ಯಾಪ್‌ಗಳನ್ನು ಜೋಡಿಸಲಾಗಿದೆ. ಹೊಸ ಕಾರಿನಲ್ಲಿ ಅಲಾಯ್ ಚಕ್ರಗಳು ಮತ್ತು ಶಾರ್ಕ್-ಫಿನ್ ಆಂಟೆನಾಗಳ ಕೊರತೆ ಹೊರತುಪಡಿಸಿ ಸಿಟ್ರನ್ ಸಿ3 ಮಾದರಿಯು ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚು ಪ್ರೀಮಿಯಂ ಮಾದರಿಯಾಗಲಿದೆ ಎನ್ನಬಹುದು.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಒಳಾಂಗಣ ಮತ್ತು ಕ್ಯಾಬಿನ್

ಸಿಟ್ರನ್ ಕಂಪನಿಯು ತನ್ನ ಕಾರುಗಳಲ್ಲಿ ಅತ್ಯತ್ತಮ ಒಳಾಂಗಣವನ್ನು ಅಳವಡಿಸುವಲ್ಲಿ ಹೆಸರುವಾಸಿಯಾಗಿದ್ದು, ಸಿ3 ಕೂಡಾ ಅತ್ಯತ್ತಮ ಒಳಾಂಗಣ ವಿನ್ಯಾಸವನ್ನು ಹೊಂದಿದೆ. ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಡ್ಯಾಶ್‌ಬೋರ್ಡ್ ಸಿದ್ದಪಡಿಸಿದ್ದು, ಆಸನಗಳು ಸೂಕ್ಷ್ಮ ಮತ್ತು ಸರಳವಾಗಿವೆ. ಹೊಸ ಕಾರಿನಲ್ಲಿ ಗ್ರಾಹಕರು ಡ್ಯುಯಲ್-ಟೋನ್ ಸೀಟ್‌ಗಳನ್ನು ಪಡೆಯಲಿದ್ದು, ಇವುಗಳು ಕೂಡಾ ಬಣ್ಣಗಳನ್ನು ಆಧರಿಸಿ ಸರಳ ಮಾದರಿಯಲ್ಲಿವೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಹೊಸ ಕಾರಿನಲ್ಲಿ ಡ್ಯಾಶ್‌ಬೋರ್ಡ್ ಸೌಲಭ್ಯವು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮ ಎನ್ನಿಸಲಿದ್ದು, ಡ್ಯಾಶ್‌ಬೋರ್ಡ್‌ನ ಹೆಚ್ಚಿನ ಭಾಗವು ವಿಶಿಷ್ಟವಾಗಿ ಆರೇಂಜ್ ಕ್ರೋಮ್‌ನೊಂದಿಗೆ ಸಿದ್ದಗೊಂಡಿವೆ. ಹಾಗೆಯೇ ಎಸಿ ವೆಂಟ್‌ಗಳು ವಿಶಿಷ್ಟವಾಗಿದ್ದು, ಡ್ಯಾಶ್‌ಬೋರ್ಡ್‌ನ ಎರಡೂ ಬದಿಯಲ್ಲಿರುವ ಎಸಿ ವೆಂಟ್ಸ್‌ಗಳನ್ನು ಲಂಬವಾಗಿ ಇರಿಸಲಾಗಿದ್ದು, ಮಧ್ಯದಲ್ಲಿರುವ ಎಸಿ ವೆಂಟ್ಸ್ ಸೌಲಭ್ಯವನ್ನು ಅಡ್ಡಲಾಗಿ ಇರಿಸಲಾಗಿದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಇನ್ನು ಚಾಲಕನ ಬಲಭಾಗದಲ್ಲಿರುವ ಫ್ಲಾಟ್-ಬಾಟಮ್ ಸ್ಟೀರಿಂಗ್ ಚಕ್ರವು ಸಿಟ್ರನ್ ಲೋಗೋವನ್ನು ಕೇಂದ್ರದಲ್ಲಿ ಪಡೆದುಕೊಂಡಿದ್ದು, ನೀವು ಆಡಿಯೊ ಸೆಟ್ಟಿಂಗ್‌ಗಳಿಗಾಗಿ ಸ್ಟೀರಿಂಗ್-ಮೌಂಟೆಡ್ ನಿಯಂತ್ರಣಗಳನ್ನು ಪಡೆಯಬಹುದಾಗಿದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಸ್ಟೀರಿಂಗ್ ಚಕ್ರದ ಹಿಂಬದಿಯಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದ್ದು, ಇದು ಟ್ರಿಪ್ ಮೀಟರ್, ಗಮ್ಯಸ್ಥಾನ ತಲುಪಲು ಖಾಲಿ ಇರುವ ಅಂತರ, ಸರಾಸರಿ ಇಂಧನ ಬಳಕೆ, ಕಡಿಮೆ ಇಂಧನ ಲಭ್ಯತೆ ಸಂದರ್ಭದಲ್ಲಿ ಎಚ್ಚರಿಕೆಯ ಕರೆ, ಗೇರ್ ಶಿಫ್ಟ್ ಸೂಚನೆ ಸೇರಿದಂತೆ ಪ್ರಮುಖ ಎಚ್ಚರಿಕೆಯ ಅಲಾರಾಂ ಹೊಂದಿದೆ. ಆದರೆ ಹೊಸ ಕಾರಿನಲ್ಲಿ ಕಂಪನಿಯು ಟ್ಯಾಕೋ ಮೀಟರ್ ಅನ್ನು ನೀಡದಿರುವುದು ಗ್ರಾಹಕರಿಗೆ ಅಸಮಾಧಾನ ಉಂಟುಮಾಡಬಹುದು.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಇನ್ನು ಡ್ಯಾಶ್‌ಬೋರ್ಡ್‌ನಲ್ಲಿ ಕಂಪನಿಯು 10.25-ಇಂಚಿನ ಸಿಟ್ರನ್ ಕನೆಕ್ಟ್ ಇನ್ಫೋಟೈನ್‌ಮೆಂಟ್ ಘಟಕವನ್ನು ಜೋಡಿಸಿದ್ದು, ಇದು ಸಾಕಷ್ಟು ಸುಧಾರಿತ ಫೀಚರ್ಸ್‌ಗಳೊಂದಿಗೆ ಬ್ಲೂಟೂತ್ ಸಂಪರ್ಕದಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಹಾಗೆಯೇ ನಾಲ್ಕು ಸ್ಪೀಕರ್‌ಗಳ ಮೂಲಕ ಆಡಿಯೋ ಸೌಲಭ್ಯವನ್ನು ಉತ್ತಮವಾಗಿಸಿದ್ದು, ಬಜೆಟ್ ಬೆಲೆಯಲ್ಲೂ ಕಂಪನಿಯು ಹೊಸ ಕಾರಿನಲ್ಲಿ ವೈರ್‌ಲೆಸ್ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸೌಲಭ್ಯವನ್ನು ನೀಡುತ್ತಿರುವುದು ಉತ್ತಮ ವಿಷಯವಾಗಿದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಈ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಇನ್ಫೋಟೈನ್‌ಮೆಂಟ್ ಯೂನಿಟ್‌ನೊಂದಿಗೆ ಜೋಡಿಸುವುದು ಸರಳ ಪ್ರಕ್ರಿಯೆಯಾಗಿದ್ದು, ಅದರ ಕಾರ್ಯಾಚರಣೆಯಲ್ಲಿ ಯಾವುದೇ ವಿಳಂಬವಿಲ್ಲ ಮತ್ತು ಅದನ್ನು ಬಳಸುವುದು ತುಂಬಾ ಸುಲಭವಾಗಿರುತ್ತದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಇನ್ನು ಹಿಂಬದಿ ಆಸನಗಳತ್ತ ಗಮನಿಸಿದಾಗ ನೀವು ಒಂದು ಬದಿಯಲ್ಲಿ ಯುಎಸ್‌ಬಿ ಟೈಪ್-ಎ ವಿಧಾನದ ಚಾರ್ಜರ್ ಮತ್ತು ಇನ್ನೊಂದು ಬದಿಯಲ್ಲಿ 12ವಿ ಸಾಕೆಟ್ ಅನ್ನು ಕಾಣಬಹುದಾಗಿದ್ದು, ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸಂಗ್ರಹಿಸಲು ಕ್ಯೂಬಿಹೋಲ್ ಇದೆ ಮತ್ತು ಅದರ ಕೆಳಗೆ ಕಪ್ ಹೋಲ್ಡರ್‌ಗಳಿವೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಹೊರಭಾಗದಲ್ಲಿನ ಸೌಲಭ್ಯಗಳಂತೆ ಸಿಟ್ರನ್ ಕಂಪನಿಯು ಹೊಸ ಕಾರಿನ ಒಳಗೂ ವೆಚ್ಚ ಕಡಿತ ಮಾಡುವ ಪ್ರಕ್ರಿಯೆಗಳನ್ನು ಕೈಗೊಂಡಿರುವ ಸ್ವಷ್ಟವಾಗಿ ಕಾಣಲಿದ್ದು, ಸಬ್-ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಒಳಭಾಗದಿಂದಲೇ ರಿಯಲ್ ವ್ಯೂ ಮಿರರ್‌ಗಳನ್ನು ಹೊಂದಿಸಬೇಕಿದಿದ್ದು, ಸಿಟ್ರನ್‌ನಂತಹ ಪ್ರೀಮಿಯಂ ಬ್ರ್ಯಾಂಡ್‌ ಮಾದರಿಗಳಲ್ಲೂ ಮ್ಯಾನುವಲ್ ಸೌಲಭ್ಯವು ಗ್ರಾಹಕರಿಗೆ ಅಚ್ಚರಿ ಮೂಡಿಸಬಹುದು.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಇದಲ್ಲದೇ ನೀವು ಎಲ್ಲಾ ನಾಲ್ಕು ಬಾಗಿಲುಗಳಲ್ಲೂ ಪವರ್ ವಿಂಡೋಗಳಿದ್ದು, ಆದಾಗ್ಯೂ ಅವುಗಳನ್ನು ಕಾರ್ಯನಿರ್ವಹಿಸಲು ಬಾಗಿಲಗಳಲ್ಲೇ ಸ್ವಿಚ್‌ ಬದಲಿಗೆ ಬೆಸ್ ಸ್ಥಾನದಲ್ಲಿ ಇರಿಸಲಾಗುತ್ತದೆ. ಸೆಂಟರ್ ಕನ್ಸೋಲ್‌ನಲ್ಲಿ ಹ್ಯಾಂಡ್‌ಬ್ರೇಕ್‌ ಹಿಂಭಾಗದಲ್ಲಿ ಪ್ರಯಾಣಿಕರಿಗೆ ಪವರ್ ವಿಂಡೋ ಸ್ವಿಚ್‌ಗಳನ್ನು ಇರಿಸಲಾಗಿದ್ದು, ಹೀಗಾಗಿ ಹಿಂದಿನ ಬಾಗಿಲುಗಳಲ್ಲಿ ಸ್ವಿಚ್‌ಗಳಿರುವಿದಿಲ್ಲ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಎಲ್ಲಾ ನಾಲ್ಕು ಪವರ್ ವಿಂಡೋಗಳು ಒನ್-ಟಚ್ ಡೌನ್ ಫಂಕ್ಷನ್ ಅನ್ನು ಪಡೆಯಲಿದ್ದು, ಒನ್-ಟಚ್ ರೈಸಿಂಗ್ ಫಂಕ್ಷನ್‌ನೊಂದಿಗೆ ಬರುವುದಿಲ್ಲ. ಹೀಗಾಗಿ ಹೊಸ ಕಾರನ್ನು ಕಂಪನಿಯು ಪ್ರತಿಸ್ಪರ್ಧಿಗಳ ಬೆಲೆ ಆಧರಿಸಿ ನಿರ್ಮಾಣಗೊಳಿಸಿರುವುದು ಸ್ಪಷ್ಟವಾಗುತ್ತದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಕಂಫರ್ಟ್ ಮತ್ತು ಬೂಟ್‌ಸ್ಪೇಸ್

ಸಿಟ್ರನ್ ಕಂಪನಿಯು 1948ರಲ್ಲಿ ತನ್ನ ಮೊದಲ ಕಾರು ಮಾದರಿಯಾದ 2ಸಿವಿ ಚೊಚ್ಚಲ ಕಾರು ಮಾದರಿಯಿಂದಲೂ ಒಳಾಂಗಣ ಅತ್ಯುತ್ತಮ ಸೌಕರ್ಯವನ್ನು ನೀಡುತ್ತಿರುವುದು ಸ್ಪಷ್ಟವಾಗಿದ್ದು, ಆರಾಮದಾಯಕ ಪ್ರಯಾಣಕ್ಕೆ ಸಿಟ್ರನ ಕಾರುಗಳು ಈಗಾಗಲೇ ಸಾಕಷ್ಟು ಹೆಸರುವಾಸಿವಾಗಿವೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಸಿಟ್ರನ್ ಕಂಪನಿಯು ಸಿ3 ಮಾದರಿಯಲ್ಲೂ ಆರಾಮದಾಯಕ ಪ್ರಯಾಣಕ್ಕಾಗಿ ಮುಂಭಾಗದಲ್ಲಿ ಇತರೆ ಮಾದರಿಗಳಲ್ಲಿ ಆರಾಮದಾಯಕವಾಗ ಕ್ಯಾಬಿನ್ ನೀಡಿದ್ದು, ಹೊಸ ಕಾರಿನಲ್ಲಿ ಮೊದಲನೆಯದಾಗಿ, ಉತ್ತಮ ಸವಾರಿಯ ಗುಣಮಟ್ಟವಿದೆ ಎನ್ನಬಹುದು. ಅರಾಮದಾಯ ಪ್ರಯಾಣಕ್ಕೆ ಉತ್ತಮವಾದ ತೊಡೆಯ ಬೆಂಬಲ ಮತ್ತು ಸೊಂಟದ ಬೆಂಬಲ ಹೊಂದಿರುವ ಆಸನಗಳನ್ನು ನೀಡಲಾಗಿದ್ದರೂ ಎಲ್ಲಾ ಆಸನಗಳು ಸ್ಥಿರವಾದ ಹೆಡ್‌ರೆಸ್ಟ್‌ಗಳೊಂದಿಗೆ ಬರುತ್ತವೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಹೊಸ ಕಾರಿನಲ್ಲಿ ಸ್ಥಿರವಾದ ಹೆಡ್‌ರೆಸ್ಟ್‌ಗಳು ಖಂಡಿತವಾಗಿಯೂ ಸುಧಾರಿಸಬಹುದಾದ ಸಂಗತಿಯಾಗಿದ್ದು, ಹೊಂದಾಣಿಕೆ ಮಾಡಬಹುದಾದ ಹೆಡ್‌ರೆಸ್ಟ್‌ಗಳಿದ್ದಲ್ಲಿ ಚಾಲಕ ಮತ್ತು ಪ್ರಯಾಣಿಕರಿಗೆ ಹೆಚ್ಚು ಉಪಯುಕ್ತ ಎನ್ನಬಹುದು.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಆದರೆ ಸಿಟ್ರನ್ ಸಿ3 ಕ್ಯುಬಿಹೋಲ್‌ಗಳ ಲೋಡ್‌ಗಳು ಮತ್ತು ಅದರ ಸುತ್ತಲೂ ಬಳಸಬಹುದಾದ ತಂತ್ರಜ್ಞಾನ ಸೌಲಭ್ಯದಲ್ಲಿ ಇತರೆ ಮಾದರಿಗಳಿಂತಲೂ ಅತ್ಯಂತ ಪ್ರಾಯೋಗಿಕ ವಾಹನಗಳಲ್ಲಿ ಒಂದಾಗಿದೆ ಎನ್ನಬಹುದಾಗಿದೆ. ಸ್ಮಾರ್ಟ್‌ಫೋನ್ ಅನ್ನು ಇರಿಸಲು ಡ್ಯಾಶ್‌ಬೋರ್ಡ್‌ನಲ್ಲಿ ಪ್ರತ್ಯೇಕ ಸ್ಥಳದೊಂದಿಗೆ ಉತ್ತಮವಾದ ಗ್ಲೋವ್‌ಬಾಕ್ಸ್, ಬಾಗಿಲಗಳಲ್ಲಿ ಬಾಟಲ್ ಪಾಕೆಟ್, ಸೀಟ್ ಬ್ಯಾಕ್ ಪಾಕೆಟ್ ಸೌಲಭ್ಯಗಳನ್ನು ಟಾಪ್-ಸ್ಪೆಕ್ ವೆರಿಯಂಟ್‌ನಲ್ಲಿ ಮಾತ್ರ ಲಭ್ಯವಿವೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಹಿಂಭಾಗದಲ್ಲಿರುವ ಪ್ರಯಾಣಿಕರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್ ಮಾಡಲು ವಿಂಡೋ ಸ್ವಿಚ್‌ಗಳ ಹಿಂದೆ ಸೆಂಟರ್ ಕನ್ಸೋಲ್‌ನಲ್ಲಿ ಒಂದೇ ಕಪ್‌ಹೋಲ್ಡರ್ ಮತ್ತು ಎರಡು ಯುಎಸ್‌ಬಿ ಸ್ಲಾಟ್‌ಗಳನ್ನು ಪಡೆದುಕೊಳ್ಳಲಿದ್ದು, ಸಿ3 ಅದರ ಗಾತ್ರಕ್ಕೆ ಅದ್ಭುತವಾದ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಹೊಸ ಕಾರಿನಲ್ಲಿ 315 ಲೀಟರ್ ಸಾಮರ್ಥ್ಯದ ಸಂಗ್ರಹಣಾ ಸೌಲಭ್ಯವನ್ನು ನೀಡಲಾಗಿದ್ದು, ಹೊಸ ಕಾರಿನಲ್ಲಿ ಎಂಜಿನ್ ಆಯ್ಕೆ ಕೂಡಾ ಗ್ರಾಹಕರನ್ನು ಸೆಳಯಲಿವೆ ಎನ್ನಬಹುದು.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಎಂಜಿನ್ ಆಯ್ಕೆ ಮತ್ತು ಕಾರ್ಯಕ್ಷಮತೆ

ಹೊಸ ಸಿ3 ಮಾದರಿಯಲ್ಲಿ ಸಿಟ್ರನ್ ಕಂಪನಿಯು ಎರಡು ಎಂಜಿನ್ ಆಯ್ಕೆಗಳನ್ನು ನೀಡಿದ್ದು, ಮೂಲ ರೂಪಾಂತರವು 1.2-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಮೂರು-ಸಿಲಿಂಡರ್ ಪ್ಯೂರ್‌ಟೆಕ್ 82 ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಹೆಸರಿನಲ್ಲಿಯೇ ಸೂಚಿಸುವಂತೆ ಬೆಸ್ ಮಾದರಿಯು 80.8 ಬಿಎಚ್‌ಪಿ ಪವರ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಗರಿಷ್ಠ 115 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಬೆಸ್ ವೆರಿಯೆಂಟ್‌ನಲ್ಲಿ ಕಂಪನಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಆಯ್ಕೆ ಮಾತ್ರ ನೀಡುತ್ತದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಹೊಸ ಕಾರಿನಲ್ಲಿ ಹೆಚ್ಚು ಶಕ್ತಿಶಾಲಿಯಾದ ಎಂಜಿನ್ ಆಯ್ಕೆಯು ಉತ್ತಮ ಮಾದರಿಯಾಗಿ ಹೊರಹೊಮ್ಮಲಿದೆ. ಮೂಲಭೂತವಾಗಿ ಇದು ಟರ್ಬೊ ಚಾರ್ಜರ್ನೊಂದಿಗೆ 1.2 ಲೀಟರ್ ಎಂಜಿನ್ ಆಗಿದ್ದು, ಇದನ್ನು ತಾಂತ್ರಿಕವಾಗಿ ಪ್ಯೂರ್‌ಟೆಕ್ 110 ಎಂದು ಹೆಸರಿಸಲಾಗಿದೆ. ಇದು 110ಪಿಎಸ್ ಅಥವಾ 108.4 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಈ ಎಂಜಿನ್ ಅನ್ನು ಕಂಪನಿಯು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಿದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಹೀಗಾಗಿ ಕಂಪನಿಯು ಸದ್ಯಕ್ಕೆ ಹೊಸ ಕಾರಿನಲ್ಲಿ ಯಾವುದೇ ಎಂಜಿನ್ ಆಯ್ಕೆಯಲ್ಲೂ ಆಟೋಮ್ಯಾಟಿಕ್ ಆವೃತ್ತಿಯನ್ನು ನೀಡುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದ್ದು, ಭವಿಷ್ಯದಲ್ಲಿ ಟರ್ಬೊ ಪೆಟ್ರೋಲ್ ಮಾದರಿಯಲ್ಲಿ ಎಎಂಟಿ ಮಾದರಿಯನ್ನು ನೀರಿಕ್ಷೆ ಮಾಡಬಹುದಾಗಿದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಹೊಸ ಕಾರಿನಲ್ಲಿ ಪ್ರತಿ ಮಾದರಿಯು ಚಾಲನೆಗೆ ಉತ್ತಮಲಾಗಿದ್ದು, ಮೂರು-ಸಿಲಿಂಡರ್ ಎಂಜಿನ್ ಹೆಚ್ಚಿನ ಪುನರಾವರ್ತನೆಗಳಲ್ಲಿ ಹೆಚ್ಚಿನ ಶಬ್ದ ಮಾತ್ರ ಕೇಳುತ್ತದೆ ಮತ್ತು ಕಡಿಮೆ ಆರ್‌ಪಿಎಂಗಳಲ್ಲಿಇಂತಹ ಯಾವುದೇ ಸಮಸ್ಯೆಗಳಿರುವುದಿಲ್ಲ. ಇನ್ನು ಹೊಸ ಕಾರಿನಲ್ಲಿ ಕ್ಲಚ್ ಹಗುರವಾಗಿದ್ದು, ಪ್ರತಿಕ್ರಿಯೆ ಅದ್ಭುತವಾಗಿದೆ. ಥ್ರೊಟಲ್‌ನಲ್ಲಿ ಕ್ಲಚ್ ಪೆಡಲ್ ಮತ್ತು ಪ್ರಾಡ್ ಅನ್ನು ಬಿಟ್ಟು ವೇಗವನ್ನು ತ್ವರಿತವಾಗಿ ಕಂಡುಕೊಳ್ಳುವುದನ್ನು ನೀವು ಕಾಣಬಹುದು.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಪೀಕ್ ಟಾರ್ಕ್ ಅತ್ಯಂತ ಕಡಿಮೆ ಎಂಜಿನ್ ವೇಗದಲ್ಲಿ ಬರುವುದರಿಂದ ಟಾರ್ಕ್ ಅಲೆಯಲ್ಲಿ ಸವಾರಿ ಮಾಡುವುದು ತುಂಬಾ ಸುಲಭವಾಗಿದೆ. ಇದರರ್ಥ, ಯಾವುದೇ ಟರ್ಬೊ ಲ್ಯಾಗ್ ಇಲ್ಲ ಮತ್ತು ನೀವು ಯಾವುದೇ ಗೇರ್‌ನಲ್ಲಿದ್ದರೂ ಅದನ್ನು ಹಿಂದಿಕ್ಕುವುದು ಸುಲಭವಾಗಿದೆ. ಗೇರ್‌ಗಳ ಕುರಿತು ಹೇಳುವುದಾದರೆ ಟಾಪ್-ಸ್ಪೆಕ್ ಮಾಡೆಲ್‌ನಲ್ಲಿರುವ ಗೇರ್‌ಬಾಕ್ಸ್ ಕ್ಲಿಕ್-ಶಿಫ್ಟಿಂಗ್ ಆಗಿದೆ ಮತ್ತು ಅದನ್ನು ಬದಲಾಯಿಸಲು ಸಹ ಸುಲಭವಾಗಿರುತ್ತದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ರಿವರ್ಸ್ ಗೇರ್‌ಗೆ ಬದಲಾಯಿಸುವುದು ಕೂಡಾ ತುಂಬಾ ಸುಲಭವಾಗಿದ್ದರೂ ನಾವು ರಿವರ್ಸ್ ಗೇರ್‌ನಿಂದ ಹೊರತೆಗೆಯಲು ಮತ್ತು ತಟಸ್ಥಗೊಳಿಸಲು ಕೆಲವು ಸಮಸ್ಯೆಗಳು ಕಂಡುಬಂದಿದ್ದು ಮಾತ್ರ ಸುಳ್ಳಲ್ಲ. ಆದಾಗ್ಯೂ ಮೊದಲ ಡ್ರೈವ್ ಸಂದರ್ಭದಲ್ಲಿ ಇಂತಹ ಸಮಸ್ಯೆಗಳನ್ನು ನಾವು ಬೇರೆ ಯಾವುದೇ ಕಾರುಗಳಲ್ಲಿ ನೋಡದ ಕಾರಣ ಇದೊಂದು ಸಾಮಾನ್ಯ ಕಾರಣ ಎನ್ನಬಹುದು.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ನಾವು ಈಗಾಗಲೇ ಹೇಳಿದಂತೆ ಹೊಸ ಕಾರಿನ ವೇಗವರ್ಧನೆಯು ಸಾಕಷ್ಟು ಪ್ರಬಲವಾಗಿದ್ದು, ಸೊನ್ನೆಯಿಂದ-100 ಕಿ.ಮೀ ವೇಗವನ್ನು ಸುಮಾರು 10 ಸೆಕೆಂಡುಗಳಲ್ಲಿ ಸಾಧಿಸಬಹುದಾಗಿದ್ದು, ಇದರಲ್ಲಿ ಯಾವುದೇ ಡ್ರೈವ್ ಮೋಡ್‌ಗಳಿಲ್ಲದಿರುವುದು ಗ್ರಾಹಕರ ಆಯ್ಕೆಗೆ ಹಿನ್ನಡೆ ಉಂಟುಮಾಡಬಹುದು.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಇನ್ನು ಸ್ಟೀರಿಂಗ್ ಚಕ್ರವು ಹಿಡಿತವು ಚೆನ್ನಾಗಿರುವುದರಿಂದ ಅದು ನೀಡುವ ಪ್ರತಿಕ್ರಿಯೆಯೂ ಕೂಡೂ ಉತ್ತಮವಾಗಿದೆ. ಹೀಗಾಗಿ ಇದು ಸಮತೋಲಿತವಾಗಿದ್ದು, ಇದು ಕಡಿಮೆ ವೇಗದಲ್ಲಿ ಹಗುರವಾಗಿರುತ್ತದೆ ಮತ್ತು ವೇಗ ಹೆಚ್ಚಾದಂತೆ ಅದು ಹೊಸ ಅನುಭವ ನೀಡುತ್ತದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಈ ಮೂಲಕ ಸಿಟ್ರನ್ ಸಿ3 ಮೃದುವಾದ ಅಮಾನತುಗೊಳಿಸುವಿಕೆಯ ಪರಿಣಾಮವಾಗಿ ಉತ್ತಮವಾದ ಬಾಡಿ ರೋಲ್ ಹೊಂದಿದ್ದು, ಮೃದುವಾದ ಅಮಾನತುಗೊಳಿಸುವಿಕೆಯು ಸವಾರಿ ಗುಣಮಟ್ಟವನ್ನು ಹೆಚ್ಚಿಸುತ್ತದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಅಂತಿಮವಾಗಿ ನಾವು ಬ್ರೇಕಿಂಗ್ ಸೌಲಭ್ಯದ ಬಗೆಗೆ ಹೇಳುವುದಾದರೇ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳು ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಜೋಡಿಸಲಾಗಿದ್ದು, ಬ್ರೇಕಿಂಗ್ ಸೌಲಭ್ಯವು ಕಾರಿನ ಎಂಜಿನ್ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಗ್ಯವಾಗಿದೆ ಮತ್ತು ಬ್ರೇಕಿಂಗ್ ಬೈಟ್ ಸಾಕಷ್ಟು ಉತ್ತಮವಾಗಿದೆ. ಆದಾಗ್ಯೂ, ಪೆಡಲ್ ಸೌಲಭ್ಯವು ಸಾಮಾನ್ಯ ಮಾದರಿಗಳಿಂತಲೂ ಹೆಚ್ಚು ಉದ್ದವಾಗಿದ್ದು, ಇದು ಕೆಲವು ದಿನಗಳ ಚಾಲನೆ ನಂತರ ಅಭ್ಯಾಸುತ್ತದೆ.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಒಟ್ಟಾರೆಯಾಗಿ ಸಿಟ್ರನ್ ಸಿ3 ಆಕರ್ಷಕ ಮತ್ತು ನೇರ ಚಾಲನಾ ಅನುಭವ ಒದಗಿಸಲು ಉತ್ತಮ ಮಾದರಿಯಾಗಲಿದ್ದು, ಹೊಸ ಕಾರು ಗ್ರಾಹಕರನ್ನು ಆಕರ್ಷಿಸುವಲ್ಲಿ ಹಲವಾರು ಹೊಸ ಅಂಶಗಳು ಈ ಕಾರಿನಲ್ಲಿ ಎನ್ನಬಹುದು.

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಸುರಕ್ಷಾ ಸೌಲಭ್ಯಗಳು

ಸಿಟ್ರನ್ ಕಂಪನಿಯು ತನ್ನ ಹೊಸ ಸಿ3 ಮಾದರಿಯಲ್ಲಿ ಸಾಕಷ್ಟು ಹೊಸ ಸುರಕ್ಷಾ ವೈಶಿಷ್ಟ್ಯಗಳನ್ನು ನೀಡಿದ್ದು, ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮವಾದ ಸೌಲಭ್ಯಗಳನ್ನು ಹೊಂದಿದೆ.

ಸಿಟ್ರನ್ ಸಿ3 ಸುರಕ್ಷತಾ ವೈಶಿಷ್ಟ್ಯಗಳು

- ಚಾಲಕ ಮತ್ತು ಪ್ರಯಾಣಿಕರ ಏರ್‌ಬ್ಯಾಗ್‌ಗಳು

- ರಿವರ್ಸ್ ಪಾರ್ಕಿಂಗ್ ಸೆನ್ಸಾರ್

- ಹಿಂದಿನ ಬಾಗಿಲುಗಳಲ್ಲಿ ಚೈಲ್ಡ್ ಲಾಕ್

- ಎಂಜಿನ್ ಇಮೊಬಿಲೈಜರ್

- ಸ್ಪೀಡ್-ಸೆನ್ಸಿಟಿವ್ ಡೋರ್ ಲಾಕ್

ಸಿ3 ಕಾರಿನ ಪ್ರಮುಖ ವೈಶಿಷ್ಟ್ಯತೆಗಳು

- ಎಲ್ಇಡಿ ಡಿಆರ್‌ಎಲ್‌

- ಸಿಟ್ರನ್ ಕನೆಕ್ಟ್ ಸೌಲಭ್ಯದೊಂದಿಗೆ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ

- ವೈರ್‌ಲೆಸ್ ಸ್ಮಾರ್ಟ್‌ಫೋನ್ ಸಂಪರ್ಕ

- ಫೋಲ್ಡ್-ಫ್ಲಾಟ್ ಹಿಂದಿನ ಸೀಟ್

- ಒನ್-ಟಚ್ ಡೌನ್ ವಿಂಡೋಸ್

- ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಸಿ3 ಬಣ್ಣ ಆಯ್ಕೆಗಳು

ಸಿಂಗಲ್ ಟೋನ್ ಬಣ್ಣಗಳ ಆಯ್ಕೆ

- ಪೋಲಾರ್ ವೈಟ್

- ಝೆಸ್ಟಿ ಆರೆಂಜ್

- ಪ್ಲಾಟಿನಂ ಗ್ರೇ

- ಸ್ಟೀಲ್ ಗ್ರೇ

ಡ್ಯುಯಲ್-ಟೋನ್ ಬಣ್ಣಗಳ ಆಯ್ಕೆ

- ಝೆಸ್ಟಿ ಆರೆಂಜ್ ರೂಫ್‌ನೊಂದಿಗೆ ಪೋಲಾರ್ ವೈಟ್ ಬಾಡಿ

- ಜೆಸ್ಟಿ ಆರೆಂಜ್ ರೂಫ್‌ನೊಂದಿಗೆ ಪ್ಲಾಟಿನಂ ಗ್ರೇ ಬಾಡಿ

- ಪ್ಲಾಟಿನಂ ಗ್ರೇ ರೂಫ್‌ನೊಂದಿಗೆ ಪೋಲಾರ್ ವೈಟ್ ಬಾಡಿ

- ಜೆಸ್ಟಿ ಆರೆಂಜ್ ರೂಫ್‌ನೊಂದಿಗೆ ಸ್ಟೀಲ್ ಗ್ರೇ ಬಾಡಿ

- ಪ್ಲಾಟಿನಂ ಗ್ರೇ ರೂಫ್‌ನೊಂದಿಗೆ ಝೆಸ್ಟಿ ಆರೆಂಜ್ ಬಾಡಿ

- ಸ್ಟೀಲ್ ಗ್ರೇ ಬಾಡಿ ಜೊತೆಗೆ ಪ್ಲಾಟಿನಂ ಗ್ರೇ ರೂಫ್

ಹೊಸ ಸಂಚಲನ ಮೂಡಿಸಲಿರುವ ಸಿಟ್ರನ್ ಸಿ3 ಫಸ್ಟ್ ಡ್ರೈವ್ ರಿವ್ಯೂ

ಸಿ3 ಕುರಿತಾಗಿ ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸಿ5 ಏರ್‌ಕ್ರಾಸ್ ಮಾದರಿಯೊಂದಿಗೆ ಪ್ರೀಮಿಯಂ ವಿಭಾಗದಲ್ಲಿ ಈಗಾಗಲೇ ಉತ್ತಮ ಬೇಡಿಕೆ ಹೊಂದಿರುವ ಸಿಟ್ರನ್ ಕಂಪನಿಗೆ ದೇಶಿಯ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರಲು ಬಜೆಟ್ ಮಾದರಿಗಳು ಪ್ರಮುಖ ಪಾತ್ರವಹಿಸಲಿವೆ. ಸಿ3 ಮಾದರಿಯೊಂದಿಗೆ ಹೆಚ್ಚಿನ ಬೇಡಿಕೆಯ ನೀರಿಕ್ಷೆಯಲ್ಲಿರುವ ಕಂಪನಿಗೆ ಹೊಸ ಕಾರಿನ ಬೆಲೆ ಗ್ರಾಹಕರನ್ನು ಆಯ್ಕೆಯನ್ನು ನಿರ್ಧರಿಸಲಿದ್ದು, ಹೊಸ ಕಾರು ಮಾದರಿಯು ತನ್ನದೆ ಹೊಸ ವೈಶಿಷ್ಟ್ಯತೆಗಳೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ ಎನ್ನಬಹುದು.

Most Read Articles

Kannada
English summary
Citroen c3 first drive review design specs performance interiors features
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X