ಫಸ್ಟ್ ಡ್ರೈವ್- ಬಿಡುಗಡೆಗೆ ಸಿದ್ಧವಾದ ದಟ್ಸನ್ ರೆಡಿ ಗೊ 1.0-ಲೀಟರ್ ಕಾರು ಆವೃತ್ತಿ

Written By:

ಹೊಸ ಮಾದರಿಯ 1-ಲೀಟರ್ ದಟ್ಸನ್ ರೆಡಿ ಗೊ ಕಾರು ಇದೇ ತಿಂಗಳು 26ರಂದು ಬಿಡುಗಡೆಗೆ ಸಿದ್ಧಗೊಳ್ಳುತ್ತಿದ್ದು, ಈ ಹಿನ್ನೆಲೆ ಡ್ರೈವ್ ಸ್ಪಾರ್ಕ್ ತಂಡ ನಡೆಸಿದ ಮೊದಲ ಚಾಲನಾ ಅನುಭವಗಳು ಇಲ್ಲಿ ಹಂಚಿಕೊಳ್ಳಲಾಗಿದೆ.

ಫಸ್ಟ್ ಡ್ರೈವ್- ಬಿಡುಗಡೆಗೆ ಸಿದ್ಧವಾದ ದಟ್ಸನ್ ರೆಡಿ ಗೊ 1.0-ಲೀಟರ್

ಕಳೆದ ನಾಲ್ಕು ವರ್ಷಗಳ ಹಿಂದೆ ಸಣ್ಣ ಕಾರುಗಳ ಉತ್ಪಾದನೆ ಮತ್ತ ಮಾರಾಟಕ್ಕೆ ಹೊಸ ಆಯಾಮ ನೀಡಿದ್ದ ರೆನಾಲ್ಟ್ ಸಂಸ್ಥೆಯು ದಟ್ಸನ್ ಬ್ರ್ಯಾಂಡ್ ಪರಿಚಯಿಸಿತ್ತು. ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ದಟ್ಸನ್ ಮಾದರಿಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ತನ್ನದೇ ಜನಪ್ರಿಯತೆ ಪಡೆದುಕೊಂಡಿವೆ.

ಫಸ್ಟ್ ಡ್ರೈವ್- ಬಿಡುಗಡೆಗೆ ಸಿದ್ಧವಾದ ದಟ್ಸನ್ ರೆಡಿ ಗೊ 1.0-ಲೀಟರ್

ದಟ್ಸನ್ ಕಾರು ಮಾದರಿಗಳಾದ ದಟ್ಸನ್ ಗೊ ಮತ್ತು ದಟ್ಸನ್ ಗೊ ಪ್ಲಸ್ ಈಗಾಗಲೇ ಭಾರೀ ಬೇಡಿಕೆ ಪಡೆದುಕೊಳ್ಳುವ ಮೂಲಕ ಬೃಹತ್ ಪ್ರಮಾಣದಲ್ಲಿ ಮಾರಾಟವನ್ನು ಕಂಡಿವೆ. ಈ ನಿಟ್ಟಿನಲ್ಲಿ ಮತ್ತೊಂದು ಹೊಸ ಕಾರು ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿರುವ ದಟ್ಸನ್, ಇದೇ ತಿಂಗಳು 26ರಂದು 1.0-ಲೀಟರ್ ರೆಡಿ ಗೊ ಪರಿಚಯಿಸಲಿದೆ.

ಫಸ್ಟ್ ಡ್ರೈವ್- ಬಿಡುಗಡೆಗೆ ಸಿದ್ಧವಾದ ದಟ್ಸನ್ ರೆಡಿ ಗೊ 1.0-ಲೀಟರ್

ಮಾರುತಿ ಆಲ್ಟೋ ಕೆ10, ರೆನಾಲ್ಟ್ ಕ್ವಿಡ್ 1.0-ಲೀಟರ್ ಮತ್ತು ಹ್ಯುಂಡೈ ಇಯಾನ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲಲಿರುವ ದಟ್ಸನ್ 1.0-ಲೀಟರ್ ಆವೃತ್ತಿಗಳು 800ಸಿಸಿ ಮತ್ತು 999 ಸಿಸಿ ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿದೆ.

ಫಸ್ಟ್ ಡ್ರೈವ್- ಬಿಡುಗಡೆಗೆ ಸಿದ್ಧವಾದ ದಟ್ಸನ್ ರೆಡಿ ಗೊ 1.0-ಲೀಟರ್

ಒಳವಿನ್ಯಾಸ ಮತ್ತು ಹೊರವಿನ್ಯಾಸಗಳು

1.0-ಲೀಟರ್ ದಟ್ಸನ್ ಕಾರುಗಳ ಒಳ ವಿನ್ಯಾಸವು ಬಹುತೇಕ ಕಪ್ಪು ಬಣ್ಣದೊಂದಿಗೆ ಅಭಿವೃದ್ಧಿಗೊಂಡಿದ್ದು, ಆರಾಮದಾಯಕ ಪ್ರಯಾಣಕ್ಕೆ ಅನುಕೂಲವಾಗುವಂತೆ ಸಿದ್ಧಪಡಿಸಲಾಗಿರುವ ಸೀಟುಳಿಗೆ ಡ್ಯುಯಲ್ ಟೋನ್ ಬಣ್ಣವನ್ನು ನೀಡಲಾಗಿದೆ.

ಫಸ್ಟ್ ಡ್ರೈವ್- ಬಿಡುಗಡೆಗೆ ಸಿದ್ಧವಾದ ದಟ್ಸನ್ ರೆಡಿ ಗೊ 1.0-ಲೀಟರ್

ಹಿಂಬದಿಯ ಸೀಟುಗಳು ಕೂಡಾ ಗಾತ್ರದಲ್ಲಿ ದೊಡ್ಡದಾಗಿದ್ದು, ಇಬ್ಬರು ವಯಷ್ಕರು ಮತ್ತು ಒಂದು ಮಗು ಆರಾಮವಾಗಿ ಕುಳಿತುಕೊಳ್ಳಬಹುದಾಗಿದೆ. ಇದರ ಜೊತೆಗೆ ಮನರಂಜನೆಗೂ ಒತ್ತು ನೀಡಲಾಗಿದ್ದು, ಉನ್ನತ ಶ್ರೇಣಿ ಆವೃತ್ತಿಯಲ್ಲಿ ಮ್ಯೂಜಿಕ್ ಪ್ಲೇಯರ್ ಸೌಲಭ್ಯವನ್ನು ಇರಿಸಲಾಗಿದೆ.

ಫಸ್ಟ್ ಡ್ರೈವ್- ಬಿಡುಗಡೆಗೆ ಸಿದ್ಧವಾದ ದಟ್ಸನ್ ರೆಡಿ ಗೊ 1.0-ಲೀಟರ್

ದಟ್ಸನ್ ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಿರುವ ಕಾರು ಉತ್ಪಾದಕರು ಉನ್ನತ ಶ್ರೇಣಿ ಆವೃತ್ತಿಯಲ್ಲಿ ಮಾತ್ರ ಚಾಲಕನ ಭಾಗದಲ್ಲಿ ಏರ್‌‌ಬ್ಯಾಗ್ ವ್ಯವಸ್ಥೆಯನ್ನು ಇರಿಸಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಡೇ ರನ್ನಿಂಗ್ ಲೈಟ್ ಇರಿಸಲಾಗಿದೆ.

ಫಸ್ಟ್ ಡ್ರೈವ್- ಬಿಡುಗಡೆಗೆ ಸಿದ್ಧವಾದ ದಟ್ಸನ್ ರೆಡಿ ಗೊ 1.0-ಲೀಟರ್

ಎಂಜಿನ್ ಮತ್ತು ವೈಶಿಷ್ಟ್ಯತೆಗಳು

999 ಸಿಸಿ ತ್ರಿ ಸಿಲಿಂಡರ್ ಎಂಜಿನ್ ಹೊಂದಿರುವ ದಟ್ಸನ್ 1.0 ಆವೃತ್ತಿಯು, 67ಬಿಎಚ್‌ಪಿ ಮತ್ತು 91ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಅದೇ ರೀತಿಯಾಗಿ 800 ಸಿಸಿ ಎಂಜಿನ್ ಹೊಂದಿರುವ ಆವೃತ್ತಿಯು 14ಬಿಎಚ್‌ಪಿ ಮತ್ತು 19ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಫಸ್ಟ್ ಡ್ರೈವ್- ಬಿಡುಗಡೆಗೆ ಸಿದ್ಧವಾದ ದಟ್ಸನ್ ರೆಡಿ ಗೊ 1.0-ಲೀಟರ್

ಗ್ರಾಹಕರ ಬೇಡಿಕೆ ಅನುಗುಣವಾಗಿ 800 ಸಿಸಿ ಆವೃತ್ತಿಯನ್ನು ಹೆಚ್ಚುವರಿವಾಗಿ 200 ಸಿಸಿ ಎತ್ತರಿಸಬಹುದಾಗಿದ್ದು, ಪ್ರತಿ ಲೀಟರ್‌ಗೆ 22.5 ಕಿಮಿ ಮೈಲೇಜ್ ನೀಡಲಿವೆ.

ಫಸ್ಟ್ ಡ್ರೈವ್- ಬಿಡುಗಡೆಗೆ ಸಿದ್ಧವಾದ ದಟ್ಸನ್ ರೆಡಿ ಗೊ 1.0-ಲೀಟರ್

ಹೀಗಾಗಿ ಸಣ್ಣ ಕಾರುಗಳ ಮಾದರಿಯಲ್ಲೇ 1.0-ಲೀಟರ್ ದಟ್ಸನ್ ಅತಿಹೆಚ್ಚು ಮೈಲೇಜ್ ಮತ್ತು ಶಕ್ತಿ ಉತ್ಪಾದನಾ ಆವೃತ್ತಿಯಾಗಿದ್ದು, 5-ಸ್ಪಿಡ್ ಮ್ಯಾನುವಲ್ ಗೇರ್‌ಬಾಕ್ಸ್, 222-ಲೀಟರ್ ಬೂಟ್ ಸ್ಪೇಸ್ ಹೊಂದಿರುವುದು ಮತ್ತೊಂದು ವಿಶೇಷ.

ಫಸ್ಟ್ ಡ್ರೈವ್- ಬಿಡುಗಡೆಗೆ ಸಿದ್ಧವಾದ ದಟ್ಸನ್ ರೆಡಿ ಗೊ 1.0-ಲೀಟರ್

ಬೆಲೆಗಳು

ಪ್ರಸಕ್ತ ಮಾರುಕಟ್ಟೆಯಲ್ಲಿನ ಬೇಡಿಕೆಗಳಿಗೆ ಅನುಗುಣವಾಗಿ ಸುಧಾರಿತ ತಂತ್ರಜ್ಞಾನಗಳ ಸೌಲಭ್ಯದೊಂದಿಗೆ ಅಭಿವೃದ್ಧಿ ಹೊಂದಿರುವ ದಟ್ಸನ್ ಬೆಲೆಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.3.4 ಲಕ್ಷದಿಂದ 3.6 ಲಕ್ಷಕ್ಕೆ ಲಭ್ಯವಿರಬಹುದೆಂದು ಎಂದು ಅಂದಾಜಿಸಲಾಗಿದೆ.

ಫಸ್ಟ್ ಡ್ರೈವ್- ಬಿಡುಗಡೆಗೆ ಸಿದ್ಧವಾದ ದಟ್ಸನ್ ರೆಡಿ ಗೊ 1.0-ಲೀಟರ್

ಹೊಸ ಕಾರಿನ ಕುರಿತು ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಾರು ಖರೀದಿ ಮಾಡಬೇಕೇಂಬ ಮಧ್ಯಮ ವರ್ಗಗಳ ಕನಸುಗಳಿಗೆ ದಟ್ಸನ್ 1.0-ಲೀಟರ್ ಆವೃತ್ತಿಯು ಉತ್ತಮ ಆಯ್ಕೆಯಾಗುವ ಭರವಸೆಯಿದ್ದು, ಮುಂಬರುವ ದಿನಗಳಲ್ಲಿ ಹೊಸ ಕಾರು ಯಾವ ರೀತಿಯ ಬೇಡಿಕೆಯನ್ನು ಪಡೆದುಕೊಳ್ಳಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

English summary
Read in Kannada about Datsun redi-GO 1.0L Review.
Story first published: Tuesday, July 18, 2017, 13:27 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark