ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

Written By:

ಈ ಹಿಂದೆ 2016ರ ದೆಹಲಿ ಆಟೋ ಎಕ್ಸ್‌ಪೋ ಎಕ್ಸ್ಇ 20ಡಿ ಸೆಡಾನ್ ಆವೃತ್ತಿಯನ್ನು ಪ್ರದರ್ಶನಗೊಳಿಸಿದ್ದ ಜಾಗ್ವಾರ್ ಸಂಸ್ಥೆಯು ಇದೀಗ ಭಾರತೀಯ ಮಾರುಕಟ್ಟೆಗೂ ಪರಿಚಯಿಸಿದ್ದು, ಹೊಸ ಕಾರಿನ ಎಂಜಿನ್ ವೈಶಿಷ್ಟ್ಯತೆಗಳು ಮತ್ತು ಕಾರಿನಲ್ಲಿ ಒದಗಿಸಲಾಗಿರುವ ವಿಶೇಷ ತಂತ್ರಜ್ಞಾನಗಳ ಕುರಿತಾಗಿ ಡ್ರೈವ್‌ಸ್ಪಾರ್ಕ್ ತಂಡ ನಡೆಸಿದ ಮೊದಲ ಚಾಲನಾ ವಿಮರ್ಶೆ ಇಲ್ಲಿದೆ ನೋಡಿ.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಸದ್ಯ ಭಾರತೀಯ ಮಾರುಕಟ್ಟೆಗಾಗಿ 2.0 -ಲೀಟರ್ ಪೆಟ್ರೋಲ್ ಎಂಜಿನ್ ಪ್ರೇರಿತ ಎಕ್ಸ್ಇ ಪರಿಚಯಿಸಿದ್ದ ಜಾಗ್ವಾರ್ ಸಂಸ್ಥೆಯು ಇದೀಗ ಕಡಿಮೆ ಬೆಲೆಗಳಲ್ಲಿ ಡೀಸೆಲ್ ಆವೃತ್ತಿಯನ್ನು ಕೂಡಾ ಹೊರತಂದಿದ್ದು, ಐಷಾರಾಮಿ ಸೆಡಾನ್ ಮಾದರಿಗಳಲ್ಲಿ ಎಕ್ಸ್ಇ 20ಡಿ ಉತ್ತಮ ಬೇಡಿಕೆ ಪಡೆಯುವ ತವಕದಲ್ಲಿದೆ.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಮಧ್ಯಮ ಗಾತ್ರದ ಐಷಾರಾಮಿ ವೈಶಿಷ್ಟ್ಯತೆಗಳನ್ನು ಹೊಂದಿರುವ ಜಾಗ್ವಾರ್ ಎಕ್ಸ್‌ಇ 20ಡಿ ಕಾರುಗಳು ಜಾಗ್ವಾರ್ ಡಿಸೈನ್ ಹೆಡ್ ಲಾನಾ ಕಲೂಮ್ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿದ್ದು, ಸ್ಪೋರ್ಟಿ ಲುಕ್ ಜೊತೆಗೆ ಕ್ಲಾಸ್ ಮಾದರಿಯ ವಿನ್ಯಾಸಗಳನ್ನು ಸಹ ಈ ಕಾರಿನಲ್ಲಿ ಸಮನಾಂತರವಾಗಿ ಕಾಯ್ದುಕೊಳ್ಳಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಹೊಸ ಮಾದರಿಯ ಹಾರಿಜೆಂಟಲ್ ಟ್ವಿಂಕ್ಡ್ ಫ್ರಂಟ್ ಬಂಪರ್ ಹಾಗೂ ಬಾನೆಟ್ ವಿನ್ಯಾಸವು ಕಾರಿನ ಅಂದವನ್ನು ಹೆಚ್ಚಿಸಿದ್ದು, ಮಧ್ಯದಲ್ಲಿ ಜಾಗ್ವಾರ್ ಚಿಹ್ನೆಯು ಕಾರಿನ ಬಲಿಷ್ಠತೆಗೆ ಪ್ರದರ್ಶಿಸಿದೆ ಎನ್ನಬಹುದು.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಇನ್ನು ಹೊಸ ಕಾರಿನಲ್ಲಿ ತಾಂತ್ರಿಕ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಸುಧಾರಿತ ಎಲ್ಇ‌ಡಿ ಡಿಆರ್‌ಎಲ್ಎಸ್ ಮತ್ತು ಹೆಡ್‌ಲ್ಯಾಂಪ್‌ಗಳ ವಿನ್ಯಾಸವು ಅಂಚುಗಳ ಮತ್ತು ವಕ್ರಾಕೃತಿಗಳ ಅಚ್ಚುಕಟ್ಟಾಗಿ ಮಿಶ್ರಣವನ್ನು ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಇದಲ್ಲದೇ ಕಾರಿನ ಪಾರ್ಶ್ವ ಪ್ರೊಫೈಲ್ ಸಲೂನ್‌ ಅನ್ನು ವಾಯುಬ ವೈಜ್ಞಾನಿಕ ನಿಲುವಿನೊಂದಿಗೆ ಅಭಿವದ್ಧಿಗೊಳಿಸಲಾಗಿದ್ದು, ಫ್ರಂಟ್ ಎಂಡ್ ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ. ಜೊತೆಗೆ ಭುಜದ ರೇಖೆಗಳು ಮುಂಭಾಗದಿಂದ ರಚನೆಯಾಗುತ್ತವೆ ಮತ್ತು ಕ್ರಮೇಣ ಹಿಂಭಾಗದ ಕಡೆಗೆ ಇಳಿದಿರುವುದು ಕಾರಿನ ಲುಕ್ ಹೆಚ್ಚಿಸಿದೆ.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಕಾರಿನ ಮುಂಭಾಗದಲ್ಲಿನ ಫೆಂಡರ್ಗಳ ಮೇಲೆ ಕ್ರೋಮ್ ನಾಳವಿದ್ದು, ಇದು ಎಲ್ಲಾ ಜಾಗ್ವಾರ್‌ಗಳಲ್ಲಿ ಕಂಡುಬರುವ ಒಂದು ವಿನ್ಯಾಸ ಎನ್ನಬಹುದು. ಇದರಿಂದ ಚಕ್ರದ ಭಾಗದಲ್ಲಿ ಸಿಕ್ಕಿರುವ ಗಾಳಿಯನ್ನು ಹೊರಹಾಕಲು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಕಾರಿನ ಹಿಂಭಾಗದ ವಿನ್ಯಾಸವು ಕೂಡಾ ಎರಡು ದೊಡ್ಡ ಟೈಲ್ಯಾಂಪ್‌ಗಳನ್ನು ಹೊಂದಿದ್ದು, ಕೇಂದ್ರೀಯ ಸ್ಥಾನದಲ್ಲಿರುವ ಪ್ಲೇಟ್ ಮತ್ತು ಅದರ ಮೇಲೆ 'ಜಾಗ್ವಾರ್' ಲೋಗೋದೊಂದಿಗೆ ಕಾರಿನ ಅಂದವನ್ನು ಹೆಚ್ಚಿಸಲು ಉತ್ತಮ ರೀತಿಯಲ್ಲಿ ಬಳಕೆ ಮಾಡಿದ್ದಾರೆ ಎನ್ನಬಹುದು.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಇದರಿಂದ ಹೊಸ ಕಾರಿಗೆ ಸ್ಪೋರ್ಟಿ ಲುಕ್ ದೊರೆತಿದ್ದು, ಕಾರಿನ ಟೈಲ್‌ ಲ್ಯಾಂಪ್‌ಗಳಿಗೆ ಜೋಡಿಸಲಾಗಿರುವ ಎಲ್ಇಡಿ ಸ್ಟ್ರಿಪ್‌ಗಳ ಜಾಗ್ವಾರ್ ಸ್ಪೋರ್ಟ್ಸ್ ಕಾರು ಎಫ್-ಟೈಪ್ ಹೋಲಿಕೆ ನೀಡಿದೆ.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಕಾರಿನ ಒಳವಿನ್ಯಾಸ

ಕಾರಿನ ಒಳಗೆ ಸಾಕಷ್ಟು ವೈಶಿಷ್ಟ್ಯತೆಗಳನ್ನು ಹೊಂದಿರುವ ಎಕ್ಸ್ಇ 20ಡಿ ಮಾದರಿಯು ಐಷಾರಾಮಿ ಲೋಕಕ್ಕೆ ಸ್ವಾಗತಿಸುತ್ತದಲ್ಲದೇ ಕೇಂದ್ರ ಕನ್ಸೋಲ್ ಜಾಗ್ವಾರ್ ಎಫ್-ಪೇಸ್ ಎಸ್‌ಯುವಿ ಹೋಲಿಕೆಯಾಗಿದೆ. ಕಾರಿನ ಹವಾಮಾನ ನಿಯಂತ್ರಣ ಫಲಕದ ಅಡಿಯಲ್ಲಿ ಪ್ರಾರಂಭ/ನಿಲ್ಲುವಿಕೆ ಸೇರಿದಂತೆ ಬಹಳಷ್ಟು ಬಟನ್‌ಳನ್ನು ಪ್ಲೇ ಮಾಡಲು ಬಳಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಇದರಲ್ಲಿ ಜಾಗ್ವಾರ್ ಡ್ರೈವ್ ಕಂಟ್ರೋಲ್ ಮಾದರಿಯು ನಿಮ್ಮನ್ನು ಸೆಳೆಯಲಿದ್ದು, ಫ್ಲೋಟಿಂಗ್ ಡ್ಯಾಶ್‌ನಿಂದ ಕಂಟ್ರೋಲ್ ಟಾಗಲ್ ಪುನರುತ್ಥಾನಗೊಳ್ಳುತ್ತದೆ. ಅದು ಹಳೆಯದಾಗದೇ ಸಾಕಷ್ಟು ಮೋಜು ಹೊಂದಿರುವುದು ಕಾರಿನ ಚಾಲನೆ ಹೊಸ ಹುರುಪು ತುಂಬುತ್ತದೆ.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಜೊತೆಗೆ ಸಣ್ಣ 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದಿರುವ ಎಕ್ಸ್ಇ 20ಡಿ ಕಾರುಗಳು, ಮೆರಿಡಿಯನ್ ಆಟೋ ಸೌಂಡ್ ಸಿಸ್ಟಂ‌ ಮೂಲಕ ಮನರಂಜನೆ ನೀಡುವುದಲ್ಲದೇ ದೂರದ ಪ್ರಯಾಣದ ಆಯಾಸವನ್ನು ತಗ್ಗಿಸಲಿದೆ.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಆಸನಗಳ ವ್ಯವಸ್ಥೆ

5 ಸೀಟರ್ ಸೌಲಭ್ಯ ಹೊಂದಿದ್ದರು 4 ಜನರ ಪ್ರಯಾಣಕ್ಕೆ ಹೆಚ್ಚಿನ ಅನುಕೂಲಕವಾಗಿರುವ ಈ ಕಾರಿನಲ್ಲಿ ವಲ್ಡ್ ಕ್ಲಾಸ್ ಸವಲತ್ತುಗಳನ್ನು ಒದಗಿಸಲಾಗಿದ್ದು, ಚಾಲಕನ ಭಾಗದಲ್ಲಿ ಮೆಮೊರಿ ಆಯ್ಕೆ, ಉತ್ತಮ ಹೆಡ್‌ರೂಮ್ ಕೂಡಾ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಹೀಗಾಗಿ ಕುಟುಂಬ ಸಮೇತರಾಗಿ ಹೊರಹೊಗಲು ಇದೊಂದು ಉತ್ತಮ ಆಯ್ಕೆಯಾಗಿರಲಿದ್ದು, ಪನೊರಾಮಿಕ್ ಸನ್‌ರೂಫ್, 300 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಕೂಡಾ ಪಡೆದಿರುವುದು ಕಾರಿನ ಮತ್ತೊಂದು ಪ್ರಮುಖ ಸೌಲಭ್ಯ ಎನ್ನಬಹುದು.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಎಂಜಿನ್ ಸಾಮರ್ಥ್ಯ

ಈ ಹಿಂದಿನ ಎಕ್ಸ್ಎಫ್ ಮಾದರಿಯಲ್ಲಿ 2.0-ಲೀಟರ್ ಇಂಜಿನಿಯಂ ಡಿಸೇಲ್ ಎಂಜಿನ್ ಹೊಂದಿರುವ ಎಕ್ಸ್ಇ 20ಡಿ ಕಾರುಗಳು, ತೂಕದಲ್ಲಿ ಕಡಿತಗೊಂಡಿರುವ ಹಿನ್ನೆಲೆ ಉತ್ತಮ ಪರ್ಫಾಮೆನ್ಸ್ ಹೊಂದಿವೆ. ಈ ಮೂಲಕ 182ಬಿಎಚ್‌ಪಿ ಮತ್ತು 430ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಇದರೊಂದಿಗೆ ಹಿಂಭಾಗದ ಚಕ್ರಗಳಿಗೆ ಟಾರ್ಕ್ ಪವರ್ ಒದಗಿಸುವ ವ್ಯವಸ್ಥೆಯಿದ್ದು, ಹೊಸ ಕಾರುಗಳಲ್ಲಿ 8-ಸ್ಪೀಡ್ ಝೆಡ್ ಎಫ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಣೆಯನ್ನು ಮಾಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಈ ಮೂಲಕ ಕೇವಲ ಒಂಬತ್ತು ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಮಿ ವೇಗ ಸಾಧಿಸಬಲ್ಲ ಗುಣಹೊಂದಿರುವ ಎಕ್ಸ್ಇ 20ಡಿ ಕಾರುಗಳು, ಪ್ರತಿ ಗಂಟೆಗೆ 228 ಕಿಮಿ ಟಾಪ್ ಸ್ಪೀಡ್ ಕೂಡಾ ಹೊಂದಿರುವುದು ಪರ್ಫಾಮೆನ್ಸ್ ಕಾರುಗಳಲ್ಲೇ ಉತ್ತಮವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಕಾರಿನಲ್ಲಿ ಚಾಲನೆಯ ಅನುಕೂಲಕ್ಕಾಗಿ ಅಳವಡಿಸಲಾಗಿರುವ ಇಕೋ, ನಾರ್ಮಲ್/ಸಿಟಿ, ಡೈನಾಮಿಕ್, ರೈನ್/ಸ್ನೋ ಕಾರು ಚಾಲಾನಾ ಮೂಡ್‌ಗಳು ಸುರಕ್ಷಾ ಚಾಲನೆಗೆ ಬಳಕೆಯಾಗಲಿದ್ದು, ಇಕೋ ಮೂಡ್ ಮೂಲಕ ಗರಿಷ್ಠ ಇಂಧನ ಕಾರ್ಯಕ್ಷಮತೆ ಪಡೆಯಬಹುದಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಸುರಕ್ಷಾ ತಂತ್ರಜ್ಞಾನಗಳು

ಉತ್ತಮ ಪರ್ಫಾಮೆನ್ಸ್ ಹೊಂದಿರುವ ಎಕ್ಸ್ಇ 20ಡಿ ಕಾರಗಳಲ್ಲಿ ವೇಗಕ್ಕೆ ಮಾತ್ರವಲ್ಲದೇ ಸುರಕ್ಷತೆ ಹೆಚ್ಚಿನ ಒತ್ತು ನೀಡಲಾಗಿದ್ದು, ಡೈಮಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲರ್(ಡಿಎಸ್‌ಸಿ), ಎಬಿಎಸ್ ಪ್ಲಸ್ ಇಬಿಡಿ, ಟ್ರಾನ್‌ಕ್ಷನ್ ಕಂಟ್ರೋಲರ್ ಮತ್ತು 5 ಏರ್‌ಬ್ಯಾಗ್‌ಗಳನ್ನು ಹೊಂದಿರಲಿದೆ.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಇತರೆ ವಿನ್ಯಾಸಗಳು ಮತ್ತು ಮೈಲೇಜ್

17 ಇಂಚಿನ 7 ಸ್ಪೋಕ್ ವೀಲ್ಹ್‌ಗಳನ್ನು ಹೊಂದಿರುವ ಹೊಸ ಕಾರುಗಳು ಮೈಲೇಜ್ ವಿಚಾರ ತುಸು ದುಬಾರಿ ಎನಿಸಲಿವೆ. ಉತ್ತಮ ಟಾರ್ಕ್ ಉತ್ಪಾದನೆ ಹಿನ್ನೆಲೆ ಎಕ್ಸ್‌ಇ 20ಡಿ ಕಾರುಗಳು ಪ್ರತಿ ಲೀಟರ್ ಡಿಸೇಲ್‌ಗೆ 11.2 ಕಿಮಿ ಮೈಲೇಜ್ ನೀಡಬಲ್ಲವು. ಇದು ಹೆದ್ದಾರಿಗಳಲ್ಲಿ ಪ್ರತಿ ಲೀಟರ್‌ಗೆ 14.5 ಕಿಮಿ ಆಗಿರಲಿದೆ.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಕಾರಿನ ಬೆಲೆಗಳು

ಐಷಾರಾಮಿ ವೈಶಿಷ್ಟ್ಯತೆಗಳೊಂದಿರುವ ಉತ್ತಮ ಸೆಡಾನ್ ಮಾದರಿಯಾಗಿರುವ ಎಕ್ಸ್ಇ 20 ಡಿ ಕಾರುಗಳ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 43.21 ಲಕ್ಷಕ್ಕೆ ಲಭ್ಯವಿದ್ದು, ಮಿಡ್ ಸೈಜ್ ಲಗ್ಷುರಿ ಸೆಡಾನ್ ಬಯಸುವ ಗ್ರಾಹಕರಿಗೆ ಇದೊಂದು ಕಾರು ಮಾದರಿಯಾಗಿದೆ.

ಫಸ್ಟ್ ಡ್ರೈವ್ ರಿವ್ಯೂ- ಕ್ಲಾಸ್ ಸೆಡಾನ್‌ನಲ್ಲಿ ಜಾಗ್ವಾರ್ ಎಕ್ಸ್ಇ 20ಡಿ ಬೆಸ್ಟ್?

ಎಕ್ಸ್ಇ 20ಡಿ ಕುರಿತು ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಸ್‌ಯುವಿ ಮತ್ತು ಸೆಡಾನ್ ಮಾದರಿಗಳಲ್ಲಿ ಈಗಾಗಲೇ ಹಲವು ಲಗ್ಷುರಿ ಮಾದರಿಗಳನ್ನು ಪರಿಚಯಿಸಿ ಯಶಸ್ವಿಯಾಗಿರುವ ಜಾಗ್ವಾರ್ ಸಂಸ್ಥೆಯು ಎಕ್ಸ್‌ಎಫ್ ಫ್ಯಾಟ್‌ಫಾರ್ಮ್ ಅಡಿಯಲ್ಲಿ ಈ ಹೊಸ ಕಾರ್ ಅನ್ನು ಅಭಿವೃದ್ದಿ ಮಾಡಿದ್ದು, ಉತ್ತಮ ಎಂಜಿನ್ ಕಾರ್ಯಕ್ಷಮತೆಯಿಂದಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಎಕ್ಸ್ಇ 20ಡಿ ಪ್ರಮುಖ ಪಾತ್ರವಹಿಸಲಿದೆ ಎನ್ನಬಹುದು.

Read more on car review jaguar sedan
English summary
The Jaguar XE 20d Review.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark