ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಗ್ರಾಹಕರು ಯಾವುದೇ ವಾಹನ ತಯಾರಕ ಕಂಪನಿಗೆ ಬಹು ದೊಡ್ಡ ಆಸ್ತಿಯಾಗಿರುತ್ತಾರೆ. ದಕ್ಷಿಣ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಕಂಪನಿಗೆ ಇದರ ಅರಿವಿದೆ. ಇತ್ತೀಚಿಗೆ ಕಿಯಾ ಕಂಪನಿಯ ಹೊಸ ಸೆಲ್ಟೋಸ್ ಕಾರ್ ಅನ್ನು ಟೆಸ್ಟ್ ಡ್ರೈವ್ ಮಾಡಲಾಯಿತು. ಕಿಯಾ ಸೆಲ್ಟೋಸ್ ಆಗಸ್ಟ್ 22ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಸೆಲ್ಟೋಸ್ ಎಂಬ ಹೆಸರನ್ನು ಸೆಲ್ಟಸ್ ಎಂಬ ಪದದಿಂದ ಪಡೆಯಲಾಗಿದೆ. ಸೆಲ್ಟಸ್ ಎಂಬುದು ಹೆರಾಕಲ್ಸ್ ಹಾಗೂ ಸೆಲ್ಟೈನ್‌ರ ಮಗನ ಹೆಸರಾಗಿದೆ. ಈ ಎಸ್‍‍ಯು‍‍ವಿ ಐತಿಹಾಸಿಕ ಬಲ, ಸ್ಪೋರ್ಟಿನೆಸ್, ಸ್ಪೀಡ್ ಹಾಗೂ ಅತ್ಯಾಕರ್ಷಕವಾಗಿದೆ. ಈಗಾಗಲೇ ಕಾಂಪ್ಯಾಕ್ಟ್ ಎಸ್‌ಯುವಿಗಳಿಂದ ತುಂಬಿ ಹೋಗಿರುವ ದೇಶಿಯ ಮಾರುಕಟ್ಟೆ ಹಾಗೂ ಆಟೋಮೊಬೈಲ್ ಉದ್ಯಮವು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಸಮಯದಲ್ಲಿ, ಸೆಲ್ಟೋಸ್ ತನ್ನದೇ ಆದ ಹಿಡಿತವನ್ನು ಹೊಂದಲಿದೆಯೇ? ಸೆಲ್ಟೋಸ್‌ ಎಲ್ಲ ಆರ್ಥಿಕ ಹಿಂಜರಿತವನ್ನು ಮೆಟ್ಟಿ ನಿಲ್ಲಲಿದೆಯೇ ಕಾದು ನೋಡೋಣ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಡಿಸೈನ್ ಹಾಗೂ ಸ್ಟೈಲಿಂಗ್

ಹೊಸ ಕಿಯಾ ಸೆಲ್ಟೋಸ್ ಎಸ್‍‍ಯು‍‍ವಿ ಅದ್ಭುತವಾದ ವಿನ್ಯಾಸವನ್ನು ಹೊಂದಿದ್ದು, ಹೋದಲ್ಲೆಲ್ಲಾ ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ. ಎಸ್‌ಯುವಿಯನ್ನು ಗಟ್ಟಿಮುಟ್ಟಾಗಿ ವಿನ್ಯಾಸಗೊಳಿಸಲಾಗಿದ್ದು ಡೈನಾಮಿಕ್ ಪ್ರೊಫೈಲ್ ಹೊಂದಿದೆ. ಯಾವುದೇ ಕೋನದಿಂದ ನೋಡಿದರೂ, ಸೊಗಸಾದ, ಕರಕುಶಲ ಮತ್ತು ಪ್ರಸ್ತುತವಾಗಿ ಕಾಣುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಸೆಲ್ಟೋಸ್ ಎಸ್‍‍ಯು‍‍ವಿಯ ಮುಂಭಾಗದಲ್ಲಿ ಕ್ಲಾಮ್‌ಶೆಲ್ ಬಾನೆಟ್ ಹಾಗೂ ಕಿಯಾ ಬ್ಯಾಡ್ಜ್ ಗಳಿವೆ. ಇದರ ಜೊತೆಗೆ ಸಿಗ್ನೇಚರ್ ಟೈಗರ್ ನೋಸ್ ಗ್ರಿಲ್ ಹೊಂದಿದೆ. ಗ್ರಿಲ್ ಅನ್ನು ಸುತ್ತುವರೆದಿರುವ ಕ್ರೌನ್ ಜ್ಯುವೆಲ್ ಎಲ್ಇಡಿ ಹೆಡ್‌ಲೈಟ್‌ಗಳನ್ನು ವಿಶಿಷ್ಟವಾಗಿ ನಿರ್ಮಿಸಲಾಗಿದ್ದು, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿವೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಸೆಲ್ಟೋಸ್ ಕೆತ್ತಿದ ಕೆಳ ಏರ್ ಡ್ಯಾಮ್ ಹಾಗೂ ಬಂಪರ್‍‍ಗಳನ್ನು ಸಹ ಹೊಂದಿದೆ. ಬಂಪರ್‍‍ಗಳ ಬಳಿ ಐಸ್ ಕ್ಯೂಬ್ ಶೈಲಿಯ ಫಾರ್ ಲ್ಯಾಂಪ್‍‍ಗಳಿವೆ. ಸೆಲ್ಟೋಸ್ ಎಸ್‍‍ಯು‍‍ವಿ ಸೈಡುಗಳಿಂದ, ಸ್ಕ್ವೇರ್ ಇಶ್ ವ್ಹೀಲ್ ಅರ್ಕ್‍‍ಗಳಿಂದಾಗಿ ಒರಟಾಗಿ ಕಾಣುತ್ತವೆ. ವ್ಹೀಲ್ ಆರ್ಕ್‍‍ಗಳು ಮಾದರಿಗಳಿಗೆ ತಕ್ಕಂತೆ 16 ಇಂಚ್ ಅಥವಾ 17-ಇಂಚ್‍‍ಗಳಲ್ಲಿ ದೊರೆಯಲಿವೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಸೆಲ್ಟೋಸ್ ಮಸ್ಕ್ಯೂಲರ್ ಶೋಲ್ಡರ್ ಲೈನ್‍‍ಗಳನ್ನು ಸಹ ಹೊಂದಿದೆ. ಕಪ್ಪು ಬಣ್ಣದಲ್ಲಿರುವ ಎ ಪಿಲ್ಲರ್‍‍ಗಳು ಎಸ್‍‍ಯುವಿಯ ರೂಫ್ ತೇಲಾಡುತ್ತಿರುವಂತೆ ಕಾಣುತ್ತದೆ. ಶಾರ್ಕ್ ಫಿನ್ ಶೇಪಿನಲ್ಲಿರುವ ಹಿಂಭಾಗದ ಡಿ ಪಿಲ್ಲರ್ ಮತ್ತೊಂದು ವಿನ್ಯಾಸದ ಮುಖ್ಯಾಂಶವಾಗಿದ್ದು ಅದು ತೇಲುವ ರೂಫ್‍‍ನ ಅಂದವನ್ನು ಹೆಚ್ಚಿಸುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಕಾರಿನ ಹಿಂದಿನ ಭಾಗವು ಏರ್ ಡ್ಯಾಮ್ ವಿನ್ಯಾಸ ಹಾಗೂ ಸ್ಕಿಡ್ ಪ್ಲೇಟ್‌ಗಳನ್ನು ಹೊಂದಿರುವ ರಿಫ್ಲೆಕ್ಟರ್‍‍ಗಳನ್ನು ಹೊಂದಿದೆ. ಇದರ ಜೊತೆಗೆ ಎಲ್ಇಡಿ ಲ್ಯಾಂಪ್, ರೇರ್ ಸ್ಪಾಯ್ಲರ್, ಡ್ಯುಯಲ್ ಮಫ್ಲರ್ ವಿನ್ಯಾಸ ಹಾಗೂ ಮಧ್ಯ ಭಾಗದಲ್ಲಿ ಕ್ರೋಮ್ ಒಳಗೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಇಂಟಿರಿಯರ್, ಫೀಚರ್ಸ್ ಹಾಗೂ ಸುರಕ್ಷತೆ

ಹೊಸ ಕಿಯಾ ಸೆಲ್ಟೋಸ್‌ನ ಇಂಟಿರಿಯರ್ ಆಕರ್ಷಕವಾಗಿದ್ದು, ನೋಡುವವರು ನೋಡುತ್ತಲೇ ಇರುತ್ತಾರೆ. ಈ ಎಸ್‍‍ಯುವಿಯಲ್ಲಿ ಹನಿಕೂಂಬ್ ಮಾದರಿಯ ಲೆದರ್ ಸೀಟುಗಳು ಅಥವಾ ಟ್ಯೂಬ್ ಪ್ಯಾಟರ್ನ್ ಲೆಥೆರ್ ಸೀಟುಗಳನ್ನು ಹೊಂದಿದೆ. ಈ ಸೀಟುಗಳು ಮಾದರಿಯ ಮೇಲೆ ಅವಲಂಬಿಸಿರುತ್ತವೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಸೀಟುಗಳು ವೆಂಟಿಲೇಟೆಡ್ ಆಗಿದ್ದು, ಆರಾಮದಾಯಕವಾಗಿದೆ. ಸೆಲ್ಟೋಸ್ 8 ವೇಯ ಅಡ್ಜಸ್ಟಬಲ್ ಡ್ರೈವರ್ ಪವರ್ ಸೀಟುಗಳನ್ನು ಹೊಂದಿದೆ. ಚಾಲಕ ಹಾಗೂ ಪ್ರಯಾಣಿಕರ ಸೀಟುಗಳು ರೆಕ್ಲೈನ್ ​​ಹಾಗೂ ಕುಶನ್ ಟಿಲ್ಟ್ ಅನ್ನು ಒಳಗೊಂಡಿರುತ್ತವೆ. ಹಿಂದಿರುವ ಸೀಟುಗಳು ಎರಡು ಹಂತದ ಅಂದರೆ 26 ಡಿಗ್ರಿ ಹಾಗೂ 32 ಡಿಗ್ರಿಯಲ್ಲಿ ಒರಗಿಕೊಳ್ಳುವ ಆಯ್ಕೆಗಳನ್ನು ಹೊಂದಿವೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಅವಶ್ಯಕತೆಗೆ ಅನುಸಾರವಾಗಿ ಬೂಟ್ ಸ್ಪೇಸ್ ಹೆಚ್ಚಿಸಲು 60:40 ವಿಭಜನೆಯಲ್ಲಿ ಬರುತ್ತವೆ. ಹಿಂಭಾಗದ ಸೀಟುಗಳು ತೊಡೆಯ ಕೆಳಗೆ ಮೆದುವಾದ ಅನುಭವವನ್ನು ನೀಡುತ್ತವೆ. ಎತ್ತರವಾಗಿರುವವರಿಗೂ ಸಾಕಷ್ಟು ಅನುಕೂಲವಾಗಲಿದೆ. ಮಧ್ಯದಲ್ಲಿ ಕುಳಿತುಕೊಳ್ಳುವವರ ಕಾಲು ಹಾಗೂ ಮೊಣಕಾಲುಗಳಿಗೆ ಟ್ರಾನ್ಸ್ ಮಿಷನ್ ಟನಲ್ ಹಾಗೂ ಹಿಂಭಾಗದ ಎಸಿ ವೆಂಟ್‍‍ಗಳಿಂದ ಸ್ವಲ್ಪ ಅಡ್ಡಯಾಗಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಬಹುತೇಕ ಮಾಲೀಕರು ಕಪ್ ಹೋಲ್ಡರ್‍‍ಗಳ ರೀತಿಯಲ್ಲಿರುವ ಆರ್ಮ್ ರೆಸ್ಟ್ ಗಳನ್ನು ಬಳಸಿಕೊಳ್ಳುತ್ತಾರೆ. ಬೂಟ್ ಸ್ಪೇಸ್ 433 ಲೀಟರ್‌ನಷ್ಟಿದೆ. 60:40ನಷ್ಟಿರುವ ಹಿಂಭಾಗದಲ್ಲಿರುವ ಸೀಟುಗಳನ್ನು ತೆಗೆದು ಹಾಕಿದರೆ ಹೆಚ್ಚಿನ ಬೂಟ್ ಸ್ಪೇಸ್ ಪಡೆಯಬಹುದು. ಕಾರಿನಲ್ಲಿ ಮೃದುವಾಗಿರುವ ಡಿ ಕಟ್ ಸ್ಟೀಯರಿಂಗ್ ವ್ಹೀಲ್ ಇದೆ. ಇದು ಕಡಿಮೆ ವೇಗದಲ್ಲಿ ತೆಳುವಾಗಿರುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಚಾಲಕರು ಚಾಲನೆ ಮಾಡುವ ವೇಗಕ್ಕೆ ಸ್ಟೀಯರಿಂಗ್ ಸ್ಪಂದಿಸುತ್ತದೆ.ಸ್ಟೀಯರಿಂಗ್ ವ್ಹೀಲ್‍ನ ಗುಣಗಳನ್ನು ಬದಲಾಯಿಸುವ ಎಲ್ಲಾ ಡ್ರೈವಿಂಗ್ ಮೋಡ್‍‍ಗಳನ್ನು ಪರೀಕ್ಷಿಸದಿದ್ದರೂ, ಗುಣಲಕ್ಷಣಗಳು ಸುಗಮವಾಗಿವೆ ಎಂದು ನಾವು ಕಂಡುಕೊಂಡಿದ್ದೇವೆ. ಈ ಎಸ್‍‍ಯು‍‍ವಿಯನ್ನು ವಿವಿಧ ವೇಗದಲ್ಲಿ ಚಾಲನೆ ಮಾಡಲು ಸುಲಭವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಸ್ಟೀಯರಿಂಗ್ ಹೆಚ್ಚಿನ ವೇಗದಲ್ಲಿ ಬಿಗಿಯಾಗಿರುತ್ತದೆ. ಆದರೆ ಇದು ಸೆಲ್ಟೋಸ್ ಅನ್ನು ಬಹಳ ಸುಲಭವಾಗಿ ನಿಯಂತ್ರಿಸುತ್ತದೆ. ಯಾವುದೇ ಅಚಾತುರ್ಯಕ್ಕೆ ಆಸ್ಪದವಿಲ್ಲ. ಮಳೆಯಲ್ಲಿಯೂ ಸಹ ನಾವು ಕಾರನ್ನು ಹೆಚ್ಚಿನ ವೇಗದಲ್ಲಿ ಚಾಲನೆ ಮಾಡಿದೆವು.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಟಿಲ್ಟ್ ಹಾಗೂ ಟೆಲಿಸ್ಕೋಪಿಕ್ ಸ್ಟೀಯರಿಂಗ್ ವ್ಹೀಲ್‌ನ ಎಡಭಾಗದಲ್ಲಿ ವಾಲ್ಯೂಮ್ ಹಾಗೂ ಮೀಡಿಯಾ ಕಂಟ್ರೋಲ್, ಮೊಬೈಲ್ ಕರೆಗಳನ್ನು ರೀಸಿವ್ ಮಾಡಲು ಹಾಗೂ ಕರೆಯನ್ನು ಡಿಸ್ ಕನೆಕ್ಟ್ ಮಾಡಲು ಹಾಗೂ ಡ್ರೈವಿಂಗ್ ಮೋಡ್‍‍ಗಳನ್ನು ಬದಲಿಸಲು ಮೋಡ್ ಬಟನ್‍‍ಗಳಿವೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಸ್ಟೀಯರಿಂಗ್ ವ್ಹೀಲ್‍‍ನ ಬಲಭಾಗದಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಬಳಸಲು ಇತರ ಬಟನ್‍‍ಗಳ ನಡುವೆ ಕ್ರೂಸ್ ಕಂಟ್ರೋಲ್ ಬಟನ್ ಇದೆ. ಇದರ ಜೊತೆಗೆ ಸೆಲ್ಟೋಸ್ ಕಾರಿನಲ್ಲಿ ಕಿಯಾ ಸೆಲ್ಟೋಸ್ ಪುಶ್ ಬಟನ್ ಇಗ್ನಿಷನ್, ಕೀ ಲೆಸ್ ಎಂಟ್ರಿ ಹಾಗೂ ಹೊರ ಭಾಗದಲ್ಲಿರುವ ಮಿರರ್‍‍ಗಳನ್ನು ಫೋಲ್ಡ್ ಮಾಡಲು ಪುಶ್ ಬಟನ್‍‍ಗಳಿವೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ ಇಂಟಿಗ್ರೇಟ್ ಮಾಡಲಾಗಿದೆ. ಇದರಿಂದಾಗಿ ಅತ್ಯುತ್ತಮ ವಿನ್ಯಾಸ ಹೊಂದಿದಂತಾಗುತ್ತದೆ. ಇದರಿಂದ ವಿಂಡ್‌ಸ್ಕ್ರೀನ್‌ ಮುಖಾಂತರ ಚಾಲಕನ ನೋಟಕ್ಕೆ ಅಡ್ಡಿಯಾಗುವುದಿಲ್ಲ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಟಚ್‍‍ಸ್ಕ್ರೀನ್‍‍ಗಳನ್ನು ನ್ಯಾವಿಗೇಷನ್, ಕ್ಲೈಮೇಟ್ ಕಂಟ್ರೋಲ್, ಏರ್ ಪ್ಯೂರಿಫೈಯರ್, ಸೌಂಡ್ ಮೂಡ್ ಲ್ಯಾಂಪ್ ಸೆಟ್ಟಿಂಗ್‌ಗಳು, 360 ಕ್ಯಾಮೆರಾ ವ್ಯೂ, ಡ್ರೈವರ್ ಅಸಿಸ್ಟ್ ಫಂಕ್ಷನ್‌ ಹಾಗೂ ಹೆಡ್ಸ್ ಅಪ್ ಡಿಸ್‍‍ಪ್ಲೇಗಳನ್ನು ಸೆಟ್ ಅಪ್ ಮಾಡಲು ಬಳಸಬಹುದು.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

7.0 ಇಂಚಿನ ಕಲರ್ ಡಿಸ್‍‍ಪ್ಲೇ ಕ್ಲಸ್ಟರ್‌ನಲ್ಲಿರುವ ಸ್ಪೀಡೋ ಹಾಗೂ ಟ್ಯಾಕೋ ಮಧ್ಯದಲ್ಲಿ ಮಲ್ಟಿ ಇನ್‍‍ಫಾರ್ಮೆಶನ್ ಡಿಸ್‍‍ಪ್ಲೇ ಅಳವಡಿಸಲಾಗಿದೆ. ಇದು ಚಾಲಕನಿಗೆ ಟಯರ್ ಪ್ರೆಷರ್‍‍ನಿಂದ ಹಿಡಿದು ಮೈಲೇಜ್ ವರೆಗೆ ಎಲ್ಲಾ ಮಾಹಿತಿಯನ್ನು ಚಾಲಕನಿಗೆ ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಟಾಪ್ ಮಾದರಿಗಳಲ್ಲಿ ಎಂಟು ರೀತಿಯ ಬೋಸ್ ಸ್ಪೀಕರ್ ಸಿಸ್ಟಂ ಹಾಗೂ ಮೂಡ್ ಹೆಚ್ಚಿಸುವ ಫೀಚರ್‍ ಅಳವಡಿಸಲಾಗಿದೆ. ಈ ಕಾರಿನಲ್ಲಿ 14 ವಿಭಿನ್ನ ಮೂಡ್ ಬದಲಿಸುವ ಪ್ರೋಗ್ರಾಂಗಳನ್ನು ಅಳವಡಿಸಲಾಗಿದೆ. ಇವುಗಳನ್ನು ಯುವಿಒ ಅಪ್ಲಿಕೇಶನ್ ಮೂಲಕ ಅಥವಾ ಇನ್ಫೋಟೈನ್‌ಮೆಂಟ್ ಸಿಸ್ಟಂನಿಂದ ಕಾರಿನೊಳಗೆ ಬದಲಾಯಿಸಬಹುದು.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಈ ಕಾರಿನಲ್ಲಿ ಅದ್ಬುತವಾದ 360 ಡಿಗ್ರಿ ಕ್ಯಾಮೆರಾ, ಡ್ರೈವಿಂಗ್ ರೇರ್ ವೀವ್ ಮಾನಿಟರ್ ಹಾಗೂ ಬ್ಲೈಂಡ್ ವೀವ್ ಮಾನಿಟರ್‍‍ಗಳಿವೆ. ಬ್ಲೈಂಡ್ ವೀವ್ ಮಿರರ್ ಅನ್ನು ಆಕ್ಟಿವೇಟ್ ಮಾಡಲು ಇಂಡಿಕೇಟರ್ ಅನ್ನು ಫ್ಲಿಕ್ ಮಾಡಬೇಕಾಗುತ್ತದೆ. ಚಿಕ್ಕ ರಸ್ತೆಗಳಲ್ಲಿ ಕಾರನ್ನು ಚಾಲನೆ ಮಾಡುವಾಗ ಇದರಿಂದ ಅನುಕೂಲವಾಗಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಈ ಕಾರಿನಲ್ಲಿ ಯಾವುದೇ ಕಾರಿನಲ್ಲಿ ಅಳವಡಿಸದೇ ಇರುವ, ಸ್ಮಾರ್ಟ್ ಏರ್ ಪ್ಯೂರಿಫೈಯರ್ ಫೀಚರ್ ಅನ್ನು ಅಳವಡಿಸಲಾಗಿದೆ. ಇದು ಚಾಲಕನ ಆರ್ಮ್‌ಸ್ಟ್ರೆಸ್ಟ್‌ನಲ್ಲಿರುತ್ತದೆ. ಈ ಫೀಚರ್ ಕಾರಿನಲ್ಲಿ ಗಾಳಿಯನ್ನು ಶುದ್ಧೀಕರಿಸುತ್ತದೆ, ಅಳೆಯುತ್ತದೆ ಹಾಗೂ ಪ್ರದರ್ಶಿಸುತ್ತದೆ. ಈ ಫೀಚರ್‍‍ನಲ್ಲಿ ಮೂರು ವಿಭಿನ್ನ ಸುಗಂಧಗಳನ್ನು ಅಳವಡಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಕಿಯಾ ಮೋಟಾರ್ಸ್ ಹೊಸ ಸೆಲ್ಟೋಸ್‌ ಎಸ್‍‍ಯು‍‍ವಿಯಲ್ಲಿ ಸಾಕಷ್ಟು ಸುರಕ್ಷತಾ ಫೀಚರ್‍‍ಗಳನ್ನು ಅಳವಡಿಸಿದೆ. ಆರು ಏರ್‌ಬ್ಯಾಗ್‌ಗಳು, ಎಬಿಎಸ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್, ಇಎಸ್‌ಸಿ, ಹಿಲ್ ಸ್ಟಾರ್ಟ್ ಅಸಿಸ್ಟ್, ಮುಂಭಾಗ ಹಾಗೂ ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಕಾರಿನ ಒಳಗಿರುವವರನ್ನು ಸುರಕ್ಷಿತವಾಗಿಡಲು ಎಸ್‌ಯುವಿ ಹಲವಾರು ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಸೆಲ್ಟೋಸ್ ಐಎಸ್ಒಎಫ್‍ಐ‍ಎಕ್ಸ್ ಚೈಲ್ಡ್ ಸೀಟ್ ಆಂಕರ್‍‍ಗಳನ್ನು ಸಹ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಶೀಘ್ರದಲ್ಲೇ ಪ್ರಾರಂಭವಾಗಲಿರುವ ಕಿಯಾ ಸೆಲ್ಟೋಸ್‌ನಲ್ಲಿ ಸನ್‌ರೂಫ್, ಆಂಟಿ-ಗ್ಲೇರ್ ಮಿರರ್, ಆಟೋ ಲೈಟ್ ಕಂಟ್ರೋಲ್, ರೇನ್ ಸೆನ್ಸಾರ್‌, ಟಯರ್ ಪ್ರೆಶರ್ ಮ್ಯಾನೇಜ್‌ಮೆಂಟ್ ಸಿಸ್ಟಂ ಹಾಗೂ ಸ್ಮಾರ್ಟ್‌ಫೋನ್‌ಗಳಿಗಾಗಿ ವೈರ್‌ಲೆಸ್ ಚಾರ್ಜರ್‍‍ಗಳಿವೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಕಿಯಾ ಸೆಲ್ಟೋಸ್ ತನ್ನದೇ ಆದ ಯುವಿ‍ಒ ಅಪ್ಲಿಕೇಶನ್‌ನೊಂದಿಗೆ ಹೊಂದಿದೆ. ಈ ಆಪ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಐಸ್ಟೋರ್‍‍ನಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್ ಕಾರಿನಲ್ಲಿರುವ ಸ್ಮಾರ್ಟ್‌ಫೋನ್ ಫೀಚರ್‍‍ಗಳನ್ನು ನಿಯಂತ್ರಿಸುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ನ್ಯಾವಿಗೇಷನ್ ಹಾಗೂ ಮಾಧ್ಯಮವನ್ನು ಕಂಟ್ರೋಲ್ ಮಾಡಲು, ಕಾರನ್ನು ದೂರದಿಂದಲೇ ಸ್ಟಾರ್ಟ್ ಮಾಡಲು, ಹವಾಮಾನ ನಿಯಂತ್ರಣವನ್ನು ಸೆಟ್ ಮಾಡಲು, ಕಾರು ತಲುಪಬೇಕಾದ ಸ್ಥಳದ ಮಾರ್ಗಗಳನ್ನು ಕಳುಹಿಸಲು, ಟೈಂ ಹಾಗೂ ಜಿಯೋ ಫೆನ್ಸಿಂಗ್ ನಿಗದಿಪಡಿಸಲು, ವಾಹನದ ಸ್ಥಿತಿಯನ್ನು ದೂರದಿಂದಲೇ ಪರಿಶೀಲಿಸಲು ತಮ್ಮ ಧ್ವನಿಯನ್ನು ಬಳಸಬಹುದು. ಕಳುವಾದ ವಾಹನವನ್ನು ಟ್ರ್ಯಾಕ್ ಮಾಡುವ ಫೀಚರ್ ಅನ್ನು ಸಹ ಹೊಂದಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಎಂಜಿನ್,ಪರ್ಫಾಮೆನ್ಸ್ ಹಾಗೂ ಡ್ರೈವ್

ನಾವು ಚಲಾಯಿಸಿದ ಸೆಲ್ಟೋಸ್ 1.4 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಹೊಂದಿತ್ತು. ಈ ಎಂಜಿನ್ 140 ಬಿ‍‍ಹೆಚ್‍‍ಪಿ ಪವರ್ ಹಾಗೂ 242 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 7 ಸ್ಪೀಡಿನ ಡ್ಯುಯಲ್ ಕ್ಲಚ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಇದರ ಜೊತೆಗೆ 6 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅನ್ನು ಸಹ ಆಯ್ಕೆಯಾಗಿ ನೀಡಲಾಗುವುದು.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಈ ತಿಂಗಳು ಬಿಡುಗಡೆಯಾಗಲಿರುವ ಕಾರು 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿವೆ. ಈ ಎಂಜಿನ್ 115 ಬಿಹೆಚ್‌ಪಿ ಪವರ್ ಹಾಗೂ 144 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 6 ಸ್ಪೀಡಿನ ಮ್ಯಾನುವಲ್ ಹಾಗೂ ಸ್ಮಾರ್ಟ್‌ಸ್ಟ್ರೀಮ್ ಐವಿಟಿ ಹೊಂದಿರಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಇದರ ಜೊತೆಗೆ 1.5-ಲೀಟರ್ ವಿಜಿಟಿ ಡೀಸೆಲ್ ಎಂಜಿನ್ ಕಾರ್ ಅನ್ನು ಬಿಡುಗಡೆಗೊಳಿಸಲಾಗುವುದು. ಈ ಎಂಜಿನ್ 115 ಬಿಹೆಚ್‌ಪಿ ಪವರ್ ಹಾಗೂ 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ಗೆ 6 ಸ್ಪೀಡಿನ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಹಾಗೂ 6 ಸ್ಪೀಡಿನ ಅಡ್ವಾನ್ಸ್ಡ್ ಆಟೋಮ್ಯಾಟಿಕ್ ಅಳವಡಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಈ ಎಲ್ಲಾ ಎಂಜಿನ್‍‍ಗಳು ಬಿಎಸ್6 ಮಾಲಿನ್ಯ ನಿಯಮಗಳಿಗೆ ಹೊಂದಿಕೊಳ್ಳಲಿವೆ. ಕಿಯಾ ಮೋಟಾರ್ಸ್ ಸೆಲ್ಟೋಸ್ ಸರಣಿಯಲ್ಲಿರುವ ಎಲ್ಲಾ ಕಾರುಗಳಲ್ಲಿ ಎಲ್ಲಾ ವಿಧದ ಟ್ರಾನ್ಸ್ ಮಿಷನ್ ಅಳವಡಿಸಲು ಚಿಂತನೆ ನಡೆಸಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

1.4-ಲೀಟರ್ ಪೆಟ್ರೋಲ್ ಜಿಡಿಐ 7 ಸ್ಪೀಡಿನ ಡಿಸಿಟಿ ನಮ್ಮ ನೆಚ್ಚಿನ ಅಯ್ಕೆಯಾಗಿದೆ. 7-ಸ್ಪೀಡಿನ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಅಥವಾ ಡಿಸಿಟಿಯಲ್ಲಿ ನೀಡಲಾಗುವ 140 ಬಿ‍‍ಹೆಚ್‍‍ಪಿ, 1.4-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನಲ್ಲಿ ನೀಡಲಾಗುವ ಆಕ್ಸೆಲೇರೆಷಣ್ ಹಾಗೂ ಸ್ಪೋರ್ಟಿ ಡ್ರೈವಿಂಗ್ ಅನುಭವದೊಂದಿಗೆ ತ್ವರಿತ ಮತ್ತು ದೃಢವಾದ ಬದಲಾವಣೆಗಳನ್ನು ನೀಡುತ್ತದೆ, ಇದು ಮ್ಯಾನುವಲ್ ಟ್ರಾನ್ಸ್ ಮಿಷನ್‍‍ನ ಲಕ್ಷಣವಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ನಗರದಲ್ಲಿ ಚಾಲನೆ ಮಾಡುವಾಗ, ಡಿಸಿಟಿ ಟ್ರಾನ್ಸ್ ಮಿಷನ್ ಸ್ಮೂತ್ ಆಗಿರಲಿದೆ. ಸಾಮಾನ್ಯ ಡ್ರೈವಿಂಗ್ ಮೋಡ್‍‍ನಲ್ಲಿ 2000 ಆರ್‌ಪಿಎಂನಲ್ಲಿ ವೇಗವಾಗಿ ಬದಲಾಗುತ್ತದೆ. ಇದರಿಂದಾಗಿ ಇಂಧನ ದಕ್ಷತೆ ಹೆಚ್ಚಲು ಅನುಕೂಲವಾಗಲಿದೆ. ಆದರೆ ಸ್ಪೋರ್ಟ್ ಮೋಡ್ ಹಾಗೂ ಹೆವಿ-ಫೂಟ್ ಡ್ರೈವಿಂಗ್‌ನಲ್ಲಿ, ಟರ್ಬೊ-ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮುಕ್ತವಾಗಿರುತ್ತದೆ. ಡಿಸಿಟಿ 6500 ಆರ್‌ಪಿಎಂನಲ್ಲಿ ವೇಗವಾದ ಹಾಗೂ ಸ್ಪೋರ್ಟಿ ಶಿಫ್ಟ್‌ಗಳನ್ನು ನೀಡುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ನಗರದೊಳಗೆ ಹಾಗೂ ಹೆದ್ದಾರಿಗಳಲ್ಲಿ ಕಾರು ಚಾಲನೆ ಮಾಡುವ ಕಾರು ಪ್ರಿಯರಿಗಾಗಿ, 140 ಬಿಹೆಚ್‌ಪಿ ಉತ್ಪಾದಿಸುವ, 1.4-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 7-ಸ್ಪೀಡ್ ಡಿಸಿಟಿಯನ್ನು ಹೊಂದಿದ್ದು, ಮ್ಯಾನುವಲ್ ಟ್ರಾನ್ಸ್ ಮಿಷನ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಎರಡನ್ನೂ ಹೊಂದಿರಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ನಾವು ಎಚ್‌ಟಿಎಕ್ಸ್ 1.5-ಲೀಟರ್ ವಿಜಿಟಿ ಡೀಸೆಲ್ ಎಂಜಿನ್ ಹೊಂದಿರುವ 6 ಸ್ಪೀಡ್ ಮ್ಯಾನ್ಯುವಲ್ ಮಾದರಿಯನ್ನು ಸಹ ಡ್ರೈವ್ ಮಾಡಿದೆವು. 1.5 ಡೀಸೆಲ್ ಎಂಜಿನ್ ಮಾದರಿಯು ಚಾಲಕನಿಗೆ ಚಾಲನೆ ಮಾಡಲು ಆರಾಮದಾಯಕವಾಗಿದೆ. ಗೇರ್ ಬಾಕ್ಸ್ ಸರಳ ಹಾಗೂ ಪರಿಣಾಮಕಾರಿಯಾಗಿದ್ದು, ಸ್ಲಾಟ್‍‍ಗಳು ಸ್ಮೂತ್ ಆಗಿವೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಪವರ್ ಹಾಗೂ ಟಾರ್ಕ್‍‍ಗಳು ವೇಗವಾಗಿ ಬದಲಾಗುತ್ತವೆ. ದಟ್ಟಣೆಯಲ್ಲಿ ಗೇರ್‌ಗಳನ್ನು ಆಗಾಗ್ಗೆ ಬದಲಾಯಿಸುವ ಅಗತ್ಯವಿಲ್ಲದೇ ಆರಾಮವಾಗಿ ಕಾರ್ ಅನ್ನು ಚಾಲನೆ ಮಾಡಬಹುದಾಗಿದೆ. ಡ್ರೈವ್ ಗುಣಮಟ್ಟ ಅತ್ಯುತ್ತಮವಾಗಿದೆ. ಯಾವುದೇ ಬಾಡಿ ರೋಲ್‍‍ಗಳಿಲ್ಲ. ಎಸ್‍‍ಯು‍‍ವಿ ಹಗುರವಾಗಿದೆ, ವೇಗವಾಗಿದ್ದು, ಚುರುಕಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಸೆಲ್ಟೋಸ್ ಸ್ಥಿರವಾಗಿದ್ದು, ಚಾಲಕನಿಗೆ ಸ್ಪಂದಿಸುತ್ತದೆ. ಗೇರ್ ಶಿಫ್ಟ್‌ಗಳು ತಡೆರಹಿತವಾಗಿದ್ದು, ಟರ್ಬೊದೊಂದಿಗೆ ಯಾವುದೇ ವಿಳಂಬವಿಲ್ಲ. ಜೊತೆಗೆ ಅದ್ಭುತವಾದ ಎತ್ತರವನ್ನು ಹೊಂದಿದೆ. ಎನ್‍‍ವಿಹೆಚ್ ಲೆವೆಲ್‍‍ಗಳು ಗಾತ್ರಕ್ಕೆ ತಕ್ಕಂತೆ ಇವೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಕಿಯಾ ಮೋಟಾರ್ಸ್ ಎಸ್‍‍ಯುವಿಯಲ್ಲಿ ಮುಂದಿನ ಹಂತದ ಬ್ರೇಕ್‌ಗಳನ್ನು ಹೊಂದಿದೆ. ಸೆಲ್ಟೋಸ್ 41.9 ಮೀಟರ್ ದೂರದಲ್ಲಿ 100 ಕಿಲೋಮೀಟರ್ ನಿಂದ 0 ರವರೆಗೆ ಮಾಡುತ್ತದೆ. ನಾವು ಬ್ರೇಕ್‌ಗಳಲ್ಲಿ ಬಹಳಷ್ಟು ಕಡಿತವನ್ನು ಕಂಡುಕೊಂಡಿದ್ದೇವೆ. ಅವು ಸ್ಪಂದಿಸುವುದರ ಜೊತೆಗೆ ತೀಕ್ಷ್ಣವಾಗಿವೆ. ಬ್ರೇಕ್‌ ಅನ್ನು ಪರೀಕ್ಷಿಸ ಬೇಕಾದರೆ, ಸೀಟ್‌ಬೆಲ್ಟ್ ಧರಿಸಿ ಪರೀಕ್ಷಿಸುವುದು ಉತ್ತಮ. ಇಲ್ಲದಿದ್ದರೆ ವಿಂಡ್‍‍ಶೀಲ್ಡ್ ನ ಹೊರಗೆ ಬೀಳುವುದು ಖಚಿತ.

ಮಾದರಿಗಳು ಪೆಟ್ರೋಲ್

ಡೀಸೆಲ್

ಎಂಜಿನ್ 1.5 ಲೀಟರ್/1.4 ಲೀಟರ್ ಟರ್ಬೊ

1.5 ಲೀಟರ್

ಪವರ್(ಬಿ‍ಹೆಚ್‍‍ಪಿ)

115/140 115

ಟಾರ್ಕ್(ಎನ್‍ಎಂ)

144/242 250
ಟ್ರಾನ್ಸ್ ಮಿಷನ್

ಎಂಟಿ/ಡಿ‍‍ಸಿಟಿ/ಸಿ‍‍ವಿ‍‍ಟಿ ಎಂ‍‍ಟಿ/ಐ‍‍ವಿಟಿ
ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಮಾದರಿಗಳು, ಬಣ್ಣಗಳು ಹಾಗೂ ಬೆಲೆ

ಕಿಯಾ ಸೆಲ್ಟೋಸ್ ಎಸ್‍‍ಯು‍‍ವಿಯನ್ನು - ಟೆಕ್ ಲೈನ್ ಹಾಗೂ ಜಿಟಿ ಲೈನ್ ಎಂಬ ಎರಡು ಮೂಲ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಈ ಎರಡು ಮಾದರಿಗಳು ತಲಾ ಮೂರು ಮಾದರಿಗಳನ್ನು ಒಳಗೊಂಡಿರುತ್ತವೆ. ಟೆಕ್-ಲೈನ್ ಅನ್ನು ಎಚ್‌ಟಿಎಕ್ಸ್, ಎಚ್‌ಟಿಕೆ ಹಾಗೂ ಎಚ್‌ಟಿಇ ಮಾದರಿಗಳಲ್ಲಿ ಮಾಡಲಾಗುವುದು. ಜಿಟಿ ಲೈನ್ ಮಾದರಿಯನ್ನು ಜಿಟಿಎಕ್ಸ್, ಜಿಟಿಕೆ ಹಾಗೂ ಜಿಟಿಇಗಳಲ್ಲಿ ಮಾರಾಟ ಮಾಡಲಾಗುವುದು.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಈ ಮಾದರಿಗಳಲ್ಲಿರುವ ಪ್ರಮುಖವಾದ ವ್ಯತ್ಯಾಸವೆಂದರೆ ಜಿಟಿ ಲೈನ್ ಸ್ಪೋರ್ಟಿ ರೆಡ್ ಬ್ರೇಕ್ ಕ್ಯಾಲಿಪರ್‌ಗಳನ್ನು ಹೊಂದಿದೆ. 17 ಇಂಚಿನ ಕ್ರಿಸ್ಟಲ್ ಕಟ್ ಅಲಾಯ್ ವ್ಹೀಲ್‍‍ಗಳಲ್ಲಿ ಕೆಂಪು ಬಣ್ಣದ ಸೆಂಟರ್ ಕ್ಯಾಪ್, ಮುಂಭಾಗದಲ್ಲಿರುವ ಏರ್ ಡ್ಯಾಂ ಕೆಳಗೆ ಕೆಂಪು ಇನ್ಸರ್ಟ್ ಹಾಗೂ ಡೋರ್‍‍ನ ಕೆಳ ಭಾಗಗಳು, ಸ್ಪೋರ್ಟಿ ಅಲಾಯ್ ಪೆಡಲ್, ಸ್ಮಾರ್ಟ್ 8.0 ಇಂಚಿನ ಹೆಡ್ಸ್ ಅಪ್ ಡಿಸ್‍‍ಪ್ಲೇ, ಸರೌಂಡ್ ವೀವ್ ಮಾನಿಟರ್ ಹಾಗೂ ಆಟೋ ಕ್ರೂಸ್ ನಿಯಂತ್ರಣದಲ್ಲಿರುವ 360 ಡಿಗ್ರಿ ಕ್ಯಾಮೆರಾಗಳಿವೆ.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಕಿಯಾ ಸೆಲ್ಟೋಸ್ ಎಸ್‍‍ಯು‍‍ವಿಯನ್ನು 13 ಬಣ್ಣಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಇವುಗಳಲ್ಲಿ ಎಂಟು ಮೊನೊಟೋನ್ ಆಯ್ಕೆಗಳಾಗಿರಲಿವೆ. ಅವುಗಳೆಂದರೆ ಇಂಟೆನ್ಸ್ ರೆಡ್, ಅರೋರಾ ಬ್ಲಾಕ್ ಪರ್ಲ್, ಗ್ಲೇಸಿಯರ್ ವೈಟ್ ಪರ್ಲ್, ಪಂಚಿ ಆರೆಂಜ್, ಇಂಟೆಲಿಜೆನ್ಸಿ ಬ್ಲೂ, ಗ್ರಾವಿಟಿ ಗ್ರೇ, ಸ್ಟೀಲ್ ಸಿಲ್ವರ್ ಹಾಗೂ ಕ್ಲಿಯರ್ ವೈಟ್.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಇತರ ಐದು ಡ್ಯುಯಲ್ ಟೋನ್ ಬಣ್ಣಗಳೆಂದರೆ, ಇಂಟೆನ್ಸ್ ರೆಡ್ / ಅರೋರಾ ಬ್ಲಾಕ್ ಪರ್ಲ್, ಸ್ಟೀಲ್ ಸಿಲ್ವರ್ / ಅರೋರಾ ಬ್ಲಾಕ್ ಪರ್ಲ್, ಗ್ಲೇಸಿಯರ್ ವೈಟ್ ಪರ್ಲ್ / ಅರೋರಾ ಬ್ಲಾಕ್ ಪರ್ಲ್, ಗ್ಲೇಸಿಯರ್ ವೈಟ್ ಪರ್ಲ್ / ಪಂಚಿ ಆರೇಂಜ್ ಹಾಗೂ ಸ್ಟೀಲ್ ಸಿಲ್ವರ್ / ಪಂಚಿ ಆರೇಂಜ್.

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಪೈಪೋಟಿ

ಬಿಡುಗಡೆಯಾದ ನಂತರ ಹೊಸ ಕಿಯಾ ಸೆಲ್ಟೋಸ್ ಎಸ್‍‍ಯು‍‍ವಿಯು ಎಂಜಿ ಹೆಕ್ಟರ್, ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಮತ್ತು ಹ್ಯುಂಡೈ ಕ್ರೆಟಾಗಳಿಗೆ ಪೈಪೋಟಿ ನೀಡಲಿದೆ.

ಪ್ರತಿಸ್ಪರ್ಧಿಗಳು/ವೈಶಿಷ್ಟ್ಯತೆ ಕಿಯಾ ಸೆಲ್ಟೋಸ್

ಎಂಜಿ ಹೆಕ್ಟರ್

ಟಾಟಾ ಹ್ಯಾರಿಯರ್

ಎಂಜಿನ್ 1.4 ಟರ್ಬೊ-ಪೆಟ್ರೋಲ್/1.5 ಡೀಸೆಲ್

1.5 ಪೆಟ್ರೋಲ್/2.0 ಡೀಸೆಲ್

2.0 ಡೀಸೆಲ್

ಪವರ್ (ಬಿ‍‍ಹೆಚ್‍‍ಪಿ)

140/115 140/173

173
ಟಾರ್ಕ್ (ಎನ್‍ಎಂ)

242/250 250/350 350
ಟ್ರಾನ್ಸ್ ಮಿಷನ್

ಎಂಟಿ/ಡಿಸಿಟಿ/ಐ‍‍ವಿಟಿ ಎಂಟಿ/ಡಿಸಿಟಿ 6ಎಂಟಿ
ಬೆಲೆಗಳು (ಎಕ್ಸ್-ಶೋರೂಂ)

- ರೂ. 12.18 - 16.88 ಲಕ್ಷಗಳು

Rs 13 - 16.5 ಲಕ್ಷಗಳು

ಫಸ್ಟ್ ಡ್ರೈವ್ ರಿವ್ಯೂ: ಎಸ್‍‍ಯು‍‍ವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್ ಭರ್ಜರಿ ಸದ್ದು

ಸೆಲ್ಟೋಸ್ ಎಸ್‍‍ಯು‍‍ವಿಯನ್ನು ಆಗಸ್ಟ್ 22ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಬೆಲೆಗಳ ಬಗ್ಗೆ ಬಿಡುಗಡೆಯ ನಂತರ ತಿಳಿಯಲಿದೆ. ಅಂದಾಜಿನ ಪ್ರಕಾರ ಈ ಎಸ್‌ಯುವಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.10 ಲಕ್ಷದಿಂದ ರೂ.19 ಲಕ್ಷಗಳ ನಡುವೆ ಇರಲಿದೆ. ಇದು ಅಂದಾಜಿನ ಬೆಲೆಯಾಗಿದ್ದು, ಕಿಯಾ ಇದಕ್ಕಿಂತ ಕಡಿಮೆ ಬೆಲೆಯನ್ನು ನಿಗದಿಪಡಿಸಿ ಸರ್‍‍ಪ್ರೈಸ್ ನೀಡಲೂ ಬಹುದು.

Most Read Articles

Kannada
English summary
Kia Seltos Review: Details Of A Powerfully Surprising First Drive - Read in kannada
Story first published: Saturday, August 10, 2019, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X