ಫಸ್ಟ್ ಡ್ರೈವ್ ರಿವ್ಯೂ: ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಮಹೀಂದ್ರಾ ಎಕ್ಸ್‌ಯು‌ವಿ 700..

ಮಹೀಂದ್ರಾ ಎಕ್ಸ್‌ಯು‌ವಿ 700 ಈ ವರ್ಷ ಭಾರತದಲ್ಲಿ ಬಿಡುಗಡೆಯಾಗುವ ಬಹು ನಿರೀಕ್ಷಿತ ಎಸ್‌ಯುವಿಗಳಲ್ಲಿ ಒಂದಾಗಿದೆ. ಮಹೀಂದ್ರಾ ಕಂಪನಿಯು ಕೆಲವು ದಿನಗಳ ಹಿಂದಷ್ಟೇ ಈ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಎಸ್‌ಯುವಿಯನ್ನು ನಾವು ಇತ್ತೀಚಿಗೆ ಕೆಲವು ಗಂಟೆಗಳ ಕಾಲ ಚಾಲನೆ ಮಾಡಿದೆವು. ಈ ಎಸ್‌ಯುವಿಯ ಫಸ್ಟ್ ಡ್ರೈವ್ ರಿವ್ಯೂವನ್ನು ಈ ಲೇಖನದಲ್ಲಿ ನೋಡೋಣ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಮಹೀಂದ್ರಾ ಎಕ್ಸ್‌ಯು‌ವಿ ಇತಿಹಾಸ

ಮಹೀಂದ್ರಾ ಎಕ್ಸ್‌ಯು‌ವಿ 700 ಎಸ್‌ಯುವಿಯು ಎಕ್ಸ್‌ಯು‌ವಿ 500 ಎಸ್‌ಯುವಿಯನ್ನು ಆಧರಿಸಿದೆ. ಎಕ್ಸ್‌ಯು‌ವಿ 500 ಮೊನೊಕೊಕ್ ಚಾಸಿಸ್ ಆಧರಿಸಿದ ಮಹೀಂದ್ರಾ ಕಂಪನಿಯ ಮೊದಲ ಎಸ್‌ಯುವಿಯಾಗಿದೆ. ಈ ಎಸ್‌ಯುವಿಯು ಹಲವಾರು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗಿತ್ತು.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಮಹೀಂದ್ರಾ ಕಂಪನಿಯು ಎಕ್ಸ್‌ಯು‌ವಿ 500 ಎಸ್‌ಯುವಿಯನ್ನು ಹಲವಾರು ಬಾರಿ ಅಪ್ ಡೇಟ್ ಮಾಡಿತ್ತು. ಎಕ್ಸ್‌ಯು‌ವಿ 500 ನಂತೆಯೇ ಎಕ್ಸ್‌ಯು‌ವಿ 700 ಸಹಈ ಸೆಗ್ ಮೆಂಟಿನಲ್ಲಿ ಮೊದಲ ಬಾರಿಗೆ ಹಲವಾರು ಹೊಸ ಫೀಚರ್‌ಗಳನ್ನು ಹೊಂದಿದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ವಿನ್ಯಾಸ ಹಾಗೂ ಶೈಲಿ

ಮೊದಲ ನೋಟದಲ್ಲಿಯೇ ಎಕ್ಸ್‌ಯು‌ವಿ 700, ಎಕ್ಸ್‌ಯು‌ವಿ 500 ನಂತೆ ಕಾಣುತ್ತದೆ. ಆದರೆ ಎಕ್ಸ್‌ಯು‌ವಿ 700 ಸಂಪೂರ್ಣವಾಗಿ ಆಧುನಿಕ ಅಂಶಗಳನ್ನು ಹೊಂದಿದೆ. ಈ ಎಸ್‌ಯುವಿಯು ಬಹು ವಿನ್ಯಾಸದ ಅಂಶಗಳೊಂದಿಗೆ ಡ್ಯುಯಲ್ ಟೋನ್ ಗ್ರಿಲ್ ಅನ್ನು ಒಳಗೊಂಡಿದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಈ ಎಸ್‌ಯುವಿಯ ಮಧ್ಯದಲ್ಲಿ ಮಹೀಂದ್ರಾ ಕಂಪನಿಯ ಹೊಸ ಲೋಗೋ ಅಳವಡಿಸಲಾಗಿದೆ. ಈ ಎಸ್‌ಯುವಿಯ ಎರಡೂ ಬದಿಗಳಲ್ಲಿ ಹಲವು ಬ್ಲಾಕ್ ಸ್ಲಾಟ್ ಹಾಗೂ ಒಟ್ಟಾರೆಯಾಗಿ ಸಿಲ್ವರ್ ನಲ್ಲಿ ಪೂರ್ಣಗೊಂಡಿರುವ ಆರು ಟ್ವಿನ್ ಸ್ಲಾಟ್ ಗಳನ್ನು ನೀಡಲಾಗಿದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಈ ಎಸ್‌ಯುವಿಯ ಮುಂಭಾಗದಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ ಹಾಗೂ ಡಿಆರ್‌ಎಲ್‌ಗಳನ್ನು ನೀಡಲಾಗಿದೆ. ಹೆಡ್‌ಲ್ಯಾಂಪ್‌ಗಳು ಬಂಪರ್‌ವರೆಗೆ ವಿಸ್ತರಿಸಿವೆ. ಬಂಪರ್‌ನ ಕೆಳಭಾಗದಲ್ಲಿ ಫಾಗ್ ಲ್ಯಾಂಪ್ ನೀಡಲಾಗಿದ್ದು, ಸಿಲ್ವರ್ ಬಣ್ಣದಲ್ಲಿರುವ ಫಾಕ್ಸ್ ಸ್ಕಿಡ್ ಪ್ಲೇಟ್ ಈ ಎಸ್‌ಯುವಿಯ ಬ್ಲೂ ಶೇಡ್ ಗೆ ಒಳ್ಳೆಯ ಕಾಂಟ್ರಾಸ್ಟ್ ನೀಡುತ್ತದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಈ ಎಸ್‌ಯುವಿಯು ಫ್ಲೇರ್ಡ್ ಆರ್ಕ್ ವ್ಹೀಲ್, ಚಂಕಿ ಶೋಲ್ಡರ್ ಲೈನ್ ಹಾಗೂ ಸ್ಲೋಪಿಂಗ್ ರೂಫ್ ಲೈನ್ ಅನ್ನು ಹೊಂದಿದೆ. ಎ, ಬಿ, ಸಿ ಪಿಲ್ಲರ್‌ಗಳು ಕಪ್ಪು ಬಣ್ಣವನ್ನು ಹೊಂದಿವೆ. ಎಕ್ಸ್ ಯುವಿ 700 ಎಸ್‌ಯುವಿಯಲ್ಲಿ ಸೂಪರ್ ಕಾರುಗಳಲ್ಲಿ ನೀಡುವಂತಹ ಫ್ಲಶ್ ಡೋರ್ ಹ್ಯಾಂಡಲ್ ನೀಡಲಾಗಿದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಎಕ್ಸ್‌ಯು‌ವಿ 700 ಎಸ್‌ಯುವಿಯಲ್ಲಿರುವ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಗಳು 10 ಸ್ಪೋಕ್ ಸ್ಕಲ್ ಪ್ಟೆಡ್ ಲೈನ್ ಗಳನ್ನು ಹೊಂದಿವೆ. ಈ ಎಸ್‌ಯುವಿಯ ಹಿಂಭಾಗದಲ್ಲಿ ದೊಡ್ಡ ಸ್ಪ್ಲಿಟ್ ಎಲ್ಇಡಿ ಟೇಲ್ ಲ್ಯಾಂಪ್‌ಗಳನ್ನು ನೀಡಲಾಗಿದೆ. ಇನ್ನು ಮೇಲ್ಭಾಗದಲ್ಲಿ ಶಾರ್ಕ್ ಫಿನ್ ಆಂಟೆನಾ ಹಾಗೂ ಶಾರ್ಪ್ ಎಡ್ಜ್ ಹೊಂದಿರುವ ಸ್ಪಾಯ್ಲರ್ ಗಳನ್ನು ನೀಡಲಾಗಿದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಇನ್ನು ಈ ಎಸ್‌ಯುವಿಯು ಹಿಂಭಾಗದಲ್ಲಿ ಶಾರ್ಪ್ ಆದ ಟೇಲ್ ಲ್ಯಾಂಪ್ ಹಾಗೂ ಎಕ್ಸ್‌ಯು‌ವಿ 700 ಹಾಗೂ ಎಎಕ್ಸ್ 7 ಎಂಬ ಬ್ಯಾಡ್ಜಿಂಗ್ ಗಳನ್ನು ಹೊಂದಿದೆ.ಅಂದ ಹಾಗೆ ನಾವು ಫುಲ್ ಲೋಡ್ ಮಾಡಲಾದ ಎಎಕ್ಸ್ 7 ಮಾದರಿಯನ್ನು ಚಾಲನೆ ಮಾಡಿದೆವು.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಕಾಕ್‌ಪಿಟ್ ಹಾಗೂ ಇಂಟಿರಿಯರ್

ಮಹೀಂದ್ರಾ ಎಕ್ಸ್‌ಯು‌ವಿ 700 ಎಸ್‌ಯುವಿಯ ಡೋರ್ ಅನ್ನು ತೆರೆದ ಕೂಡಲೇ ಬಿಳಿ ಬಣ್ಣದಲ್ಲಿರುವ ಲೆದರ್ ಇಂಟಿರಿಯರ್ ನಮ್ಮನ್ನು ಸ್ವಾಗತಿಸುತ್ತದೆ. ಈ ಎಸ್‌ಯುವಿಯಲ್ಲಿರುವ ಸೀಟುಗಳು ಸಾಕಷ್ಟು ಪ್ರೀಮಿಯಂ ಆಗಿವೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಈ ಎಸ್‌ಯುವಿಯಲ್ಲಿ ನಮ್ಮ ಗಮನ ಸೆಳೆಯುವುದು ದೊಡ್ಡ ಗ್ಲಾಸ್ ಸ್ಲಾಬ್. ದುಬಾರಿ ಬೆಲೆಯ ಕಾರುಗಳಲ್ಲಿ ನೀಡುತ್ತಿದ್ದ ಈ ಸ್ಲಾಬ್ ಅನ್ನು ಮಹೀಂದ್ರಾ ಕಂಪನಿಯು ತನ್ನ ಎಸ್‌ಯುವಿಯಲ್ಲಿ ನೀಡುತ್ತಿದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಈ ಗ್ಲಾಸ್ ಸ್ಲಾಬ್ ಇನ್ಫೋಟೆನ್ ಮೆಂಟ್ ಹಾಗೂ ಇನ್ಸ್ಟ್ರುಮೆಂಟೇಶನ್ ಗಾಗಿ ಎರಡು 10.25 ಇಂಚಿನ ಸ್ಕ್ರೀನ್ ಗಳನ್ನು ಒಳಗೊಂಡಿದೆ. ಆದರೂ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ ಮಾತ್ರ ಟಚ್‌ಸ್ಕ್ರೀನ್ ಆಗಿದೆ. ಈ ಸ್ಕ್ರೀನ್ ಗಳು ಅಡ್ರಿನೊಕ್ಸ್ ನಿಂದ ಪವರ್ ಪಡೆಯುತ್ತವೆ. ಇದು ಯುಐ/ಯುಎಕ್ಸ್ ವಿನ್ಯಾಸದಲ್ಲಿ ಅತ್ಯುತ್ತಮವಾದುದು ಎಂದು ಹೇಳಲಾಗಿದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಇನ್ಫೋಟೈನ್‌ಮೆಂಟ್ ಯುನಿಟ್ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ. ಅಮೆಜಾನ್ ಅಲೆಕ್ಸಾ ಸಹ ಇರುವುದರಿಂದ ಸಿಸ್ಟಂಗೆ ವಾಯ್ಸ್ ಕಮ್ಯಾಂಡ್ ನೀಡಬಹುದು.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಎಕ್ಸ್‌ಯು‌ವಿ 700 ಎಸ್‌ಯುವಿಯಲ್ಲಿ ಮ್ಯೂಸಿಕ್ ಗಾಗಿ ವಿಶೇಷವಾದ ಸೋನಿ ಸೌಂಡ್ ಸಿಸ್ಟಂ ನೀಡಲಾಗಿದೆ. ಸೋನಿ ಕಂಪನಿಯು ಅಧಿಕೃತವಾಗಿ ಒಇಎಂ ಪೂರೈಕೆದಾರರಾಗಿ ಸ್ಪೀಕರ್‌ಗಳನ್ನು ಒದಗಿಸಿದೆ. ಈ ಸೆಟಪ್ 13 ಚಾನೆಲ್ ಡಿಎಸ್‌ಪಿ ಆಂಪ್ಲಿಫೈಯರ್ ಹಾಗೂ 12 ಕಸ್ಟಮ್ ಆಗಿ ವಿನ್ಯಾಸಗೊಳಿಸಿದ ಸ್ಪೀಕರ್‌ಗಳನ್ನು ಒಳಗೊಂಡಿದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಒಟ್ಟು ಆಡಿಯೋ ಉತ್ಪಾದನೆಯು 445 ವ್ಯಾಟ್ಸ್ ಆರ್‌ಎಂಎಸ್‌ನಲ್ಲಿ ರೇಟ್ ಮಾಡಲಾಗಿದೆ. ಸೋನಿಯ ಸೌಂಡ್ ಬಿಲ್ಡಿಂಗ್ ಬ್ಲಾಕ್‌ಗಳು ಹಾಗೂ 360 ಡಿಗ್ರಿ ಸ್ಪಾಟಿಯಲ್ ಸೌಂಡ್ ಟೆಕ್ನಾಲಜಿ ಅದ್ಭುತವಾದ ಶ್ರವಣ ಅನುಭವವನ್ನು ನೀಡುತ್ತದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಇನ್ನು ಸ್ಟೀಯರಿಂಗ್ ವ್ಹೀಲ್ ದಪ್ಪವಾಗಿದ್ದು, ಒಳ್ಳೆಯ ಗ್ರಿಪ್ ಅನ್ನು ಹೊಂದಿದೆ. ಅದರ ಮೇಲೆ ಹೊಸ ಮಹೀಂದ್ರಾ ಲೋಗೋವನ್ನು ಅಳವಡಿಸಲಾಗಿದೆ. ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್‌ಗಳು ಪಿಯಾನೋ ಬ್ಲ್ಯಾಕ್‌ ಬಣ್ಣವನ್ನು ಹೊಂದಿವೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಸ್ಟೀಯರಿಂಗ್ ವ್ಹೀಲ್‌ನಲ್ಲಿರುವ ಮೂರು ಸ್ಪೋಕ್ ಗಳು ಅದಕ್ಕೆ ಉತ್ತಮವಾದ ಸಿಲ್ವರ್ ಲೈನ್ ಹೊಂದಿದ್ದು, ಇಡೀ ಸೆಟಪ್ ಅನ್ನು ಪ್ರೀಮಿಯಂ ಆಗಿಸುತ್ತವೆ. ಮಹೀಂದ್ರಾ ಕಂಪನಿಯು ಈ ಎಸ್‌ಯುವಿಯಲ್ಲಿ ಹೆಚ್ಚಿನ ಲೆಗ್ ರೂಮ್, ಕ್ನೀ ರೂಂ ಹಾಗೂ ಹೆಡ್ ರೂಮ್ ಗಳನ್ನು ನೀಡಿದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಎಕ್ಸ್‌ಯುವಿ 700 ಎಸ್‌ಯುವಿಯ ಎರಡನೇ ಹಾಗೂ ಮೂರನೇ ಸಾಲಿನಲ್ಲಿ ಎಸಿ ವೆಂಟ್‌ಗಳನ್ನು ನೀಡಲಾಗಿದೆ. ಜೊತೆಗೆ ಏರ್ ಪ್ಯೂರಿಫೈಯರ್ ಅನ್ನು ಸಹ ನೀಡಲಾಗಿದೆ. ಎರಡನೇ ಸಾಲು ಇನ್ ಬಿಲ್ಟ್ ಕಪ್ ಹೋಲ್ಡರ್‌ಗಳೊಂದಿಗೆ ಡೌನ್ ಆರ್ಮ್‌ರೆಸ್ಟ್ ಅನ್ನು ಸಹ ಹೊಂದಿದೆ. ಮೂರನೇ ಸಾಲು ಮಕ್ಕಳಿಗೆ ಉತ್ತಮವಾಗಿದ್ದು, ದೂರದ ಪ್ರಯಾಣದಲ್ಲಿ ವಯಸ್ಕರು ಇಲ್ಲಿ ಕುಳಿತುಕೊಳ್ಳಲು ಕಷ್ಟಪಡಬೇಕಾಗುತ್ತದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಕಂಫರ್ಟ್, ಪ್ರಾಕ್ಟಿಕಾಲಿಟಿ ಹಾಗೂ ಬೂಟ್ ಸ್ಪೇಸ್

ನಾವು ಎಕ್ಸ್‌ಯು‌ವಿ 700 ಎಸ್‌ಯುವಿಯನ್ನು ಚೆನ್ನೈನ ಹೊರವಲಯದಲ್ಲಿರುವ ಮಹೀಂದ್ರಾ ಕಂಪನಿಯ ಟ್ರಾಕ್ ನಲ್ಲಿ ಚಾಲನೆ ಮಾಡಿದೆವು. ಈ ಟ್ರಾಕ್ ನಲ್ಲಿ ಎಕ್ಸ್‌ಯು‌ವಿ 700 ನಮ್ಮನ್ನು ಆಕರ್ಷಿಸಿತು.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಎಲ್ಲಾ ಮೂರು ಸಾಲುಗಳಿಗೆ ಎಸಿ ವೆಂಟ್‌ಗಳು, ವಿಶಾಲವಾದ ಇಂಟಿರಿಯರ್, ಪನೋರಾಮಿಕ್ ಸನ್ ರೂಫ್, ಇತ್ಯಾದಿಗಳು ಎಕ್ಸ್‌ಯು‌ವಿ 700 ಯಲ್ಲಿರುವವರಿಗೆ ಆರಾಮದಾಯಕ ಅನುಭವವನ್ನು ನೀಡುತ್ತವೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಎಕ್ಸ್‌ಯು‌ವಿ 700 ಡೋರುಗಳ ಪಾಕೆಟ್ ದೊಡ್ಡದಾಗಿದ್ದು, ವೈರ್‌ಲೆಸ್ ಮೊಬೈಲ್ ಫೋನ್ ಚಾರ್ಜಿಂಗ್‌ಗಾಗಿ ಸ್ಥಳ ನೀಡಲಾಗಿದೆ. ಎಲ್ಲಾ ಮೂರು ಸಾಲುಗಳ ಸೀಟುಗಳು, ಮಹೀಂದ್ರಾ ಎಕ್ಸ್‌ಯು‌ವಿ 700 ಬೂಟ್ ಸ್ಪೇಸ್ ಉತ್ತಮವಾಗಿದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಹೆಚ್ಚು ಸ್ಪೇಸ್ ಬೇಕಾದರೆ ಎರಡನೇ ಹಾಗೂ ಮೂರನೇ ಸಾಲಿನ ಸೀಟುಗಳನ್ನು ಫೋಲ್ಡ್ ಮಾಡಬಹುದು. ಮಹೀಂದ್ರಾ ಎಕ್ಸ್‌ಯು‌ವಿ 700 ಎಸ್‌ಯುವಿಯು 60 ಲೀಟರ್ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಎಂಜಿನ್ ಕಾರ್ಯಕ್ಷಮತೆ ಹಾಗೂ ಚಾಲನಾ ಅನಿಸಿಕೆಗಳು

ಹೊಸ ಎಕ್ಸ್‌ಯು‌ವಿ 700 ಎಸ್‌ಯುವಿಯನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುವುದು. ಪೆಟ್ರೋಲ್ ಯುನಿಟ್ 2.0 ಲೀಟರ್ ಟರ್ಬೋ ಚಾರ್ಜ್ಡ್ ಎಂಜಿನ್ ಆಗಿದ್ದು 197.2 ಬಿ‌ಹೆಚ್‌ಪಿ ಪವರ್ ಹಾಗೂ 380 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಈ ಎಂಜಿನ್ ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಿಸಲಾಗುತ್ತದೆ. ಈ ಎಂಜಿನ್ 5 ಸೆಕೆಂಡುಗಳಲ್ಲಿ 0 - 60 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಇನ್ನು ನಾವು ಚಾಲನೆ ಮಾಡಿದ ಮಾದರಿಯಲ್ಲಿ ಅಳವಡಿಸಲಾಗಿದ್ದ 2.2 ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ 184.4 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಮಾದರಿಯು ಮ್ಯಾನುವಲ್ ಗೇರ್ ಬಾಕ್ಸ್ ನಲ್ಲಿ 420 ಎನ್ಎಂ ಟಾರ್ಕ್ ಉತ್ಪಾದಿಸಿದರೆ, ಆಟೋಮ್ಯಾಟಿಕ್ ಗೇರ್ ಬಾಕ್ಸ್ ನಲ್ಲಿ 450 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಮಹೀಂದ್ರಾ ಎಕ್ಸ್‌ಯು‌ವಿ 700 ಎಸ್‌ಯುವಿಯು ಫ್ರಂಟ್ ವ್ಹೀಲ್ ಡ್ರೈವ್ ಹಾಗೂ 4 ವ್ಹೀಲ್ ಡ್ರೈವ್ ಸೆಟಪ್ ಎಂಬ ಎರಡು ಡ್ರೈವ್‌ ಟ್ರೇನ್ ಗಳನ್ನು ಹೊಂದಿದೆ.ನಾವು 6 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದ್ದ ಫ್ರಂಟ್ ವ್ಹೀಲ್ ಡ್ರೈವ್ ಮಾದರಿಯನ್ನು ಚಾಲನೆ ಮಾಡಿದೆವು.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಡೀಸೆಲ್ ಮಾದರಿಗಳು ಡ್ರೈವ್ ಮೋಡ್ ಗಳನ್ನು ಹೊಂದಿವೆ. ಆದರೆ ಪೆಟ್ರೋಲ್ ಮಾದರಿಗಳು ಡ್ರೈವ್ ಮೋಡ್ ಗಳನ್ನು ಹೊಂದಿಲ್ಲ. ಈ ಎಸ್‌ಯುವಿಯಲ್ಲಿ ಜಿಪ್, ಝಾಪ್, ಜೂಮ್ ಹಾಗೂ ಕಸ್ಟಮ್ ಎಂಬ ನಾಲ್ಕು ಡ್ರೈವಿಂಗ್ ಮೋಡ್ ಗಳನ್ನು ನೀಡಲಾಗಿದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ನಾವು ಈ ಎಸ್‌ಯುವಿಯನ್ನು ಜಿಪ್ ಮೋಡ್‌ನಲ್ಲಿ ಚಾಲನೆ ಮಾಡಿದೆವು. ಈ ಮೋಡ್ ನಲ್ಲಿ ಥ್ರೊಟಲ್ ರೆಸ್ಪಾನ್ಸ್ ನಿಧಾನವಾಗಿದ್ದರೂ ಇಂಧನ ಉಳಿತಾಯವಾಗುತ್ತದೆ. ಝಾಪ್ ಮೋಡ್‌ನಲ್ಲಿ ಥ್ರೊಟಲ್ ರೆಸ್ಪಾನ್ಸ್ ಸ್ವಲ್ಪ ವೇಗವಾಗಿದೆ. ಸಿಟಿಯೊಳಗೆ ಚಾಲನೆ ಮಾಡುವಾಗ ಈ ಮೋಡ್ ನಲ್ಲಿ ಚಾಲನೆ ಮಾಡುವಂತೆ ನಾವು ಶಿಫಾರಸು ಮಾಡುತ್ತೇವೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಇನ್ನು ಜೂಮ್ ಮೋಡ್‌ನಲ್ಲಿ ಥ್ರೊಟಲ್ ರೆಸ್ಪಾನ್ಸ್ ವೇಗವಾಗಿದ್ದು, ಎಸ್‌ಯುವಿಯ ಗರಿಷ್ಠ ಸಾಮರ್ಥ್ಯ ಈ ಮೋಡ್ ನಲ್ಲಿ ಕಂಡು ಬರುತ್ತದೆ. ಜೂಮ್ ಮೋಡ್‌ನಲ್ಲಿಪವರ್ ಡೆಲಿವರಿ ಆರಂಭದಲ್ಲಿ ಲಿನಿಯರ್ ಆಗಿದ್ದರೂ ಪೆಡಲ್ ಅನ್ನು ನೆಲಕ್ಕೆ ಇಟ್ಟರೆ ಇದ್ದಕ್ಕಿದ್ದಂತೆ ಪವರ್ ಹೆಚ್ಚಾಗುತ್ತದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಎಕ್ಸ್‌ಯು‌ವಿ 700 ಎಸ್‌ಯುವಿಯಲ್ಲಿ ರೆವ್ ಲಿಮಿಟರ್ 4,300 ಆರ್‌ಪಿ‌ಎಂನಲ್ಲಿ ರೆಡ್‌ಲೈನ್ ಮಾರ್ಕ್‌ನಲ್ಲಿ ಆರಂಭವಾಗುತ್ತದೆ. ಎಕ್ಸ್‌ಯು‌ವಿ 700 ಶೀಘ್ರವಾಗಿ ಮೂರು ಅಂಕಿಯ ವೇಗವನ್ನು ತಲುಪುತ್ತದೆ. ಹಾಗೂ ಹೆಚ್ಚಿನ ವೇಗವನ್ನು ಚೆನ್ನಾಗಿ ನಿಭಾಯಿಸುತ್ತದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಈ ಎಸ್‌ಯುವಿಯಲ್ಲಿರುವ ಸಸ್ಪೆಂಷನ್ ಸೆಟಪ್ ರಸ್ತೆ ಉಬ್ಬುಗಳಲ್ಲಿ ಹಾಗೂ ರಸ್ತೆ ಗುಂಡಿಗಳಲ್ಲಿ ಎಸ್‌ಯುವಿಯನ್ನು ಸರಾಗವಾಗಿ ಚಲಿಸುವಂತೆ ಮಾಡುತ್ತದೆ. ಸ್ಟೀಯರಿಂಗ್ ವ್ಹೀಲ್ ಕಡಿಮೆ ವೇಗದಲ್ಲಿ ಹಗುರವಾಗಿದ್ದು, ಹೆಚ್ಚಿನ ವೇಗದಲ್ಲಿ ಸ್ವಲ್ಪ ಗಟ್ಟಿಯಾಗುತ್ತದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಕ್ಲಚ್‌ ಹಗುರವಾಗಿದ್ದು, ನಿಲ್ಲಿಸುವಾಗ ಹಾಗೂ ಟ್ರಾಫಿಕ್‌ನಲ್ಲಿ ಹೆಚ್ಚು ಆಯಾಸಗೊಳಿಸುವುದಿಲ್ಲ. ಕ್ಲಚ್‌ ಪೆಡಲ್ ಹಾಗೂ ಗೇರ್ ಲಿವರ್ ಚಾಲಕನಿಗೆ ಸ್ಪೋರ್ಟಿ ಡ್ರೈವ್ ಅನುಭವವನ್ನು ನೀಡುತ್ತವೆ. ಮಹೀಂದ್ರಾ ಎಕ್ಸ್‌ಯು‌ವಿ 700 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಹೊಂದಿರುವ ಭಾರತದ ಮೊದಲ ಎಸ್‌ಯುವಿಯಾಗಿದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಈ ಎಸ್‌ಯುವಿಯಲ್ಲಿ ಅಡ್ಯಾಪ್ಟ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಡ್ರೈವರ್ ಅಲರ್ಟ್, ಲೇನ್-ಕೀಪ್ ಅಸಿಸ್ಟ್, ಅಟಾನಾಮಸ್ ಎಮರ್ಜೆನ್ಸಿ ಬ್ರೇಕಿಂಗ್ ನಂತಹ ಹಲವು ಫೀಚರ್ ಗಳನ್ನು ಅಳವಡಿಸಲಾಗಿದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಅಟಾನಾಮಸ್ ಬ್ರೇಕಿಂಗ್ ಮೊದಲಿಗೆ ಸ್ವಲ್ಪ ಭಯವನ್ನುಂಟು ಮಾಡಿದರೂ ನಂತರ ಮೋಡಿ ಮಾಡುತ್ತದೆ. ಈ ಎಸ್‌ಯುವಿಯು ಮುಂದೆ ಇರುವ ಅಡಚಣೆಯನ್ನು ಪತ್ತೆ ಮಾಡಿದಾಗ, ವೇಗವನ್ನು ಲೆಕ್ಕಿಸದೆಯೇ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿ ಸಂದೇಶವನ್ನು ಕಳುಹಿಸಿ ಘರ್ಷಣೆಯ ಸಾಧ್ಯತೆಗಳಿವೆ ಎಂದು ಹೇಳುತ್ತದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಈ ಎಚ್ಚರಿಕೆಯ ನಂತರವೂ ಮುಂದೆ ಚಲಿಸಿದರೆ ಸ್ಟಿಯರಿಂಗ್ ವ್ಹೀಲ್ ವೈಬ್ರೆಟ್ ಆಗುತ್ತದೆ. ನಂತರ ಇದ್ದಕ್ಕಿದ್ದಂತೆ ಬ್ರೇಕ್‌ಗಳನ್ನು ಅನ್ವಯಿಸಲಾಗುತ್ತದೆ. ಈ ಫೀಚರ್ ನಿಂದ ಎಸ್‌ಯುವಿಯಲ್ಲಿರುವವರಿಗೆ ಯಾವುದೇ ತೊಂದರೆಯಾಗುವುದಿಲ್ಲ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ನಾವು ಈ ಎಸ್‌ಯುವಿಯನ್ನು ಕೆಲವೇ ಗಂಟೆಗಳ ಕಾಲ ಚಾಲನೆ ಮಾಡಿದ್ದ ಕಾರಣ ಎಸ್‌ಯುವಿಯ ಮೈಲೇಜ್ ಬಗ್ಗೆ ಹೆಚ್ಚು ತಿಳಿಯಲು ಸಾಧ್ಯವಾಗಲಿಲ್ಲ. ಆದರೆ ಈ ಎಸ್‌ಯುವಿಯಲ್ಲಿರುವ ಎಂಐಡಿ ಸ್ಕ್ರೀನ್ 7.5 ರಿಂದ 10 ಕಿ.ಮೀಗಳ ಅಂಕಿ ಅಂಶವನ್ನು ಪ್ರದರ್ಶಿಸಿತು.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಪ್ರಮುಖ ಫೀಚರ್ ಗಳು:

ಮಹೀಂದ್ರಾ ಎಕ್ಸ್‌ಯು‌ವಿ 700 ಎಸ್‌ಯುವಿಯಲ್ಲಿ

- 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್

- ಸೋನಿಯಿಂದ ಪ್ರೀಮಿಯಂ ಸಂಗೀತ ವ್ಯವಸ್ಥೆ

- ಅಮೆಜಾನ್ ಅಲೆಕ್ಸಾ

- ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ

- ಆಂಬಿಯೆಂಟ್ ಲೈಟಿಂಗ್

- ಡ್ಯೂಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್

- ಏರ್ ಪ್ಯೂರಿಫೈಯರ್

- ಇನ್ಸ್ ಟ್ರೂಮೆಂಟೆಶನ್ ಗಾಗಿ 10.25 ಇಂಚಿನ ಸ್ಕ್ರೀನ್

- ಇನ್ ಬಿಲ್ಟ್ ನ್ಯಾವಿಗೇಷನ್, 3 ಡಿ ಮ್ಯಾಪ್, ಲೈವ್ ಟ್ರಾಫಿಕ್ ಅಪ್‌ಡೇಟ್‌

- ಆಡ್ರೆನಾಕ್ಸ್ ಆಪ್ ಆಧಾರಿತ ಕಂಟ್ರೋಲ್ ಗಳು

- ಎಲೆಕ್ಟ್ರಿಕ್ ಅಡ್ಜಸ್ಟಬಲ್ ಸೀಟುಗಳನ್ನು ನೀಡಲಾಗಿದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಸುರಕ್ಷತಾ ಫೀಚರ್ ಗಳು:

ಮಹೀಂದ್ರಾ ಎಕ್ಸ್‌ಯು‌ವಿ 700 ಎಸ್‌ಯುವಿಯಲ್ಲಿ ಸುರಕ್ಷತೆಗಾಗಿ

-7 ಏರ್‌ಬ್ಯಾಗ್‌

- ಇಎಸ್‌ಪಿ

- ಅಟಾನಾಮಸ್ ಆಟೋ ಬ್ರೇಕಿಂಗ್

- ಲೇನ್ ಕೀಪ್ ಅಸಿಸ್ಟ್

- ಸ್ಮಾರ್ಟ್ ಪೈಲಟ್ ಅಸಿಸ್ಟ್

- ಎಲೆಕ್ಟ್ರಾನಿಕ್ ಲಾಕಿಂಗ್ ಡಿಫರೆನ್ಷಿಯಲ್

- ಎಬಿಎಸ್ ಹಾಗೂ ಇಬಿಡಿ ಫೀಚರ್ ಗಳನ್ನು ನೀಡಲಾಗಿದೆ.

ಮಹೀಂದ್ರಾ ಎಕ್ಸ್‌ಯು‌ವಿ 700 ಫಸ್ಟ್ ಡ್ರೈವ್ ರಿವ್ಯೂ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಹೀಂದ್ರಾ ಎಕ್ಸ್‌ಯು‌ವಿ 700 ಎಸ್‌ಯುವಿಯು ಪ್ರೀಮಿಯಂ ಆಗಿದ್ದು, ಪ್ರೀಮಿಯಂ ಫೀಚರ್‌ಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ. ಈ ಎಸ್‌ಯುವಿಯು ಎಕ್ಸ್‌ಯು‌ವಿ 500 ಎಸ್‌ಯುವಿಯಂತೆಯೇ ಕಾಣುತ್ತದೆ. ಮಹೀಂದ್ರಾ ಕಂಪನಿಯು ಈ ಎಸ್‌ಯುವಿಯಲ್ಲಿ ಹಲವು ಐಷಾರಾಮಿ ಫೀಚರ್ ಗಳನ್ನು ನೀಡಿದೆ.

Most Read Articles

Kannada
English summary
Mahindra xuv 700 first drive review exterior design interior engine features and other details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X