ಮೊದಲ ಚಾಲನಾ ವಿಮರ್ಶೆ- ಸುಖಕರ ಪ್ರಯಾಣಕ್ಕೆ ಬೇಕು ಮಿನಿ ಕೂಪರ್ ಎಸ್..!!

Written By:

ಲಗ್ಷುರಿ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿ ಬಿಎಂಡಬ್ಲ್ಯು ಒಡೆತನದ ಮಿನಿ ಕೂಪರ್ ಮತ್ತೊಮ್ಮೆ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಟಿಸಲು ಸಜ್ಜುಗೊಂಡಿದ್ದು, ಸುಧಾರಿತ ತಂತ್ರಜ್ಞಾನ ಹೊಂದಿರುವ ಎಸ್ ಮಾದರಿಯ ಕಾರನ್ನು ಬಿಡುಗಡೆಗೊಳಿಸಿದೆ.

ಐಷಾರಾಮಿ ಕಾರು ವಿಭಾಗದಲ್ಲಿ ಅತಿಹೆಚ್ಚು ಮಾರಾಟ ದಾಖಲೆ ಹೊಂದಿರುವ ಮಿನಿ ಕೂಪರ್ ತನ್ನ ಹೊಚ್ಚ ಹೊಸ ಎಸ್ ಆವೃತ್ತಿಯ ಕಾರು ಬಿಡುಗಡೆಗೊಳಿಸಿದ್ದು, ಹೊಸ ವೈಶಿಷ್ಟ್ಯತೆಗಳಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ವಿಶೇಷ ವಿನ್ಯಾಸಗಳೊಂದಿಗೆ ಅಭಿವೃದ್ಧಿಗೊಂಡಿರುವ ಮಿನಿ ಕೂಪರ್ ಎಸ್ ಕಾರು, ಜಾನ್ ಕೂಪರ್ ವರ್ಕ್ಸ್ ತಂತ್ರಜ್ಞಾನ ಆಧಾರದ ಮೇಲೆ ಸಿದ್ಧಗೊಂಡಿರುವುದು ಮತ್ತೊಂದು ವಿಶೇಷತೆಗೆ ಕಾರಣವಾಗಿದೆ.

ನೂತನ ಕಾರು ಆವೃತ್ತಿಯ ಮೇಲೆ ಎಸ್ ಬ್ಯಾಡ್ಜ್ ಗಮನಸೆಳೆಯುತ್ತಿದ್ದು, ವಲ್ಕೋನಿಕ್ ಆರೇಂಜ್ ಬಣ್ಣದಲ್ಲಿ ಮಿಂಚುತ್ತಿದೆ.

ಹೊರ ಭಾಗದಿಂದ ನೋಡಲು ವಿಶೇಷ ಲುಕ್ ಹೊಂದಿರುವ ಮಿನಿ ಕೂಪರ್ ಎಸ್, 16-ಇಂಚಿನ ಹುಡ್ ವೀಲ್ಹ್ ವ್ಯವಸ್ಥೆ ಹೊಂದಿದೆ.

ಈ ಹಿಂದಿನ ಮಿನಿ ಕೂಪರ್ ಕಾರು ಮಾದರಿಗಳಿಂತ ಎಸ್ ಮಾದರಿಯಲ್ಲಿ ಭಾರೀ ಬದಲಾವಣೆ ತರಲಾಗಿದ್ದು, ಮುಂಭಾಗದ ನೋಟ ಐಷಾರಾಮಿ ಕಾರು ಪ್ರಿಯರನ್ನು ಸೆಳೆಯುವಂತಿದೆ.

ಮಿನಿ ಕೂಪರ್ ಎಸ್ ಆವೃತ್ತಿಯು ವಲ್ಕೋನಿಕ್ ಆರೇಂಜ್ ಬಣ್ಣದೊಂದಿಗೆ ಬ್ಲ್ಯಾಕ್ ಸ್ಟ್ರೀಪ್ ಹೊಂದಿದ್ದು, ಪ್ರಸ್ತುತ ಐಷಾರಾಮಿ ಕಾರು ಮಾದರಿಗೆ ತೀವ್ರ ಸ್ಪರ್ಧೆ ಒಡ್ಡುವ ತವಕದಲ್ಲಿದೆ.

ಡ್ಯುಯಲ್ ಟೋನ್ ಕಲರ್ ಜೊತೆ ಡ್ಯುಯಲ್ ಎಕ್ಸಾಸ್ಟ್ ಕೊಳವೆಯ ವ್ಯವಸ್ಥೆಯನ್ನು ಇರಿಸಲಾಗಿದ್ದು, ಹೈ ಸ್ಪೀಡ್ ವೇಳೆ ಸುರಕ್ಷೆಗಾಗಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗಿದೆ.

ಮಿನಿ ಕೂಪರ್ ಎಸ್ ಮಾದರಿಯ ಎತ್ತರವನ್ನು ಈ ಹಿಂದಿನ ಕಾರು ಮಾದರಿಗಿಂತ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗಿದ್ದು, ಪ್ರಸ್ತುತ ಮಾದರಿಯೂ 98 ಮಿ.ಮೀಟರ್ ಉದ್ದ, 44 ಮಿ.ಮೀಟರ್ ಅಗಲ ಮತ್ತು 7 ಮಿ.ಮೀಟರ್ ಎತ್ತರ ಹೊಂದಿದೆ.

ಮಿನಿ ಕೂಪರ್ ಒಳಭಾಗದಲ್ಲಿ ವಿಶೇಷ ವಿನ್ಯಾಸ ನೀಡಲಾಗಿದ್ದು, ಸುಖಕರ ಪ್ರಯಾಣಕ್ಕೆ ಅನುಕೂಲಕರವಾಗುವ ಲೆದರ್ ಸೀಟುಗಳು ಮತ್ತು ಸನ್‌ಫ್ರೂಫ್ ರೂಫ್ ತಂತ್ರಜ್ಞಾನ ವ್ಯವಸ್ಥೆ ಹೊಂದಿದೆ.

ಹೊಸ ಮಿನಿ ಕೂಪರ್ ಎಸ್ ಆವೃತ್ತಿಯಲ್ಲಿ 8.8 ಇಂಚಿನ ಟಿಎಫ್‌ಟಿ ಡಿಸ್‌ಫೈ ವ್ಯವಸ್ಥೆಯಿದ್ದು, ನೆವಿಗೇಷನ್, ಎಂಟರ್‌ಟೈನ್‌ಮೆಂಟ್ ಮತ್ತು ಟೆಲಿಫೋನ್ ವ್ಯವಸ್ಥೆ ಕೂಡಾ ಹೊಂದಿದೆ.

2.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಮಿನಿ ಕೂಪರ್ ಎಸ್ ಕಾರು, 4 ಸಿಲಿಂಡರ್ ವ್ಯವಸ್ಥೆ ಹೊಂದಿದೆ. ಇದಲ್ಲದೇ 112 ಬಿಎಚ್‌ಪಿ ಹಾಗೂ 320ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದೆ.

6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರುವ ಮಿನಿ ಕೂಪರ್ ಎಸ್ ಕಾರು, ಕೇವಲ 5.8 ಸೇಕೆಂಡುಗಳಲ್ಲಿ 0 ಟು 100 ಕಿಮಿ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿದೆ.

ಮಿನಿ ಕೂಪರ್ ಎಸ್‌ ನಲ್ಲಿ ಗ್ರೀನ್, ಮಿಡ್ ಮತ್ತು ಸ್ಪೋಟ್ಸ್ ಮೂಡ್ ವ್ಯವಸ್ಥೆಯಿದ್ದು, ನಿಮ್ಮ ಅನುಕೂಲಕ್ಕೆ ತಕ್ಕಂತೆ ಪ್ರಯಾಣ ಮಾಡಬಹುದಾಗಿದೆ. ಜೊತೆಗೆ ಪ್ರತಿ ಗಂಟೆಗೆ 235ಕಿ.ಮಿ ಚಾಲನಾ ಸಾಮರ್ಥ್ಯ ಹೊಂದಿದೆ.

ಹೊಸ ಕಾರು ಮಾದರಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಇಎಸ್‌ಪಿ ಮತ್ತು ಅಗತ್ಯ ಏರ್‌ಬ್ಯಾಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಮಿನಿ ಕೂಪರ್ ಎಸ್ ಬಗ್ಗೆ ನನ್ನ ಅನಿಸಿಕೆ
ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.34,10,000ಗಳಿಗೆ ಲಭ್ಯವಿರಲಿರುವ ಮಿನಿ ಕೂಪರ್ ಎಸ್ ಕಾರು, ಭಾರತೀಯ ಮಾರುಕಟ್ಟೆಯಲ್ಲಿನ ಪ್ರಸ್ತುತ ಬೇಡಿಕೆಗಳಿಗೆ ಅನುಗುಣವಾಗಿ ಸಿದ್ಧಗೊಂಡ ಅದ್ಬುತ ಕಾರು ಮಾದರಿ ಎಂದರೆ ತಪ್ಪಾಗಲಾರದು.
ಜೊತೆಗೆ ಕಡಿಮೆ ಬಜೆಟ್‌ನಲ್ಲಿ ಐಷಾರಾಮಿ ಕಾರು ಖರೀದಿಗೆ ಮಿನಿ ಕೂಪರ್ ಎಸ್ ಆಯ್ಕೆ ಉತ್ತಮ ಎನ್ನಬಹುದು.

English summary
The Cooper S along with the John Cooper Work makes the little pocket rocket a monster.
Please Wait while comments are loading...

Latest Photos