ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಫೋರ್ಡ್ ಇಂಡಿಯಾ ಸಂಸ್ಥೆಯು ತಮ್ಮ ಆಸ್ಪೈರ್ ಕಾಂಪ್ಯಾಕ್ಟ್ ಸೆಡನ್ ಕಾರನು ಮೊದಲ ಬಾರಿಗೆ 215ರಲ್ಲಿ ಬಿಡುಗಡೆಗೊಳಿಸಿತ್ತು. ಆಗ ಮಾರುಕಟ್ಟೆಯಲ್ಲಿನ ತನ್ನ ಎದುರಾಳಿಗಳ ಪೈಪೋಟಿ ಇಂದಾಗಿ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡಲಿಲ್ಲವಾದ ಕಾರಣ ಸಂಸ್ಥೆಯು ಈ ಬಾರಿ ಆಸ್ಪೈರ್ ಕಾರುಗಳನ್ನು ನವೀಕರಿಸಿ ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್ ಸೆಡಾನ್ ಸರಣಿಯಲ್ಲಿ ಮೊದಲನೆಯ ಸ್ಥಾನವನ್ನು ಪಡೆದಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿಗೆ ಪೈಪೋಟಿ ನೀಡಲು ಹೊಸತನದೊಂದಿಗೆ ಬಿಡುಗಡೆಗೊಳಿಸಿದೆ.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಹೊಸ ಫೋರ್ಡ್ ಆಸ್ಪೈರ್ ಸೆಡಾನ್ ಕಾರಿನ ಪೆಟ್ರೋಲ್ ವೇರಿಯಂಟ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 5.55 ಲಕ್ಷ ಮತ್ತು ಡೀಸೆಲ್ ವೇರಿಯಂಟ್ ಕಾರು ರೂ. 6.45 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಒಟ್ಟು ಮೂರು ಬಗೆಯ ಎಂಜಿನ್ ಆಯ್ಕೆಗಳಲ್ಲಿ ಖರೀಗೆ ಲಭ್ಯವಿರುವ ಫೋರ್ಡ್ ಆಸ್ಫೈರ್ ಕಾರು ಹೊಸ ವಿನ್ಯಾಸ ಹಾಗು ವೈಶಿಷ್ಟ್ಯೆತೆಗಳನ್ನು ಪಡೆದುಕೊಂಡಿದೆ.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಫೋರ್ಡ್ ಇಂಡಿಯಾ ಸಂಸ್ಥೆಯು ತಮ್ಮ ಆಸ್ಪೈರ್ ಸೆಡಾನ್ ಫೇಸ್‍‍ಲಿಫ್ಟ್ ಕಾರನ್ನು ಟೆಸ್ಟ್ ಡ್ರೈವ್ ಮಾಡುವ ಅವಕಾಶವನ್ನು ನೀಡಿದ್ದು, ಬಹುದಿನಗಳ ಕಾಲ ನಮ್ಮೊಂದಿಗಿದ್ದ ಆಸ್ಫೈರ್ 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ವೇರಿಯಂಟ್ ಕಾರುಗಳ ಬಗೆಗಿನ ಪ್ರಯಾಣದ ಬಗ್ಗೆ ನಾವಿಂದು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ನಮ್ಮೊಂದಿಗಿದ್ದ ಫೋರ್ಡ್ ಆಸ್ಪೈರ್ ಕಾರಿನ ಎರಡು ವೇರಿಯಂಟ್‍‍ಗಳನ್ನು ನಾವು ಜೋದ್‍ಪುರ್ ಮತ್ತು ರಾಜಸ್ಥಾನದ ರಸ್ತೆಗಳಲ್ಲಿ ಪರೀಕ್ಷಿಸಲು ಮುಂದಾದು. ಡ್ರೈವಿಂಗ್ ಮಾಡಲು ತುಂಬಾ ಅನುಕೂಲಕಾರಿಯಾಗಿ ಈ ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ತಯಾರು ಮಾಡಲಾಗಿದ್ದು, ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸೆಡಾನ್ ಕಾರನ್ನು ಖರೀದಿಸುವವರಿಗೆ ಇದು ಹೇಳಿ ಮಾಡಿಸಿದ ಕಾರು ಎನ್ನಬಹುದು.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಹೊಸ ಕಾರಿನ ವಿನ್ಯಾಸ ಮತ್ತು ಶೈಲಿ

ಈ ಬಾರಿ ಹೊಸ ಫೋರ್ಡ್ ಆಸ್ಪೈರ್ ಸೆಡಾನ್ ಕಾರಿನ ವಿನ್ಯಾಸದಲ್ಲಿ ವಿಶೇಷವಾಗಿ ವಿನ್ಯಾಸದ ಕಡೆಗೆ ಹೆಚ್ಚಿನ ಗಮನವನ್ನು ನೀಡಿ ತಯಾರು ಮಾಡಲಾಗಿದೆ. ವಿನೂತನವಾದ ಹೊಸ ಹೆಕ್ಸಾಗನಲ್ ಗ್ರಿಲ್, ಸಿ ಆಕಾರದಲ್ಲಿನ ಫಾಗ್ ಲ್ಯಾಂಪ್ಸ್ ಮತ್ತು ಮರುವಿನ್ಯಾಸಗೊಳಿಸಲಾದ ಫ್ರಂಟ್ ಬಂಪರ್ ಅನ್ನು ನೀಡಲಾಗಿದೆ.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಇನ್ನು ಕಾರಿನ ಬದಿಗಳಲ್ಲಿ ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಲಾಗಿದ್ದು, ಫ್ರಂಟ್ ಫೆಂಡರ್ ಟೈಲ್ ಲ್ಯಾಂಪ್ ಹಾಗು ಡೋರ್ ಹ್ಯಾಂಡಲ್‍ಗಳ ಮೇಲೆ ಹಾದು ಹೋಗುತ್ತದೆ. ಕಾರಿನಲ್ಲಿರುವ ಸಾಧಾರಣ ಕಾಂಪ್ಯಾಕ್ಟ್ ಸೆಡಾನ್ ಕಾರಿನಲ್ಲಿ ಕಾಣುವುದಕ್ಕಿಂತಾ ವಿಭಿನ್ನವಾಗಿ ಈ ಕಾರಿನಲ್ಲಿ ನೀಡಲಾಗಿದೆ.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಇದಲ್ಲದೇ ನಗರ ಪ್ರದೇಶಗಳಲ್ಲಿ ಪ್ರಯಾಣಕ್ಕಾಗಿ 15 ಇಂಚಿನ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಕಾರಿನ ಆರ್ಚೆಸ್ ಹಾಗು ಓವರ್‍‍ಹ್ಯಾಂಗ್ಸ್ ಜಾಗದಲ್ಲಿ ಸರಿಯಾಗಿ ಕೂರಿಸಲಾಗಿದ್ದು, ಈ ಕಾರು 174ಎಮ್ಎಮ್‍ನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿದೆ. ಕಾರಿನ ಹಿಂಭಾಗದಲ್ಲಿ ಟೈಲ್ ಲ್ಯಾಂಪ್‍ನ ಸುತ್ತಾ ಸಣ್ಣದಾದ ಕ್ರೋಮ್ ಗಾರ್ನಿಶ್ ಅನ್ನು ನೀಡಲಾಗಿದ್ದು, ಜೊತೆಗೆ ಫೋರ್ಡ್ ಚಿಹ್ನೆಯನ್ನು ಒದಗಿಸಲಾಗಿದೆ.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಕಾರಿನ ಒಳವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಫೋರ್ಡ್ ಆಸ್ಪೈರ್ ಸೆಡಾನ್ ಕಾರಿನ ಒಳಭಾಗದಲ್ಲಿ ಸೆಂಟ್ರಲ್ ಕಂಸೋಲ್ ಅನ್ನು ಸುಂದರವಾಗಿ ಸಜುಗೊಳಿಸಲಾಗಿದ್ದು, ಡ್ಯುಯಲ್ ಟೋನ್ ಡ್ಯಾಶ್‍ಬೋರ್ಡ್ ಅನ್ನು ಹೈಲೈಟ್ ಮಾಡಲಾಗಿದೆ. ಆದರೆ ಈ ಬಾರಿ ನೀಡಲಾದ ಇನ್ಫೋಟೈನ್ಮೆಂಟ್ ಸಿಸ್ಟಂ ಹೆಚ್ಚು ಆಕರ್ಷಕವಾಗಿರುವುದು ನೀವು ಗಮನಿಸಬೇಕು.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಈ ಬಾರಿ ಈ ಕಾರಿನಲ್ಲಿ ಅಳವಡಿಸಲಾಗಿರುವ ಹೊಸ 6.5 ಇಂಚಿನ ಸಿಂಕ್3 ಇನ್ಫೋಟೈನ್ಮೆಂಟ್ ಸಿಸ್ಟಂ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕೆನ್ಕ್ಟಿವಿಟಿಗಳನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೇ ಮೊಬೈಲ್ ಆಪ್‍‍ಗಳ ಸಹಾಯದಿಂದ ನ್ಯಾವಿಗೇಷನ್ ಮತ್ತು ಸಣ್ಣ ಹೋಮ್ ಸ್ಕ್ರೀನ್ ಅನ್ನು ನೀಡಲಾಗಿದೆ.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಜೊತೆಗೆ ಫೋರ್ಡ್ ಆಸ್ಪೈರ್ ಸೆಡಾನ್ ಕಾರಿನಲ್ಲಿ ಪ್ರಯಾಣಿಕರ ಸೌಕರ್ಯಕಾಗಿ 12ವೋಲ್ಟ್ಸ್ ಔಟ್‍‍ಪುಟ್ ಮತ್ತು ಎರಡು ಯುಎಸ್‍ಬಿ ಪೋರ್ಟ್‍ಗಳನ್ನು ನೀಡಲಾಗಿದ್ದು, ಅವುಗಳನ್ನು ಡ್ಯಾಶ್‍ಬೋರ್ಡ್ ಮೇಲಿನ ಸಣ್ಣ ಸ್ಟೋರೇಜ್‍ನಲ್ಲಿ ಇರಿಸಲಾಗಿದೆ.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಹಿಂದಿನ ತಲೆಮಾರಿನ ಕಾರಿನಲ್ಲಿ ಕಾಣುವಂತೆಯೆ ಹೈಡ್ರಾ ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್ ಅನ್ನು ನೀಡಲಾಗಿದ್ದು, ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡಾ ಹಳೆಯ ಮಾದರಿಯ ಕಾರಿನಿಂದಲೇ ಪಡೆಯಲಾಗಿದೆ. ಇದರಲ್ಲಿ ಡಿಸ್ಟಾನ್ಸ್-ಟು-ಎಂಪ್ಟಿ, ಯಾವರೇಜ್ ಮತ್ತು ಫ್ಯುಯಲ್ ಎಕಾನಮಿಯ ಮಾಹಿತಿಯನ್ನು ಕಾಣಬಹುದಾಗಿದೆ.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಕಾರಿನ ಬಾಗಿಲುಗಳನ್ನು ತೆರದ ತಕ್ಷಣವೇ ಕಣ್ಕುಕ್ಕುವಹಾಗೆ ಉಣ್ಣೆ ಬಟ್ಟೆಯಿಂದ ಒಲಿಯಲಾದ ಆಕರ್ಷಕ ಸೀಟ್‍‍ಗಳು, ವಿಶಾಲವಾದ ಜಾಗ ಮತ್ತು ಡ್ರೈವರ್‍‍ಗೆ ಅನಕೂಲಕರಿಯಾಗಿ ಡ್ರೈವ್ ಮಾಡಲು ಹೈಟ್ ಅಡ್ಜಸ್ಟ್ಮೆಂಟ್ ಸೀಟ್ ಅನ್ನು ನೀಡಲಾಗಿದೆ.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಹಿಂಭಾಗದ ಬೂಟ್ ಅನ್ನು ರಿಮೋಟ್‍ನ ಸಹಾಯದಿಂದ ತೆರೆಯಬಹುದಾಗಿದ್ದು, ಇದರಲ್ಲಿ ಸುಮಾರು 359 ಲೀಟರ್‍‍ನಷ್ಟು ತುಂಬಬಹುದಾದ ಜಾಗವನ್ನು ನೀಡಲಾಗಿದೆ. ಹಿಂಭಾಗದ ಸವಾರರಿಗೆ ಹೆಡ್‍‍ರೆಸ್ಟ್ ಅನ್ನು ನೀಡಲಿಲ್ಲವಾದರೂ ಆರ್ಮ್‍ರೆಸ್ಟ್ ಬೋರ್ಡ್‍ ಅನ್ನು ನೀಡಲಾಗಿದೆ.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಎಂಜಿನ್ ಸಾಮರ್ಥ್ಯ ಮತ್ತು ಮೈಲೇಜ್

ಹೊಸದಾಗಿ ಬಿಡುಗಡೆಗೊಂಡ ಫೋರ್ಡ್ ಫಿಗೊ ಆಸ್ಪೈರ್ ಕಾರು ಮೂರು ಬಗೆಯ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಮೊದಲನೆಯ 1.2 ಲೀಟರ್ ಪೆಟ್ರೋಲ್ ಎಂಜಿನ್ ಕಾರು 95ಬಿಹೆಚ್‍ಪಿ ಮತ್ತು 120ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದುಮ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಮತ್ತೊಂದು ಎಂಜಿನ್ ತಮ್ಮದೇ ಸಂಸ್ಥೆಯಲ್ಲಿನ ಎಕೊಸ್ಪೋರ್ಟ್ ಕಾರಿನಿಂದ ಪಡೆದ 1.5 ಲೀಟರ್ 3 ಸಿಲೆಂಡರ್ ಡ್ರ್ಯಾಗನ್ ಪೆಟ್ರೋಲ್ ಎಂಜಿನ್ ಸಹಾಯದಿಂದ 123ಬಿಹೆಚ್‍‍ಪಿ ಮತ್ತು 150ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಮತ್ತೊಂದು ಎಂಜಿನ್ ಅಧಾರಿತ ಕಾರು 1.5 ಲೀಟರ್ ಡ್ರ್ಯಾಗನ್ ಸಿರೀಸ್ ಡೀಸೆಲ್ ಎಂಜಿನ್ 99 ಬಿಹೆಚ್‍‍ಪಿ ಮತ್ತು 215ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂಡಿಗೆ ಜೋಡಿಸಲಾಗಿದೆ.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಮೈಲೇಜ್

ಪೆಟ್ರೋಲ್ ಮಾದರಿಯ ಫೋರ್ಡ್ ಆಸ್ಫೈರ್ ಕಾರುಗಳು ಪ್ರತೀ ಲೀಟರ್‍‍ಗೆ 20.4 ಕಿಲೋಮೀಟರ್ ಮೈಲೆಜ್ ನೀಡಿದ್ದಲ್ಲಿ, ಇನ್ನು ಡೀಸೆಲ್ ಮಾದರಿಯ ಕಾರುಗಳು ಪರ್ತೀ ಲೀಟರ್‍‍ಗೆ 26.1 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಒಟ್ಟಾರೆ ಡ್ರೈವಿಂಗ್ ಅನುಭವ

ಹೊಸ ಫೋರ್ಡ್ ಆಸ್ಪೈರ್ ಕಾರುಗಳು ಪರ್ಫಾರ್ಮೆಂನ್ಸ್ ಮತ್ತು ಕಂಫಾರ್ಟ್‍ನ ಪರವಾಗಿ ಉತ್ತಮವಾಗಿದ್ದು, ಗುಂಡಿ ರಸ್ತೆಗಳಲ್ಲಿ ಕಾರನ್ನು ಚಲಾಯಿಸುವು ಕೊಂಚ ಕಷ್ಟ ಎನ್ನಬಹುದು. ಎಂಜಿನ್‍ನಿಂದ ಬರುವ ಸದ್ದು ಕ್ಯಾಬಿನ್ ಒಳಗಡೆಯು ಕೇಳಿಸುತ್ತದೆ ಅದರಲ್ಲಿಯು ಡೀಸೆಲ್ ವೇರಿಯಂಟ್ ಕಾರುಗಳಲ್ಲಿ ಸ್ವಲ್ಪ ಜಾಸ್ತಿಯೆ ಕೇಳಿಸುತ್ತದೆ ಎನ್ನಬಹುದು.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ವೈಶಿಷ್ಟ್ಯೆತೆಗಳು

ಫೋರ್ಡ್ ಆಸ್ಪೈರ್ ಸೆಡಾನ್ ಕಾರಿನಲ್ಲಿ ಈ ಬಾರಿ ಹಲವಾರು ವೈಶಿಷ್ಟ್ಯತೆಗಳನ್ನು ನೀಡಲಾಗಿದ್ದು, ಎಲೆಕ್ಟ್ರಾನಿಕ್ ರಿಮೋಟ್ ಬೂಟ್ ರಿಲೀಸ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ಸ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪುಷ್ ಸ್ಟಾರ್ಟ್/ಸ್ಟಾಪ್ ಬಟನ್, ಆಟೋಮ್ಯಾಟಿಕ್ ಹೆಡ್‍‍ಲ್ಯಾಂಪ್ಸ್, ರೈನ್ ಸೆನ್ಸಿಂಗ್ ವೈಪರ್ಸ್, ಎಲೆಕ್ಟ್ರಾನಿಕಲ್ಲಿ ಫೋಲ್ಡೆಬಲ್ ಮತು ಅಡ್ಜಸ್ಟಬಲ್ ಒಆರ್‍‍ವಿಎಮ್‍ಗಳನ್ನು ನೀಡಲಾಗಿದೆ. ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್‍‍ಬ್ಯಾಗ್‍ಗಳು, ಎಂಜಿನ್ ಇಮ್ಮೊಬಿಲೈಜರ್, ಎಬಿಎಸ್, ಇಬಿಡಿ ಮತ್ತು ಎಮರ್ಜನ್ಸಿ ಅಸ್ಸಿಸ್ಟ್ ಎಂಬ ವೈಶಿಷ್ಟ್ಯೆತೆಗಳನ್ನು ಅಳವಡಿಸಲಾಗಿದೆ.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಮಾರುಕಟ್ಟೆಯಲ್ಲಿ ಹಲವಾರು ವಾಹನ ತಯಾರಕ ಸಂಸ್ಥೆಗಳು ಕೇವಲ ಫ್ಯುಯಲ್ ಎಫಿಶಿಯನ್ಸಿ ಮತ್ತು ಬೆಲೆಯನ್ನು ತಲೆಯಲ್ಲಿ ಇಟ್ಟುಕೊಂಡು ವಾಹನವನ್ನು ತಯಾರಿಸಿದರೆ ಫೋರ್ಡ್ ಮಾತ್ರ ಈ ಕಾರಿನಲ್ಲಿ ಈ ಮೂರು ಮತ್ತು ಪ್ರಯಾಣಿಕರಿಗೆ ಬೇಕಾದ ಎಲ್ಲಾ ಸೌಲತ್ತುಗಳನ್ನು ನೀಡಿದೆ.

ಚಾಲನಾ ವಿಮರ್ಶೆ: ಕಾಂಪ್ಯಾಕ್ಟ್ ಸೆಡಾನ್‍ಗಳಲ್ಲಿ ಫೋರ್ಡ್ ಆಸ್ಪೈರ್ ಸದ್ದು

ಅದಾಗ್ಯೂ ಫೋರ್ಡ್ ಸಂಸ್ಥೆಯು ದೇಶಿಯ ಮಾರುಕಟ್ಟೆಗೆ ಫುಲ್-ಸೈಜ್ ಸೆಡಾನ್ ಪೋರ್ಡ್ ಫಿಯೆಸ್ಟಾ ಕಾರನ್ನು ಬಿಡುಗಡೆಗೊಳಿಸಬೇಕಾಗಿದ್ದು, ಈ ಕಾರು ಮಾರುಕಟ್ಟೆಯಲ್ಲಿರುವ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಮಾರುತಿ ಸುಜುಕಿ ಸಿಯಾಜ್ ಮತ್ತು ಇನ್ನಿತರೆ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on car review ford sedan
English summary
New Ford Aspire 2018 Review — The Compact-Sedan For The Driver In You.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X