ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

2008ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹ್ಯುಂಡೈ ಐ 20 ಕಾರು ದೇಶದ ಜನಪ್ರಿಯ ಹ್ಯಾಚ್‌ಬ್ಯಾಕ್‌ ಕಾರುಗಳಲ್ಲಿ ಒಂದಾಗಿದೆ. ಹ್ಯುಂಡೈ ಕಂಪನಿಯು ಈ ಕಾರನ್ನು ಹಲವು ಬಾರಿ ಅಪ್ ಡೇಟ್ ಮಾಡಿ ಬಿಡುಗಡೆಗೊಳಿಸಿದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಹ್ಯುಂಡೈ ಕಂಪನಿಯು ಇತ್ತೀಚೆಗೆ ಬಿಡುಗಡೆಗೊಳಿಸಿರುವ ಮೂರನೇ ತಲೆಮಾರಿನ ಐ 20 ಕಾರಿನ ಮೂಲ ಮಾದರಿಯ ಬೆಲೆ ರೂ.6.80 ಲಕ್ಷಗಳಾದರೆ, ಟಾಪ್-ಎಂಡ್ ಟರ್ಬೊ ಜಿಡಿ ಮಾದರಿಯ ಬೆಲೆ ರೂ.11.18 ಲಕ್ಷಗಳಾಗಿದೆ. ನಾವು ಇತ್ತೀಚಿಗೆ ಹೊಸ ಹ್ಯುಂಡೈ ಐ 20 ಕಾರನ್ನು ಚಾಲನೆ ಮಾಡಿದೆವು. ಈ ಚಾಲನೆಯ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಡಿಸೈನ್ ಹಾಗೂ ಸ್ಟೈಲ್

ಮೊದಲಿಗೆ ಹೆಚ್ಚು ಏರೋ ಡೈನಾಮಿಕ್ ಆಗಿರುವ ಈ ಕಾರಿನ ಮುಂಭಾಗದ ಬಗ್ಗೆ ಹೇಳುವುದಾದರೆ ಈ ಕಾರಿನ ಮುಂಭಾಗದಲ್ಲಿರುವ ಗ್ರಿಲ್ ಈ ಕಾರಿಗೆ ಸ್ಪೋರ್ಟಿ ಲುಕ್ ನೀಡುತ್ತದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಈ ಕಾರಿನಲ್ಲಿ ಹೈ ಹಾಗೂ ಲೋ ಬೀಮ್ ಗಳಿಗಾಗಿ ಎಲ್ಇಡಿ ಪ್ರೊಜೆಕ್ಟರ್ ಸೆಟಪ್ ಹೊಂದಿರುವ ಸ್ಲೀಕ್ ಆದ ಹೆಡ್‌ಲೈಟ್ ಕ್ಲಸ್ಟರ್ ಅನ್ನು ನೀಡಲಾಗಿದೆ. ಇದರ ಜೊತೆಗೆ ಈ ಕಾರು ಹ್ಯಾಲೊಜೆನ್ ಬಲ್ಬ್ ಹೊಂದಿರುವ ಪ್ರೊಜೆಕ್ಟರ್ ಫಾಗ್ ಲ್ಯಾಂಪ್ ಗಳನ್ನು ಸಹ ಹೊಂದಿದೆ. ಈ ಕಾರಿನಲ್ಲಿರುವ ಡಿಆರ್‌ಎಲ್‌ಗಳು ಅತ್ಯಂತ ಪ್ರಕಾಶಮಾನವಾಗಿದ್ದು, ಕಾರನ್ನು ಸ್ಪೋರ್ಟಿಯಾಗಿ ಕಾಣುವಂತೆ ಮಾಡುತ್ತವೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಈ ಕಾರಿನ ಸ್ಪೋರ್ಟ್‌ನೆಸ್ ಹೆಚ್ಚಿಸಲು ಫ್ರಂಟ್ ಲಿಪ್ ಸ್ಪ್ಲಿಟರ್ ಅನ್ನು ನೀಡಲಾಗಿದೆ. ಈ ಕಾರಿನಲ್ಲಿ ಲೋಗೋ ಹಾಗೂ ಹೆಡ್‌ಲೈಟ್ ಹೌಸಿಂಗ್‌ನೊಳಗಿನ ಕೆಲವು ಅಂಶಗಳನ್ನು ಹೊರತುಪಡಿಸಿ ಬೇರೆ ಯಾವುದೇ ಭಾಗಗಳು ಕ್ರೋಮ್ ಅಂಶಗಳನ್ನು ಹೊಂದಿಲ್ಲ.

ಇನ್ನು ಸೈಡ್ ಪ್ರೊಫೈಲ್ ನಲ್ಲಿ ಈ ಹ್ಯಾಚ್‌ಬ್ಯಾಕ್‌ ಕಾರಿಗೆ ಸೂಕ್ತವಾಗಿರುವ ಡ್ಯುಯಲ್-ಟೋನ್ ಐದು-ಸ್ಪೋಕ್ ನ 16-ಇಂಚಿನ ಅಲಾಯ್ ವ್ಹೀಲ್ ಹಾಗೂ ಇಂಟಿಗ್ರೇಟೆಡ್ ಎಲ್ಇಡಿ ಇಂಡಿಕೇಟರ್ ಹೊಂದಿರುವ ಕಪ್ಪು ಬಣ್ಣದ ಒಆರ್ ವಿಎಂಗಳನ್ನು ನೀಡಲಾಗಿದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಹೆಡ್‌ಲೈಟ್‌ನಿಂದ ಟೇಲ್‌ಲೈಟ್‌ವರೆಗೆ ಶಾರ್ಪ್ ಆದ ಲೈನ್ ಹಾಗೂ ಕ್ರೀಸ್‌ಗಳಿವೆ. ಈ ಕಾರು ಡೋರ್ ಹ್ಯಾಂಡಲ್‌ ಹಾಗೂ ವಿಂಡೋಗಳ ಸುತ್ತಲೂ ಕ್ರೋಮ್‌ ಅಂಶಗಳನ್ನು ಹೊಂದಿದೆ. ಹೊಸ ಐ 20 ಕಾರಿನಲ್ಲಿ ಕಪ್ಪು ರೂಫ್ ಹಾಗೂ ಪ್ರೀಮಿಯಂ ಟಚ್ ಹೊಂದಿರುವ ಸನ್‌ರೂಫ್ ನೀಡಲಾಗಿದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಈ ಕಾರಿನ ಹಿಂಭಾಗವು ಝಡ್ ಶೇಪಿನಲ್ಲಿ ಎಲ್ಇಡಿ ಅಂಶವನ್ನು ಹೊಂದಿರುವ ಸ್ಲೀಕ್ ಆದ ಟೇಲ್‌ಲೈಟ್ ಯುನಿಟ್ ಅನ್ನು ಹೊಂದಿದೆ. ಈ ಹ್ಯಾಚ್‌ಬ್ಯಾಕ್ ನಲ್ಲಿ ವಾಷರ್ ಹೊಂದಿರುವ ಹಿಂಭಾಗದ ವೈಪರ್ ಅನ್ನು ಸಹ ನೀಡಲಾಗಿದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಈ ಕಾರಿನಲ್ಲಿರುವ ಶಾರ್ಕ್ ಫಿನ್ ಆಂಟೆನಾ ಹಾಗೂ ಫೇಕ್ ರೇರ್ ಡಿಫ್ಯೂಸರ್ ಗಳು ಹೊಸ ಐ 20 ಹ್ಯಾಚ್ ಬ್ಯಾಕ್ ಕಾರಿನ ಸ್ಪೋರ್ಟಿ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಹೊಸ ಐ 20 ಕಾರಿನಲ್ಲಿ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ನೀಡಲಾಗಿದೆ. ಇದರಲ್ಲಿರುವ ಅಡಾಪ್ಟಿವ್ ಗೈಡ್ ಲೈನ್ಸ್ ಹಾಗೂ ಸೆನ್ಸಾರ್ ಗಳು ಕಾರನ್ನು ಇಕ್ಕಟ್ಟಾದ ಸ್ಥಳಗಳಲ್ಲಿಯೂ ಸುಲಭವಾಗಿ ಪಾರ್ಕ್ ಮಾಡಲು ನೆರವಾಗುತ್ತವೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಇಂಟಿರಿಯರ್ ಹಾಗೂ ಫೀಚರ್ ಗಳು

ಹೊಸ ಐ 20 ಕಾರಿನ ಇಂಟಿರಿಯರ್ ರೆಡ್ ಹೈ ಲೈಟ್ ಗಳೊಂದಿಗೆ ಕಪ್ಪು ಬಣ್ಣವನ್ನು ಹೊಂದಿದೆ. ಈ ಕಾರಿನ ಇಂಟಿರಿಯರ್ ನಲ್ಲಿ ಡ್ಯಾಶ್‌ಬೋರ್ಡ್,ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋವನ್ನು ಬೆಂಬಲಿಸುವ 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಹಾಗೂ ಬೂಟ್‌ನಲ್ಲಿ ಸಬ್ ವೂಫರ್ ಹೊಂದಿರುವ ಏಳು-ಸ್ಪೀಕರ್ ಬೋಸ್ ಸಿಸ್ಟಂಗಳನ್ನು ನೀಡಲಾಗಿದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಲೆದರ್ ನಿಂದ ವ್ರಾಪ್ ಮಾಡಲಾದ ಸ್ಟೀಯರಿಂಗ್ ವ್ಹೀಲ್ ಹೆಚ್ಚು ಗ್ರಿಪ್ ಅನ್ನು ಹೊಂದಿದೆ. ಈ ಸ್ಟೀಯರಿಂಗ್ ವ್ಹೀಲ್ ಎಡಭಾಗದಲ್ಲಿ ಇನ್ಫೋಟೇನ್‌ಮೆಂಟ್ ಸಿಸ್ಟಂಗಳನ್ನು ಕಂಟ್ರೋಲ್ ಮಾಡಲು ಸ್ಟೀಯರಿಂಗ್ ಮೌಂಟೆಡ್ ಕಂಟ್ರೋಲ್ ಹಾಗೂ ಇನ್ನೊಂದು ಬದಿಯಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಕ್ರೂಸ್ ಕಂಟ್ರೋಲ್ ಗಳನ್ನು ಕಂಟ್ರೋಲ್ ಮಾಡುವ ಬಟನ್ ಗಳಿವೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಈ ಕಾರಿನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ. ಹೊಸ ಆ್ಯಂಟಿ ಕ್ಲಾಕ್ ವೈಸ್ ಡೈರೆಕ್ಷನ್ ನಲ್ಲಿ ರೋಟೆಟ್ ಆಗುವ ಟ್ಯಾಕೋಮೀಟರ್ ಗೆ ಅಡ್ಜಸ್ಟ್ ಆಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಮಧ್ಯದಲ್ಲಿರುವ ಎಂಐಡಿ ಸ್ಕ್ರೀನ್ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಅನ್ನು ಬೆಂಬಲಿಸುವುದರ ಜೊತೆಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಈ ಕಾರಿನಲ್ಲಿ ಕಪ್ಪು ಬಣ್ಣದ ಸೀಟುಗಳನ್ನು ನೀಡಲಾಗಿದೆ. ಮುಂಭಾಗದ ಸೀಟುಗಳು ಮ್ಯಾನುವಲ್ ಆಗಿದ್ದು ಚಾಲಕನ ಸೀಟಿನಲ್ಲಿ ಮಾತ್ರ ಹೈಟ್ ಅಡ್ಜಸ್ಟ್ ಮಾಡಿಕೊಳ್ಳಬಹುದು. ಮುಂಭಾಗದ ಆಸನಗಳು ಸೈಡ್ ಬೋಲ್ ಸ್ಟರ್‌ಗಳನ್ನು ಹೊಂದಿವೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಎರಡನೇ ಸಾಲು ಆರಾಮದಾಯಕವಾಗಿದ್ದು, ರೇರ್ ಎಸಿ ವೆಂಟ್ ಗಳನ್ನು ನೀಡಲಾಗಿದೆ. ಇದರಿಂದಾಗಿ ಕ್ಯಾಬಿನ್ ಬೇಗ ಕೂಲ್ ಆಗುತ್ತದೆ. ಹಿಂಭಾಗದಲ್ಲಿ 88 ಎಂಎಂ ಲೆಗ್ ರೂಂ ನೀಡಲಾಗಿದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಇದರಿಂದ ಹೈಟ್ ಇರುವ ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶ ಸಿಗಲಿದೆ. ಸನ್‌ರೂಫ್ ಚಿಕ್ಕದಾಗಿರುವ ಕಾರಣಕ್ಕೆ ಹಿಂಭಾಗದ ಪ್ರಯಾಣಿಕರಿಗೆ ಸ್ಪಷ್ಟವಾದ ನೋಟ ಸಿಗುವುದಿಲ್ಲ. ಈ ಕಾರು ಹಳೆಯ ಕಾರಿಗಿಂತ 26 ಲೀಟರ್ ಹೆಚ್ಚು ಬೂಟ್ ಅಂದರೆ 311 ಲೀಟರ್ ನಷ್ಟು ಬೂಟ್ ಅನ್ನು ಹೊಂದಿದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಎರಡನೇ ಸಾಲಿನಲ್ಲಿ 60:40 ಸ್ಪ್ಲಿಟ್ ನೀಡಲಾಗಿಲ್ಲ. ಆದರೆ ಲಗೇಜ್ ಗಳಿಗೆ ಹೆಚ್ಚಿನ ಸ್ಪೇಸ್ ಬೇಕಾದರೆ ಇಡೀ ಸಾಲನ್ನು ಕೆಳಕ್ಕೆ ಫೋಲ್ಡ್ ಮಾಡಬಹುದು.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಎಂಜಿನ್ ಹಾಗೂ ಹ್ಯಾಂಡ್ಲಿಂಗ್

ಹೊಸ ಐ 20 ಕಾರಿನಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ಗಳನ್ನು ಅಳವಡಿಸಲಾಗಿದೆ. 1-ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ 120 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಡಿಸಿಟಿ ಅಥವಾ ಆರು-ಸ್ಪೀಡಿನ ಐಎಂಟಿ ಟ್ರಾನ್ಸ್ ಮಿಷನ್ ನೀಡಲಾಗುವುದು.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಇನ್ನು 1.2-ಲೀಟರಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಹೊಂದಿರುವ ಎನ್‌ಎ ಕಪ್ಪಾ ಎಂಜಿನ್ 88 ಬಿಹೆಚ್‌ಪಿ ಪವರ್ ಉತ್ಪಾದಿಸಿದರೆ, ಐದು-ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್‌ ಹೊಂದಿರುವ ಎಂಜಿನ್ 88 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

1.5-ಲೀಟರಿನ ಡೀಸೆಲ್ ಎಂಜಿನ್ 100 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡಿನ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ನಾವು 1 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಮಾದರಿಯನ್ನು ಚಾಲನೆ ಮಾಡಿದೆವು. ಈ ಎಂಜಿನ್ 120 ಬಿಹೆಚ್‌ಪಿ ಪವರ್ ಹಾಗೂ 175 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಸರಿ ಸುಮಾರು 1,100 ಕೆ.ಜಿ ತೂಕವನ್ನು ಹೊಂದಿದೆ

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಎನ್‌ವಿಹೆಚ್ ಹಾಗೂ ಇನ್ಸೂಲೇಷನ್ ಲೆವೆಲ್ ಟಾಪ್ ಎಂಡ್ ನಲ್ಲಿರುವುದರಿಂದ ಎಂಜಿನ್ ಸ್ಟಾರ್ಟ್ ಆದ ನಂತರ ಕ್ಯಾಬಿನ್‌ನೊಳಗೆ ಯಾವುದೇ ರೀತಿಯ ಶಬ್ದ ಕೇಳಿ ಬರುವುದಿಲ್ಲ. ಆದರೆ ಇದೇ ಎಂಜಿನ್ ಶಬ್ದವು ಹೆಚ್ಚಿನ ರೆವ್ ನಲ್ಲಿ ಕೇಳಿಸುತ್ತದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ನಾವು ಚಾಲನೆ ಮಾಡಿದ ಮಾದರಿಯು 7 ಸ್ಪೀಡಿನ ಡಿಸಿಟಿ ಟ್ರಾನ್ಸ್ ಮಿಷನ್ ಹೊಂದಿತ್ತು. ಈ ಮಾದರಿಯಲ್ಲಿ ಗೇರ್‌ಬಾಕ್ಸ್ ಸ್ಮೂಥ್ ಆಗಿದ್ದ ಕಾರಣ ಗೇರ್ ಬದಲಾವಣೆ ವೇಗವಾಗಿತ್ತು. ಗೇರ್‌ ಬದಲಾವಣೆ ಮಾಡುವಾಗ ನಡುವೆ ಯಾವುದೇ ರೀತಿಯ ವಿಳಂಬವಾಗುವುದಿಲ್ಲ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಈ ಗೇರ್‌ಬಾಕ್ಸ್‌ನಲ್ಲಿರುವ ಎಸ್ ಮೋಡ್ ಗೇರ್‌ಗಳನ್ನು ಹೆಚ್ಚಿನ ರೆವ್‌ಗಳವರೆಗೆ ಹಿಡಿದಿಟ್ಟುಕೊಳ್ಳುತ್ತದೆ. ಡಿ ಮೋಡ್‌ನಲ್ಲಿ 50ರಿಂದ 60 ಕಿಮೀ ವೇಗದಲ್ಲಿ ಸಾಗಿದರೆ ಅದರ ಗೇರ್ ಇಂಡಿಕೇಟರ್ ಕಾರು 5 ರಲ್ಲಿ ಚಾಲನೆಯಲ್ಲಿದೆ ಎಂದು ತೋರಿಸುತ್ತದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಇದೇ ವೇಗದಲ್ಲಿ ಎಸ್ ಮೋಡ್‌ನಲ್ಲಿ ಚಾಲನೆ ಮಾಡಿದಾಗ ಗೇರ್ ಇಂಡಿಕೇಟರ್ ಗೇರ್ ಅನ್ನು 3,500 ರಿಂದ 4,000 ಆರ್‌ಪಿಎಂಗಳವರೆಗೆ 3ರಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಸಾಕಷ್ಟು ಉತ್ಸಾಹಭರಿತವಾಗಿರುವ ಎಂಜಿನ್ ಲೋ ಹಾಗೂ ಮಿಡ್ ರೇಂಜ್ ಅನ್ನು ಹೊಂದಿದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಈ ಎಂಜಿನ್ 6,500 ಆರ್‌ಪಿಎಂವರೆಗೆ ಯೋಗ್ಯವಾದ ರೇಂಜ್ ಅನ್ನು ಹೊಂದಿದೆ. ಕಾರನ್ನು ಮ್ಯಾನುವಲ್ ಮೋಡ್‌ಗೆ ಬದಲಿಸಿದಾಗ ಅದರ ಮೇಲೆ ಕಂಟ್ರೋಲ್ ಸಿಗುತ್ತದೆ. ಮ್ಯಾನುವಲ್ ಮೋಡ್‌ನಲ್ಲಿ ಗೇರ್‌ಗಳನ್ನು ಬದಲಿಸದಿದ್ದರೆ, ಕಾರು ಗೇರ್ ಅನ್ನು ಕೆಲ ಸೆಕೆಂಡುಗಳವರೆಗೆ ಹಿಡಿದಿಟ್ಟುಕೊಳ್ಳುತ್ತದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಇದರಿಂದ ಗೇರ್ ಬಾಕ್ಸ್ ಹಾಗೂ ಎಂಜಿನ್ ಒತ್ತಡದಲ್ಲಿರುವುದು ಕಂಡು ಬರುತ್ತದೆ. ಸ್ಟೀಯರಿಂಗ್ ವ್ಹೀಲ್ ರೆಸ್ಪಾನ್ಸ್ ಅತ್ಯುತ್ತಮವಾಗಿರುವ ಕಾರಣ ಕಾರು ತನ್ನ ದಿಕ್ಕುಗಳನ್ನು ಸುಲಭವಾಗಿ ಬದಲಿಸುತ್ತದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಹಳೆಯ ಐ 20 ಕಾರಿನಲ್ಲಿದ್ದ ಸ್ಟೀಯರಿಂಗ್ ವ್ಹೀಲ್ ಹಗುರವಾಗಿದ್ದ ಕಾರಣಕ್ಕೆ ಒಂದೇ ಬೆರಳಿನಲ್ಲಿ ತಿರುಗಿಸಬಹುದಿತ್ತು. ಆದರೆ ಹೊಸ ಐ 20 ಕಾರಿನಲ್ಲಿರುವ ಸ್ಟೀಯರಿಂಗ್ ವ್ಹೀಲ್ ತುಸು ಭಾರವಾಗಿದ್ದು, ವೇಗದ ಪ್ರಯಾಣಕ್ಕೆ ಸೂಕ್ತವಾಗಿದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಈ ಕಾರಿನಲ್ಲಿರುವ ಸಸ್ಪೆಂಷನ್ ಸೆಟಪ್ ಸ್ವಲ್ಪ ಗಟ್ಟಿಯಾಗಿದ್ದು ಬಾಡಿ ರೋಲ್ ಅನ್ನು ಕಡಿಮೆ ಮಾಡಿ, ಹ್ಯಾಂಡ್ಲಿಂಗ್ ಅನ್ನು ಹೆಚ್ಚಿಸುತ್ತದೆ. ಈ ಸಸ್ಪೆಂಷನ್ ಸೆಟಪ್ ಹಂಪ್ ಹಾಗೂ ರಸ್ತೆ ಗುಂಡಿಗಳಲ್ಲಿ ಅಲುಗಾಡಿದರೂ ಹೆಚ್ಚಿನ ತೊಂದರೆಯಾಗುವುದಿಲ್ಲ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಮುಂಭಾಗದ ಸೀಟುಗಳು ಉತ್ತಮ ಅಂಡರ್-ಥೈ ಸಪೋರ್ಟ್ ನೀಡಿದರೆ, ಸೈಡ್ ಬೋಲ್ ಸ್ಟರ್‌ಗಳು ಚಾಲಕನಿಗೆ ನೆರವಾಗುತ್ತವೆ. ಲಾಂಗ್ ಡ್ರೈವ್ ನಲ್ಲಿ ಪ್ರಯಾಣಿಕರು ಈ ಸೀಟುಗಳಿಂದ ಯಾವುದೇ ತೊಂದರೆಯನ್ನು ಅನುಭವಿಸುವುದಿಲ್ಲ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಇದೇ ಮಾತು ಹಿಂಬದಿಯ ಸೀಟುಗಳಿಗೂ ಅನ್ವಯಿಸುತ್ತದೆ. ಲೆಗ್-ರೂಮ್ ಅನ್ನು 88 ಎಂಎಂಗಳಿಗೆ ಹೆಚ್ಚಿಸಿರುವುದರಿಂದ ಆರು ಅಡಿ ಎತ್ತರವಿರುವ ಪ್ರಯಾಣಿಕರಿಗೂ

ಲಾಂಗ್ ಡ್ರೈವ್ ನಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಮೈಲೇಜ್ ಬಗ್ಗೆ ಹೇಳುವುದಾದರೆ ನಾವು ಈ ಕಾರನ್ನು ಒಂದು ದಿನ ಮಾತ್ರ ಚಾಲನೆ ಮಾಡಿದ ಕಾರಣ ಮೈಲೇಜ್ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಲು ಸಾಧ್ಯವಾಗದೇ ಹೋದರೂ, ಎಂಐಡಿ ಸ್ಕ್ರೀನ್ ನಲ್ಲಿ ಕಂಡು ಬಂದಂತೆ ಈ ಕಾರು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲಿಗೆ 9.5ರಿಂದ 11.7 ಕಿಮೀ ಮೈಲೇಜ್ ನೀಡಲಿದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಫ್ಯೂಯಲ್ ಟ್ಯಾಂಕ್ ಅನ್ನು ಪೂರ್ತಿಯಾಗಿ ತುಂಬಿಸಿ ಹೆದ್ದಾರಿಗಳಲ್ಲಿ ಸಾಗಿದಾಗ ಈ ಕಾರು ಸುಮಾರು 500 ಕಿ.ಮೀ ಮೈಲೇಜ್ ನೀಡಬಹುದು.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಈ ಕಾರಿನ ಬಗ್ಗೆ ನಮ್ಮ ಅಭಿಪ್ರಾಯವನ್ನು ಹೇಳುವುದಾದರೆ, ಹೊಸ ಹ್ಯುಂಡೈ ಐ 20 ಕಾರು ಹಳೆಯ ತಲೆಮಾರಿನ ಕಾರಿಗೆ ಹೋಲಿಸಿದರೆ ಸ್ಪೋರ್ಟಿಯಾಗಿ ಕಾಣುತ್ತದೆ. ಈ ಹ್ಯಾಚ್‌ಬ್ಯಾಕ್ ಕಾರು ಶಾರ್ಪ್ ಎಡ್ಜ್ ಹೊಂದಿದ್ದು, ಹೆಚ್ಚು ಏರೋ ಡೈನಾಮಿಕ್ ಆಗಿದೆ.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಎಕ್ಸ್ ಶೋರೂಂ ದರದಂತೆ ರೂ.11.18 ಲಕ್ಷ ಬೆಲೆಯನ್ನು ಹೊಂದಿರುವ ಈ ಹೊಸ ಐ 20 ಕಾರು ಕೆಲವು ನ್ಯೂನತೆಗಳನ್ನು ಸಹ ಹೊಂದಿದೆ. ಈ ಕಾರು ಇನ್ನೂ ಸ್ವಲ್ಪ ದೊಡ್ಡದಾದ ಸನ್‌ರೂಫ್ ಜೊತೆಗೆ ಮುಂಭಾಗ ಹಾಗೂ ಹಿಂಭಾಗದಲ್ಲಿ ಪೂರ್ಣ ಪ್ರಮಾಣದ ಎಲ್‌ಇಡಿ ಲೈಟಿಂಗ್ ಸೆಟಪ್, ಡ್ಯಾಶ್ ಹಾಗೂ ಡೋರ್ ಪ್ಯಾನೆಲ್‌ಗಳಲ್ಲಿ ಸಾಫ್ಟ್-ಟಚ್ ಮೆಟೀರಿಯಲ್‌ಗಳನ್ನು ಪಡೆಯಬಹುದಿತ್ತು.

ಹ್ಯುಂಡೈ ಐ 20 ಫಸ್ಟ್ ಡ್ರೈವ್ ರಿವ್ಯೂ : ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಹೊಸ ಸಂಚಲನ

ಇವುಗಳನ್ನು ಹೊರತುಪಡಿಸಿದರೆ ಹೊಸ ಐ 20 ಕಾರು ಪವರ್ ಡೆಲಿವರಿ, ಹ್ಯಾಂಡ್ಲಿಂಗ್ ಗಳಿಂದ ನಮ್ಮನ್ನು ಆಕರ್ಷಿಸಿತು. ನೀವು ಪ್ರೀಮಿಯಂ ಸ್ಪೋರ್ಟಿ ಹ್ಯಾಚ್‌ಬ್ಯಾಕ್ ಕಾರನ್ನು ಖರೀದಿಸ ಬಯಸುತ್ತಿದ್ದರೆ ಹೊಸ ಹ್ಯುಂಡೈ ಐ 20 ಕಾರನ್ನು ಖರೀದಿಸಬಹುದು.

Most Read Articles

Kannada
English summary
New Hyundai i20 first drive review details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X