ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ಫ್ರೆಂಚ್ ಆಟೋ ಉತ್ಪಾದನಾ ಸಂಸ್ಥೆಯಾದ ರೆನಾಲ್ಟ್ ತನ್ನ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆ ಕಾರಣವಾಗಿದ್ದು, ಇತ್ತೀಚೆಗೆ ಬಿಡುಗಡೆ ಮಾಡಲಾದ ಟ್ರೈಬರ್ ಎಂಟ್ರಿ ಲೆವಲ್ ಎಂಪಿವಿ ಆವೃತ್ತಿಯು ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಅಗಸ್ಟ್ 28ರಂದು ಬಿಡುಗಡೆಯಾಗಿರುವ ಟ್ರೈಬರ್ ಕಾರಿನ ಮೊದಲ ಚಾಲನಾ ವರದಿಯನ್ನು ಇಲ್ಲಿ ನೀಡಲಾಗಿದ್ದು, ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿರುವ ಟ್ರೈಬರ್ ವಿಶೇಷತೆಗಳ ಏನು ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ಸದ್ಯ ಮಾರುಕಟ್ಟೆಯಲ್ಲಿ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಕಾರು ಮಾದರಿಗಳಿಗೆ ವಿಶೇಷ ಬೇಡಿಕೆಯಿದ್ದು, ವ್ಯಯಕ್ತಿಕ ಮತ್ತು ವಾಣಿಜ್ಯ ಬಳಕೆಯಲ್ಲೂ ಎಂಪಿವಿ ಕಾರುಗಳಿಗೆ ಹೆಚ್ಚು ಬೇಡಿಕೆಯಿದೆ. ಆದರೆ ರೆನಾಲ್ಟ್ ಸಂಸ್ಥೆಯು ವಿಶೇಷವಾಗಿ ವ್ಯಯಕ್ತಿಕ ಕಾರು ಬಳಕೆದಾರರನ್ನೇ ಗುರಿಯಾಗಿಸಿಕೊಂಡು ಬಜೆಟ್ ಬೆಲೆಯಲ್ಲಿ ಟ್ರೈಬರ್ ಆವೃತ್ತಿಯನ್ನು ಅಭಿವೃದ್ದಿಗೊಳಿಸಲು ಪ್ರಯತ್ನಿಸಿದ್ದು, ಕಾರು ಬಿಡುಗಡೆಯಾದ ಮೊದಲ ತಿಂಗಳ ಅವಧಿಯಲ್ಲೇ ಹೆಚ್ಚಿನ ಮಟ್ಟದ ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ರೆನಾಲ್ಟ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಟ್ರೈಬರ್ ಬಿಡುಗಡೆಯ ನಂತರ ಮಾಧ್ಯಮ ಸಂಸ್ಥೆಗಳನ್ನು ಆಹ್ವಾನಿಸಿ ಫಸ್ಟ್ ಡ್ರೈವ್ ಚಾಲಾನಾ ಶಿಬಿರಕ್ಕೆ ಆಹ್ವಾನಿಸಿತ್ತು. ಈ ವೇಳೆ ಡ್ರೈವ್‌ಸ್ಪಾರ್ಕ್ ತಂಡಕ್ಕೂ ವಿಶೇಷ ಆಹ್ವಾನ ನೀಡಿದ್ದ ರೆನಾಲ್ಟ್ ಸಂಸ್ಥೆಯು ಗೋವಾ ಕಡಲ ತೀರ ಪ್ರದೇಶಗಳಲ್ಲಿ ಟ್ರೈಬರ್ ವಿಶೇಷ ಚಾಲನೆ ಕಾರ್ಯಗಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿತ್ತು.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿರುವ ಟ್ರೈಬರ್ ಮೂಲಕ ಗ್ರಾಹಕರ ಗರಿಷ್ಠ ಬೇಡಿಕೆಗಳನ್ನು ಪೂರೈಸಲು ಯತ್ನಿಸಿರುವ ರೆನಾಲ್ಟ್ ಸಂಸ್ಥೆಯು ಕೈಗೆಟುಕುವ ಬೆಲೆಯಲ್ಲಿ ಕುಟಂಬ ಸಮೇತರಾಗಿ ಪ್ರಯಾಣಿಸುವುದಕ್ಕೆ ಅತ್ಯುತ್ತಮ ಸೌಲಭ್ಯವುಳ್ಳ ಟ್ರೈಬರ್ ಕಾರು ಮಾದರಿಯನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ಡಿಸೈನ್ ಮತ್ತು ಸ್ಟೈಲ್

ರೆನಾಲ್ಟ್ ಇಂಡಿಯಾ ಸಂಸ್ಥೆಯು ಇದೇ ಮೊದಲ ಬಾರಿಗೆ ಎಂಟ್ರಿ ಲೆವಲ್ ಎಂಪಿವಿ ಆವೃತ್ತಿಯಲ್ಲಿ ಟ್ರೈಬರ್ ಕಾರನ್ನು ಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡಿದ್ದು, ಹೊಸ ಕಾರು ಸಬ್ 4 ಮೀಟರ್ ವಿನ್ಯಾಸದೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕ್ವಿಡ್ ಸಿಎಂಎಫ್-ಎ ಪ್ಲ್ಯಾಟ್‌ಫಾರ್ಮ್ ಆಧಾರದ ಮೇಲೆಯೇ ಟ್ರೈಬರ್ ಕೂಡಾ ಅಭಿವೃದ್ದಿ ಹೊಂದಿದ್ದು, ಕಾರು ಮಾಲೀಕರು ತಮ್ಮ ಬೇಡಿಕೆಯೆಂತೆ ಹೊಸ ಕಾರನ್ನು ಮಾಡಿಫೈಗೊಳಿಸಬಹುದಾದ ಸೌಲಭ್ಯ ಈ ಕಾರಿನಲ್ಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ರೆನಾಲ್ಟ್ ಸಂಸ್ಥೆಯು ಫೇಸ್‌ಲಿಫ್ಟ್ ಕಾರುಗಳ ಚಾರ್ಸಿ ತಂತ್ರಜ್ಞಾನವನ್ನು ಸಂಪೂರ್ಣ ಬದಲಾವಣೆಗೊಳಿಸಿದ್ದು, ಫೇಸ್‌ಲಿಫ್ಟ್ ಕ್ವಿಡ್ ಮಾದರಿಯಲ್ಲೇ ಇದೀಗ ಟ್ರೈಬರ್ ಎಂಪಿವಿ ಕಾರು ಕೂಡಾ ಹೊಸ ತಂತ್ರಜ್ಞಾನದಡಿಯಲ್ಲೇ ಅಭಿವೃದ್ಧಿಗೊಳಿಸಿದೆ. ಹೀಗಾಗಿ ಕ್ವಿಡ್ ವಿನ್ಯಾಸವನ್ನೇ ಹೊತ್ತಿರುವ ಟ್ರೈಬರ್ ಕಾರಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ 7 ಸೀಟರ್ ಸೌಲಭ್ಯವನ್ನು ಜೋಡಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ಮುಂಭಾಗದಲ್ಲಿರುವ ಡಿಸೈನ್ ಮಾದರಿಯು ಹೊಸ ಕಾರಿಗೆ ಹೆಚ್ಚಿನ ಮಟ್ಟದ ಪ್ರೀಮಿಯಂ ಲುಕ್ ನೀಡುವುದರ ಜೊತೆಗೆ ರಗಡ್ ಸ್ಟೈಲ್‌ ಹೊತ್ತು ಬಂದಿದೆ. ಈ ಮೂಲಕ ಎಂಟ್ರಿ ಲೆವಲ್ ಕಾರುಗಳಲ್ಲಿ ವಿಭಿನ್ನ ಎನ್ನಿಸುವ ಹೊಸ ಕಾರು ತಾಂತ್ರಿಕವಾಗಿ ಬಲಿಷ್ಠವಾಗಿದ್ದು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಸ್, ಪವರ್ ವಿಂಡೋ ಪಡೆದುಕೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ಸೈಡ್ ಪ್ರೋಫೈಲ್‌ನಲ್ಲೂ ಕಾರು ಖರೀದಿದಾರರನ್ನು ಆಕರ್ಷಿಸುವ ಟ್ರೈಬರ್ ಕಾರು ಬಾಕ್ಸಿ ಡಿಸೈನ್ ಮೂಲಕ ವೀಲ್ಹ್ ಆರ್ಚ್, ಬ್ಲ್ಯಾಕ್ ಪ್ಲಾಸ್ಟಿಕ್ ಕ್ಲ್ಯಾಡಿಂಗ್, 15-ಇಂಚಿನ ಅಲಾಯ್ ವೀಲ್ಹ್, ವೀಲ್ಹ್ ಆರ್ಚ್‌ಗೆ ಹೊಂದಿಕೊಂಡಂತೆ ವೀಂಡೋ ಗಾತ್ರವು ಕೂಡಾ ಆಕರ್ಷಿಸುತ್ತದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ಹಾಗೆಯೇ ಕಾರಿನ ಹಿಂಭಾಗ ಡಿಸೈನ್ ಕೂಡಾ ಸಂಪೂರ್ಣ ಹೊಸ ವಿನ್ಯಾಸವನ್ನು ಪಡೆದಿದ್ದು, ಸ್ಲಿಕ್ ವ್ಯಾರ್ಪ್ ಟೈಲ್‌ಗೇಟ್, ರೂಫ್ ಮೌಟೆಂಡ್ ಸ್ಪಾಯ್ಲರ್, ಇಂಟ್ರಾಗ್ರೆಟೆಡ್ ಬ್ರೇಕ್ ಲೈಟ್, ಸ್ಪೋರ್ಟಿ ಬಂಪರ್ ಮತ್ತು ,ಸಿಲ್ವರ್ ಸ್ಕಫ್ ಪ್ಲೇಟ್ ಒದಗಿಸಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ಕಾರಿನ ಒಳಾಂಗಣ ವಿನ್ಯಾಸ

ಟ್ರೈಬರ್ ಕಾರು ಹಲವು ಪ್ರೀಮಿಯಂ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಡ್ಯುಯಲ್ ಟೋನ್ ಬಣ್ಣದ ಬ್ಲ್ಯಾಕ್-ಬಿಜ್ ಫಿನಿಶಿಂಗ್ ಇಂಟಿಯರ್ ಪಡೆದುಕೊಂಡಿದೆ. ಡ್ಯಾಶ್‌ಬೋರ್ಡ್ ತಾಂತ್ರಿಕ ಸೌಲಭ್ಯಗಳು ಅತ್ಯುತ್ತಮ ಆಯ್ಕೆ ಹೊಂದಿದ್ದು, ಟಿಕ್ ಸಿಲ್ವರ್ ಪ್ಯಾನೆಲ್ ಸೌಲಭ್ಯವನ್ನು ಪಡೆದುಕೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಕೀ ಲೆಸ್ ಎಂಟ್ರಿ, ಮೂರು ಸಾಲುಗಳಲ್ಲೂ ಎಸಿ ವೆಂಟ್ಸ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಮೊಬೈಲ್ ಫೋನ್ ಚಾರ್ಜ್ ಸಾಕೆಟ್‌ ಮತ್ತು ರಿಯರ್ ವಾಷ್ ವೈಪರ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ಹಾಗೆಯೇ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 3.5-ಇಂಚಿನ ಮಲ್ಟಿ ಇನ್ಪಾಮೆಷನ್ ಡಿಸ್‌‌ಪ್ಲೇ, ಗ್ಲೋ ಬಾಕ್ಸ್, ಲೈಟ್ ಕಲರ್ ಸೀಟುಗಳ ಜೊತೆಗೆ ಎಲ್ಲಾ ಆವೃತ್ತಿಗಳಲ್ಲೂ ಸ್ಟ್ಯಾಂಡರ್ಡ್ ಆಗಿ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಸೌಲಭ್ಯ ನೀಡಿರುವುದು ಕಾರು ಖರೀದಿಯ ಮೌಲ್ಯವನ್ನು ಹೆಚ್ಚಿಸಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ಆಸನ ಸೌಲಭ್ಯ

7-ಸೀಟರ್ ಸೀಟರ್ ಮಾದರಿಯಾಗಿರುವ ಟ್ರೈಬರ್ ಕಾರು ದೂರದ ಪ್ರಯಾಣಕ್ಕೆ ಅಷ್ಟಾಗಿ ಅನುಕೂಲಕರವಾಗಿಲ್ಲವಾದರೂ 5 ಜನ ಯಾವುದೇ ತೊಂದರೆ ಇಲ್ಲದೇ ಪ್ರಯಾಣಿಸಬಹುದು ಬಜೆಟ್ ಎಂಪಿವಿ ಕಾರು ಮಾದರಿಯಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ನಿಮ್ಮ ಅವಶ್ಯಕತೆಗೆ ಅನುಗುಣವಾಗಿ 3ನೇ ಸಾಲಿನ ಆಸನಗಳನ್ನು ಮಡಿಕೆ ಮಾಡಿ ಲಗೇಜ್‌ಗಾಗಿ ಹೆಚ್ಚುವರಿ ಬೂಟ್ ಸ್ಪೆಸ್ ಅನುಕೂಲ ಮಾಡಿಕೊಳ್ಳಬಹುದ್ದು, ಮೂರನೇ ಸಾಲನ್ನು ಮಡಿಕೆ ಮಾಡಿದ್ದಲ್ಲಿ 625-ಲೀಟರ್‌ನಷ್ಟು ಸ್ಥಳಾವಕಾಶ ಸಿಕ್ಕಲ್ಲಿ ಮೂರನೇ ಸಾಲು ಬಳಕೆ ಮಾಡಿದ್ದಲ್ಲಿ 84-ಲೀಟರ್‌ನಷ್ಟು ಸ್ಥಳಾವಕಾಶ ಸಿಗಲಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ಕಾರಿನ ಉದ್ದಳತೆ ಮತ್ತು ತೂಕ

ಕಾರಿನ ಮೇಲಿನ ತೆರಿಗೆ ಹೊರೆ ತಗ್ಗಿಸುವ ಸಂಬಂಧ 4 ಮೀಟರ್‌ಗಿಂತಲೂ ಹೆಚ್ಚು ವಿಸ್ತರಣೆ ಮಾಡದಿರಲು ನಿರ್ಧರಿಸಿರುವ ರೆನಾಲ್ಟ್ ಸಂಸ್ಥೆಯು 3,990-ಎಂಎಂ ಉದ್ದ, 1,739-ಎಂಎಂ ಅಗಲ, 1,637-ಎಂಎಂ ಎತ್ತರ, 2,636-ಎಂಎಂ ವೀಲ್ಹ್‌ಬೆಸ್ ಮತ್ತು 182-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಒದಗಿಸಿದ್ದು, ಸಿಎಂಎಫ್-ಎ ಪ್ಲಾಟ್‌ಫಾರ್ಮ್ ಬಳಕೆಯಿಂದಾಗಿ ಹೊಸ ಟ್ರೈಬರ್ ಕಾರು 947 ಕೆಜಿ ತೂಕ ಪಡೆದುಕೊಂಡಿದೆ.

ಉದ್ದಳತೆ (ಎಂಎಂ) 3990
ಅಗಲ (ಎಂಎಂ) 1739
ಎತ್ತರ (ಎಂಎಂ) 1643
ವೀಲ್ಹ್‌ಬೆಸ್ (ಎಂಎಂ) 2636
ಗ್ರೌಂಡ್ ಕ್ಲಿಯೆರೆನ್ಸ್ (ಎಂಎಂ) 182
ಬೂಟ್ ಸ್ಪೆಸ್ (ಲೀಟರ್‌ಗಳಲ್ಲಿ) 84*

*3ನೇ ಸಾಲಿನ ಸೀಟ್ ಬೇಡವಾದಲ್ಲಿ ಸುಮಾರು 625 ಲೀಟರ್‌ನಷ್ಟು ಸ್ಥಳಾವಕಾಶ ಮಾಡಿಕೊಳ್ಳಬಹುದು.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ಕಾರಿನ ವೆರಿಯೆಂಟ್‌ಗಳು

ಟ್ರೈಬರ್ ಕಾರು ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಎಸ್ ಮತ್ತು ಎರ್‌ಎಕ್ಸ್‌ಜೆಡ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಬೆಲೆಗಳಿಗೆ ಅನುಗುಣವಾಗಿ ತಾಂತ್ರಿಕ ಸೌಲಭ್ಯಗಳನ್ನು ಜೋಡಿಸಲಾಗಿದೆ. ಮೇಲೆ ನೀಡಲಾಗಿರುವ ಫೀಚರ್ಸ್‌ಗಳು ಬಹುತೇಕ ಹೈ ಎಂಡ್ ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದು, ಎಂಟ್ರಿ ಲೆವಲ್ ಮಾದರಿಯಲ್ಲೂ ಹಲವಾರು ಆಕರ್ಷಕ ಸೌಲಭ್ಯಗಳನ್ನು ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ಸುರಕ್ಷಾ ಸೌಲಭ್ಯಗಳು

ಹೊಸ ಸುರಕ್ಷಾ ನಿಯಮಗಳಿಗೆ ಅನುಗುಣವಾಗಿ ಟ್ರೈಬರ್ ಕಾರಿನಲ್ಲಿ ನಾಲ್ಕು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ಲೋಡ್ ಲಿಮಿಟರ್ ಅಲರ್ಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ವಾರ್ನಿಂಗ್, ಪಾದಾಚಾರಿ ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದೆ.

ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ಎಂಜಿನ್ ಸಾಮಾರ್ಥ್ಯ

ಸದ್ಯಕ್ಕೆ 1.0-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಟ್ರೈಬರ್ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸಹಾಯದೊಂದಿಗೆ 70-ಬಿಎಚ್‌ಪಿ ಮತ್ತು 92-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಮುಂಬರುವ ದಿನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಟರ್ಬೋ ಪೆಟ್ರೋಲ್ ಎಂಜಿನ್ ಜೊತೆಗೆ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಲಿದೆ.

ಎಂಜಿನ್ 1.0-ಲೀಟರ್ ಪೆಟ್ರೋಲ್
ಪವರ್ (ಬಿಎಚ್‌ಪಿ) 70
ಟಾರ್ಕ್ (ಎನ್ಎಂ) 92
ಟ್ರಾನ್ಸ್‌ಮಿಷನ್ 5 ಸ್ಪೀಡ್ ಮ್ಯಾನುವಲ್
ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ಬೆಲೆ ಮತ್ತು ಪ್ರತಿಸ್ಪರ್ಧಿಗಳು

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.95 ಲಕ್ಷಕ್ಕೆ ಮತ್ತು ಹೈ ಎಂಡ್ ಮಾದರಿಯು 6.49 ಲಕ್ಷ ಬೆಲೆ ಹೊಂದಿದ್ದು, ಡಟ್ಸನ್ ಗೋ ಪ್ಲಸ್ ಮತ್ತು ಮಾರುತಿ ಸುಜುಕಿ ಎರ್ಟಿಗಾ ಎಂಟ್ರಿ ಲೆವಲ್ ಮಾದರಿಗೆ ಇದು ಪೈಪೋಟಿ ನೀಡುತ್ತಿದೆ.

ಪ್ರತಿಸ್ಪರ್ಧಿ ಕಾರು ಮಾದರಿಗಳು ಮತ್ತು ಎಂಜಿನ್ ರೆನಾಲ್ಟ್ ಟ್ರೈಬರ್ ದಟ್ಸನ್ ಗೋ ಪ್ಲಸ್ ಮಾರುತಿ ಸುಜುಕಿ ಎರ್ಟಿಗಾ
ಎಂಜಿನ್ 1.0-ಲೀಟರ್ ಪೆಟ್ರೋಲ್ 1.2-ಲೀಟರ್ ಪೆಟ್ರೋಲ್ 1.5-ಲೀಟರ್ ಪೆಟ್ರೋಲ್(ಬಿಎಸ್-6)
ಪವರ್ (ಬಿಎಚ್‌ಪಿ) 70 67 104
ಟಾರ್ಕ್ (ಎನ್ಎಂ) 92 104 138
ಟ್ರಾನ್ಸ್‌ಮಿಷನ್ 5-ಸ್ಪೀಡ್ ಎಂಟಿ 5-ಸ್ಪೀಡ್ ಎಂಟಿ 5-ಸ್ಪೀಡ್ ಎಂಟಿ/ 4ಸ್ಪೀಡ್ ಎಟಿ
ಆರಂಭಿಕ ಬೆಲೆಗಳು ಎಕ್ಸ್‌ಶೋರೂಂ ಪ್ರಕಾರ ರೂ. 4.95 ಲಕ್ಷ ರೂ. 3.86 ಲಕ್ಷ ರೂ. 7.55 ಲಕ್ಷ
ಫಸ್ಟ್ ಡ್ರೈವ್ ರಿವ್ಯೂ: ಬಜೆಟ್ ಬೆಲೆಯಲ್ಲಿ ಸದ್ದು ಮಾಡಿದ ರೆನಾಲ್ಟ್ ಟ್ರೈಬರ್..!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ವೈಯಕ್ತಿಕ ಬಳಕೆಯ ಎಂಪಿವಿ ಕಾರು ಮಾದರಿಯಾಗಿ ಮಾರುಕಟ್ಟೆ ಪ್ರವೇಶಿಸಿರುವ ರೆನಾಲ್ಟ್ ಟ್ರೈಬರ್ ಕಾರು ಸದ್ಯ ಮಾರುಕಟ್ಟೆ ಉತ್ತಮ ಬೇಡಿಕೆಯೊಂದಿಗೆ ಮೊದಲ ತಿಂಗಳಿನಲ್ಲಿಯೇ ಉತ್ತಮ ಮಾರಾಟ ಪ್ರಮಾಣವನ್ನು ದಾಖಲಿಸಿದ್ದು, ಇದು ಎಂಪಿವಿ ಆವೃತ್ತಿಯಲ್ಲಿ ಮತ್ತಷ್ಟು ಬದಲಾವಣೆಗೆ ಕಾರಣವಾಗಿದೆ. ಇದರಿಂದ ರೆನಾಲ್ಟ್ ಸಂಸ್ಥೆಯು ಗ್ರಾಹಕರ ಬೇಡಿಕೆಯೆಂತೆ ಹಲವು ಬದಲಾವಣೆ ಮುನ್ನುಗ್ಗುತ್ತಿದ್ದು, ಕಾರು ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸಿದ್ದ ರೆನಾಲ್ಟ್‌ಗೆ ಟ್ರೈಬರ್ ಉತ್ತಮ ಮುನ್ನಡೆ ಕಾಯ್ದುಕೊಳ್ಳಲು ಸಹಕಾರಿಯಾಗುವುದರಲ್ಲಿ ಎರಡು ಮಾತಿಲ್ಲ.

Most Read Articles

Kannada
English summary
Renault Triber First Drive Review — The Budget Friendly MPV.
Story first published: Wednesday, September 18, 2019, 21:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X