ಕ್ವಿಡ್, ಆಲ್ಟೊ ಸವಾಲನ್ನು ಎದುರಿಸಲು ನೂತನ ಟಾಟಾ ಝಿಕಾ ರೆಡಿ

Written By:

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ತನ್ನ ಬಹು ನಿರೀಕ್ಷಿತ ಝಿಕಾ ಹ್ಯಾಚ್ ಬ್ಯಾಕ್ ಕಾರನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಇದರಂತೆ ಪ್ರಯಾಣಿಕ ಮಾರುಕಟ್ಟೆಗೆ ಭರ್ಜರಿ ರಿ ಎಂಟ್ರಿ ಕೊಡುವ ಇರಾದೆಯಲ್ಲಿದೆ.

Also Read: ರೆನೊ ಕ್ವಿಡ್ ಚಾಲನಾ ವಿಮರ್ಶೆ; ಪುಟ್ಟ ಕಾರಿನ ಹಿರಿಮೆ!

ಅತ್ತ ಟಾಟಾ ಝಿಕಾ ಪ್ರವೇಶವಾಗುವುದರೊಂದಿಗೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಆಲ್ಟೊ ಹಾಗೂ ಹೊಚ್ಚ ಹೊಸ ಕ್ವಿಡ್ ಕಾರುಗಳಲ್ಲಿ ನಡುಕ ಸೃಷ್ಟಿಯಾಗಿದೆ. ಬಿಡುಗಡೆಗೂ ಮೊದಲು ಕೈಟ್ ಎಂಬ ಕೋಡ್ ಹೆಸರಿನಿಂದ ಗುರುತಿಸ್ಪಟ್ಟಿದ್ದ ಟಾಟಾ ಝಿಕಾ ಕಾರನ್ನು ಸಂಸ್ಥೆಯ ನೂತನ ಬ್ರಾಂಡ್ ಅಂಬಾಸಿಡರ್ ಲಿಯೊನೆಲ್ ಮಸ್ಸಿ ಪ್ರಚಾರ ಮಾಡಲಿದ್ದಾರೆ. ಪ್ರಸ್ತುತ ಲೇಖನದಲ್ಲಿ ಎಂಟ್ರಿ ಲೆವೆಲ್ ಕಾರು ಮಾರುಕಟ್ಟೆಯಲ್ಲಿ ಆಲ್ಟೊ ಹಾಗೂ ಕ್ವಿಡ್ ಸವಾಲನ್ನು ಎದುರಿಸಲು ಝಿಕಾ ಶಕ್ತವಾಗಿದೆಯೇ ಎಂಬುದನ್ನು ಚರ್ಚಿಸಲಾಗುವುದು.

ವಿನ್ಯಾಸ - ಟಾಟಾ ಝಿಕಾ

ವಿನ್ಯಾಸ - ಟಾಟಾ ಝಿಕಾ

ಟಾಟಾ ಮೇಲಿರುವ ವಿನ್ಯಾಸ ಗುಣಮಟ್ಟದ ಕೊರತೆಯನ್ನು ಹೊಸ ಝಿಕಾ ನೀಗಿಸಲಿದೆ ಎಂದು ಭಾವಿಸಲಾಗಿದೆ. ಇದು ನೂತನ ಹೊರಿಝೋನೆಕ್ಸ್ಟ್ ಸಿದ್ಧಾಂತದಡಿಯಲ್ಲಿ ನಿರ್ಮಾಣವಾಗಿದ್ದು, ಒಟ್ಟಾರೆ ವಿನ್ಯಾಸವು ಹೆಚ್ಚು ಆಕರ್ಷಕವೆನಿಸಿದೆ. ದಿಟ್ಟವಾದ ಫ್ರಂಟ್ ಗ್ರಿಲ್, ಆಕರ್ಷಕ್ ಹೆಡ್ ಲೈಟ್ ವಿನ್ಯಾಸ, ಬದಿಯಲ್ಲಿ ಸ್ವಭಾವ ರೇಖೆ, ಕಪ್ಪುವ ವರ್ಣದ ಬಿ ಪಿಲ್ಲರ್, ರಿಯರ್ ಸ್ಪಾಯ್ಲರ್ ಹಾಗ ರಿಯರ್ ಬಂಪರ್ ಎಲ್ಲವೂ ಆಕರ್ಷಕವಾಗಿದೆ.

ವಿನ್ಯಾಸ- ರೆನೊ ಕ್ವಿಡ್

ವಿನ್ಯಾಸ- ರೆನೊ ಕ್ವಿಡ್

ಎಸ್‌ಯುವಿ ಶೈಲಿಯ ವಿನ್ಯಾಸವು ರೆನೊ ಕ್ವಿಡ್ ಕಾರಿನ ಪ್ರಮುಖ ಪ್ಲಸ್ ಪಾಯಿಂಟ್ ಆಗಿದೆ. ಅದು ಅತ್ಯುತ್ತಮ ರಸ್ತೆ ಸಾನಿಧ್ಯವನ್ನು ಕಾಪಾಡಿಕೊಂಡಿದೆ. ಮಾರುಕಟ್ಟೆಯಲ್ಲಿ ದೊರಕುತ್ತಿರುವ ಅಭೂತಪೂರ್ವ ಬುಕ್ಕಿಂಗ್ ಇದಕ್ಕಿರುವ ಕಾರಣವಾಗಿದೆ.

ವಿನ್ಯಾಸ - ಆಲ್ಟೊ 800

ವಿನ್ಯಾಸ - ಆಲ್ಟೊ 800

ಎಂದಿಗೂ ಮೆಚ್ಚುವಂತಹ ವಿನ್ಯಾಸ ತಂತ್ರಗಾರಿಕೆಯನ್ನು ಆಲ್ಟೊ 800 ಕಾರಿನಲ್ಲಿ ಆಳವಡಿಸಲಾಗಿದೆ. ಇದರ ಸಂಪೂರ್ಣ ಶ್ರೇಯಸ್ಸು ಮಾರುತಿಗೆ ಸಲ್ಲುತ್ತದೆ. ವಿನ್ಯಾಸಗಿಂತಲೂ ಮಿಗಿಲಾಗಿ ಕೈಗೆಟುಕುವ ಜನಸಾಮ್ಯಾನರ ಕಾರು ಎಂಬುದೇ ಮಾರುತಿ ಯಶಸ್ಸಿಗೆ ಕಾರಣವಾಗಿದೆ.

ವೈಶಿಷ್ಟ್ಯಗಳು - ಟಾಟಾ ಝಿಕಾ

ವೈಶಿಷ್ಟ್ಯಗಳು - ಟಾಟಾ ಝಿಕಾ

ಟಾಟಾ ಝಿಕಾ ಕಾರಿನೊಳಗೆ ಅತ್ಯುತ್ತಮ ಕ್ಯಾಬಿನ್ ಜಾಗ ಒದಗಿಸಿಕೊಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಇದು ಬೋಲ್ಟ್ ಗೆ ಸಮಾನವಾದ ರೀತಿಯಲ್ಲಿ ಒಳಮೈಯನ್ನು ಪಡೆಯಲಿದೆ. ಬಾಟಲಿ ಹೋಲ್ಡರ್, ಕಪ್ ಹೋಲ್ಡರ್, ಪವರ್ ವಿಂಡೋ, ನೇವಿಗೇಷನ್ ಮುಂತಾದ ಅಗತ್ಯ ಸೌಲಭ್ಯಗಳಿರಲಿದೆ.

ವೈಶಿಷ್ಟ್ಯಗಳು - ರೆನೊ ಕ್ವಿಡ್

ವೈಶಿಷ್ಟ್ಯಗಳು - ರೆನೊ ಕ್ವಿಡ್

ರೆನೊ ಕ್ವಿಡ್ ಕಾರಿನೊಳಗೆ ಪ್ರಮುಖವಾಗಿಯೂ ಎರಡು ಡಿನ್ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಬ್ಲೂಟೂತ್ ಕನೆಕ್ಟಿವಿಟಿ, ನೇವಿಗೇಷನ್ ಮುಂತಾದ ಸೌಲಭ್ಯಗಳು ದೊರಕಲಿದೆ. ರೆನೊ ಕ್ವಿಡ್ ಟಾಪ್ ಎಂಡ್ ವೆರಿಯಂಟ್ ನಲ್ಲಿ ಮಾತ್ರ ಈ ಸೌಲಭ್ಯಗಳು ಸಿಗಲಿದೆ.

ವೈಶಿಷ್ಟ್ಯಗಳು - ಮಾರುತಿ ಆಲ್ಟೊ

ವೈಶಿಷ್ಟ್ಯಗಳು - ಮಾರುತಿ ಆಲ್ಟೊ

ಇನ್ನೊಂದೆಡೆ ಮಾರುತಿ ಕಾರಿನಲ್ಲೂ ಆಡಿಯೋ ಸಿಸ್ಟಂ, ಯುಎಸ್‌ಬಿ, ಆಕ್ಸ್ ಇನ್, ಫ್ಯಾಬ್ರಿಕ್ ಸೀಟು, ಪವರ್ ಸ್ಟೀರಿಂಗ್, ಎಸಿ ಇತ್ಯಾದಿ ಸೌಲಭ್ಯಗಳು ದೊರಕಲಿದೆ.

ಟಾಟಾ ಝಿಕಾ - ಎಂಜಿನ್ ತಾಂತ್ರಿಕತೆ

ಟಾಟಾ ಝಿಕಾ - ಎಂಜಿನ್ ತಾಂತ್ರಿಕತೆ

ಇಂಧನ ವಿಧ

 • ಪೆಟ್ರೋಲ್ - 1199 ಸಿಸಿ
 • ಪವರ್ - 84 ಅಶ್ವಶಕ್ತಿ
 • ಡೀಸೆಲ್ - 1047 ಸಿಸಿ
 • ಪವರ್ - 69 ಅಶ್ವಶಕ್ತಿ

ಗೇರ್ ಬಾಕ್ಸ್ - 5 ಸ್ಪೀಡ್ ಮ್ಯಾನುವಲ್

ರೆನೊ ಕ್ವಿಡ್

ರೆನೊ ಕ್ವಿಡ್

ಇಂಧನ ವಿಧ

 • ಪೆಟ್ರೋಲ್ - 799 ಸಿಸಿ
 • ಪವರ್ - 53 ಅಶ್ವಶಕ್ತಿ

ಗೇರ್ ಬಾಕ್ಸ್ - 5 ಸ್ಪೀಡ್ ಮ್ಯಾನುವಲ್

ಮಾರುತಿ ಆಲ್ಟೊ

ಮಾರುತಿ ಆಲ್ಟೊ

ಇಂಧನ ವಿಧ

 • ಪೆಟ್ರೋಲ್ - 796 ಸಿಸಿ
 • ಪವರ್ - 47 ಅಶ್ವಶಕ್ತಿ

ಗೇರ್ ಬಾಕ್ಸ್ - 5 ಸ್ಪೀಡ್ ಮ್ಯಾನುವಲ್

ಬೆಲೆ ಮಾಹಿತಿ

ಬೆಲೆ ಮಾಹಿತಿ

 • ಮಾರುತಿ ಆಲ್ಟೊ: 2.66 ಲಕ್ಷ ರು.
 • ರೆನೊ ಕ್ವಿಡ್: 2.81 ಲಕ್ಷ ರು.
 • ಟಾಟಾ ಝಿಕಾ: 3.75 ಲಕ್ಷ ರು. (ಅಂದಾಜು ಬೆಲೆ)
ಮೈಲೇಜ್

ಮೈಲೇಜ್

ಭಾರತೀಯ ವಾಹನ ಖರೀದಿಗಾರರ ಮನೋಭಾವ ನೋಡಿದಾಗ ಮೈಲೇಜ್ ಅತಿ ಪ್ರಾಮುಖ್ಯ ವಹಿಸುತ್ತದೆ. ಇಲ್ಲಿ ಎಂಟ್ರಿ ಲೆವೆಲ್ ಕಾರುಗಳಲ್ಲಿ ರೆನೊ ಕ್ವಿಡ್ ಅತಿ ಹೆಚ್ಚು ಅಂದರೆ ಪ್ರತಿ ಲೀಟರ್ ಗೆ 25 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಇನ್ನೊಂದೆಡೆ ಆಲ್ಟೊ ಪ್ರತಿ ಲೀಟರ್ ಗೆ 21 ಕೀ.ಮೀ. ಮೈಲೇಜ್ ನೀಡಲಿದೆ. ಟಾಟಾ ಝಿಕಾ ಮೈಲೇಜ್ ಅಂಕಿಅಂಶಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಸುರಕ್ಷತೆ

ಸುರಕ್ಷತೆ

ಆಧುನಿಕ ಕಾರುಗಳಲ್ಲಿ ಭದ್ರತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ. ಇಲ್ಲಿ ಆಲ್ಟೊ ಹಾಗೂ ರೆನೊ ಟಾಪ್ ಎಂಡ್ ವೆರಿಯಂಟ್ ಗಳಲ್ಲಿ ಐಚ್ಛಿಕ ಏರ್ ಬ್ಯಾಗ್ ಸೌಲಭ್ಯವನ್ನು ನೀಡಲಾಗುತ್ತಿದೆ. ನೂತನ ಟಾಟಾ ಝಿಕಾ ಟಾಟಾ ಝಿಕಾ ಟಾಪ್ ಎಂಡ್ ಕಾರಿನಲ್ಲೂ ಏರ್ ಬ್ಯಾಗ್ ಸೌಲಭ್ಯ ಸ್ಟ್ಯಾಂಡರ್ಡ್ ಆಗಿ ಲಭ್ಯವಾಗುವ ನಿರೀಕ್ಷೆಯಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಇಲ್ಲೊಂದು ಅಂತಿಮ ತೀರ್ಪಿಗೆ ಬರುವ ಮುನ್ನ ಟಾಟಾ ಝಿಕಾ ಬಜೆಟ್ ನಲ್ಲಿ ಬಿಡುಗಡೆಯಾಗಲಿದೆ ಎಂಬುದು ನಿರ್ಣಾಯಕವೆನಿಸಲಿದೆ. ಇಲ್ಲಿ ತಾಜಾತನ ವಿನ್ಯಾಸ ಹೊಂದಿರುವ ನೂತನ ಕ್ವಿಡ್ ಜನಪ್ರಿಯ ಆಲ್ಟೊ ಕಾರನ್ನು ಎಲ್ಲ ಹಂತದಲ್ಲೂ ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ. ಹಾಗಾಗಿ ಟಾಟಾ ಝಿಕಾ ಕಾರಿಗೆ ಕ್ವಿಡ್ ಪ್ರಮುಖ ಎದುರಾಳಿಯಾಗಲಿದೆ. ಕ್ವಿಡ್ ಎಂಟ್ರಿ ಲೆವೆಲ್ ವಿಭಾಗದಲ್ಲಿ ಅತ್ಯುತ್ತಮ ಆಯ್ಕೆಯಾಗಲಿದೆ. ಇನ್ನೊಂದೆಡೆ ಟಾಟಾ ಝಿಕಾ ಎಂಟ್ರಿ ಲೆವೆಲ್ ಕಾರಿಗಿಂತಲೂ ಸ್ವಲ್ಪ ಮೇಲ್ದರ್ಜೆಯಲ್ಲಿ ಗುರುತಿಸಲಿರುವುದರಿಂದ ಭಾರತೀಯ ಗ್ರಾಹಕರಿಗೆ ಪರಿಪೂರ್ಣ ಆಯ್ಕೆಯೊದಗಿಸಲಿದೆ.

ಇವನ್ನೂ ಓದಿ

ಕ್ವಿಡ್ ಬಿರುಗಾಳಿಗೆ ಸಿಲುಕಿತೇ ಇಯಾನ್ ?

English summary
Tata's Upcoming Car; Does It Stand A Chance With The Alto & Kwid?

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark