2013ರಲ್ಲಿ ಲಾಂಚ್ ಆದ ಟಾಪ್ ಕಾರುಗಳಿವು..!

By Nagaraja

ಎಲ್ಲರೂ ಹೊಸ ವರ್ಷವನ್ನು ಬರಮಾಡಿಕೊಳ್ಳುವ ತವಕದಲ್ಲಿದ್ದಾರೆ. ಹಾಗಿರುವಾಗ 2013 ಸಾಲಿನಲ್ಲಿ ವಾಹನೋದ್ಯಮದಲ್ಲಿ ನಡೆದ ಘಟನೆಗಳ ಬಗ್ಗೆ ಮೆಲುಕು ಹಾಕುವುದು ಅತಿ ಅಗತ್ಯವಾಗಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಸಂದರ್ಶಿಸಿರಿ

ಗ್ರಾಹಕರ ನಿರೀಕ್ಷೆಯಂತೆಯೇ 2013 ಆಟೋ ಜಗತ್ತಿನ ಪಾಲಿಗೆ ಅತ್ಯಂತ ನಿರ್ಣಾಯಕವೆನಿಸಿತ್ತು. ಮಾರಾಟದ ದೃಷ್ಟಿಕೋನದಲ್ಲಿ ಪ್ರಯಾಣಿಕ ವಿಭಾಗ ಕುಂಠಿತ ಕಂಡಿದ್ದರೂ ನಿರೀಕ್ಷೆಯಂತೆಯೇ ಹಲವಾರು ಹೊಸ ಮಾದರಿಗಳ ಪರಿಚಯವಾಗಿತ್ತು. ಈ ಪೈಕಿ ಕೆಲವು ಮಾದರಿಗಳು ಯಶ ಕಂಡಿದ್ದರೂ ಇನ್ನು ಕೆಲವು ಮಾಡೆಲ್‌ಗಳು ಮೂಲೆ ಗುಂಪಾಗಿದ್ದವು.

ಹೀಗೆ ಪಟ್ಟಿ ಮಾಡುತ್ತಾ ಸಾಗುವಾಗ 2013ರಲ್ಲಿ ಲಾಂಚ್ ಆಗಿರುವ ಪ್ರಮುಖ ಕಾರುಗಳ ಬಗ್ಗೆ ಮಾಹಿತಿಯನ್ನು ಇಂದಿನ ಈ ಲೇಖನದಲ್ಲಿ ಕಲೆ ಹಾಕಲಿದ್ದೇವೆ. ಪ್ರತಿ ವರ್ಷದಂತೆ ಈ ಬಾರಿಯೂ ಹೊಸ ಮಾದರಿಗಳು ಗ್ರಾಹಕರಲ್ಲಿ ಹೆಚ್ಚು ಕುತೂಹಲ ಮೂಡಿಸಿತ್ತು. ಹೋಂಡಾ ಅಮೇಜ್, ಇಕೊಸ್ಪೋರ್ಟ್, ಗ್ರಾಂಡ್ ಐ10ಗಳಂತಹ ಮಾದರಿಗಳು ಮಾರುಕಟ್ಟೆಯನ್ನು ಕೊಳ್ಳೆ ಹೊಡೆದರೆ ಇನ್ನಿತರ ಮಾದರಿಗಳು ವೈಫಲ್ಯವನ್ನು ಅನುಭವಿಸಿದ್ದವು. 2013ನೇ ಸಾಲಿನ ಬಿಗ್ ಲಾಂಚ್‌ಗಳ ಪಟ್ಟಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಷೆವರ್ಲೆ ಸೈಲ್ ಸೆಡಾನ್

ಷೆವರ್ಲೆ ಸೈಲ್ ಸೆಡಾನ್

ಪ್ರಮುಖವಾಗಿಯೂ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಸ್ವಿಫ್ಟ್ ಡಿಜೈರ್ ಪ್ರತಿಸ್ಪರ್ಧಿಯಾಗಿ ಷೆವರ್ಲೆ ಸೈಲ್ ಸೆಡಾನ್ ಆಗಮನವಾಗಿತ್ತು. ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದ ಸೈಲ್ ಸೆಡಾನ್ ನಿಧಾನವಾಗಿ ತನ್ನ ಆವೇಗವನ್ನು ಕಳೆದುಕೊಂಡಿತ್ತು.

ಹೋಂಡಾ ಅಮೇಜ್

ಹೋಂಡಾ ಅಮೇಜ್

ಹೋಂಡಾದಿಂದ ಆಗಮನವಾಗಿದ್ದ ಮೊದಲ ಡೀಸೆಲ್ ಕಾರೆಂಬ ಹೆಗ್ಗೆಳಿಕೆಗೆ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರು ಪಾತ್ರವಾಗಿತ್ತು. ದೇಶದ ಅತ್ಯಂತ ಹೆಚ್ಚು ಇಂಧನ ಕ್ಷಮತೆಯುಳ್ಳ ಕಾರೆಂಬ ಖ್ಯಾತಿಗೆ ಪಾತ್ರವಾಗಿದ್ದ ಅಮೇಜ್, ಈ ವರೆಗೂ 50,000ಕ್ಕೂ ಹೆಚ್ಚು ಯುನಿಟ್ ಸೇಲಾಗಿದೆ. ಇದು ತನ್ನ ಡಿಸೈನ್, ಮೈಲೇಜ್‌ನಿಂದಾಗಿ ಅತ್ಯುತ್ತಮ ಕಾರೆಂಬ ಪಟ್ಟ ಕಟ್ಟಿಕೊಂಡಿದೆ.

ಮಹೀಂದ್ರ ರೇವಾ ಇ2ಒ

ಮಹೀಂದ್ರ ರೇವಾ ಇ2ಒ

ಭವಿಷ್ಯದ ಸಂಚಾರ ವಾಹಕವೆಂದೇ ಖ್ಯಾತಿಗೆ ಪಾತ್ರವಾಗಿರುವ ಮಹೀಂದ್ರ ಇ2ಒ ಎಲೆಕ್ಟ್ರಿಕ್ ಕಾರು ದೇಶದ ಮೊದಲ ನಾಲ್ಕು ಸೀಟಿನ ಪರಿಪೂರ್ಣ ವಿದ್ಯುತ್ ಚಾಲಿತ ಕಾರಾಗಿದೆ. ಹಾಗಿದ್ದರೂ ಸರಕಾರದಿಂದ ಸೂಕ್ತ ಬೆಂಬಲ ದೊರಕದ ಹಿನ್ನಲೆಯಲ್ಲಿ ದರದ ವಿಚಾರದಲ್ಲಿ ಸ್ವಲ್ಪ ಹಿನ್ನಡೆ ಅನುಭವಿಸುಬೇಕಾಯಿತು.

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಪ್ರಮುಖವಾಗಿಯೂ ಮಾರುತಿ ಎರ್ಟಿಗಾ ಪ್ರತಿಸ್ಪರ್ಧಿಯಾಗಿ ಷೆವರ್ಲೆ ಎಂಜಾಯ್ ಎಂಪಿವಿ ಮಾರುಕಟ್ಟೆಗಿಳಿದಿತ್ತು. ಆದರೆ ಎರ್ಟಿಗಾಗಿಂತಲೂ ಕಡಿಮೆ ದರದಲ್ಲಿ ಆಗಮನವಾಗಿರುವ ಎಂಜಾಯ್‌ ಮಾತ್ರ ನಿರೀಕ್ಷಿದಷ್ಟು ಖುಷಿ ಪಟ್ಟುಕೊಳ್ಳುವಲ್ಲಿ ವಿಫಲವಾಗಿತ್ತು.

ಮರ್ಸಿಡಿಸ್ ಬೆಂಝ್ ಎ ಕ್ಲಾಸ್

ಮರ್ಸಿಡಿಸ್ ಬೆಂಝ್ ಎ ಕ್ಲಾಸ್

ದೇಶದ ಮೊದಲ ಐಷಾರಾಮಿ ಹ್ಯಾಚ್‌ಬ್ಯಾಕ್ ಕಾರೆಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಝ್ ಎ ಕ್ಲಾಸ್ ಕಾರಿಗೆ ದೇಶದಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ದೊರಕಿತ್ತು. ಇದು ಕೇವಲ 10 ದಿನಗಳಲ್ಲಿ 4400ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ಸಿಯಾಗಿತ್ತು.

ಮಹೀಂದ್ರ ವೆರಿಟೊ ವೈಬ್

ಮಹೀಂದ್ರ ವೆರಿಟೊ ವೈಬ್

ಯುಟಿಲಿಟಿ ವೆಹಿಕಲ್‌ನ ಜನಪ್ರಿಯ ವಾಹನ ಸಂಸ್ಥೆ ಮಹೀಂದ್ರ, ವೈಬ್ ಮುಖಾಂತರ ಪ್ರಯಾಣಿಕ ಸೆಗ್ಮೆಂಟ್‌ನಲ್ಲೂ ಹೊಸ ಪರೀಕ್ಷೆ ನಡೆಸಿತ್ತು. ಆದರೆ ಗ್ರಾಹಕರನ್ನು ಸೆಳೆಯುವಲ್ಲಿ ಮಾತ್ರ ಕಿಂಚಿತ್ತು ಯಶಸ್ವಿಯಾಗಿರಲಿಲ್ಲ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಅದೃಷ್ಟವನ್ನೇ ಬದಲಾಯಿಸಿದ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಈ ವರ್ಷದ ಶ್ರೇಷ್ಠ ಕಾರುಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಹೋದ ವರ್ಷ ಡಸ್ಟರ್‌ಗೆ ಹೆಚ್ಚಿನ ಮನ್ನಣೆಗೆ ದೊರಕಿದ್ದರೂ ಈ ಬಾರಿಯದು ಡಸ್ಟರ್ ಪಾಲಾಗಿತ್ತು. ಈ ವರೆಗೆ 60,000 ಬುಕ್ಕಿಂಗ್ ಪಡೆದಿರುವ ಇಕೊಸ್ಪೋರ್ಟ್ ಮಿತಿಮೀರಿದ ಬೇಡಿಕೆಯಿಂದಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಲಾಗಿದೆ.

 ನ್ಯೂ ನಿಸ್ಸಾನ್ ಮೈಕ್ರಾ

ನ್ಯೂ ನಿಸ್ಸಾನ್ ಮೈಕ್ರಾ

ಈ ನಡುವೆ ನಿಸ್ಸಾನ್ ಅಗ್ಗದ ಆಕ್ಟಿವ್ ಹಾಗೂ ಫೇಸ್‌ಲಿಫ್ಟ್‌ಗಳೆಂಬ ಎರಡು ಮಾದರಿಗಳನ್ನು ಜಪಾನ್ ಮೂಲದ ಈ ಕಾರು ಸಂಸ್ಥೆ ಪರಿಚಯಿಸಿತ್ತು. ಇದು ನಿಸ್ಸಾನ್ ಬ್ರಾಂಡ್ ಮೌಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಹ್ಯುಂಡೈ ಗ್ರಾಂಡ್ ಐ10

ಹ್ಯುಂಡೈ ಗ್ರಾಂಡ್ ಐ10

ದೇಶದ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿನ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿದ್ದ ಹ್ಯುಂಡೈ ಗ್ರಾಂಡ್ ಐ10 ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿತ್ತು. ಅನುಯೋಜ್ಯವಾದ ದರದಲ್ಲಿ ಹೊಸ ಹ್ಯಾಚ್‌ಬ್ಯಾಕ್ ಕಾರು ಬಯಸಿದವರಿಗೆ ಗ್ರಾಂಡ್ ಐ10 ಸರಿಯಾದ ಆಯ್ಕೆಯಾಗಿತ್ತು. ತನ್ನ ಸೆಗ್ಮೆಂಟ್‌ನ ಇತರ ಕಾರುಗಳಿಗೆ ಹೋಲಿಸಿದರೆ ನಿಸ್ಸಾನ್ ಗ್ರಾಂಡ್ ಐ10ನಲ್ಲಿ ಹೆಚ್ಚಿನ ವೈಶಿಷ್ಟ್ಯಗಳಿವೆ.

ಬಿಎಂಡಬ್ಲ್ಯು 1 ಸಿರೀಸ್

ಬಿಎಂಡಬ್ಲ್ಯು 1 ಸಿರೀಸ್

ಪ್ರಮುಖವಾಗಿಯೂ ಬೆಂಝ್ ಎ ಕ್ಲಾಸ್ ಪ್ರದರ್ಶನದಿಂದ ಬೆಚ್ಚಿ ಬಿದ್ದಿದ್ದ ಬಿಎಂಡಬ್ಲ್ಯು ಎಂಟ್ರಿ ಲೆವೆಲ್ ಐಷಾರಾಮಿ ಕಾರು ಲಾಂಚ್ ಮಾಡಿತ್ತು. ಈ ಬಿಎಂಡಬ್ಲ್ಯು 1 ಸಿರೀಸ್ ವಿನ್ಯಾಸದಲ್ಲಿ ಬೆಂಝ್‌ಗೆ ಸವಾಲಾಗದಿದ್ದರೂ ನಿರ್ವಹಣೆಯ ವಿಚಾರದಲ್ಲಿ ಹೆಚ್ಚು ಗಮನ ಸೆಳೆದಿತ್ತು. ಇದರ ರಿಯರ್ ವೀಲ್ ಡ್ರೈವ್ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿತ್ತು.

ಸ್ಟೋಡಾ ಒಕ್ಟಾವಿಯಾ

ಸ್ಟೋಡಾ ಒಕ್ಟಾವಿಯಾ

ಮಗದೊಮ್ಮೆ ದೇಶದ ಮಾರುಕಟ್ಟೆಗೆ ಒಕ್ಟಾವಿಯಾ ಬ್ರಾಂಡ್ ರಿ ಎಂಟ್ರಿ ಕೊಟ್ಟಿತ್ತು. ಪ್ರೀಮಿಯಂ ಸೆಡಾನ್ ವಿಭಾಗದಲ್ಲಿ ಒಕ್ಟಾವಿಯಾ ಉತ್ತಮ ಮಾರಾಟ ಕಾಪಾಡಿಕೊಂಡು ಬಂದಿದೆ.

ನಿಸ್ಸಾನ್ ಟೆರನೊ

ನಿಸ್ಸಾನ್ ಟೆರನೊ

ಹೋದ ವರ್ಷದ ಹಿಟ್ ಮಾಡೆಲ್ ಡಸ್ಟರ್‌ನ ಪ್ರೀಮಿಯಂ ವರ್ಷನ್ ನಿಸ್ಸಾನ್ ಟೆರನೊ ಆಗಿದೆ. ಇದು ಡಸ್ಟರ್‌ಗಿಂತಲೂ ಹೆಚ್ಚಿನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಹಾಗಿದ್ದರೂ ಸ್ವಲ್ಪ ದುಬಾರಿ ಎನಿಸಿಕೊಂಡಿದೆ.

ಇಸುಝು ಎಂಯು 7

ಇಸುಝು ಎಂಯು 7

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಇಸುಝು ತುಂಬಾನೇ ತಡವಾಗಿ ದೇಶದ ಮಾರುಕಟ್ಟೆಯನ್ನು ತಲುಪಿತ್ತು. ಈಗಷ್ಟೇ ಆಗಮನವಾಗಿರುವ ಈ ಎಂಯು7 ಪ್ರೀಮಿಯಂ ಎಂಪಿವಿ ಮಾರುಕಟ್ಟೆಯಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಅಂದ ಹಾಗೆ ಇಸುಝು ಕಾರುಗಳು ಚೆನ್ನೈನ ಹಿಂದೂಸ್ತಾನ್ ಘಟಕದಲ್ಲಿ ಜೋಡಣೆಯಾಗುತ್ತಿದೆ.

ರಿಸರ್ಚ್ ಪೇಜ್

ರಿಸರ್ಚ್ ಪೇಜ್

ಅಷ್ಟಕ್ಕೂ ನಿಮ್ಮ ನೆಚ್ಚಿನ ಕಾರುಗಳ ದರ, ವೈಶಿಷ್ಟ್ಯ, ಬಣ್ಣಗಳ ಜತೆಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ನಮ್ಮ ರಿಸರ್ಚ್ ಪುಟವನ್ನು ಸಂದರ್ಶಿಸಿರಿ.

Most Read Articles

Kannada
English summary
2013 was a very interesting year for Indian automobile industry. 2013 has seen almost every major car company in the country launch new models. Here are some top launches from 2013.
Story first published: Tuesday, December 17, 2013, 17:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X