ಮುಷ್ಕರ: ಹೊಸಕೋಟೆ ವೋಲ್ವೋ ಘಟಕಕ್ಕೆ ನಷ್ಟ

Workers go on strike at Volvo Bus factory in Bangalore
ಬೆಂಗಳೂರು, ಆ.3: ಸ್ವೀಡನ್ ನ ವೋಲ್ವೋ ಬಸ್ ಕಾರ್ಪೊರೇಷನ್ ನ ಭಾರತೀಯ ವಿಭಾಗದ ಕಾರ್ಮಿಕರ ಮುಷ್ಕರದಿಂದ ಸುಮಾರು 7 ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸಿದೆ ಎಂದು ಕಂಪೆನಿಯ ವಕ್ತಾರರು ಮಂಗಳವಾರ ತಿಳಿಸಿದ್ದಾರೆ.

ಸ್ಥಳೀಯ ಕಾರ್ಮಿಕ ಸಂಘಟನೆ ಗೆ ಸೇರಿದ ಸುಮಾರು 250 ಕ್ಕೂ ಹೆಚ್ಚು ಕಾರ್ಮಿಕರು ಬೆಂಗಳೂರು ಸಮೀಪದ ಹೊಸಕೋಟೆಯ ವೋಲ್ವೋ ಬಸ್ ಇಂಡಿಯಾ ಪ್ರೈ ಲಿಮಿಟೆಡ್ ನಲ್ಲಿ ಕಳೆದ ಏಪ್ರಿಲ್ ನಿಂದ ನಿಧಾನವಾಗಿ ಕೆಲಸ ಮಾಡುವ ಮುಷ್ಕರ ಮಾಡುತ್ತಿದ್ದು, ಒಂದು ವಾರದ ಹಿಂದೆ ಕೆಲಸ ಸ್ಥಗಿತಗೊಳಿಸಿದ್ದಾರೆ.

ಕಂಪೆನಿಯ ವೇತನ ಹೆಚ್ಚಿಸುವಂತೆ ಹಾಗೂ ಏಪ್ರಿಲ್ ನಲ್ಲಿ ಕಂಪೆನಿ ಅಮಾನತ್ತು ಮಾಡಿದ ನಾಲ್ವರು ನೌಕರರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿ ಮುಷ್ಕರ ನಡೆಸಲಾಗುತ್ತಿದೆ.

ಕಂಪೆನಿಯಲ್ಲಿ ಈಗ 550ಕ್ಕೂ ಅಧಿಕ ಕಾರ್ಮಿಕರಿದ್ದು ಅಮಾನತ್ತು ಮಾಡಿದ ವಿಷಯವನ್ನು ವೇತನ ಹೆಚ್ಚಳದ ಬೇಡಿಕೆಯ ಜತೆ ಸೇರಿಸುವದು ಬೇಡವೆಂದು ವಕ್ತಾರರು ಹೇಳಿದ್ದು ಕಂಪೆನಿ ಉದ್ಯಮದ ಉತ್ತಮ ವೇತನ ನೀಡುತ್ತಿದೆ.

ವೋಲ್ವೋ ಬಸಸ್ ನಲ್ಲಿ ಸ್ವೀಡನ್ ನ ಮಾತೃ ಕಂಪೆನಿ ಶೇ.70 ಹಾಗೂ ಬೆಂಗಳೂರಿನ ಅಜಾದ್ ಸಮೂಹ ಶೇ.30 ಪಾಲು ಹೊಂದಿದ್ದು ವಾರ್ಷಿಕವಾಗಿ 500-600 ಬಸ್ ಗಳನ್ನು ಮಾರಾಟ ಮಾಡುತ್ತಿದೆ.

Most Read Articles

Kannada
Story first published: Monday, June 18, 2012, 10:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X