ಟಿಐನಿಂದ ಭಾರತದ ಮೊದಲ ಕಾರ್ಬನ್ ಬೈಸಿಕಲ್

ಕಂಪನಿಯ ಅಂಬಾಚುರ್ ಘಟಕದಲ್ಲಿ ನೂತನ ವಿನ್ಯಾಸದ ಬೈಸಿಕಲ್ ಗಳನ್ನು ಉತ್ಪಾದಿಸಲು ಕಂಪನಿ ನಿರ್ಧರಿಸಿದೆ. ವರ್ಷಕ್ಕೆ ಸುಮಾರು 12 ಸಾವಿರ ಕಾರ್ಬನ್ ಬೈಸಿಕಲ್ ಮಾರಾಟ ಮಾಡುವ ಗುರಿಯನ್ನು ಹೊಂದಿರುವುದಾಗಿ ಕಂಪನಿಯ ಅಧ್ಯಕ್ಷರು ಹೇಳಿದ್ದಾರೆ. ಕಳೆದ ವರ್ಷ ಸುಮಾರು 36 ಲಕ್ಷ ಬೈಸಿಕಲ್ ಮಾರಾಟ ಮಾಡಿದ್ದು, ಪ್ರಸಕ್ತ ವರ್ಷ ಸುಮಾರು 41.5 ಲಕ್ಷ ಯೂನಿಟ್ ಮಾರಾಟದ ಗುರಿಯನ್ನು ಟಿಐ ಹೊಂದಿದೆ.
ನೂತನ ಹೈಎಂಡ್ ಬೈಸಿಕಲ್ ಹಗುರವಾಗಿದ್ದು, ಒಂದಿಷ್ಟು ದುಬಾರಿಯೂ ಆಗಿದೆ. ನಗರ ಮತ್ತು ಪಟ್ಟಣಗಳಲ್ಲಿ ರೈಡ್ ಮಾಡಲು ಸೂಕ್ತವಾಗುವಂತೆ ಟಿಐ ಮೊಂತ್ರಾವನ್ನು ವಿನ್ಯಾಸ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯು ಒಂದು ಪೂರ್ಣಪ್ರಮಾಣದ ಕಾರ್ಬನ್ ಬೈಸಿಕಲ್ ಮತ್ತು ಕಾರ್ಬನ್ ಬಿಡಿಭಾಗದ ಮತ್ತು ಅಲಾಯ್ ಫ್ರೇಮ್ ನ ಎರಡು ಸಾಮಾನ್ಯ ಬೈಸಿಕಲ್ ಗಳನ್ನೂ ಹೊರತಂದಿದೆ.


Click it and Unblock the Notifications








