ಮತ್ತೆ ಬೇಡಿಕೆಯತ್ತ ನ್ಯಾನೊ: ಬೆಂಕಿಯಲ್ಲಿ ಅರಳಿದ ಕಾರು

ರತನ್ ಟಾಟಾ ಅವರ ಮಹತ್ವಾಕಾಂಕ್ಷೆಯ ಕೂಸು ನ್ಯಾನೊ ಕಾರಿನ ಬೇಡಿಕೆ ಹೆಚ್ಚಿಸಲು ಟಾಟಾ ಮೋಟರ್ಸ್ ಕೈಗೊಂಡ ಪ್ರಯತ್ನ ಫಲ ನೀಡತೊಡಗಿದೆ. ಜಗತ್ತಿನ ಅಗ್ಗದ ಕಾರು ಖ್ಯಾತಿಯ ಟಾಟಾ ನ್ಯಾನೊ ಮತ್ತೆ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ಕಳೆದ ಮಾರ್ಚ್ ನಲ್ಲಿ ಸುಮಾರು 8,707 ನ್ಯಾನೊ ಕಾರುಗಳು ಮಾರಾಟಗೊಂಡಿವೆ. ಇದು ಕಳೆದ ವರ್ಷದ ಜುಲೈ ತಿಂಗಳಲ್ಲಿನ 9 ಸಾವಿರ ಯೂನಿಟ್ ಮಾರಾಟಕ್ಕೆ ಹತ್ತಿರದಲ್ಲಿದೆ.

ನ್ಯಾನೊ ಮತ್ತೆ ಬೇಡಿಕೆಯ ಹಳಿಗೆ ಮರಳುತ್ತಿರುವುದರಿಂದ ಖುಷಿಗೊಂಡ ಕಂಪನಿಯು ಉತ್ಪಾದನೆಯನ್ನು ಎರಡು ಪಟ್ಟು ಹೆಚ್ಚಿಸುವ ಯೋಜನೆಯಲ್ಲಿದೆ. ಗುಜರಾತ್ ನಲ್ಲಿರುವ ಟಾಟಾ ಘಟಕದಲ್ಲಿ ಈಗ ಮಾಸಿಕವಾಗಿ ಸುಮಾರು 9 ಸಾವಿರ ನ್ಯಾನೊ ಕಾರುಗಳನ್ನು ಉತ್ಪಾದಿಸಲಾಗುತ್ತಿದೆ. ಇಲ್ಲಿನ ವಾರ್ಷಿಕ ಉತ್ಪಾದನಾ ಸಾಮರ್ಥ್ಯ 2,50,000 ಯೂನಿಟ್ ಆಗಿದೆ. "ಕಂಪನಿಯು ಶೀಘ್ರದಲ್ಲಿ ನ್ಯಾನೊ ಉತ್ಪಾದನೆಯನ್ನು ಹೆಚ್ಚಿಸಲಿದೆ" ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.

ನ್ಯಾನೊ ಖರೀದಿ ಈಗ ಸುಲಭವಾಗಿದೆ. ವ್ಯಾರೆಂಟಿ ಅವಧಿಯನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಈಗ ನ್ಯಾನೊ ಕಾರುಗಳಿಗೆ 4 ವರ್ಷಗಳ ವ್ಯಾರೆಂಟಿಯಿದೆ. ಸುಲಭವಾಗಿ ಹಣಕಾಸು ಪಾವತಿ ವ್ಯವಸ್ಥೆಯೂ ಮಾರಾಟ ಹೆಚ್ಚಾಗಲು ಕಾರಣವಾಗಿದೆ. ದೇಶದ ಹೆಚ್ಚಿನ ಡೀಲರ್ ಗಳ ಬಳಿ ನ್ಯಾನೊ ಕಾರುಗಳು ದೊರಕುತ್ತಿವೆ. ಕೆಲವು ರಾಜ್ಯಗಳಲ್ಲಿರುವ ಬಿಗ್ ಬಜಾರ್ ಮಳಿಗೆಗಳಲ್ಲೂ ನ್ಯಾನೊ ಬುಕ್ ಮಾಡಿಕೊಳ್ಳಬಹುದು. ಆನ್ ಲೈನ್ ಮೂಲಕವೂ ಸುಲಭವಾಗಿ ಪುಟ್ಟ ಕಾರಿನ ಬುಕ್ಕಿಂಗ್ ಮಾಡಬಹುದಾಗಿದೆ.

ನ್ಯಾನೊ ಕಾರು ರಸ್ತೆಗಿಳಿದಾಗ ಪುಟ್ಟ ಕಾರಿಗೆ ಅತ್ಯಧಿಕ ಬೇಡಿಕೆ ಕಂಡುಬಂದಿತ್ತು. 2010ರ ಜುಲೈನಲ್ಲಿ ಸುಮಾರು 9 ಸಾವಿರ ನ್ಯಾನೊ ಕಾರುಗಳು ಮಾರಾಟಗೊಂಡಿದ್ದವು. ಆದರೆ ಕೆಲವು ನ್ಯಾನೊ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಗಳು ಕಂಡ ನಂತರ ಮಾರಾಟ ಇಳಿಕೆಯತ್ತ ಮುಖ ಮಾಡಿತ್ತು. ಕಳೆದ ನವೆಂಬರ್ ನಲ್ಲಿ ಕೇವಲ 509 ನ್ಯಾನೊ ಕಾರುಗಳು ಮಾರಾಟಗೊಂಡಿದ್ದವು. ಈಗ ಮತ್ತೆ ಬೇಡಿಕೆ ಏರಿಕೆ ಕಾಣುತ್ತಿರುವುದರಿಂದ ಕಂಪನಿಯು ಉತ್ಪಾದನೆ ಹೆಚ್ಚಿಸಲು ನಿರ್ಧರಿಸಿದೆ.

Most Read Articles

Kannada
English summary
Tata Motors is keen to double the production of its Nano Car. After the company made extra efforts of providing extended warranty on the model with easy finance options and increased availability in all parts of the country Nano sales are improving. In March 2011 world’s cheapest car Nano selling 8,707 units.
Story first published: Thursday, April 7, 2011, 12:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X