ಏಷ್ಯಾ ಟಿಪ್ಪರ್ ಡ್ರೈವರ್ ಗಳಿಗೊಂದು ಸ್ಪರ್ಧೆ! ಭಾರತಕ್ಕೆ ಗೆಲುವು

Volvo Fuelwach competition
ಆಶ್ಚರ್ಯ ಪಡಬೇಡಿ. ಇದ್ಯಾವ ಸೀಮೆಯ ಸ್ಪರ್ಧೆ ಅಂತ. ಟಿಪ್ಪರ್ ಡ್ರೈವರ್ ಗಳಿಗಾಗಿ ಏಷ್ಯಾ ದೇಶಗಳ ನಡುವೆ ಸ್ಪರ್ಧೆ ನಡೆಯುತ್ತಿದೆ. ಭಾರತದಲ್ಲಿ ಇದರ ರೂವಾರಿ ವೋಲ್ವೊ ಟ್ರಕ್ ಕಂಪನಿ. ಧನ್ ಬಾದ್ ಗಣಿಯ ಕಠಿಣ ರಸ್ತೆಗಳಲ್ಲಿ, ಸ್ವೀಡನಿನ ಕಲ್ಲುಕೋರೆಯ ದುರ್ಗಮ ರಸ್ತೆಗಳಲ್ಲಿ ಭಾರತೀಯ ಟಿಪ್ಪರ್ ಚಾಲಕರೊಬ್ಬರು ನೈಪುಣ್ಯತೆಯಿಂದ ಟಿಪ್ಪರ್ ಚಲಾಯಿಸಿ ಇಂಧನ ಕ್ಷಮತೆ ಪರೀಕ್ಷೆಯಲ್ಲಿ ಗೆಲುವು ಪಡೆದಿದ್ದಾರೆ.

ಕಳೆದ ವರ್ಷ ಧನ್ ಬಾದ್ ನ ಗಣಿ ಪ್ರದೇಶದಲ್ಲಿ ನಡೆದ ಚಾಲನಾ ಸ್ಪರ್ಧೆಯಲ್ಲಿ ಗೆಲುವು ಪಡೆವರನ್ನು ಸ್ವೀಡನ್ ಫ್ಯೂಯಲ್ ವಾಚ್ ಸ್ಪರ್ಧೆಗಾಗಿ ಆಯ್ಕೆ ಮಾಡಲಾಯಿತು. ಇದರಲ್ಲಿ ಗೆದ್ದವರು ಮತ್ತು ರನ್ನರ್ ಅಪ್ ಆದವರು ಸ್ವೀಡನ್ನಿನ ಗೋಥೆನ್ ಬರ್ಗ್ ಕಲ್ಲು ಕೋರೆಯಲ್ಲಿ ತಮ್ಮ ಕೌಶಲ ಪ್ರದರ್ಶಿಸಿದರು. ಮೊನ್ನೆ ಏಪ್ರಿಲ್ 14ರಂದು ನಡೆದ ಸ್ಫರ್ಧೆಯಲ್ಲಿ ಆಂಧ್ರದ ಗೋಸುಲ ವೆಂಕಟ ಸುರೇಶ್ ಎಂಬವರು ಏಷ್ಯಾ ಫ್ಯುಯೆಲ್ ವಾಚ್ ಬಹುಮಾನವನ್ನು ಪಡೆದಿದ್ದಾರೆ ಎಂದು ವೋಲ್ವೊ ಕಂಪನಿಯು ಇಂದು ಬೆಂಗಳೂರಿನಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದೆ.

"ಚಾಲನೆಯಲ್ಲಿ ಇಂಧನ ಕ್ಷಮತೆ ಕುರಿತು ಚಾಲಕರಲ್ಲಿ ಅರಿವು ಹೆಚ್ಚಿಸುವ, ಇಂಧನ ಕ್ಷಮತೆ ಕಂಡು ಹಿಡಿಯುವ ಉದ್ದೇಶದಿಂದ ಈ ರೀತಿಯ ಸ್ಪರ್ಧೆ ನಡೆಸಲಾಗುತ್ತದೆ. ಇದು ಡ್ರೈವರ್ ಗಳಿಗೂ ಸಾಕಷ್ಟು ಅನುಭವ ನೀಡುತ್ತದೆ. ಭಾರತದಲ್ಲಿ ಇಂತಹ ವಿನೂತನ ಸ್ಪರ್ಧೆ ನಡೆಸಿರುವ ಕಂಪನಿಯೆಂದರೆ ವೋಲ್ವೊ ಮಾತ್ರ" ಎಂದು ವೋಲ್ವೊ ಟ್ರಕ್ ಇಂಡಿಯಾದ ಅಧ್ಯಕ್ಷರಾದ ಸೋಮನಾಥ್ ಚಟರ್ಜಿ ಹೇಳುತ್ತಾರೆ.

Most Read Articles

Kannada
English summary
Volvo Fuelwach competition is a fuel efficiency competition for volvo tipper Drivers in Asian countries. The volvo Asia Fuelwatch competition was conducted was in a stone quarry near Gothenberg, sweden on 14th April 2011. Gosula Venkata Suresh, the Indian driver from KPCL, Andhra Pradesh,was adjudged the winner.
Story first published: Monday, April 25, 2011, 15:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X