ಅಶೋಕ್ ಲೇಲ್ಯಾಂಡ್ ಮತ್ತು ಆಪ್ಟೆರ್ ಹೊಸ ಡೀಲ್

"ನಾವು ಮೈತ್ರಿಯ ಮೇಲೆ ಹೆಚ್ಚು ನಂಬಿಕೆಯಿಟ್ಟಿದ್ದೇವೆ. ವಹಿವಾಟು ಅಭಿವೃದ್ಧಿ ಮತ್ತು ಪ್ರಗತಿಗಾಗಿ ಆಪ್ಟೆರಾ ಕಂಪನಿಯ ಹೆಚ್ಚಿನ ಪಾಲು ಪಡೆಯಲು ನಿರ್ಧರಿಸಿದ್ದೇವೆ" ಎಂದು ಅಶೋಕ್ ಲೇಲ್ಯಾಂಡ್ ಚೇರ್ಮನ್ ಧೀರಜ್ ಜಿ ಹಿಂದುಜಾ ಹೇಳಿದ್ದಾರೆ.
ಕಂಪನಿಯು ಆರಂಭಿಕವಾಗಿ ಆಪ್ಟೆರಾ ಕಂಪನಿಯಿಂದ ಶೇಕಡ 26ರಷ್ಟು ಪಾಲನ್ನು 2010ರ ಜುಲೈನಲ್ಲಿ ಸ್ವಾಧೀನಪಡಿಸಿಕೊಂಡಿತ್ತು. "ಇದು ಆಪ್ಟೆರ್ ಕಂಪನಿಯ ಗ್ರಾಹಕರಿಗೆ, ಪೂರೈಕೆದಾರರಿಗೆ, ಉದ್ಯೋಗಿಗಳಿಗೆ ಅತ್ಯುತ್ತಮ ಸುದ್ದಿ. ಈ ಷೇರು ಸ್ವಾಧೀನ ಪ್ರಕ್ರಿಯೆ ದೀರ್ಘಕಾಲದ ವಹಿವಾಟಿಗೆ ಸಹಕರಿಸಲಿದೆ" ಎಂದು ಅಪ್ಟೆರ ಸಿಒಒ ಜಿಮ್ ಸುಮ್ನರ್ ಹೇಳಿದ್ದಾರೆ.


Click it and Unblock the Notifications