ಪದ್ಮಿನಿ ಗೆಳತಿ ಪ್ರೀಮಿಯರ್ ರಿಯೊಗೆ ಫಿಯೆಟ್ ಎಂಜಿನ್

Fiat Set To Provide Diesel Engines To Premier Rio
ಪ್ರೀಮಿಯರ್ ಲಿಮಿಟೆಡ್ ಅಂದ್ರೆ ಇಟಲಿಯ ಫಿಯೆಟ್ ಕಂಪನಿಯ ಪಾಲುದಾರ ಕಂಪನಿ. ಪ್ರೀಮಿಯರ್ ಪದ್ಮಿನಿ ಕಾರನ್ನು ಅಭಿವೃದ್ಧಿಪಡಿಸಿದಾಗಲೇ ಪ್ರೀಮಿಯರ್ ಮತ್ತು ಫಿಯೆಟ್ ಮೈತ್ರಿ ಆರಂಭವಾಗಿತ್ತು. ಇದೀಗ ಪ್ರೀಮಿಯರ್ ರಿಯೊ ಕಾರಿಗೆ ಫಿಯೆಟ್ ಡೀಸೆಲ್ ಎಂಜಿನ್ ಪೂರೈಸುವ ಕುರಿತಾಗಿ ಒಪ್ಪಂದ ನಡೆಯುತ್ತಿದೆ.

ದೇಶದಲ್ಲಿರುವ ಒಂದೇ ಒಂದು ಕಾಂಪ್ಯಾಕ್ಟ್ ಸ್ಪೋರ್ಟ್ ಯುಟಿಲಿಟಿ ಕಾರೆಂದರೆ ಪ್ರೀಮಿಯರ್ ರಿಯೊ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳಲ್ಲಿ ದೊರಕುತ್ತಿದೆ. ಆದರೆ ಪ್ರೀಮಿಯರ್ ಕಂಪನಿಯು ಅತ್ಯಧಿಕ ದಕ್ಷತೆಯ ಡೀಸೆಲ್ ಎಂಜಿನ್ ಹೊಂದಿಲ್ಲ. ನೂತನ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸಲು ಯಾವುದೇ ಹೂಡಿಕೆಯನ್ನೂ ಮಾಡಿಲ್ಲ.

ಇದೀಗ ಕಂಪನಿಯು ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಟಾಟಾ ಇಂಡಿಕಾ ಕಾರುಗಳಲ್ಲಿರುವ 1.3 ಲೀಟರಿನ ಡೀಸೆಲ್ ಎಂಜಿನ್ ಅಳವಡಿಸುವ ಕುರಿತು ಆಲೋಚಿಸುತ್ತಿದೆ. ಇದಕ್ಕಾಗಿ ಫಿಯೆಟ್ ಎಂಜಿನ್ ಪಡೆಯಲು ಕಂಪನಿ ನಿರ್ಧರಿಸಿದೆ.

ಪ್ರೀಮಿಯರ್ ಮತ್ತು ಫಿಯೆಟ್ ನಡುವಿನ ಮಾತುಕತೆಯನ್ನು ಪ್ರೀಮಿಯರ್ ವ್ಯವಸ್ಥಾಪಕ ನಿರ್ದೇಶಕ ಮೈತ್ರೇಯಾ ದೋಶಿ ಖಚಿತಪಡಿಸಿದ್ದಾರೆ. "ನಾವು ಫಿಯೆಟ್ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ನಾವು ಫಿಯೆಟ್ ಜೊತೆ ಬಿಡಿಭಾಗ ಪೂರೈಕೆ ಕುರಿತಾದ ಒಪ್ಪಂದ ಮಾಡಿಕೊಳ್ಳಲಿದ್ದೇವೆ" ಎಂದರು.

ಫಿಯೆಟ್ ಇಂಡಿಯಾ ಸದ್ಯ ದೇಶದಲ್ಲಿ ಮಾರಾಟ ಇಳಿಕೆಯಿಂದ ಬಳಲುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರೀಮಿಯರ್ ಕಂಪನಿಗೆ ಡೀಸೆಲ್ ಎಂಜಿನ್ ಪೂರೈಸಲು ಸಂತೋಷದಿಂದ ಒಪ್ಪಿದೆ.

ಫಿಯೆಟ್ 1997ರಿಂದ ಟಾಟಾ ಮೋಟರ್ಸ್ ಜೊತೆಗೆ ಸಹಭಾಗಿತ್ವ ಮಾಡಿಕೊಂಡು ದೇಶದಲ್ಲಿ ವಹಿವಾಟು ನಡೆಸುತ್ತಿದೆ. ಆದರೆ ಇದರಿಂದ ಕಂಪನಿಯ ವಾಹನ ಮಾರಾಟಕ್ಕೆ ಯಾವುದೇ ಮಹತ್ವದ ಪ್ರಯೋಜನವಾಗಿಲ್ಲ. ಇದೀಗ ಫಿಯೆಟ್ ದೇಶದಲ್ಲಿ ಸ್ವತಂತ್ರ ಶೋರೂಂ ಆರಂಭಿಸಿ ಮಾರಾಟ ಹೆಚ್ಚಿಸಿಕೊಳ್ಳಲು ಯೋಜಿಸುತ್ತಿದೆ.

ಪ್ರೀಮಿಯರ್ ಕಂಪನಿಯು ಅತಿ ಕಡಿಮೆ ಕಾರು ಮಾಡೆಲ್ ಗಳನ್ನು ಹೊಂದಿದೆ. ಸದ್ಯ ರಿಯೊ ಮಾತ್ರ ಅದಕ್ಕೆ ಲಾಭ ತರುವ ಉತ್ಪನ್ನ. ಹೀಗಾಗಿ ಕಂಪನಿಯು ರಿಯೊ ಸ್ಪೋರ್ಟ್ ಕಾರಿನ ಕಾರ್ಯಕ್ಷಮತೆ ಮತ್ತು ಶಕ್ತಿ ಹೆಚ್ಚಿಸಲು ನಿರ್ಧರಿಸಿದೆ.

Most Read Articles

Kannada
English summary
Fiat set to provide Diesel Engines to Premier Rio. Premier Ltd, the erstwhile partner of Fiat is all set to strike a deal with the Italian carmaker. Premier which enjoyed a fruitful partnership with Fiat when it was building the Premier Padmini. Now the partnership will be rekindled after Premier approached Fiat for diesel engines for the Rio Compact SUV.
Story first published: Wednesday, November 23, 2011, 9:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X