ವಿಶ್ವದ 3ನೇ ವಾಹನ ಮಾರುಕಟ್ಟೆಯಾಗುವತ್ತ ಭಾರತ

Posted By:
To Follow DriveSpark On Facebook, Click The Like Button
India to be No. 3 auto market by 2015
ವಿಶ್ವದ ಅಗ್ರ ಮೂರನೇ ವಾಹನ ಮಾರುಕಟ್ಟೆಯಾಗುವತ್ತ ದೇಶ ದಾಪುಗಾಲಿಡುತ್ತಿದೆ. ಅಂದರೆ ಭಾರತವು ಚೀನಾ ಮತ್ತು ಅಮೆರಿಕ ನಂತರದ ಸ್ಥಾನವನ್ನು ಶೀಘ್ರದಲ್ಲಿ ಅಂದರೆ 2015ರ ವೇಳೆಗೆ ಪಡೆಯಲಿದೆಯೆಂದು ಇಂಗ್ಲೆಂಡಿನ ಹಣಕಾಸು ಸಲಹಾ ಕಂಪನಿ ರೋತ್ಸ್ ಚೈಲ್ಡ್ ಹೇಳಿದೆ.

"ಭಾರತದಲ್ಲಿ 1983ರಿಂದ 2010ರವರೆಗೆ ಮಾಡಿದ ವಾಹನ ಹೂಡಿಕೆಗೆ ಹೋಲಿಸಿದರೆ ಹೂಡಿಕೆಯು ಈಗ ಮೂರು ಪಟ್ಟು ಹೆಚ್ಚಾಗಿದೆ" ಎಂದು ರೋತ್ಸ್ ಚೈಲ್ಡ್ ಕಂಪನಿಯ ಮುಖ್ಯಸ್ಥರಾರ ವಿಕಾಶ್ ಸೆಗಾಲ್ ಹೇಳಿದ್ದಾರೆ.

"ವಾಹನ ಮಾರುಕಟ್ಟೆಯಲ್ಲಿ ಭಾರತವೀಗ ಆರನೇ ಸ್ಥಾನದಲ್ಲಿದೆ. ಭಾರತಕ್ಕಿಂತ ಅಗ್ರಸ್ಥಾನದಲ್ಲಿ ಚೀನಾ, ಅಮೆರಿಕ, ಜರ್ಮನಿ, ಜಪಾನ್ ಮತ್ತು ಬ್ರೆಝಿಲ್ ಇದೆ. 2011-12 ಆರ್ಥಿಕ ವರ್ಷದ ಅಂತ್ಯಕ್ಕೆ ಕಾರು, ಬೈಕು ಮತ್ತು ವಾಹನ ಬಿಡಿಭಾಗಗಳ ವಾಹನೋದ್ಯಮ 35 ಲಕ್ಷ ಯೂನಿಟ್ ಗೆ ತಲುಪುವ ನಿರೀಕ್ಷೆಯಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಇದೇ ರೀತಿ ವಾಹನ ಉತ್ಪಾದನೆ ಮುಂದುವರೆದರೆ 2018ಕ್ಕೆ ಇದು 48 ಲಕ್ಷ ಯೂನಿಟ್ ಗೆ ತಲುಪುವ ನಿರೀಕ್ಷೆಯಿದೆ. ಈ ಎಲ್ಲಾ ಕಾರುಗಳನ್ನು 30 ಹೊಸ ಘಟಕದಲ್ಲಿ ಅಸೆಂಬರ್ ಮಾಡಲು ಸುಮಾರು 4-5 ಕೋಟಿ ಡಾಲರ್ ಹೂಡಿಕೆ ಮಾಡುವ ನಿರೀಕ್ಷೆಯಿದೆ. ಇದರಿಂದ ಭಾರತದಲ್ಲಿ ಸುಮಾರು 3-5 ಲಕ್ಷ ಉದ್ಯೋಗವೂ ಸೃಷ್ಟಿಯಾಗಲಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಮಾರುತಿ ಸುಜುಕಿಯಂತಹ ಬೃಹತ್ ಕಂಪನಿಗಳು ಪೈಪೋಟಿಗೆ ಸಿಲುಕಿ ಮಾರುಕಟ್ಟೆ ಪಾಲು ಕಳೆದುಕೊಳ್ಳುವ ನಿರೀಕ್ಷೆಯನ್ನು ವಿಕಾಶ್ ಸೆಗಾಲ್ ವ್ಯಕ್ತಪಡಿಸಿದ್ದಾರೆ. ಮಾರುತಿ ಸುಜುಕಿ ಕಂಪನಿಯು 1997ರಲ್ಲಿ ಶೇಕಡ 82ರಷ್ಟು ಪಾಲು ಪಡೆದಿತ್ತು. ಈಗ ಇದು ಶೇಕಡ 39.5ಕ್ಕೆ ತಲುಪಿದೆ.

English summary
India to be No. 3 auto market by 2015 global financial advisory firm in England, Rothschild said. Now India sixth largest auto market after China, US, Germany, Japan and Brazil.
Story first published: Thursday, December 15, 2011, 16:38 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark