ಕನ್ನಡಿಗರಿಗೆ ಅವಕಾಶ, ಮಾರುತಿ ಯುವ ರಿಯಾಲಿಟಿ ಶೋ

Posted By:
To Follow DriveSpark On Facebook, Click The Like Button
ಕಲರ್ಸ್ ಆಫ್ ಯುತ್ 2011 ರಿಯಾಲಿಟಿ ಶೋ ಮೂಲಕ ದೇಶದ ಬಹುಮುಖ ಪ್ರತಿಭಾನ್ವಿತ "ಯುವ" ಹುಡುಕಾಟವನ್ನು ಮಾರುತಿ ಆರಂಭಿಸಿದೆ. ದೇಶದ ಬೃಹತ್ ಕಾರು ತಯಾರಿಕ ಕಂಪನಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಇಂದು ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ಬಹಿರಂಗಪಡಿಸಿದೆ.

ಈ ರಿಯಾಲಿಟಿ ಶೋಗೆ ಜನಪ್ರಿಯ ಸಂಗೀತಗಾರ ಸುಬಿರ್ ಮಲೀಕ್ ಮತ್ತು ಮಾಜಿ ವಿಶ್ವ ಸುಂದರಿ ಮತ್ತು ಅಂತಾರಾಷ್ಟ್ರೀಯ ರೂಪದರ್ಶಿ ಡಯನಾ ಹೆಡೆನ್ ತೀರ್ಪುಗಾರರಾಗಿದ್ದಾರೆ.

ಕಂಪನಿಯು ದೇಶದ ವಿವಿಧ ರಾಷ್ಟ್ರೀಯ ಬಿ-ಸ್ಕೂಲ್ ಮತ್ತು ವೃತ್ತಿಪರ ಕಾಲೇಜುಗಳಲ್ಲಿ ಸ್ಪರ್ಧೆ ಆಯೋಜಿಸಲಿದೆ. ಕ್ವಿಝ್ ಇತ್ಯಾದಿ ಹಲವು ಸ್ಪರ್ಧೆಗಳಿವೆ ಎಂದು ಕಂಪನಿ ಪ್ರಕಟಿಸಿದೆ.

"ಕಂಪನಿಯು ತನ್ನ ವಿಸ್ತಾರವಾದ ಕಾರು ಗ್ರಾಹಕರ ಬಳಗ ಹೊಂದಿದೆ. ಇದರ ಜೊತೆಗೆ ವಿವಿಧ ಹಿನ್ನಲೆಯ ವಿದ್ಯಾರ್ಥಿಗಳ ಪ್ರತಿಭಾನ್ವೆಷನೆಗೆ ತೊಡಗಲಿದೆ. ಗೆದ್ದ ವಿದ್ಯಾರ್ಥಿಗಳು ನೂತನ ಬ್ರಾಂಡ್ ಮಾರುತಿ ಸುಜುಕಿ ಕಾರು ಮತ್ತು ಇತರ ಆಕರ್ಷಕ ಬಹುಮಾನ ಗೆಲ್ಲಲಿದ್ದಾರೆ" ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಶಶಾಂಕ್ ಶ್ರೀವತ್ಸ ಹೇಳಿದ್ದಾರೆ.

ಶಿಕ್ಷಣ ಸಂಸ್ಥೆಗಳಲ್ಲಿ ಈ ಸ್ಪರ್ಧೆ ಮೂರು ತಿಂಗಳ ಕಾಲ ನಡೆಯಲಿದೆ. ಕಾರ್ಯಕ್ರಮವು ದೇಶದ ವಿವಿಧ ಹತ್ತು ನಗರಗಳ ಬಿಸಿನೆಸ್ ಸ್ಕೂಲ್ ಗಳಲ್ಲಿ ನಡೆಯಲಿದೆ.

ಸ್ಪರ್ಧೆಯು ಬೆಂಗಳೂರು, ದೆಹಲಿ, ಮುಂಬೈ, ಚತ್ತಿಸ್ ಗಡ, ಲಕ್ನೊ, ಇಂಡೊರ್, ಚೆನ್ನೈ, ಹೈದರಾಬಾದ್ ಮುಂತಾದ ನಗರಗಳಲ್ಲಿ ನಡೆಯಲಿದೆ.

English summary
Maruti Suzuki India Limited announced launch of its nationwide search most talented and versatile youth through a reality show ''Colours of Youth 2011'' in India. The competition will cover Delhi, Mumbai, Chandigarh, Lucknow, Kolkata, Indore, Pune, Chennai, Hyderabad and Bangalore
Story first published: Friday, November 11, 2011, 17:28 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark