ದೇಶದ ಕಾರು ಮಾರಾಟ: ದಶಕದ ನಂತರದ ಬೃಹತ್ ಕುಸಿತ

ಅತ್ಯಧಿಕ ಬಡ್ಡಿದರ ಮತ್ತು ದುಬಾರಿಯಾದ ಕಾರಿನಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ಕಾರು ಮಾರಾಟ ಇಳಿಮುಖವಾಗಿದೆ. ಜಗತ್ತಿನ ವೇಗವಾಗಿ ಅಭಿವೃದ್ಧಿಕಾಣುತ್ತಿರುವ ವಾಹನ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತಕ್ಕೆ ಇದು ನಿಜಕ್ಕೂ ಸವಾಲು. ಮೊದಲನೇ ಸ್ಥಾನ ಚೀನಾ ಪಡೆದಿದೆ.
ದೇಶದ ವಾಹನ ಕಂಪನಿಗಳು ಕಳೆದ ತಿಂಗಳು 1,38,521 ಕಾರುಗಳನ್ನು ಮಾರಾಟ ಮಾಡಿವೆ ಎಂದು ದೇಶದ ವಾಹನ ತಯಾರಿಕರ ಒಕ್ಕೂಟ(ಎಸ್ಐಎಎಂ) ಮಾಹಿತಿ ನೀಡಿದೆ. ಇದರೊಂದಿಗೆ ಟ್ರಕ್ ಮತ್ತು ಬಸ್ ಮಾರಾಟ ಕೂಡ ಇಳಿಕೆ ಕಂಡಿದೆ ಎಂದು ವರದಿ ಹೇಳಿದೆ.


Click it and Unblock the Notifications








