ಸುಜುಕಿ ಎಲೆಕ್ಟ್ರಿಕ್ ಸ್ವಿಫ್ಟ್ ಕಾರು ಬೇಕೆ?

Posted By:
Suzuki Displays Electric Swift Concept At Tokyo
ಎಲೆಕ್ಟ್ರಿಕ್ ಕಾರು ತಯಾರಿಸುವುದೆಂದರೆ ಕಾರು ಕಂಪನಿಗಳಿಗೆ ಸವಾಲು. ಆದರೆ ಹೆಚ್ಚಿನ ದೇಶಗಳು ಇ-ಕಾರು ಉತ್ಪಾದಿಸುವಂತೆ ಕಾರು ಕಂಪನಿಗಳನ್ನು ಪ್ರೋತ್ಸಾಹಿಸುತ್ತಿವೆ. ಈ ಹಿಂದೆ ಡ್ರೈವ್ ಸ್ಪಾರ್ಕ್ ವರದಿ ಮಾಡಿದಂತೆ ಬಿಎಂಡಬ್ಲ್ಯು ಐ3 ಮತ್ತು ಐ8 ಹೈಬ್ರಿಡ್ ಕಾರು ಉತ್ಪಾದಿಸಿತ್ತು. ಇದೀಗ ಸುಜುಕಿ ಎಲೆಕ್ಟ್ರಿಕ್ ಸ್ವಿಫ್ಟ್ ಮೂಲಕ ಅದೃಷ್ಟ ಪರೀಕ್ಷಿಸಲು ಹೊರಟಿದೆ.

ಟೊಕಿಯೊ ವಾಹನ ಪ್ರದರ್ಶನದಲ್ಲಿ ಸುಜುಕಿ ಮೋಟರ್ ಹೈಬ್ರಿಡ್ ಸ್ವಿಫ್ಟ್ ಆವೃತ್ತಿಯನ್ನು ಪ್ರದರ್ಶಿಸಿದೆ. ಇದು ಎಲೆಕ್ಟ್ರಿಕ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಮೂಲಕವೂ ಚಲಾಯಿಸಬಹುದಂತೆ.

ಕಂಪನಿಯು ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಪ್ರವೇಶಿಸುವ ಪೂರ್ವಭಾವಿಯಾಗಿ ಸ್ವಿಫ್ಟ್ ಇ-ಕಾರನ್ನು ಪ್ರದರ್ಶಿಸಿದ್ದೇವೆ. ತನಗೆ ಸೂಕ್ತ ಹೈಬ್ರಿಡ್ ತಂತ್ರಜ್ಞಾನ ನೀಡದ ಹಿನ್ನಲೆಯಲ್ಲಿ ಸುಜುಕಿ ಕಂಪನಿಯು ಫೋಕ್ಸ್ ವ್ಯಾಗನ್ ನೊಂದಿಗಿನ ಮೈತ್ರಿಯನ್ನು ಕಡಿದುಕೊಂಡದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಸುಜುಕಿ ಹೊರತಂದ ಹೈಬ್ರಿಡ್ ಕಾರು ಭಾರತಕ್ಕೂ ತುಂಬಾ ಪ್ರಮುಖ ವಿಷ್ಯ. ಯಾಕೆಂದರೆ ಈಗಾಗಲೇ ಸ್ವಿಫ್ಟ್ ಕಾರಿಗೆ ಇಲ್ಲಿ ಅತ್ಯುತ್ತಮ ಬೇಡಿಕೆಯಿದೆ. ಪೆಟ್ರೋಲ್ ದರದಿಂದ ಪರಿತಪಿಸುವರು, ಪರಿಸರ ಸ್ನೇಹಿ ವಾಹನಗಳ ಹುಡುಕಾಟದಲ್ಲಿರುವರಿಗೆ ಇದು ಸೂಕ್ತ ಕಾರು ಅನ್ನೋದು ನಿಜ.

ಡೀಸೆಲ್ ಕಾರುಗಳಿಗೆ ಅತ್ಯಧಿಕ ಬೇಡಿಕೆ ಇರುವುದರಿಂದ ದೇಶದ ಕಾರು ಕಂಪನಿಗಳು ಪರಿತಪಿಸುತ್ತಿವೆ. ಇದು ಪೆಟ್ರೋಲ್ ಕಾರುಗಳ ಬೇಡಿಕೆ ಇಳಿಕೆಗೆ ಕಾರಣವಾಗಿತ್ತು. ಇದೀಗ ಸುಜುಕಿಯಂತಹ ಪ್ರಮುಖ ಕಂಪನಿಯ ಹೈಬ್ರಿಡ್, ಎಲೆಕ್ಟ್ರಿಕ್ ಕಾರು ಬಂದರೆ ಹೆಚ್ಚು ಜನರನ್ನು ಸೆಳೆಯುವುದು ಖಚಿತ.

English summary
Suzuki Motor has displayed the first hybrid version of the new Swift at the Tokyo Auto show. The Swift concept is powered by electric motors and has a petrol engine that acts as a range extender. The engine does not power the wheels. Instead it charges up the battery. The Swift can be run up to 30 kilometres as a pure electric vehicle before the petrol engine starts replenishing the used up batteries
Story first published: Thursday, November 10, 2011, 17:32 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark